ತಲಾಷ್‌ನಲ್ಲಿ ಮಿಂಚಲಿದೆಯೇ ಪ್ಲಾಪ್ ಸ್ಟಾಲಿಯೊ

Posted By:

ಬಾಲಿವುಡ್‌ನ ಮಿಸ್ಟರ್ ಪರಿಪೂರ್ಣತಾವಾದಿ (perfectionist) ಎಂದೇ ಅರಿಯಲ್ಪಡುವ ನಟ ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ ತಲಾಷ್ ಚಿತ್ರ ಇಂದು (ನ. 30) ದೇಶದೆಲ್ಲೆಡೆ ತೆರೆ ಕಾಣುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಪ್ರೇಕ್ಷಕರಲ್ಲಿ ರೋಚಕತೆ ಸೃಷ್ಟಿ ಮಾಡಲು ಯಶಸ್ವಿಯಾಗಿರುವ ತಲಾಷ್‌ನಲ್ಲಿ ನಟ ಅಮೀರ್ ಖಾನ್ ಮಹೀಂದ್ರ ಕಂಪನಿಯ ಸ್ಟಾಲಿಯೊ ಬೈಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಿಮ್ಮ ಗಮನಕ್ಕೆ...

ಮಹೀಂದ್ರ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ಅಮೀರ್, ಸ್ಟಾಲಿಯೊ ಬೈಕನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಅಂದ ಹಾಗೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮಾರುಕಟ್ಟೆಯಿಂದ ಹಿಂಪಡೆಯಲಾಗಿದ್ದ ಸ್ಟಾಲಿಯೊ ಬೈಕ್ ಪರಿಷ್ಕೃತ ಆವೃತ್ತಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ತನ್ನದೇ ಆದ ವಿಭಿನ್ನ ಶೈಲಿಯ ಅಭಿನಯದೊಂದಿಗೆ ಅಮೀರ್ ಖಾನ್ ಪ್ರೇಕ್ಷಕ ಹೃದಯ ಗೆಲ್ಲಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ವಿತರಣೆಯ ಮೂಲಕ ಗಲ್ಲ ಪೆಟ್ಟಿಗೆಯನ್ನು ತುಂಬಿಕೊಂಡಿರುವ ತಲಾಷ್ ಚಿತ್ರ ಇನ್ನೆಷ್ಟು ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಲಾಷ್ ಚಿತ್ರದಲ್ಲಿ ಅಮೀರ್ ಖಾನ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರದ ಟ್ರೈಲರ್ ಈಗಾಗಲೇ ಭಾರಿ ಸದ್ದು ಮಾಡಿದೆ.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಬಹುನಿರೀಕ್ಷಿತ ತಲಾಷ್ ಚಿತ್ರದಲ್ಲಿ ಅಮೀರ್ ಖಾನ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಸ್ಟಾಲಿಯೊ ಬೈಕ್ ಬಳಸಿಕೊಂಡಿದ್ದಾರೆ. ನಿಮ್ಮ ಮಾಹಿತಿಗಾಗಿ ಸ್ಟಾಲಿಯೊ ಬೈಕ್ ಮೊದಲ ಬಾರಿಗೆ 2010ರಲ್ಲಿ ಬಿಡುಗಡೆ ಮಾಡಲಾಗಿತ್ತು.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಗೇರ್ ಬಾಕ್ಸ್ ತೊಂದರೆ ಹಾಗೂ ಗ್ರಾಹಕರಿಂದ ವ್ಯಾಪಕ ದೂರುಗಳು ಬಂದಿದ್ದರಿಂದ ಸ್ಟಾಲಿಯೊ ಬೈಕನ್ನು ಹಿಂಪಡೆಯಲಾಗಿತ್ತು. ಒಟ್ಟಿನಲ್ಲಿ ಮಹೀಂದ್ರ ನಿರೀಕ್ಷಿಸಿದಷ್ಟು ಯಶಸ್ಸು ಸ್ಟಾಲಿಯೊದಿಂದ ದೊರಕಿರಲಿಲ್ಲ.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಸ್ಟಾಲಿಯೊ ಮೂಲಕ ದೇಶದ ಮೋಟಾರ್ ಬೈಕ್ ಜಗತ್ತಿಗೆ ಮಹೀಂದ್ರ ಮೊದಲ ಬಾರಿಗೆ ಕಾಲಿಟ್ಟಿತ್ತು. ಆದರೆ ಮೊದಲ ಪ್ರಯತ್ನದಲ್ಲೇ ವೈಫಲ್ಯವನ್ನು ಅನುಭವಿಸಿತ್ತು. ಪ್ರಸ್ತುತ ಸ್ಟಾಲಿಯೊ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಅಂದ ಹಾಗೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಸ್ಟಾಲಿಯೊ ಬೈಕ್‌ನ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲು ಸನ್ನದ್ಧವಾಗುತ್ತದೆ. ಮುಂದಿನ ವರ್ಷ ಸ್ಟಾಲಿಯೊ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದ್ದು, ತಿರುಗೇಟು ನೀಡುವ ಭರವಸೆಯಿದೆ.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಸ್ಟಾಲಿಯೊ ಪ್ರಚಾರಾರ್ಥವಾಗಿ ಬಾಲಿವುಡ್‌ನ ಶ್ರೇಷ್ಠ ನಟ ಅಮೀರ್ ಖಾನ್ ಅವರನ್ನು ಮಹೀಂದ್ರ ಕಂಪನಿ ಬಳಸಿಕೊಂಡಿತ್ತು. ಕಂಪನಿ ಇದೀಗ ಸ್ಟಾಲಿಯೊದ ಫೇಸ್‌ಲಿಫ್ಟ್ ಮಾಡೆಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ತಲಾಷ್ ಚಿತ್ರದಲ್ಲಿ ಅಮೀರ್ ಖಾನ್ ಸ್ಟಾಲಿಯೊ ಬೈಕ್ ಬಳಕೆ ಮಾಡಿದ್ದರಿಂದ ಚಿತ್ರಕ್ಕೆ ಯಾವುದೇ ಪರಿಣಾಮ ಬೀರದೇ ಇರಬಹುದು. ಆದರೆ ಮಹೀಂದ್ರ ಕಂಪನಿಗೆ ಮಾತ್ರ ಪರಿಷ್ಕೃತ ಆವೃತಿ ಬಿಡುಗಡೆಗೆ ಉತ್ತಮ ಪ್ರಚಾರ ದೊರಕಿದಂತಾಗುತ್ತದೆ.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಇತ್ತೀಚೆಗಷ್ಟೇ ಸ್ಟಾಲಿಯೊ ಬೈಕ್‌ನ ಸ್ಪೈ ಷಾಟ್ಸ್ ಬಿಡುಗಡೆ ಮಾಡಿದ್ದ ಮಹೀಂದ್ರ ಕಂಪನಿಯು ಮುಂದಿನ ವರ್ಷ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ತಲಾಷ್‌ನಲ್ಲಿ ಅಮೀರ್ ಸ್ಟಾಲಿಯೊ ಪಯಣ

ಸ್ಟಾಲಿಯೊ ಅದೃಷ್ಟ ಖುಲಾಯಿಸಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

English summary
Amir Khan's bike in his upcoming film Talaash is a Mahindra Stallio. Amir Khan was the brand ambassador of the bike before it was stalled. Talaash will provide the Stallio some publicity and it needs it as Mahindra is planning to relaunch it soon.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark