ಐಷಾರಾಮಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಖರೀದಿಸಿದ ಎಆರ್ ರೆಹಮಾನ್ ಪುತ್ರಿಯರು

ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಜನಪ್ರಿಯತೆ ಹೆಚ್ಚಾಗುತ್ತಿದೆ. ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ. ಅಷ್ತೇ ಅಲ್ಲದೇ ಅನೇಕ ಸೂಪರ್ ಕಾರ್ ಮತ್ತು ಸ್ಪೋರ್ಟ್ಸ್ ಕಾರ್ ತಯಾರಕರು ಸಹ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತೀವೆ. ಪೋಷೆ ಸಂಪೂರ್ಣ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಪರಿಚಯಿಸಿದವರಲ್ಲಿ ಮೊದಲಿಗರು.

ಪ್ರಪಂಚದಾದ್ಯಂತದ ಅನೇಕ ಸೆಲೆಬ್ರಿಟಿಗಳು ಸಹ ಎಲೆಕ್ಟ್ರಿಕ್ ಕಾರುಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಲೆಜೆಂಡರಿ ಸಂಗೀತಗಾರ ಎ.ಆರ್. ರೆಹಮಾನ್ ಅವರ ಮನೆಗೆ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸೇರಿಕೊಂಡಿದೆ. ಎಆರ್ ರೆಹಮಾನ್ ಅವರ ಪುತ್ರಿಯರು ಖರೀದಿಸಿದ ಹೊಚ್ಚ ಹೊಸ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ಸ್ವತಃ ಎ ಆರ್ ರೆಹಮಾನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಐಷಾರಾಮಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಖರೀದಿಸಿದ ಎಆರ್ ರೆಹಮಾನ್ ಪುತ್ರಿಯರು

ಚಿತ್ರದಲ್ಲಿ, ಅವರ ಇಬ್ಬರು ಪುತ್ರಿಯರಾದ ಖತೀಜಾ ರೆಹಮಾನ್ ಮತ್ತು ರಹೀಮಾ ರೆಹಮಾನ್ ತಮ್ಮ ಹೊಚ್ಚ ಹೊಸ ಕಾರಿನೊಂದಿಗೆ ಪೋಸ್ ನೀಡುತ್ತಿದ್ದಾರೆ. ಅವರೆಲ್ಲರೂ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಖತೀಜಾ ರೆಹಮಾನ್ ಸಂಗೀತಗಾರ್ತಿ ಮತ್ತು ಎ.ಆರ್. ರೆಹಮಾನ್ ಫೌಂಡೇಶನ್‌ನಲ್ಲಿ ನಿರ್ದೇಶಕಿ. ಇತರರು ಹಿನ್ನೆಲೆ ಗಾಯನ ಮತ್ತು ಸಂಗೀತ ನಿರ್ಮಾಣದಲ್ಲಿ ತೊಡಗಿದ್ದಾರೆ. ಕಾರಿನ ವಿಚಾರಕ್ಕೆ ಬರುವುದಾದರೆ, ಎ.ಆರ್. ರೆಹಮಾನ್ ಖರೀದಿಸಿರುವ ಪೋರ್ಷೆ ಟೇಕಾನ್‌ನ ನಿಖರವಾದ ವಿವರಗಳು ಸದ್ಯಕ್ಕೆ ತಿಳಿದಿಲ್ಲ.

ಪೋರ್ಷೆ 18 ಬಣ್ಣಗಳಲ್ಲಿ ಟೇಕಾನ್ ಅನ್ನು ನೀಡುತ್ತದೆ ಮತ್ತು ಸಂಗೀತಗಾರರ ಕುಟುಂಬವು ಜೆಂಟಿಯನ್ ಬ್ಲೂ ಮೆಟಾಲಿಕ್ ಬಣ್ಣದ ಮಾದರಿಯನ್ನು ಖರೀದಿಸಿದೆ. ಡೀಪ್ ಬ್ಲೂ ಶೇಡ್ ಕಾರಿನ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ. ಭಾರತದಲ್ಲಿ ದುಬಾರಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಪೋರ್ಷೆ ಟೇಕನ್ ನಾಲ್ಕು ಡೋರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಆಗಿದೆ. ಇದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ತಯಾರಿಸಲು ಪೋರ್ಷೆ ಮೊದಲ ಪ್ರಯತ್ನವಾಗಿದೆ ಮತ್ತು ಇದನ್ನು ಆರಂಭದಲ್ಲಿ 2019 ರಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.

ಇದನ್ನು 2022 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಪರಿಚಯಿಸಲಾಯಿತು. ಇದು Taycan RWD, Taycan 4S, Taycan Turbo ಮತ್ತು Taycan Turbo S ರೂಪಾಂತರಗಳಲ್ಲಿ ಲಭ್ಯವಿದೆ. ಎಆರ್ ರೆಹಮಾನ್ ಅವರ ಪುತ್ರಿಯರು ಖರೀದಿಸಿದ Taycan ನ ನಿಖರವಾದ ಟ್ರಿಮ್ ಅಥವಾ ರೂಪಾಂತರವು ಸದ್ಯಕ್ಕೆ ತಿಳಿದಿಲ್ಲ. ಪೋರ್ಷೆ ಟೇಕಾನ್ ತಯಾರಕರ ಯಾವುದೇ ಕಾರಿನಂತೆ ದುಬಾರಿಯಾಗಿದೆ. ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಬೆಲೆ 1.53 ಕೋಟಿ ರೂ.ಗಳಿಂದ ಆರಂಭವಾಗುತ್ತದೆ,

ಈ ಐಷಾರಾಮಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಕಪಲಡಡ್ ಹುಡ್, ಸ್ಲೋಂಪಿಗ್ ರೂಫ್ ಲೈನ್ ಮತ್ತು ಮುಂಭಾಗದ ಬಂಪರ್‌ನಲ್ಲಿ ವಿಶಾಲವಾದ ಬ್ಲ್ಯಾಕ್ ಏರ್ ಡ್ಯಾಮ್ ಅನ್ನು ಹೊಂದಿದೆ. ಅತ್ಯಂತ ಆಕರ್ಷಕ ಮುಖ್ಯಾಂಶಗಳೆಂದರೆ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಈ ಕಾರು ಸೈಡ್ ಪ್ರೊಫೈಲ್‌ನಲ್ಲಿ, ಇದು ಬ್ಲ್ಯಾಕ್-ಔಟ್ ಬಿ-ಪಿಲ್ಲರ್‌ಗಳು ಮತ್ತು ಬೃಹತ್ ಐದು-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಹಿಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಅನ್ನು ಹೊಂದಿದೆ, ಇದು ಐಕಾನಿಕ್ 911 ಮಾದರಿಯನ್ನು ನೆನಪಿಸುತ್ತದೆ.

ಪೋರ್ಷೆ ಎಕ್ಸ್‌ಕ್ಲೂಸಿವ್ ಮ್ಯಾನುಫ್ಯಾಕ್ಟೂರ್ ಕಾರ್ಯಕ್ರಮದ ಮೂಲಕ ಆಯ್ಕೆ ಮಾಡಬಹುದಾದ 65 ಪೇಂಟ್ ಸ್ಕೀಮ್‌ಗಳ ಜೊತೆಗೆ ಟೇಕಾನ್ 17 ಗುಣಮಟ್ಟದ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು 1960ರ ದಶಕದ 911 ಮಾದರಿಯಂತೇ ಅದ್ದೂರಿ ಕ್ಯಾಬಿನ್‌ನಲ್ಲಿ ಮುಂದುವರಿಯುತ್ತದೆ. ಎರಡು-ಟೋನ್ ಡ್ಯಾಶ್‌ಬೋರ್ಡ್ ಸೇಂಟ್ರಲ್ 10.9-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಮತ್ತು ಆಯ್ಕೆಯ ಪ್ರಯಾಣಿಕರಿಗೆ ಮನೋರಂಜನೆಗಾಗಿ ಮಲ್ಟಿ-ಡಿಸ್ ಪ್ಲೇಯನ್ನು ಹೊಂದಿದೆ, ಇದಲ್ಲದೆ, ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ದೊಡ್ಡ 8.4-ಇಂಚಿನ ಟಚ್ ಪ್ಯಾನೆಲ್ ಅನ್ನು ಏರ್-ಕಾನ್ ವೆಂಟ್‌ಗಳ ಅಡಿಯಲ್ಲಿ ಸೆಂಟರ್ ಕನ್ಸೋಲ್‌ನಲ್ಲಿ ಇರಿಸಲಾಗಿದೆ.

ಇನ್ನು 16.8-ಇಂಚಿನ ಡಿಸ್ ಪ್ಲೇಯೊಂದಿಗೆ ಕನಿಷ್ಠ ಮತ್ತು ಆಧುನಿಕ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರಿನ ಡೋರುಗಳು ಮತ್ತು ಮತ್ತು ಸೆಂಟರ್ ಕನ್ಸೋಲ್‌ಗಳನ್ನು ವುಡ್, ಅಲ್ಯೂಮಿನಿಯಂ, ಕಾರ್ಬನ್ ಫೈಬರ್ ಅಥವಾ ಫ್ಯಾಬ್ರಿಕ್ ಟ್ರಿಮ್‌ಗಳ ಸಂಯೋಜನೆಯಿಂದ ಮಾಡಲಾಗಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನ ಆಫರ್‌ನಲ್ಲಿರುವ ಕೆಲವು ಗಮನಾರ್ಹ ವೈಶಿಷ್ಟ್ಯಗಳು ಮುಂಭಾಗದ ಸೀಟುಗಳಲ್ಲಿ ಮಸಾಜ್ ಸೌಲಭ್ಯ, ಹೀಟೆಡ್ ರೇರ್ ಸೀಟುಗಳು, 4-ಝೋನ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಒಳಗೊಂಡಿವೆ.

Most Read Articles

Kannada
English summary
Ar rahman s daughters bought a new porsche electric car
Story first published: Tuesday, November 29, 2022, 13:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X