ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

Written By:

ಡ್ರೈವರ್ ಲೆಸ್ ಅಥವಾ ಚಾಲಕರಹಿತ ತಂತ್ರಜ್ಞಾನದ ಕಾಲ ಹತ್ತಿರ ಬಂದಿದೆ. ಗೂಗಲ್ ನಂತಹ ದೈತ್ಯ ಸಂಸ್ಥೆಗಳು ಡ್ರೈವರ್ ಲೆಸ್ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಆದರೆ ಇದು ಕಾರಿಗಷ್ಟೇ ಸೀಮಿತವಲ್ಲ. ಯಾಕೆಂದರೆ ಆಸ್ಟ್ರೇಲಿಯಾದಲ್ಲಿ ಚಾಲಕರಹಿತ ಬಸ್ ತಂತ್ರಜ್ಞಾನವು ನನಸಾಗುವ ಕಾಲ ಇನ್ನು ಬಹಳ ದೂರವಿಲ್ಲ.

ದಕ್ಷಿಣ ಪರ್ತ್ ನಲ್ಲಿ ರಾಯಲ್ ಆಟೋ ಕ್ಲಬ್ (ಆರ್ ಎಸಿ) ಇಂಟೆಲಿಬಸ್ ಆಗಲೇ ಪರೀಕ್ಷಾರ್ಥ ಚಾಲನೆ ಪ್ರಯೋಗವನ್ನು ಆರಂಭಿಸಿದೆ. ಇದು ಆಸ್ಟ್ರೇಲಿಯಾದ ಮೊತ್ತ ಮೊದಲ ಡ್ರೈವರ್ ಲೆಸ್ ಬಸ್ಸೆಂಬ ಗೌರವಕ್ಕೂ ಪಾತ್ರವಾಗಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಫ್ರಾನ್ಸ್ ಮೂಲದ ನವ್ಯ ಎಸ್ ಎಎಸ್ ಸಂಸ್ಥೆಯ ಜೊತೆಗಾರಿಕೆಯಲ್ಲಿ (NAVYA SAS) ನಿರ್ಮಾಣವಾಗಿರುವ ಆಸ್ಟ್ರೇಲಿಯಾದ ಮೊತ್ತ ಮೊದಲ ಸ್ವಯಂಚಾಲಿತ ಬಸ್ ಎಲೆಕ್ಟ್ರಿಕ್ ತಂತ್ರಗಾರಿಕೆಯನ್ನು ಪಡಿದುಕೊಂಡಿದೆ. ತನ್ಮೂಲಕ ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ದಕ್ಷಿಣ ಪರ್ತ್ ನಲ್ಲಿ ಚಾಲನೆ ಪರೀಕ್ಷೆಗೆ ಒಳಪಡಲಿರುವ ಡ್ರೈವರ್ ಲೆಸ್ ಬಸ್, 2ಡಿ ಹಾಗೂ ತ್ರಿಡಿ ಲಿಡಾರ್ ಸೆನ್ಸಾರ್ ಗಳನ್ನು ಹೊಂದಿದೆ. ಇದು ಬಸ್ ಚಲಿಸುವಾಗ ಯಾವುದೇ ಅಡೆತಡೆಗಳು ಎದುರಾದ್ದಲ್ಲಿ ಪತ್ತೆ ಹಚ್ಚಲು ಹಾಗೂ ತಪ್ಪಿಸಲು ನೆರವಾಗಲಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಇನ್ನು ಸ್ಟೀರಿಯೋವಿಷನ್ ಕ್ಯಾಮೆರಾಗಳು ಟ್ರಾಫಿಕ್ ಬೆಳಕು, ಇತರೆ ವಾಹನಗಳು ಹಾಗೂ ರಸ್ತೆಯಲ್ಲಿರುವ ಎಲ್ಲ ತರಹದ ಅಂಶಗಳನ್ನು ಪರೀಶೀಲಿಸಲು ಯಶಸ್ವಿಯಾಗಲಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಜಿಪಿಎಸ್ ಹಾಗೂ ದೂರಮಾಪನ ವ್ಯವಸ್ಥೆಗಳಿಂದ ಬಸ್ಸಿನ ಸ್ಥಾನ ನಿಖರವಾಗಿ ಅಳೆಯಲು ಸಾಧ್ಯವಾಗಲಿದೆ. ಇನ್ನು ಅಪಘಾತವನ್ನು ತಪ್ಪಿಸಲು ಸ್ವಯಂಚಾಲಿತ ಎಮರ್ಜನ್ಸಿ ಬ್ರೇಕಿಂಗ್ (ಎಇಬಿ) ವ್ಯವಸ್ಥೆಯನ್ನು ಒದಗಿಸಲಾಗಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಇದರಲ್ಲಿ ಅತ್ಯಂತ ಮುಂದುವರಿದ ಐದನೇ ದರ್ಜೆಯ ಸ್ವಯಂಚಾಲಿತ ತಂತ್ರಜ್ಞಾನವನ್ನು ಆಳವಡಿಸಲಾಗಿದ್ದು, ಸಂಪೂರ್ಣವಾಗಿಯೂ ಆಟೋಮ್ಯಾಟಿಕ್ ಆಗಿ ಕೆಲಸ ಮಾಡಲಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಪ್ರಸ್ತುತ ಬಸ್ 4.8 ಮೀಟರ್ ಉದ್ದ, 2.5 ಮೀಟರ್ ಅಗಲ ಹಾಗೂ 2.6 ಮೀಟರ್ ಎತ್ತರವನ್ನು ಪಡೆದಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಅಂದ ಹಾಗೆ ಡ್ರೈವರ್ ಲೆಸ್ ಬಸ್ ಸರಾಸರಿ ಗಂಟೆಗೆ 25 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಗರಿಷ್ಠ ಪ್ರತಿ ಗಂಟೆಗೆ 45 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಒಂದೇ ಸಮಯಕ್ಕೆ 11 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಆರ್ ಎಸಿ ಇಂಟಿಲಿ ಡ್ರೈವರ್ ಲೆಸ್ ಬಸ್, ಸುರಕ್ಷತೆ ಹಾಗೂ ಅನುಕೂಲಕರವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿದೆ.

ಇನ್ನು ಮುಂದೆ ಕಾಂಗರೂ ನಾಡಲ್ಲಿ ಡ್ರೈವರ್ ಇಲ್ಲದೆಯೂ ಬಸ್ ಓಡುತ್ತೆ!

ಈ ಎಲ್ಲ ಯೋಜನೆಗೆ ಅಲ್ಲಿನ ಸರಕಾರದ ಬೆಂಬಲವೂ ಇದ್ದು, ಚಾಲಕರಹಿತ ತಂತ್ರಜ್ಞಾನವನ್ನು ಆಸ್ಟ್ರೇಲಿಯನ್ ಡ್ರೈವರ್ ಲೆಸ್ ವೆಹಿಕಲ್ ಇನಿಶಿಯೇಟಿವ್ (ಎಡಿವಿಐ) ಸ್ವಾಗತಿಸಿದೆ.

English summary
Australian Autonomous Bus Trial Goes Without Trouble (Or Driver)
Story first published: Friday, September 2, 2016, 13:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark