ಚೆನ್ನೈ ಪ್ರವಾಹ; ಆಟೋ ಕ್ಷೇತ್ರಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ!

By Nagaraja

ಕಳೆದ ಕೆಲವು ದಿನಗಳಿಂದ ಚೆನ್ನೈ ಹಾಗೂ ಅಸುಪಾಸಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿಯುಂಟಾಗಿದ್ದು, ತಮಿಳುನಾಡು ರಾಜ್ಯ ಸರಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಮಗ್ನವಾಗಿದೆ.

Also Read: ಜಲಾವೃತ ಚೆನ್ನೈನಲ್ಲಿ ಓಲಾ ಉಚಿತ ಬೋಟ್ ಸೇವೆ

ಈ ನಡುವೆ ಬಂದಿರುವ ಮಾಹಿತಿಗಳ ಪ್ರಕಾರ, ಚೆನ್ನೈನಲ್ಲಿ ಸುರಿದಿರುವ ಭಾರಿ ಮಳೆಯಿಂದಾಗಿ ಆಟೋಮೊಬೈಲ್ ಕ್ಷೇತ್ರಕ್ಕೂ ಭಾರಿ ಪ್ರಮಾಣದ ನಷ್ಟವುಂಟಾಗಿದೆ. ಇದುವರೆಗಿನ ಲೆಕ್ಕಾಚಾರದ ಪ್ರಕಾರ ದೇಶದ ಆಟೋ ಹಬ್ ಅಥವಾ ವಾಹನ ಕೇಂದ್ರ ಎಂದು ಕರೆಯಲ್ಪಡುವ ಚೆನ್ನೈನಲ್ಲಿ 200 ಕೋಟಿಗಿಂತಲೂ ಹೆಚ್ಚು ರುಪಾಯಿಗಳ ನಷ್ಟ ಸಂಭವಿಸಿದೆ.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಕಳೆದೊಂದು ದಶಕದಲ್ಲೇ ಅತ್ಯಂತ ತೀವ್ರತೆಯ ಪ್ರವಾಹವು ಚೆನ್ನೈ ನಗರವನ್ನು ಅಪ್ಪಳಿಸಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಮುಂಚೂಣಿಯ ವಾಹನ ಸಂಸ್ಥೆಯ ಘಟಕಗಳಲ್ಲೂ ನಿರ್ಮಾಣ ಕಾರ್ಯವು ಸ್ಥಗಿತಗೊಂಡಿತ್ತು.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ದೇಶದೆಲ್ಲ ಜನಪ್ರಿಯ ಸಂಸ್ಥೆಗಳು ಚೆನ್ನೈನಲ್ಲಿ ನಿರ್ಮಾಣ ಘಟಕವನ್ನು ಹೊಂದಿದೆ. ಇಲ್ಲಿ ಫೋರ್ಡ್, ರೆನೊ-ನಿಸ್ಸಾನ್, ಡೈಮ್ಲರ್ ಇಂಡಿಯಾ, ಹ್ಯುಂಡೈ, ಯಮಹಾ, ರಾಯಲ್ ಎನ್ ಫೀಲ್ಡ್ ಹಾಗೂ ಇನ್ನಿತರ ಮುಂಚೂಣಿಯ ಸಂಸ್ಥೆಗಳ ಘಟಕಗಳಿದ್ದು, ಸತತ ಮಳೆಯಿಂದಾಗಿ ನಿರ್ಮಾಣ ಕಾರ್ಯವನ್ನು ಮುಚ್ಚುಗಡೆಗೊಳಿಸುವಂತಾಗಿದೆ.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಈ ಎಲ್ಲ ಬೆಳವಣಿಗೆಯಿಂದಾಗಿ ಸಹಜವಾಗಿಯೇ ನೂತನ ಕಾರು ಖರೀದಿಸುವ ಗ್ರಾಹಕರಿಗೆ ಕಾಯುವಿಕೆ ಅವಧಿ ಹೆಚ್ಚಾಗಲಿದೆ ಎಂದು ವಾಹನ ವಲಯದಿಂದ ಬಂದಿರುವ ತಿಳಿಸಿವೆ.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಚೆನ್ನೈನ ಪ್ರವಾಹ ಬಾಧಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಸೈನಿಕರು.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಚೆನ್ನೈ ಮಹಾ ಮಳೆಯ ಬಳಿಕ ಜನರನ್ನು ಬೋಟ್ ನಲ್ಲಿ ರಕ್ಷಿಸುತ್ತಿರುವ ದೃಶ್ಯಗಳು.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟ ಬಳಿಕ ಪರಿಶೀಲನೆ ನಡೆಸುತ್ತಿರುವ ತಮಿಳುನಾಡುವ ಮುಖ್ಯಮಂತ್ರಿ ಜೆ. ಜಯಲಲಿತಾ.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಚೆನ್ನೈನ ಜಲಾವೃತ ಪ್ರದೇಶದಿಂದ ಪಂಪ್ ಮೂಲಕ ನೀರನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ತೊಡಗಿರುವ ನಗರ ಪಾಲಿಕೆ ನೌಕರರು.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಪ್ರವಾಹದ ಸ್ಥಿತಿಯಿಂದಾಗಿ ವಾಹನ ಸವಾರರ ಪರದಾಟ.

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಚೆನ್ನೈ ಭಾರಿ ಮಳೆಗೆ ಸಿಲುಕಿರುವ ಬಸ್

ಚೆನ್ನೈ ಪ್ರವಾಹ; ವಾಹನ ಕ್ಷೇತ್ರಕ್ಕೆ 200 ಕೋಟಿಗೂ ಹೆಚ್ಚು ನಷ್ಟ

ಚೆನ್ನೈ ಸಬರ್ಬನ್ ವ್ಯಾಸರಪಾಡಿ ರೈಲ್ವೇ ನಿಲ್ದಾಣದಿಂದ ನೀರನ್ನು ಪಂಪ್ ಮೂಲಕ ತೆರವುಗೊಳಿಸುತ್ತಿರುವ ರೈಲ್ವೇ ನೌಕರರು.

Most Read Articles

Kannada
English summary
Automakers Face Losses Of Up To Rs. 180 Crores Due To Chennai Rains
Story first published: Wednesday, November 18, 2015, 16:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X