ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

Written By:

ವಾಹನ ತಂತ್ರಜ್ಞಾನ ಅಧ್ಯಯನದಲ್ಲಿ ಅತೀವ ಆಸಕ್ತಿಯನ್ನು ತೋರಿರುವ ಬಿಹಾರ ಮೂಲದ ಯುವಕನೋರ್ವ ವಿಶಿಷ್ಟ ರೀತಿಯ ತ್ರಿಚಕ್ರ ಬೈಕನ್ನು ಅವಿಷ್ಕರಿಸಿದ್ದಾರೆ. ಉತ್ತರ ಬಿಹಾರದ ಕತಿಹಾರ ಎಂಬ ಸಣ್ಣ ಪಟ್ಟಣದಲ್ಲಿ ಈಗ ಎಲ್ಲೆಡೆ ಇಜಾರ್ ಅಲಿ ಅವರೇ ಚರ್ಚಾ ವಿಷಯವಾಗಿಬಿಟ್ಟಿದ್ದಾರೆ.

To Follow DriveSpark On Facebook, Click The Like Button
ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಈತ ಪೆಟ್ರೋಲ್ ಮತ್ತು ಡೀಸೆಲ್ ಮಾತ್ರವಲ್ಲದೆ ಸೀಮೆಎಣ್ಣೆ ಮತ್ತು ಎಲ್ ಪಿಜಿಯಿಂದಲೂ ಸಂಚರಿಸುವ ಬೈಕ್ ಅಭಿವೃದ್ಧಿಪಡಿಸಿದ್ದಾರೆ.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಇಲ್ಲಿ ಗಮನಾರ್ಹ ಅಂಶವೆಂದರೆ ಯಾರಿಗೂ ಬೇಡವಾದ ಕೆಟ್ಟು ಹೋದ ಹಾಗೂ ಪಾಲು ಬಿದ್ದ ಉಪಕರಣಗಳನ್ನು ಬಳಸಿಕೊಂಡು ತ್ರಿಚಕ್ರ ಚಾಲಿತ ಬೈಕ್ ನಿರ್ಮಿಸಿದ್ದಾರೆ.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಇಜಾರ್ ಅವರಿಗೆ ಈ ಬೈಕ್ ನಿರ್ಮಿಸಲು 2006ನೇ ಇಸವಿಯಲ್ಲಿ ಬಿಡುಗಡೆಯಾದ ಅಜಯ್ ದೇವಗನ್ ನಟನೆಯ ಗೋಲ್ ಮಾಲ್ ಸಿನೆಮಾವು ಸ್ಪೂರ್ತಿಯಾಗಿತ್ತು.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಪ್ರಸ್ತುತ ಚಿತ್ರವು ಈತನ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿತ್ತು. ಬಳಿಕ ತಮ್ಮ ಕನಸಿನ ಬೈಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಗುಜರಿ ವ್ಯಾಪಾರಿಯಿಂದ 15,000 ರು.ಗಳಿಗೆ ಯಮಹಾ ಎಂಟಿಸರ್ ಬೈಕ್ ಖರೀದಿಸಿದ ಈತ ಸಂಪೂರ್ಣವಾಗಿ ನವೀಕೃತಗೊಳಿಸಿದ್ದಾರೆ.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಬೈಕ್ ಹಿಂಬದಿಯಲ್ಲಿ ಹೆಚ್ಚುವರಿ ಚಕ್ರ ಮತ್ತು ಸೀಟನ್ನು ಜೋಡಣೆ ಮಾಡಿದ್ದಾರೆ. ಇದರೊಂದಿಗೆ ಹೆಚ್ಚು ಮಂದಿಗೆ ಪ್ರಯಾಣಿಸುವಂತಾಗಿದೆ.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಇಂಧನ ಟ್ಯಾಂಕ್ ಇದರಲ್ಲಿ ಜೋಡಣೆ ಮಾಡಲಾಗಿದೆ. ಇಂಧನ ತುಂಬಲು ಎರಡು ವಿಭಿನ್ನ ಟ್ಯಾಂಕ್ ಇದರಲ್ಲಿದೆ. ಒಂದರಲ್ಲಿ ಪೆಟ್ರೋಲ್ ಮತ್ತು ಮಗದೊಂದರಲ್ಲಿ ಡೀಸೆಲ್ ಮತ್ತು ಸೀಮೆಎಣ್ಣೆ ತುಂಬುಬಹುದಾಗಿದೆ.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಇನ್ನು ಪರಿಸರ ಸ್ನೇಹಿ ಎನಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ ಪಿಜಿ ಕಿಟ್ ಸಹ ಜೋಡಣೆ ಮಾಡಿದ್ದಾರೆ. ಇದರಿಂದ ಮಾಲಿನ್ಯ ಮಟ್ಟವು ಕಡಿಮೆಯಾಗಲಿದೆ.

ಈ ಬೈಕ್ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ಸೀಮೆಎಣ್ಣೆ, ಎಲ್‌ಪಿಜಿಯಲ್ಲೂ ಓಡುತ್ತೆ!

ಸ್ನೇಹಿತರು ಹಾಗೂ ಕುಟುಂಬ ವರ್ಗದ ಸಹಾಯದಿಂದ 50 ದಿನಗಳ ಅವಧಿಯಲ್ಲಿ ಇಜಾರ್ ಬೈಕ್ ನಿರ್ಮಿಸಿದ್ದಾರೆ. ತನ್ಮೂಲಕ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನಕ್ಕೂ ಬೆಂಬಲ ಸೂಚಿಸಿದ್ದಾರೆ.

Read more on ಬೈಕ್ bike
English summary
Bihar Boy Builds 3-wheeler Bike From Scrap Materials
Story first published: Tuesday, November 15, 2016, 12:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark