ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

Written By:

ಟ್ರಯಂಪ್ ಬೊನೆವಿಲ್ಲೆ ಬೈಕ್ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು, ಅಪಘಾತ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ನಿಯಂತ್ರಣ ತಪ್ಪಿದ ಪರಿಣಾಮ ಬೈಕ್ ಸವಾರನೊಬ್ಬ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ತಾನದ ಜೈಪುರನಲ್ಲಿ ನಡೆದಿದೆ.

ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ಟ್ರಯಂಪ್ ಬೊನೆವಿಲ್ಲೆ ಬೈಕ್ ಗುದ್ದಿದ ರಭಸಕ್ಕೆ ಸ್ವಿಫ್ಟ್ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬೈಕ್‌ ಚಾಲನೆ ಮಾಡುತ್ತಿದ್ದ ಸವಾರನ ಮುಖ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ಬೈಕ್ ಸವಾರ ಯಾವುದೇ ರೀತಿಯ ಸುರಕ್ಷಾ ಸಾಧನಗಳನ್ನು ಬಳಸದ ಹಿನ್ನಲೆ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕನಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದ್ದು, ಅತಿವೇಗದ ಬೈಕ್ ಸವಾರಿಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ಘಟನೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸ್ಥಳೀಯ ಪೊಲೀಸರು, ಅಪಘಾತ ಸ್ಥಳದಿಂದ ಜಖಂಗೊಂಡಿದ್ದ ಬೈಕ್ ಮತ್ತು ಸ್ವಿಫ್ಟ್ ಕಾರನ್ನು ತೆರವುಗೊಳಿಸಿದ್ದಾರೆ.

ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ಇನ್ನು ಮೂರು ದಿನಗಳ ದಿನಗಳ ಹಿಂದಷ್ಟೇ ಹೊಸ ಬೈಕ್ ಖರೀದಿ ಮಾಡಲಾಗಿತ್ತು ಎಂಬ ವಿಚಾರವನ್ನು ಬಾಯಿಬಿಟ್ಟಿರುವ ಬೈಕ್ ಸವಾರ, ಹೆಲ್ಮೆಟ್ ಇಲ್ಲದೇ ಚಾಲನೆ ಮಾಡಿದ್ದು ತನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದಾನೆ.

ಸ್ವಿಫ್ಟ್ ಮತ್ತು ಟ್ರಯಂಪ್ ಬೊನೆವಿಲ್ಲೆ ಬೈಕ್ ನಡುವೆ ಡಿಕ್ಕಿ- ಸವಾರನ ಸ್ಥಿತಿ ಗಂಭೀರ..!

ಆದ್ರೆ ಅದೇನೇ ಇರಲಿ ಪ್ರತಿಯೊಬ್ಬರು ಜೀವರಕ್ಷಕ ಸಾಧನಗಳು ಇಲ್ಲದೇ ಬೈಕ್, ಕಾರು ಓಡಿಸುವ ಯೋಚಿಸಿ ಚಾಲನೆ ಮಾಡಿ. ಇಲ್ಲವಾದಲ್ಲಿ ಅದು ನಿಮ್ಮ ಪ್ರಾಣಕ್ಕೆ ಕುತ್ತು ಎಂಬುವುದನ್ನು ಮರೆಯಬೇಡಿ.

English summary
Read in Kannada About Brand New Triumph Bonneville Bobber Collides With Maruti Swift.
Story first published: Monday, June 12, 2017, 13:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark