ಪಾದಚಾರಿ ಮೇಲೆ ಹರಿದ ಬಿಎಸ್‌ವೈ ಪುತ್ರನ ಕಾರು: ಯುವಕ ಸ್ಥಳದಲ್ಲೇ ಸಾವು

Written By:

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಶಾಸಕ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಬೈಕ್'ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾದಾಪುರ ಕ್ರಾಸ್​ ಬಳಿ ನಡೆದಿದೆ.

ಪಾದಚಾರಿ ಮೇಲೆ ಹರಿದ ಬಿಎಸ್‌ವೈ ಪುತ್ರನ ಕಾರು: ಯುವಕ ಸ್ಥಳದಲ್ಲೇ ಸಾವು

ಶಾಸಕ ರಾಘವೇಂದ್ರ ಅವರು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದಾಗ ಅವರ KA 50 M 6646 ಸಂಖ್ಯೆಯ ಕಾರು ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೃತಪಟ್ಟಿರುವ ಯುವಕನನ್ನು ಸುರೇಶ್​​(24) ಎಂದು ಗುರುತಿಸಲಾಗಿದೆ.

ಪಾದಚಾರಿ ಮೇಲೆ ಹರಿದ ಬಿಎಸ್‌ವೈ ಪುತ್ರನ ಕಾರು: ಯುವಕ ಸ್ಥಳದಲ್ಲೇ ಸಾವು

ಗುರುವಾರ ರಾತ್ರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದಾಪುರ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಸ್ಥಳೀಯರು ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾದಚಾರಿ ಮೇಲೆ ಹರಿದ ಬಿಎಸ್‌ವೈ ಪುತ್ರನ ಕಾರು: ಯುವಕ ಸ್ಥಳದಲ್ಲೇ ಸಾವು

ಬಳಿಕ ಸ್ಥಳಕ್ಕಾಮಗಿಸಿದ ನ್ಯಾಮತಿ ಪೊಲೀಸರು ಘಟನಾ ಸ್ಥಳದಲ್ಲಿ ಜಮಾಸಿದ್ದ ಜನರನ್ನು ಚದುರಿಸಿದ್ದು, ನಂತರ ಪ್ರಕರಣ ದಾಖಲಿಸಿಕೊಂಡು ಚಾಲಕ ರವಿಚಂದ್ರನ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ ಎನ್ನಲಾಗಿದೆ.

ಪಾದಚಾರಿ ಮೇಲೆ ಹರಿದ ಬಿಎಸ್‌ವೈ ಪುತ್ರನ ಕಾರು: ಯುವಕ ಸ್ಥಳದಲ್ಲೇ ಸಾವು

ಘಟನೆ ಕುರಿತು ಹೇಳಿಕೆ ನೀಡಿರುವ ನ್ಯಾಮತಿ ಪೊಲೀಸರು, ಘಟನೆ ಬಳಿಕ ಅಗತ್ಯವಿದ್ದ ಎಲ್ಲಾ ಕ್ರಮಗಳು ಪೂರ್ಣಗೊಳ್ಳುವವರೆಗೂ ಶಾಸಕ ರಾಘವೇಂದ್ರ ಅವರು ಸ್ಥಳದಲ್ಲಿಯೇ ಇದ್ದರು ಎಂದು ಹೇಳಿದ್ದಾರೆ.

ಪಾದಚಾರಿ ಮೇಲೆ ಹರಿದ ಬಿಎಸ್‌ವೈ ಪುತ್ರನ ಕಾರು: ಯುವಕ ಸ್ಥಳದಲ್ಲೇ ಸಾವು

ಆದ್ರೆ ಘಟನೆಗೆ ನಿಖರ ಕಾರಣ ಎನು ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರು ಮೆಲ್ನೋಟಕ್ಕೆ ಕಾರು ಚಾಲಕನದ್ದೇ ತಪ್ಪಿದೆ ಎನ್ನಲಾಗಿದೆ. ಆದರೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮೃತರ ಕುಟಂಬಕ್ಕೆ ಅಗತ್ಯ ಪರಿಹಾರ ನೀಡಬೇಕಿದೆ.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಶಾಸಕ ರಾಘವೇಂದ್ರ ಅವರ ಕಾರು ಬೈಕ್‌ಗೆ ಡಿಕ್ಕಿ ಸಂಭವಿಸಿದ ಘಟನಾ ಸ್ಥಳದ ವಿಡಿಯೋ ಇಲ್ಲಿದೆ ವೀಕ್ಷಿಸಿ.

Read more on ಅಪಘಾತ accident
English summary
Read in Kannada about A man died in Madapura on Tuesday after being run over by an SUV used by former Chief Minister BS Yeddyurappa's son BY Raghavendra.
Story first published: Friday, September 1, 2017, 14:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark