ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ನವ ಭಾರತ ನಿರ್ಮಾಣಕ್ಕೆ 2022ರ ಕೇಂದ್ರ ಬಜೆಟ್‌ನಲ್ಲಿ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಕೊರೊನಾ ಸಂಕಷ್ಟ ಆರ್ಥಿಕ ಹಿಂಜರಿತದ ನಡುವೆಯೂ ಜನಪ್ರಿಯ ಯೋಜನೆಗಳ ಜಾರಿಗೆ ಆದ್ಯತೆ ನೀಡಲಾಗಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಲೋಕಸಭೆಯಲ್ಲಿ ಸತತವಾಗಿ ನಾಲ್ಕನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಆರ್ಥಿಕ ಕ್ಷೇತ್ರಗಳ ಬೆಳವಣಿಗೆ ಮಹತ್ವದ ಯೋಜನೆಗಳ ಜಾರಿಗೆ ಒಪ್ಪಿಗೆ ಸೂಚಿಸಿದ್ದು, ರೈಲ್ವೆ ವಲಯದಲ್ಲಿ ಮತ್ತಷ್ಟು ಸುಧಾರಣೆ ಜೊತೆಗೆ ಭಾರತ್ ರೈಲುಗಳ ಸಾಮರ್ಥ್ಯ ಹೆಚ್ಚಿಸಲು ಕೆಲವು ಹೊಸ ಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ರೈಲ್ವೇ ಇಲಾಖೆಗೆ ಮತ್ತಷ್ಟು ಶಕ್ತಿ ತುಂಬಲು ಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್ ರೈಲುಗಳನ್ನು ಅಳವಡಿಸಿಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಇದಲ್ಲದೆ ಮುಂದಿನ 3 ವರ್ಷಗಳಲ್ಲಿ 100 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು (Gati Shakti Cargo Terminal) ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ದೇಶದಲ್ಲಿ ರೈಲ್ವೆ ಪಾರ್ಸೆಲ್ ವಲಯವು ಕೆಲವು ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರವು ರೈತರು ಮತ್ತು ಉದ್ಯಮಿಗಳ ಅನುಕೂಲಕ್ಕಾಗಿ "ಒಂದು ನಿಲ್ದಾಣ ಒಂದು ಉತ್ಪನ್ನ" ಎಂಬ ಯೋಜನೆಯನ್ನು ಪರಿಚಯಿಸಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಹೊಸದಾಗಿ ಅಭಿವೃದ್ದಿಗೊಳ್ಳಲಿರುವ 400 ವಂದೇ ಭಾರತ್ ರೈಲುಗಳನ್ನು 'ಮೇಕ್ ಇನ್ ಇಂಡಿಯಾ' ಯೋಜನೆ ಅಡಿಯಲ್ಲಿ ನಿರ್ಮಾಣಗೊಳಿಸಲಿದ್ದು, ಹೊಸ ವಂದೇ ಭಾರತ್ ರೈಲುಗಳನ್ನು ಸ್ಟೀಲ್ ಬದಲಿಗೆ ಹಗುರವಾದ ಅಲ್ಯೂಮಿನಿಯಂನಿಂದ ಮಾಡಲಾಗುವುದು ಎಂದು ಘೋಷಿಸಲಾಗಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ರೈಲುಗಳಲ್ಲಿ ಅಲ್ಯೂಮಿನಿಯಂ ಅನ್ನು ವ್ಯಾಪಕವಾಗಿ ಬಳಸುವುದರಿಂದ ಪ್ರತಿ ರೈಲು ಸಾಮಾನ್ಯ ಮಾದರಿಗಿಂತಲೂ ಸುಮಾರು 50 ಟನ್‌ಗಳಷ್ಟು ಕಡಿಮೆ ತೂಕವನ್ನು ಹೊಂದಿರಲಿದ್ದು, ರೈಲಿನ ತೂಕ ಕಡಿಮೆಯಾದಂತೆ ಕಾರ್ಯಕ್ಷಮತೆ ಹೆಚ್ಚಳವಾಗುವುದರಿಂದ ನಿರ್ವಹಣಾ ವೆಚ್ಚವು ಗಣನೀಯವಾಗಿ ತಗ್ಗುವ ಮೂಲಕ ಲಾಭಾಂಶ ಹೆಚ್ಚಳವಾಗಲಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಮುಂದಿನ 25 ವರ್ಷಗಳ ದೂರದೃಷ್ಠಿಯೊಂದಿಗೆ ಹೊಸ ಯೋಜನೆ ರೂಪಿಸಲಾಗುತ್ತಿದ್ದು, ವಂದೇ ಭಾರತ್ ರೈಲುಗಳು ಒಟ್ಟು 16 ಕಂಪಾರ್ಟ್ ಮೆಂಟ್‌ ಒಳಗೊಂಡಿರಲಿವೆ. ಹೊಸ ವಂದೇ ಭಾರತ್ ರೈಲುಗಳ ನಿರ್ಮಾಣವು ಸಾಮಾನ್ಯ ರೈಲು ಮಾದರಿಯಲ್ಲಿನ ನಿರ್ಮಾಣಕ್ಕಿಂತಲೂ ಸರಾಸರಿಯಾಗಿ ರೂ. 25 ಕೋಟಿಯಷ್ಟು ಹೆಚ್ಚಳವಾಗಿರಲಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಕಬ್ಬಿಣದ ಬದಲಿದೆ ಗುಣಮಟ್ಟದ ಅಲ್ಯೂಮಿನಿಯಂ ಬಳಕೆಯು ನಿರ್ಮಾಣದಲ್ಲಿ ತುಸು ವೆಚ್ಚದಾಯಕವಾಗಿದ್ದರೂ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಹೆಚ್ಚಳವು ಲಾಭದಾಯಕವಾಗಲಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಗೆ ಸಮ್ಮತಿ ನೀಡಿರುವುದಾಗಿ ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಹೊಸ ವಂದೇ ಭಾರತ್ ರೈಲುಗಳು ಹೆಚ್ಚಿನ ವೇಗ ಮತ್ತು ಅಸ್ತಿತ್ವದಲ್ಲಿರುವ ಸ್ಥಳೀಯ ರೈಲುಗಳ ಸರಾಸರಿ ವೇಗದ ನಡುವಿನ ವೇಗದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು, ನಿರ್ವಹಣಾ ವೆಚ್ಚವು ದೀರ್ಘಾಕಾಲಿಕ ಬಳಕೆಯಲ್ಲಿ ಹೆಚ್ಚಿನ ಉಳಿತಾಯಕ್ಕೆ ಸಹಕಾರಿಯಾಗಲಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಹೊಸ ಯೋಜನೆ ಅಡಿ ಅಳವಡಿಸಿಕೊಳ್ಳಲಾಗುತ್ತಿರುವ 400 ವಂದೇ ಭಾರತ್ ರೈಲುಗಳಲ್ಲಿ ಈಗಾಗಲೇ ಮೊದಲ 44 ವಂದೇ ಭಾರತ್ ರೈಲುಗಳ ನಿರ್ಮಾಣ ಕಾರ್ಯವನ್ನು ಕೇಂದ್ರ ರೈಲ್ವೆ ಇಲಾಖೆಯು ಚಾಲನೆ ನೀಡಿದ್ದು, ಈ ವರ್ಷದ ಮಧ್ಯಂತರದಲ್ಲಿ ಹಳಿ ಮೇಲೆ ಅಧಿಕೃತವಾಗಿ ಸಂಚರಿಸಲಿವೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಹೊಸ ಯೋಜನೆ ಅಡಿ ವಂದೇ ಭಾರತ್ ರೈಲುಗಳು ಆಗಸ್ಟ್ 15, 2023ರ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಕನಿಷ್ಠ 75 ಮಾರ್ಗಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದ್ದು, ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ 2023ರ ವೇಳೆಗೆ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು 75 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದರು.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಪೂರ್ವ ನಿಗದಿಯಂತೆ ವಂದೇ ಭಾರತ್ ರೈಲು ಯೋಜನೆ ಅಡಿ ಹೊಸ ರೈಲುಗಳ ಮೂಲಕ ರೈಲ್ವೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ ನೀರಿಕ್ಷೆಯಲ್ಲಿರುವ ಕೇಂದ್ರ ಸರ್ಕಾರವು ಹೊಸ ಯೋಜನೆಗಾಗಿ ಒಟ್ಟು ಒಂದು ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ.

ಬಜೆಟ್ 2022: ರೈಲ್ವೆ ಇಲಾಖೆಗೆ ಸೇರ್ಪಡೆಯಾಗಲಿವೆ 400 ಹೊಸ ವಂದೇ ಭಾರತ್ ರೈಲುಗಳು!

ಹೊಸ ರೈಲುಗಳ ಸೇರ್ಪಡೆಯೊಂದಿಗೆ ರೈಲುಗಳ ಗುಣಮಟ್ಟ ಮತ್ತು ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರವು ರೈಲು ದುರಂತಗಳನ್ನು ತಪ್ಪಿಸಲು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಹೊಸ ಯೋಜನೆಗಳೊಂದಿಗೆ ಮುಂಬರುವ ದಿನಗಳಲ್ಲಿ ರೈಲು ಇಲಾಖೆಯಿಂದ ಭಾರೀ ಪ್ರಮಾಣದ ಆದಾಯ ನೀರಿಕ್ಷೆ ಮಾಡಲಾಗಿದೆ.

Most Read Articles

Kannada
Read more on ರೈಲು train
English summary
Budget 2022 400 energy efficient vande bharat trains on track details
Story first published: Tuesday, February 1, 2022, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X