Just In
- 10 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 13 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 15 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- News
Breaking; ಕರ್ನಾಟಕದಲ್ಲಿ ಆತ್ಮ ನಿರ್ಭರ ಗೋಶಾಲೆ ಅಭಿವೃದ್ಧಿ
- Movies
ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಬಹುಭಾಷಾ ನಟ ನಾಸಿರ್! ಕಾರಣವೇನು?
- Sports
ಐರ್ಲೆಂಡ್-ಭಾರತ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ಗೆದ್ದಿರುವ ಟೀಂ ಇಂಡಿಯಾ
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ರೈಲಿನಲ್ಲಿ ಸ್ಕಾರ್ಪಿಯೋ ಕಾರುಗಳನ್ನು ಸಾಗಿಸುತ್ತಿದ್ದ ವಿಡಿಯೋ ವೈರಲ್: ಭಾರತೀಯ ರೈಲ್ವೆಗೆ ಆನಂದ್ ಮಹೀಂದ್ರಾ ಕೃತಜ್ಞತೆ
ರೈಲಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರುಗಳನ್ನು ಸಾಗಿಸುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮಹೀಂದ್ರಾ & ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ರೈಲ್ವೆ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಹೊಸದಾಗಿ ಮ್ಯಾನುಫ್ಯಾಕ್ಚರ್ ಆಗಿ ಹೊರ ಬಂದಿದ್ದ ಮಹೀಂದ್ರಾ ಸ್ಕಾರ್ಪಿಯೊ SUV ಗಳ ಸಂಪೂರ್ಣ ಬ್ಯಾಚ್ ಅನ್ನು ರೈಲಿನ ಫ್ಲಾಟ್-ಬೆಡ್ ಕ್ಯಾರೇಜ್‌ಗಳಲ್ಲಿ ಸಾಗಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಾಲಾಗಿ ನಿಂತಿರುವ ಮಹೀಂದ್ರಾ ಸ್ಕಾರ್ಪಿಯೋ ಕಾರುಗಳನ್ನು ಕಾಣಬಹುದು. ಇನ್ಯಾವುದೇ ಸಾರಿಗೆ ಮೂಲಕ ಇಷ್ಟೊಂದು ವಾಹನಗಳನ್ನು ಸಾಗಿಸುವುದು ಅಸಾಧ್ಯವೆಂದು ರೈಲ್ವೇ ಇಲಾಖೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಾರುಗಳನ್ನು ಸಾಗಿಸಲು ರೈಲುಗಳನ್ನು ಬಳಸುವುದು ಹೊಸ ಆಲೋಚನೆಯೇನಲ್ಲ. ವಾಹನ ತಯಾರಕರು ಕೆಲವು ದಶಕಗಳಿಂದ ಇದೇ ಮಾರ್ಗವನ್ನು ಅನುಸರಿಸುತ್ತಾ ಬಂದಿದ್ದಾರೆ. ಈ ನಡುವೆ ಕೆಲವೊಮ್ಮೆ ಭಾರತೀಯ ಆಟೋ ಮಾರುಕಟ್ಟೆಯು ಸಾಂಪ್ರದಾಯಿಕವಾಗಿ ಕಾರ್ಖಾನೆಯಿಂದ ಹೊಸದಾಗಿ ನಿರ್ಮಿಸಲಾದ ಕಾರುಗಳನ್ನು ಸಾಗಿಸಲು ರಸ್ತೆಮಾರ್ಗಗಳನ್ನು ಅವಲಂಬಿಸುತ್ತವೆ.

ಇದಕ್ಕಾಗಿ ಬೃಹತ್ ಟ್ರಕ್‌ಗಳನ್ನು ಬಳಸುತ್ತಾರೆ, ಆದರೆ ಇದು ಅತ್ಯಂತ ಪರಿಣಾಮಕಾರಿ ಮಾರ್ಗವಲ್ಲ. ಏಕೆಂದರೆ ಅವುಗಳು ಕೆಲವೇ ಕಾರುಗಳನ್ನು ಮಾತ್ರ ಸಾಗಿಸಬಲ್ಲವು, ಅಲ್ಲದೇ ಗಾತ್ರವನ್ನು ಅವಲಂಬಿಸಿ ಸೂಕ್ತ ವಾಹನಗಳನ್ನು ಮಾತ್ರ ಸಾಗಿಸುತ್ತವೆ. ಜೊತೆಗೆ ಭಾರತೀಯ ರಸ್ತೆಗಳಲ್ಲಿ ಎದುರಿಸುವ ವಿವಿಧ ಅಡಚಣೆಗಳಿಂದಾಗಿ ಗಮ್ಯ ಸ್ಥಳವನ್ನು ಸೇರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಮಹೀಂದ್ರಾದಂತಹ ತಯಾರಕರಿಗೆ ಈ ಮಾರ್ಗವು ತೀರಾ ವಿರುದ್ಧವೆಂದೇ ಹೇಳಬಹುದು, ಏಕೆಂದರೆ ಇದು ಕೇವಲ SUV ಗಳನ್ನು ಮಾತ್ರ ತಯಾರಿಸುತ್ತದೆ. ಈ ವಾಹನಗಳು ಟ್ರಕ್‌ಗಳಲ್ಲಿ ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತವೆ. ಅದೃಷ್ಟವಶಾತ್, ಭಾರತೀಯ ರೈಲ್ವೇ ಈ ಸಮಸ್ಯೆಯನ್ನು ಗುರುತಿಸಿ ಮುಖ್ಯವಾಹಿನಿಯ ತಯಾರಕರಿಗೆ ಕಾರ್ ಸಾರಿಗೆಯನ್ನು ಹೆಚ್ಚು ಸುಲಭಗೊಳಿಸಿದೆ.

ಕೆಲವು ತಯಾರಕರು ತಮ್ಮ ಕಾರುಗಳನ್ನು ಕಾರ್ಖಾನೆಯಿಂದ ಪ್ರಾದೇಶಿಕ ಡಿಪೋಗಳಿಗೆ ಸಾಗಿಸಲು ಭಾರತೀಯ ರೈಲ್ವೆಯನ್ನು ಬಳಸುತ್ತಿದ್ದಾರೆ. ಅಲ್ಲಿಂದ ಕಾರುಗಳನ್ನು ರಸ್ತೆಯ ಮೂಲಕ ಡೀಲರ್‌ಶಿಪ್‌ಗೆ ಸಾಗಿಸಲಾಗುತ್ತದೆ, ಬಳಿಕ ಅಲ್ಲಿ ಖರೀದಿದಾರರಿಗೆ ಹಸ್ತಾಂತರಿಸಲಾಗುತ್ತದೆ. ಮಹೀಂದ್ರಾ ತನ್ನ ಬಹುಪಾಲು ಸಾರಿಗೆಗಾಗಿ ಭಾರತೀಯ ರೈಲ್ವೇಯನ್ನು ಅವಲಂಬಿಸಿರುವ ತಯಾರಕರಲ್ಲಿ ಒಂದಾಗಿದೆ.

ಟ್ವಿಟರ್ ಬಳಕೆದಾರರಿಂದ ಅಪ್‌ಲೋಡ್ ಮಾಡಲಾದ ಕಾರ್ ಸಾಗಣೆಯ ವೀಡಿಯೊ ಎಲ್ಲರ ಗಮನ ಸೆಳೆಯಿತು. 21 ಮೇ 2022 ರಂದು ಶಕ್ತಿ ಚತುರ್ವೇದಿ ಎಂಬಾತ ಟ್ವೀಟ್ ಮಾಡಿ, "ಯಾವಾಗಲೂ, ##IndianRailways ಅತ್ಯುತ್ತಮ ಸಾರಿಗೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ #Mahindra #Scorpioಗಿರುವ ಕ್ರೇಜ್ ಮತ್ತು ಬೇಡಿಕೆಯನ್ನು ಈ ವೀಡಿಯೊದಲ್ಲಿ ನೋಡಬಹುದು. ಇತರ ಕಾರುಗಳಿಗೆ ಹೋಲಿಸಿದರೆ ಸ್ಕಾರ್ಪಿಯೋ ಲಭ್ಯತೆಯ ಹಿಂದಿನ ಕಾರಣವನ್ನು ಇಂದು ನಾನು ತಿಳಿದುಕೊಂಡಿದ್ದೇನೆ. ಆನಂದ್ ಮಹೀಂದ್ರ ಸರ್ ಈ ಕ್ಲಿಪ್ ಅನ್ನು ನೋಡಿದರೆ ನೀವು ಸಂತೋಷಪಡುತ್ತೀರಿ ಎಂದು ನಾನು ಭಾವಿಸುತ್ತೇನೆ." ಎಂದು ಟ್ವೀಟ್ ಮಾಡಿದ್ದಾನೆ.

ಹಲವು ಮಹೀಂದ್ರಾ ಸ್ಕಾರ್ಪಿಯೊ SUV ಗಳನ್ನು ಫ್ಲಾಟ್-ಬೆಡ್ ಕ್ಯಾರೇಜ್‌ನಲ್ಲಿ ಸಾಗಿಸುತ್ತಿರುವಂತೆ ತೋರುವ ಕಿರು ವೀಡಿಯೊದೊಂದಿಗೆ ಈ ಟ್ವೀಟ್ ಅನ್ನು ಸೇರಿಸಲಾಗಿದೆ. ವೀಡಿಯೋ ತೆಗೆದ ಸ್ಥಳ ಅನಿಶ್ಚಿತವಾಗಿದೆ. ಆದರೂ, ರೈಲ್ವೇ ಮೂಲಕ ಕಾರುಗಳನ್ನು ಸಾಗಿಸುವುದರಿಂದ ಎಷ್ಟು ದೊಡ್ಡ ಪರಿಣಾಮವನ್ನು ಸೃಷ್ಟಿಸುತ್ತದೆ ಎಂಬುದನ್ನು ಇದು ಪ್ರದರ್ಶಿಸುತ್ತದೆ.

ಇಂದು ಮುಂಜಾನೆ, ಆನಂದ್ ಮಹೀಂದ್ರಾ ಟ್ವೀಟ್‌ಗೆ ಪ್ರತಿಕ್ರಿಯಿಸಿ, "ಸ್ಕಾರ್ಪಿಯೋಗಳು ಹೆಚ್ಚು ಲಭ್ಯವಿವೆ ಎಂದು ನನಗೆ ಖಚಿತವಿಲ್ಲ, ಆದರೂ ನಾವು ರೈಲ್ವೆಯ ಅವರ ದಕ್ಷ ಸೇವೆಗಳಿಗಾಗಿ ನಿಜವಾಗಿಯೂ ಕೃತಜ್ಞರಾಗಿರುತ್ತೇವೆ! ಆದರೆ ನೀವು ಹೇಳಿದ್ದು ನಿಜ. ಎಂದು ಪ್ರತಿಕ್ರಿಯಿಸಿದ್ದಾರೆ.

ಮಹೀಂದ್ರವನ್ನು ಹೊರತುಪಡಿಸಿ, ಮಾರುತಿ ಸುಜುಕಿ ತನ್ನ ಕಾರುಗಳ ಸಾಗಣೆಗೆ ರೈಲ್ವೇಯನ್ನು ಹೆಚ್ಚು ಅವಲಂಬಿಸಿರುವ ಮತ್ತೊಂದು ಕಾರು ತಯಾರಕ ಕಂಪನಿ. ಮಾರುತಿ ಸುಜುಕಿ ಭಾರತೀಯ ರೈಲ್ವೇಯಿಂದ AFTO (ಆಟೋಮೊಬೈಲ್ ಫ್ರೈಟ್ ಟ್ರಾನ್ಸ್‌ಪೋರ್ಟ್ ಆಪರೇಟರ್) ಪರವಾನಗಿಯನ್ನು ಪಡೆದ ಭಾರತದ ಮೊದಲ ಆಟೋಮೊಬೈಲ್ ತಯಾರಕ ಕಂಪನಿಯಾಗಿದೆ.

ಭಾರತೀಯ ರೈಲ್ವೇಯ ಮೇಲೆ ಯಾವುದೇ ನೇರ ಅವಲಂಬನೆ ಇಲ್ಲದೆ ಕಂಪನಿಯು ತನ್ನದೇ ಆದ ರೈಲುಗಳು ಮತ್ತು ಬೋಗಿಗಳನ್ನು ನಿರ್ವಹಿಸಲು ಇದು ಅನುಮತಿಸುತ್ತದೆ. ಮಾರುತಿ ಸುಜುಕಿ ಪ್ರಸ್ತುತ 41 ರೈಲ್ವೇ ರೇಕ್‌ಗಳನ್ನು ನಿರ್ವಹಿಸುತ್ತಿದ್ದು, ಈ ಪ್ರತಿಯೊಂದು ರೇಕ್‌ಗಳು ಏಕಕಾಲದಲ್ಲಿ 300 ಕ್ಕೂ ಹೆಚ್ಚು ಕಾರುಗಳನ್ನು ಸಾಗಿಸುತ್ತವೆ.

ಮಾರುತಿ ಸುಜುಕಿ ಇದುವರೆಗೆ 11 ಲಕ್ಷ ಕಾರುಗಳನ್ನು ಸಾಗಿಸಿದೆ. ಆ ಮೂಲಕ ಟ್ರಕ್‌ಗಳನ್ನು ತಪ್ಪಿಸುವ ಮೂಲಕ 17.4 ಕೋಟಿ ಲೀಟರ್ ಪಳೆಯುಳಿಕೆ ಇಂಧನವನ್ನು ಉಳಿಸಿದೆ. ಇದು ಪರಿಸರದ ಹಾನಿಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇಲ್ಲಿ ಮಹೀಂದ್ರಾ ಸ್ಕಾರ್ಪಿಯೋನಂತಹ ತೆರೆದ ಫ್ಲಾಟ್-ಬೆಡ್‌ಗಳ ಮೇಲೆ ಕಾರುಗಳನ್ನು ಸಾಗಿಸುವ ಏಕೈಕ ಅನನುಕೂಲವೆಂದರೆ ಇಳಿಸುವ ವೇಳೆ ತುಸು ಸುಲಭವಾಗುತ್ತದೆ.

ಆದರೆ ಮಳೆ ಮತ್ತು ಬಿಸಿಲು ಸ್ವಲ್ಪ ಹಾನಿಯನ್ನು ಉಂಟುಮಾಡಬಹುದು, ಅಲ್ಲದೇ ರೈಲು ನಿಂತಿದ್ದರೆ ಕೆಲವರು ಚೇಷ್ಟೆಯ ಕೆಲಸಗಳಿಂದ ಹಾನಿ ಉಂಟುಮಾಡಬಹುದು. ಆದರೆ ಮಾರುತಿ ಸುಜುಕಿಯು ಸಂಪೂರ್ಣವಾಗಿ ಮುಚ್ಚಿದ ರೈಲುಗಳನ್ನು ಕಾರು ಸಾಗಿಸಲು ಬಳಸುತ್ತದೆ.