ಚೀನಾ ಮತ್ತಷ್ಟು ಬಲಶಾಲಿ; ಭಾರತಕ್ಕೂ ಪಸರಿಸಿದ ಭೀತಿ?

Written By:

ಎಲ್ಲ ಕ್ಷೇತ್ರಗಳಲ್ಲೂ ಮೀರಿ ನಿಂತಿರುವ ನೆರೆಯ ಚೀನಾ ಭಾರತದ ಪ್ರಗತಿಯ ಪ್ರತಿ ಹೆಜ್ಜೆಯಲ್ಲೂ ಸವಾಲಾಗಿ ನಿಂತಿದೆ. ರಕ್ಷಣಾ ವ್ಯವಸ್ಥೆಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಸವಾಲಾಗಿ ನಿಂತಿರುವ ಚೀನಾ ಅತಿ ನೂತನ ಯುದ್ಧ ನೌಕೆಯೊಂದನ್ನು ನಿರ್ಮಿಸಿದೆ. ಇದರಿಂದ ಭಾರತಕ್ಕೂ ಭೀತಿ ಹರಡಿದೆ.

ಚೀನಾದ ಅತಿ ಆಧುನಿಕ ಯುದ್ಧ ಹಡಗುಗಳಲ್ಲಿ ಒಂದಾಗಿರುವ ಹೀಫೆ (Hefei), ಆಕಾಶದಿಂದ ಹಾರಿ ಬರುವ ಶಕ್ತಿಶಾಲಿ ಮಿಸೈಲ್ ಗಳನ್ನು ಹೊಡೆದುರುಳಿಸಲಿದೆ. ಇದು ಚೀನಾ ವಾಯುಬಲವನ್ನು ಮತ್ತಷ್ಟು ಶಕ್ತಿಗೊಳಿಸಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಹೀಫೆ, 052ಡಿ ವಿಧಕ್ಕೆ ಸೇರಿದ ನಿರ್ದೇಶಿತ ಮಿಸೈಲ್ ನಾಶಕವಾಗಿದೆ. ಇದೆಷ್ಟು ಬಲಶಾಲಿಯೆಂದರೆ ಅಮೆರಿಕದ ಅರ್ಲೇಗ್ ಬರ್ಕ್ ಕ್ಲಾಸ್ ವಿಧ್ವಂಸಕಗಳಿಗೆ ಸರಿ ಸಮಾನವಾಗಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

7,000 ಟನ್ ಭಾರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಹೀಫೆ, ವಿವಿಧ ರೀತಿಯ ವೈಮಾನಿಕ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಹೀಫೆ ಯುದ್ಧ ಹಡಗಿನಲ್ಲಿ ಟೈಪ್ 346 ರಾಡಾರ್ ವ್ಯವಸ್ಥೆಯನ್ನು ಜೋಡಿಸಲಾಗಿದ್ದು, ಇದು ವೈಮಾನಿಕ ಆತಂಕಗಳನ್ನು ಟ್ರ್ಯಾಕ್ ಮಾಡಲಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಹೀಫೆ ಯುದ್ಧ ಹಡಗು, ಎಸ್‌ಎಂ-2 ಸ್ಟ್ಯಾಂಡರ್ಡ್ ಗೆ ಸಮಾನವಾದ ನೆಲದಿಂದ ಗಾಳಿಗೆ ದಾಳಿಯಿಡಬಲ್ಲ 64ರಷ್ಟು ಎಚ್‌ಕ್ಯೂ-9 ರೆಡ್ ಬ್ಯಾನರ್ ಮಿಸೈಲ್ ವ್ಯವಸ್ಥೆಗಳನ್ನು ಹೊಂದಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಇದರ ಹೊರತಾಗಿ ಎಂಟು ವೈಜೆ-62 ಹಡಗು ದಾಳಿ ಮಿಸೈಲ್, 130 ಮಿಲ್ಲಿಮೀಟರ್ ಬಹುಪಾತ್ರಧಾರಿ ಶಿಪ್ ಗನ್, ಹತ್ತಿರದಿಂದ ನಿಗಾ ವಹಿಸಬಹುದಾದ ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ಆರರಷ್ಟು ಜಲಾಂತರ್ಗಾಮಿ ನಾಶಕ ಸ್ಫೋಟಕಗಳನ್ನು ಪಡೆದಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಅಷ್ಟೇ ಅಲ್ಲದೆ ಹಾರ್ಬಿನ್ ಝಡ್-9 ಹೆಲಿಕಾಪ್ಟರ್ ಗಳಿಗೂ ಕಾರ್ಯಾಚರಣೆ ನಡೆಸಲು ಬೇಕಾದಷ್ಟು ಸ್ಥಳಾವಕಾಶವನ್ನು ಹೀಫೆ ಹಡಗು ಒದಗಿಸಲಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಅಂದ ಹಾಗೆ ಹೀಫೆ ಯುದ್ಧ ಹಡಗಿನಲ್ಲಿ ಸರಿ ಸುಮಾರು 280ರಷ್ಟು ಸೈನಿಕರು ಕಾರ್ಯಾಚರಣೆ ನಡೆಸಲಿದ್ದಾರೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಹೀಫೆ ಶ್ರೇಣಿಯ ಮೂರನೇ ಯುದ್ಧ ಹಡಗು ಇದಾಗಿದೆ. ವಾಯು ವಲಯದಲ್ಲಿ ಸಂಪೂರ್ಣ ರಕ್ಷಣೆಯನ್ನು ಒದಗಿಸಲಿದ್ದು, ತನ್ಮೂಲಕ ಚೀನಾ ವಾಯುಸೇನೆಯ ಕಾರ್ಯಾಚರಣೆಗೆ ನೆರವಾಗಲಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಇದರಲ್ಲಿ ಕಾರ್ಯಾಚರಣೆಗಿಳಿಯುವ ನಾವಿಕರಿಗೆ ಉನ್ನತ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಆರ್ಥಿಕವಾಗಿ ಮುಂದುವರಿದ ದೇಶವಾಗಿದ್ದರಿಂದ ಈ ನಿಟ್ಟಿನಲ್ಲಿ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗಿದೆ.

ಚಿತ್ರಗಳಲ್ಲಿ....

ಚಿತ್ರಗಳಲ್ಲಿ....

18 ಟ್ಯೂಬ್ ಗಳನ್ನು ಹೊಂದಿರುವ ರಾಕೆಟ್ ಲಾಂಚರ್. ಇಂತಹ ನಾಲ್ಕು ರಾಕೆಟ್ ಲಾಂಚರ್ ಗಳನ್ನು ಜೋಡಣೆ ಮಾಡಲಾಗಿದೆ.

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

1x3 ಟೊರ್ಪಡೊ ಟ್ಯೂಬ್

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ಎಚ್/ಪಿಜೆ-38 130 ಎಂಎಂ ಡ್ಯುಯಲ್ ಪರ್ಪಸ್ ಗನ್

ಚೀನಾದ ಮಿಸೈಲ್ ನಾಶಕ ಯುದ್ಧ ಹಡಗು

ನೌಕೆಯ ಮೇಲೆ ಜೋಡಿಸಿರುವ ರಾಡಾರ್ ವ್ಯವಸ್ಥೆ

English summary
China's Hefei, a Type 052D Guided Missile Destroyer
Story first published: Friday, June 10, 2016, 9:51 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark