ಅವಿಭಜಿತ ಅವಳಿ ಮಕ್ಕಳ ಬಗ್ಗೆ ಕೇಳಿರುತ್ತೀರ..ಆದರೆ ಅವಿಭಜಿತ ಕಾರನ್ನು ಎಂದಾದರು ನೋಡಿದ್ದಾರ?

ಅವಿಭಜಿತ ಅವಳಿಗಳ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಇತ್ತೀಚೆಗೆ ತಮಿಳು ನಟ ಸೂರ್ಯ ಕೂಡ ಮಾಟ್ರಾನ್ ಎಂಬ ಚಿತ್ರದಲ್ಲಿ ಇದೇ ಕಾನ್ಸೆಪ್ಟ್‌ನಲ್ಲಿ ನಟಿಸಿದ್ದರು. ಸರಳವಾಗಿ ಹೇಳುವುದಾದರೆ ಅವಿಭಜಿತ ಅವಳಿಗಳು ಎಂದರೆ ವಿಭಜಿಸಲಾಗದ ಅವಳಿಗಳು ಎಂದರ್ಥ. ಇದೇ ಅವಿಭಜಿತ ಅವಳಿಗಳ ವಿನ್ಯಾಸದಲ್ಲಿ ಕಾರುಗಳನ್ನು ತಯಾರಿಸಲು ಸಾಧ್ಯವೇ? ಅಷ್ಟಕ್ಕೂ ಇಂತಹ ವಾಹನವಿದೆಯೇ? ಇದ್ದರೇ ಇದರ ಕಾರ್ಯಾಚರಣೆಯಾದರೂ ಹೇಗೆ ಎಂಬುದನ್ನು ಇಲ್ಲಿ ನೋಡಬಹುದು.

ಅವಿಭಜಿತ ಅವಳಿಗಳ ಬಗ್ಗೆ ಕೇಳಿರುತ್ತೀರ..ಆದರೆ ಅವಿಭಜಿತ ಕಾರನ್ನು ಎಂದಾದರು ನೋಡಿದ್ದಾರ?

ಈ ಮೇಲಿನ ಫೋಟೋದಲ್ಲಿರುವ ಕಾರನ್ನು ನೋಡಿ, ಎರಡು ಕಾರುಗಳನ್ನು ಪರಸ್ಪರ ಮಿಶ್ರಣ ಮಾಡಿ ಒಂದೇ ಕಾರಿನಂತೆ ತಯಾರಿಸಲಾಗಿದೆ. ವಾಸ್ತವವಾಗಿ, ಇದು ಉತ್ಪಾದನೆಯ ಕೊರತೆ ಅಥವಾ ಇನ್ಯಾವುದೇ ಲೋಪ,ದೋಷಗಳಿಂದ ಹೀಗಾಗಿಲ್ಲ. ಬದಲಾಗಿ ಪೂರ್ವಯೋಜಿವಾಗಿಯೇ ಈ ಕಾರನ್ನು ಹೀಗೆ ನಿರ್ಮಿಸಲಾಗಿದೆ. ಕಾರಿನ ಕಸ್ಟಮೈಸೇಶನ್ ಪ್ರಕ್ರಿಯೆಯ ಭಾಗವಾಗಿ, ಎಂಜಿನಿಯರ್‌ಗಳು ಈ ಮಾದರಿಯನ್ನು ರೂಪಿಸಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಪ್ರಸಿದ್ಧ 800 ಕಾರುಗಳನ್ನು ಜೋಡಿಸಿ ಮಧ್ಯದಲ್ಲಿರುವ ಬಾಗಿಲುಗಳು ಮತ್ತು ಚಕ್ರಗಳನ್ನು ತೆರವುಗೊಳಿಸಿ ಈ ಡಿಸೈನ್‌ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅವಿಭಜಿತ ಅವಳಿಗಳ ಬಗ್ಗೆ ಕೇಳಿರುತ್ತೀರ..ಆದರೆ ಅವಿಭಜಿತ ಕಾರನ್ನು ಎಂದಾದರು ನೋಡಿದ್ದಾರ?

ವಾಹನ ಪ್ರಿಯರಲ್ಲಿ ಹಲವರು ತಮ್ಮ ವಾಹನಗಳನ್ನು ಇತರ ವಾಹನಗಳಿಗಿಂತ ವಿಭಿನ್ನವಾಗಿ ಮತ್ತು ವೈಶಿಷ್ಟ್ಯವಾಗಿ ಕಾಣುವಂತೆ ಮಾಡಲು ಹಲವು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ಅವಿಭಜಿತ ಮಾರುತಿ 800 ಕೂಡ ಅಂತಹ ಆಲೋಚನೆಗಳಿಂದ ಹುಟ್ಟಿಕೊಂಡಿರುವ ವಾಹನವಾಗಿದೆ. ಕಸ್ಟಮೈಸ್ ಮಾಡಿದ ಕಾರನ್ನು ಸುಜುಕಿ ಮೆಹ್ರಾನ್ (Suzuki Mehran) ಎಂದು ಕರೆಯಲಾಗುತ್ತದೆ. ಈ ಹೆಸರು ಕೇಳಿದಾಗ, ಇದು ಹೊಸ ಮಾದರಿ ಎಂದು ಭಾವಿಸಬಹುದು, ಆದರೆ ಇದು ನಮ್ಮ ದೇಶದಲ್ಲಿ ಲಭ್ಯವಿರುವ ಮಾರುತಿ 800 ಮಾದರಿಯೇ ಆಗಿದೆ. ಜಪಾನಿನ ಕಾರು ತಯಾರಕ ಸುಜುಕಿ ನೆರೆಯ ಪಾಕಿಸ್ತಾನ್‌ ಮಾರುಕಟ್ಟೆಯಲ್ಲಿ ಈ ಕಾರನ್ನು ಸುಜುಕಿ ಮೆಹ್ರಾನ್ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ಪಾಕಿಸ್ತಾನದ ಹವ್ಯಾಸಿ ಕಾರು ಮೊಡಿಫೈಯರ್ ಓರ್ವ ಎರಡು ಸುಜುಕಿ ಮೆಹ್ರಾನ್ ಕಾರುಗಳನ್ನು ಒಟ್ಟಿಗೆ ಜೋಡಿಸಿ ಇಂತಹ ಕಾರನ್ನು ತಯಾರಿಸಿದ್ದಾನೆ. ಪ್ರಸ್ತುತ, ಈ ಕಸ್ಟಮೈಸ್ಡ್‌ ಸುಜುಕಿ ಮೆಹ್ರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ ಪ್ರಮುಖ ರಾಜಕಾರಣಿ ಹಮ್ದಾನ್ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಒಡೆತನದಲ್ಲಿದೆ. ಈಗ ಅರಬ್ ರಾಷ್ಟ್ರದರುವ ಯುವಕರ ಜೊತೆಗೆ ನೆಟ್ಟಿಗರ ಗಮನ ಸೆಳೆಯುತ್ತಿದೆ ಸುಜುಕಿ ಮೆಹ್ರಾನ್. ಈ ಕಾರಿನ ಪಕ್ಕದಲ್ಲಿ ನಿಲ್ಲಿಸಲಾದ ಕ್ಲಾಸಿಕ್ ಕಾರನ್ನು ನೋಡಿದರೆ ಮಾಲೀಕ ಕಾರು ಪ್ರೇಮಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಅವಿಭಜಿತ ಅವಳಿಗಳ ಬಗ್ಗೆ ಕೇಳಿರುತ್ತೀರ..ಆದರೆ ಅವಿಭಜಿತ ಕಾರನ್ನು ಎಂದಾದರು ನೋಡಿದ್ದಾರ?

ನಹ್ಯಾನ್ ಅವರ ಕಾರ್ ಗ್ಯಾರೇಜ್‌ನಲ್ಲಿ ವಿವಿಧ ಕ್ಲಾಸಿಕ್ ಕಾರುಗಳು ಮತ್ತು ಹಲವಾರು ಕಸ್ಟಮೈಸ್ಡ್ ಕಾರುಗಳು ಇರುವುದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಕಸ್ಟಮೈಸ್ ಮಾಡಿದ ಕಾರುಗಳನ್ನು ಉದ್ದವಾಗಿ ಮತ್ತು ಹೆಚ್ಚಿನ ಆಸನಗಳು ಅಥವಾ ಹೆಚ್ಚಿನ ಕ್ಯಾಬಿನ್ ರೂಂ ಇರುವ ಕಾರುಗಳನ್ನು ಲೆಮೋಜಿನ್ (Limousine) ಎಂದು ಕರೆಯುತ್ತಾರೆ. ಆದರೆ ಸುಜುಕಿ ಮೆಹ್ರಾನ್ನ ವಿಷಯದಲ್ಲಿ, ಕಾರ್ ಕಸ್ಟಮೈಸರ್‌ಗಳು ವಿಭಿನ್ನವಾಗಿ ಯೋಚಿಸಿ, ಎರಡು ಕಾರುಗಳನ್ನು ಅಕ್ಕಪಕ್ಕದಲ್ಲಿ ಇರಿಸಿ ಅಗಲವಾದ ಲೆಮೋಜಿನ್ ಅನ್ನು ತಯಾರಿಸಿದ್ದಾರೆ.

ನಿಜಕ್ಕೆ ಎರಡು ಕಾರುಗಳನ್ನು ಅಕ್ಕಪಕ್ಕದಲ್ಲಿ ಇರಿಸಿ ಅವುಗಳನ್ನು ಒಂದೇ ಕಾರಿನಂತೆ ಮಾಡುವುದು ಸುಲಭದ ಕೆಲಸ, ಕೇವಲ ಎರಡನ್ನು ವೆಲ್ಡಿಂಗ್ ಮಾಡುರಿತ್ತಾರೆ ಎಂದು ಭಾವಿಸಬಹುದು. ಆದರೆ ವಾಸ್ತವವಾಗಿ ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎರಡು ಕಾರುಗಳನ್ನು ಜೋಡಿಸಿರುವ ಪ್ರದೇಶದಲ್ಲಿ ಒಂದು ಕಾರಿನ ಬಲಬಾಗಿಲುಗಳು ಮತ್ತು ಇನ್ನೊಂದು ಕಾರಿನ ಎಡಬಾಗಿಲನ್ನು ತೆಗೆದುಹಾಕಲಾಗಿದೆ.

ಅವಿಭಜಿತ ಅವಳಿಗಳ ಬಗ್ಗೆ ಕೇಳಿರುತ್ತೀರ..ಆದರೆ ಅವಿಭಜಿತ ಕಾರನ್ನು ಎಂದಾದರು ನೋಡಿದ್ದಾರ?

ಅಲ್ಲದೆ, ಎರಡೂ ಬದಿಗಳ ನಡುವೆ ಬರುವ ಚಕ್ರಗಳನ್ನು ಸಹ ತೆಗೆದುಹಾಕಲಾಗಿದೆ. ಒಂದೇ ಕಾರಿನಲ್ಲಿ ಒಂದೇ ಸ್ಟೀರಿಂಗ್ ವೀಲ್ ಮತ್ತು ಎಂಜಿನ್ ಅನ್ನು ಹೊಂದಲು ಡ್ಯಾಶ್ ಬೋರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕಾರಿನ ಅಗಲ ಹೆಚ್ಚಾದ ಕಾರಣ ಎರಡು ಕಾರುಗಳನ್ನು ಸಂಪರ್ಕಿಸುವ ಚಕ್ರಗಳ ಮಧ್ಯದಲ್ಲಿ ವಿಶೇಷ ಆಕ್ಸಲ್‌ಗಳನ್ನು ಬಳಸಲಾಗಿದೆ. ಎಡಬದಿಯ ಕಾರಿನಲ್ಲಿ ಸ್ಟೀರಿಂಗ್ ಮತ್ತು ಎಂಜಿನ್ ಇಲ್ಲದೇ ಕೇವಲ ಅಗಲವಾದ ಆಸನಗಳು ಮಾತ್ರ ಅಳವಡಿಸಲಾಗಿದೆ.

ಇದಲ್ಲದೆ, ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಪರಸ್ಪರ ಬೆರೆಯುವಂತೆ ಕಸ್ಟಮೈಸ್‌ ಮಾಡಲಾಗಿದೆ. ಈ ಮೂಲಕ ಸುಜುಕಿ ಲೋಗೋ ಎರಡು ಕಾರುಗಳ ಮಧ್ಯದಲ್ಲಿ ಕಂಡುಬರುತ್ತದೆ. ಇಡೀ ಮಾರ್ಪಾಡು ಪ್ರಕ್ರಿಯೆಯು ತುಂಬಾ ಅಚ್ಚುಕಟ್ಟಾಗಿ ಮತ್ತು ಕ್ಲೀನ್ ಅಂಡ್ ಕ್ಲಿಯರ್‌ ಆಗಿ ಕಾಣುತ್ತದೆ. ಎಲ್ಲಿಯೂ ಡಂಟ್‌ಗಳು ಕಾಣದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ಮಾರ್ಪಡಿಸಿದ ಕಾರಿನಲ್ಲಿ ಕೇವಲ 4 ಚಕ್ರಗಳು ಮಾತ್ರ ಇವೆ. ಈ ಆಕ್ಸಲ್, ಸಸ್ಪೆನ್ಷನ್ ಮತ್ತು ಬ್ರೇಕ್ ಸೆಟಪ್‌ಗಳನ್ನು ಹೆಚ್ಚಾಗಿ ಮಾರ್ಪಡಿಸಲಾಗಿದೆ.

ಈ ಮಾಡಿಫೈಡ್ ಕಾರು ಗಮನ ಎಲ್ಲರ ಗಮನ ಸೆಳೆಯುತ್ತಿದ್ದರೂ, ಕಾನೂನುಬದ್ಧವಾಗಿ ಇದನ್ನು ಅನುಮತಿಸುವುದಿಲ್ಲ. ಸಾಮಾನ್ಯವಾಗಿ, ಎರಡು ಕಾರುಗಳನ್ನು ಒಟ್ಟಿಗೆ ಸಂಪರ್ಕಿಸುವುದು ಅದರ ಅಗಲವನ್ನು ದ್ವಿಗುಣಗೊಳಿಸುತ್ತದೆ. ಇದರ ಪರಿಣಾಮವಾಗಿ ರಸ್ತೆಗಳಲ್ಲಿ ಹೆಚ್ಚಿನ ಸ್ಥಳವನ್ನು ಅತಿಕ್ರಮಿಸುವ ಮತ್ತು ಇತರ ವಾಹನಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಿರಿದಾದ ರಸ್ತೆಗಳಲ್ಲಿ ಇಷ್ಟು ಅಗಲವಾದ ಕಾರಿನಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟ. ಆದ್ದರಿಂದ, ಈ ಸ್ಪೆಷಲ್ ಕಾರು ರೋಡ್‌ಶೋಗಳು ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಮಾತ್ರ ಬಳಸಬಹುದಾಗಿದೆ.

Most Read Articles

Kannada
English summary
Crazy modification 2 maruti suzuki 800 cars joined side by side
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X