ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಟಾಟಾ ಭಾರತದ ನಾಲ್ಕು ಚಕ್ರ ವಾಹನಗಳ ತಯಾರಕ ಕಂಪನಿಯಾಗಿದೆ. ಹೀರೋ ಮೊಟೊಕಾರ್ಪ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಈ ಎರಡೂ ಕಂಪನಿಗಳು ಭಾರತದಲ್ಲಿರುವ ಅತ್ಯಂತ ಹಳೆಯ ಆಟೋಮೊಬೈಲ್ ಕಂಪನಿಗಳಾಗಿವೆ.

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಈ ಕಂಪನಿಗಳಂತೆ, ಡಿಸಿ ಡಿಸೈನ್ ಸಹ ಭಾರತದಲ್ಲಿ ಹಲವಾರು ವರ್ಷಗಳಿಂದ ವಾಹನಗಳನ್ನು ಮಾರ್ಪಾಡು ಮಾಡುತ್ತಿದೆ. ಈ ಕಂಪನಿಯು ವಾಹನಗಳನ್ನು ಮರುಹೊಂದಿಸುವುದು, ನವೀಕರಿಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಮಾರ್ಪಾಡು ಮಾಡುತ್ತದೆ. ಇದುವರೆಗೂ ನೂರಾರು ಕಾರುಗಳನ್ನು ಮಾಡಿಫೈ ಮಾಡಿದೆ. ಅವುಗಳಲ್ಲಿ ಹಳೆಯ ವಾಹನಗಳಿಂದ ಹಿಡಿದು ಹೊಸ ವಾಹನಗಳು ಸೇರಿವೆ.

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಇದರಿಂದಾಗಿ ಮಾಡಿಫೈಗೊಂಡ ಕಾರುಗಳು ಐಷಾರಾಮಿ ಹಾಗೂ ಹೆಚ್ಚು ತಂತ್ರಜ್ಞಾನ ಹೊಂದಿರುವ ಕಾರುಗಳಾಗಿ ಮಾರ್ಪಟ್ಟಿವೆ. ಇತ್ತೀಚೆಗಷ್ಟೇ ಡಿಸಿ 2 ಕಂಪನಿಯು ಹಿಂದೂಸ್ತಾನ್ ಅಂಬಾಸಿಡರ್ ಕಾರ್ ಅನ್ನು ಹೊಸ ಶೈಲಿ ಹಾಗೂ ವಿನ್ಯಾಸದಲ್ಲಿ ಮಾಡಿಫೈಗೊಳಿಸಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಡಿಸಿ 2, ಸೆಲೆಬ್ರಿಟಿಗಳ ಕಾರುಗಳನ್ನು ಸಹ ಮಾಡಿಫೈಗೊಳಿಸಿದೆ. ಅವುಗಳಲ್ಲಿ ನಟ ಹೃತಿಕ್ ರೋಷನ್ ಹಾಗೂ ನಟಿ ಮಾಧುರಿ ದೀಕ್ಷಿತ್ ಅವರ ಕಾರುಗಳು ಸಹ ಸೇರಿವೆ. ಈಗ ಡಿಸಿ 2 ಕಂಪನಿಯು ಖ್ಯಾತ ತಮಿಳು ಚಿತ್ರ ನಟ ಚಿಯಾನ್ ವಿಕ್ರಮ್‌ರವರಿಗೆ ಸೇರಿದ ಮಿನಿ ಬಸ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಾರವಾನ್‌ಗಳ ರೀತಿಯಲ್ಲಿ ಮಾಡಿಫೈಗೊಳಿಸಿದೆ.

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಡಿಸಿ 2 ತನ್ನ ಅಧಿಕೃತ ಹೋಂ ಪೇಜ್ ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದೆ. ಈ ಫೋಟೋದಲ್ಲಿರುವ ಮಿನಿ ಬಸ್ ಬಹುಕೋಟಿ ಐಷಾರಾಮಿ ಕಾರವಾನ್ ನಂತೆ ಕಾಣುತ್ತದೆ. ಈ ಐಷಾರಾಮಿ ಮಿನಿ ಬಸ್ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಆದರೆ, ಮಿನಿ ಬಸ್ ಅನ್ನು ನಟ ಚಿಯಾನ್ ವಿಕ್ರಮ್‌ರವರಿಗೆ ಸ್ವರ್ಗವನ್ನೂ ನಾಚುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮಿನಿ ವ್ಯಾನ್ ಅನ್ನು ಚಿತ್ರೀಕರಣದ ಸಮಯದ ವಿಶ್ರಾಂತಿಗಾಗಿ, ಮೇಕಪ್ ಗಾಗಿ ಇನ್ನೂ ಬಳಸಿಲ್ಲ.

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಈ ಮಿನಿ ಬಸ್ ನಲ್ಲಿ ಕಾರವಾನ್‌ಗೆ ಅನುಗುಣವಾಗಿ ಸೋಫಾ ಹಾಗೂ ಸೀಟುಗಳನ್ನು ಒದಗಿಸಲಾಗಿದೆ. ವಿಕ್ರಮ್ ರವರು ಈ ಮಿನಿ ಬಸ್ ಅನ್ನು ವಿಶ್ರಾಂತಿಗಾಗಿ ಮಾತ್ರವಲ್ಲದೆ ಮಿನಿ ಆಫೀಸ್ ಆಗಿಯೂ ಸಹ ಬಳಸಬಹುದು.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಡಿಸಿ 2 ಈ ಮಿನಿ ಬಸ್ ನಲ್ಲಿ ವಿವಿಧ ಪ್ರೀಮಿಯಂ ಸೌಕರ್ಯಗಳನ್ನು ಒದಗಿಸಿದೆ. ಇವುಗಳಲ್ಲಿ ಮಿನಿ ಟಿವಿ, ಮಿನಿ ಟಾಯ್ಲೆಟ್ ಹಾಗೂ ಕೂಲ್ ಫ್ರಿಜ್ ಗಳನ್ನು ನೀಡಲಾಗಿದೆ. ಇಷ್ಟೆಲ್ಲಾ ಫೀಚರ್ ಗಳನ್ನು ಹೊಂದಿರುವ ಈ ಮಿನಿ ಬಸ್ ಅನ್ನು ಮಿನಿ ಪ್ಯಾರಡೈಸ್ ಎಂದು ಕರೆಯಬಹುದು.

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಈ ಮಿನಿ ಬಸ್ ನ ಇಂಟಿರಿಯರ್ ನಲ್ಲಿ ಲಿಮೋಸಿನ್‌ನಲ್ಲಿರುವಂತಹ ಫೀಚರ್ ಗಳನ್ನು ನೀಡಲಾಗಿದೆ. ಇದಕ್ಕಾಗಿ ಕಾರವಾನ್‌ನ ಫ್ಲೋರ್‌ನಲ್ಲಿ ಪಾಲಿಶ್ ಮಾಡಲಾದ ವುಡ್ ಅಳವಡಿಸಲಾಗಿದೆ. ಇದರ ಜೊತೆಗೆ ಹ್ಯಾಂಗಿಂಗ್ ಸ್ಕ್ರೀನ್ ಗಳನ್ನು ನೀಡಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಯುರೋಪಿಯನ್ ಶೈಲಿಯ ಎಲೆಕ್ಟ್ರಿಕ್ ಲೈಟ್ ಗಳನ್ನು ಅಳವಡಿಸಲಾಗಿದೆ. ಚಿಯಾನ್ ವಿಕ್ರಮ್ ರವರಿಗಾಗಿ ಸಿದ್ದಪಡಿಸಲಾಗಿರುವ ಈ ಕಾರವಾನ್ ಅಂತರರಾಷ್ಟ್ರೀಯ ಮಟ್ಟದ ಐಷಾರಾಮಿ ವಾಹನಗಳು ಹೊಂದಿರುವ ಸೌಲಭ್ಯಗಳನ್ನು ಹೊಂದಿದೆ.

ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಡಿಸಿ 2 ಕಂಪನಿಯು, ಈ ರೀತಿಯ ಮಾಡಿಫೈಗಳನ್ನು ಕಡಿಮೆ ವೆಚ್ಚದಲ್ಲಿ ಮಾಡುತ್ತದೆ. ಆದರೆ ಗ್ರಾಹಕರು ಯಾವ ರೀತಿಯ ಮಾಡಿಫೈ ಬಯಸುತ್ತಾರೆ ಎಂಬುದರ ಮೇಲೆ ಇದು ನಿರ್ಣಯವಾಗುತ್ತದೆ. ಚಿಯಾನ್ ವಿಕ್ರಮ್ ರವರಿಗಾಗಿ ಮಾಡಿಫೈಗೊಳಿಸಲಾಗಿರುವ ಈ ಕಾರಿಗಾಗಿ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಿರುವ ಸಾಧ್ಯತೆಗಳಿವೆ. ಆದರೆ ಡಿಸಿ 2 ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

Most Read Articles

Kannada
English summary
DC2 Europa RV designed for superstar Chiyaan Vikram. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X