2 ಗಂಟೆ 40 ನಿಮಿಷಗಳಲ್ಲಿ ದೆಹಲಿಯಿಂದ ವಾರಣಾಸಿಗೆ ಬುಲೆಟ್ ರೈಲು
ಮುಂಬೈ-ಅಹಮಾದಾಬಾದ್ ಮಹತ್ವಕಾಂಕ್ಷೆಯ ಬುಲೆಟ್ ರೈಲ್ವೆ ಯೋಜನೆಯ ನೀಲಿ ನಕ್ಷೆ ತಯಾರಾಗಿರುವಂತೆಯೇ ದೇಶದ ಎರಡು ಐತಿಹಾಸಿಕ ನಗರಗಳನ್ನು ಬಂಧಿಸುವ ಮಗದೊಂದು ಬುಲೆಟ್ ರೈಲು ಯೋಜನೆಗೆ ಕೇಂದ್ರ ಸರಕಾರ ಅಸ್ತು ಎಂದಿದೆ.
ದೆಹಲಿ-ವಾರಣಾಸಿ ನಡುವೆ ನಿರ್ಮಾಣವಾಗಲಿರುವ ದೇಶದ ಎರಡನೇ ಬುಲೆಟ್ ರೈಲು ಯೋಜನೆಯಂತೆ ಈ ಎರಡು ನಗರಗಳ ನಡುವಣ 782 ಕೀ.ಮೀ. ದೂರವನ್ನು ಕೇವಲ ಎರಡು ಗಂಟೆ ಹಾಗೂ 40 ನಿಮಿಷಗಳಲ್ಲಿ ಕ್ರಮಿಸಲಿದೆ.

ಪೌರಾಣಿಕ ಹಿನ್ನಲೆ ಹೊಂದಿರುವ ವಾರಣಾಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ಕೂಡಾ ಹೌದು. ಇದೇ ಕಾರಣಕ್ಕಾಗಿ ವಾರಣಾಸಿಗೆ ಹೆಚ್ಚು ಮಹತ್ವ ಸಿಕ್ಕಿದೆ ಎಂಬುದು ತಿಳಿದು ಬರುತ್ತದೆ.

ಪ್ರಸ್ತುತ ಯೋಜನೆಯು ಬರೋಬ್ಬರಿ 84,000 ಕೋಟಿ ರುಪಾಯಿಗಳ ದೆಹಲಿ-ಕೋಲ್ಕತ್ತಾ ಕಾರಿಡಾರ್ ಬುಲೆಟ್ ರೈಲಿನ ಭಾಗವಾಗಿರಲಿದೆ. ದೆಹಲಿಯಿಂದ ಕೋಲ್ಕತ್ತಾ ವರೆಗಿನ 1513 ಕೀ.ಮೀ. ದೂರವನ್ನು ನಾಲ್ಕು ತಾಸು 56 ನಿಮಿಷಗಳಲ್ಲಿ ತಲುಪಲಾಗುವುದು.

ದೆಹಲಿ-ವಾರಣಾಸಿ ನಡುವಣ ಮಹತ್ತರ ಬುಲೆಟ್ ರೈಲು ಯೋಜನೆಯು ಅಲಿಘಡ, ಆಗ್ರಾ, ಕಾನ್ಪುರ, ಲಕ್ನೋ ಮತ್ತು ಸುಲ್ತಾನಪುರ ಸೇರಿದಂತೆ 12 ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ.

ಹೈ ಸ್ಪೀಡ್ ರೈಲಿನ ಕಾರ್ಯಸಾಧ್ಯತೆಯ ಕುರಿತಾಗಿ ಸ್ಪೇನ್ ತಳಹದಿಯ ಸಂಸ್ಥೆಯು ಅಧ್ಯಯನ ನಡೆಸಲಿದ್ದು, ನವೆಂಬರ್ ವೇಳೆಯಾಗುವಾಗ ಅಂತಿಮ ವರದಿ ಸಲ್ಲಿಸಲಿದೆ.

ಜಪಾನ್ ಅಂತರಾಷ್ಟ್ರೀಯ ಸಹಕಾರ ಏಜೆನ್ಸಿಯು (ಜೆಐಸಿಎ) ಈಗಾಗಲೇ 505 ಕೀ.ಮೀ. ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದು, ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ಈ ಯೋಜನೆ ಸಾಧ್ಯ ಎಂದು ಹಸಿರು ಬಾವುಟವನ್ನು ತೋರಿಸಿದೆ.

ಜಪಾನ್ ಅಂತರಾಷ್ಟ್ರೀಯ ಸಹಕಾರ ಏಜೆನ್ಸಿಯು (ಜೆಐಸಿಎ) ಈಗಾಗಲೇ 505 ಕೀ.ಮೀ. ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದು, ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ಈ ಯೋಜನೆ ಸಾಧ್ಯ ಎಂದು ಹಸಿರು ಬಾವುಟವನ್ನು ತೋರಿಸಿದೆ.


Click it and Unblock the Notifications








