3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

Written By:

ನೀವು ಎಂದಾದರೂ 3ಎಂ ಕಾರ್ ಕೇರ್ (3M Car Care) ಬಗ್ಗೆ ಕೇಳಿರುವೀರಾ? ಬಹುಶ: ಇತ್ತೀಚೆಗಿನ ದಿನಗಳಲ್ಲಿ 3ಎಂ ಕಾರ್ ಕೇರ್ ಸೆಂಟರ್ ಅತಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದೆ. ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ನವ ನವೀನ ತಂತ್ರಜ್ಞಾನಗಳ ಅವಿಷ್ಕಾರದ ಅಂಗವಾಗಿ ಕಾರುಗಳ ಆರೈಕೆಯಲ್ಲೂ ಹೊಸ ವಿಧಾನಗಳ ಆಳವಡಿಕೆಯಾಗುತ್ತಿದೆ. ಅವುಗಳಲ್ಲಿ ಕಾರು ಡಿಟೈಲಿಂಗ್ (Car detailing) ಪ್ರಮುಖವಾದುದು. ವಿದೇಶಗಳಲ್ಲಿ ಇಂತಹ ತಂತ್ರಜ್ಞಾನ ಸಾಮಾನ್ಯವಾದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇಂತಹ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವುದರಲ್ಲಿ 3ಎಂ ಕಾರ್ ಕೇರ್ ಸದಾ ಬದ್ಧವಾಗಿದೆ.

ನಿಮ್ಮ ಕಾರು ಹೊಸತು ಅಥವಾ ಹಳೆಯದೇ ಆಗಿರಬಹುದು. ಶೋ ರೂಂನಿಂದ ಇದೀಗಷ್ಟೇ ಹೊರತಂದಿರಲೂಬಹುದು. ನೀವು 3ಎಂ ಕಾರ್ ಕೇರ್ ಸೆಂಟರ್‌ಗಳಲ್ಲಿ ನೇರವಾಗಿ ಭೇಟಿ ಕೊಟ್ಟರೆ ನಿಖರ ಪರೀಶೀಲನೆ ಮಾಡಿಕೊಂಡು ಅದಕ್ಕೆ ಬೇಕಾಗಿರುವ ಡಿಟೈಲಿಂಗ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇದು ನಿಮ್ಮ ಕಾರಿನ ದೀರ್ಘ ಬಾಳ್ವಿಕೆ ಹಾಗೂ ಮಗುವಿನಂತಹ ಆರೈಕೆಗೆ ನೆರವಾಗಲಿದೆ.

To Follow DriveSpark On Facebook, Click The Like Button
3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ನಾವು ವಿಜ್ಞಾನದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ 3ಎಂ ಕಾರ್ ಕೇರ್, ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ಕಾರು ಡಿಟೈಲಿಂಗ್ ಸೇವೆ ಒದಗಿಸಿಕೊಡುವಲ್ಲಿ ಸದಾ ಬದ್ಧವಾಗಿದೆ. ಅಲ್ಲದೆ ಇಲ್ಲಿ ಬಳಕೆ ಮಾಡಲಾಗುವ ಉತ್ಪನ್ನಗಳು ಇತರ ಸಾಮಾನ್ಯ ಸೆಂಟರ್‌ಗಿಂತಲೂ ವಿಭಿನ್ನವಾಗಿದ್ದು, ಗುಣಮಟ್ಟತೆ ಹಾಗೂ ಬಾಳ್ವಿಕೆಯಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಂಡಿದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಹಾಗೊಂದು ವೇಳೆ ನೀವು ತ್ರಿಎಂ ಕಾರ್ ಕೇರ್ ಸೆಂಟರ್‌ಗೆ ಭೇಟಿ ಕೊಡಲು ನಿರ್ಧರಿಸಿದ್ದಲ್ಲಿ ಅಲ್ಲಿ ನಿಮ್ಮನ್ನು ಹೃದಯವಂತಿಕೆಯಿಂದ ಸ್ವಾಗತ ಮಾಡಲಾಗುತ್ತದೆ. ಅಂದರೆ ಮೊದಲು ನಿಮಗೆ ಕಾರು ಡಿಟೈಲಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಿದ್ದಾರೆ. ಅಲ್ಲದೆ ನಿಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಹೇರದೇ ಕಾರು ಡಿಟೈಲಿಂಗ್ ಬಗ್ಗೆ ಪೂರ್ಣ ಮನವರಿಕೆ ಮಾಡಿಕೊಲಾಗುತ್ತದೆ. ತ್ರಿಎಂ ಕಾರ್ ಸೆಂಟರ್‌ಗಳಲ್ಲಿ ಶುಚಿತ್ವಕ್ಕೆ ಅತಿ ಹೆಚ್ಚಿನ ಮಹತ್ವ ಕೊಡಲಾಗುತ್ತಿದ್ದು, ನೌಕರರು ಹಾಗೂ ಗ್ರಾಹಕರ ಆರೋಗ್ಯಯುತ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಅಲ್ಲದೆ ಮನರಂಜನೆಗೂ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದ್ದು, ಇಲ್ಲಿಗೆ ಭೇಟಿ ಕೊಡುವ ಗ್ರಾಹಕರಿಗಾಗಿ ವಿಶಾಲವಾದ ಕ್ಯಾಬಿನ್, ಉಚಿತ ವೈ-ಫೈ ಸೇವೆ, ಮ್ಯಾಗಜಿನ್, ಎಲ್‌ಸಿಡಿ ಟಿ.ವಿ ಸೇವೆ ಒದಗಿಸಲಾಗುತ್ತದೆ. ಅಷ್ಟೇ ಅಲ್ಲದೆ ಆಸಕ್ತರು ಅಲ್ಲೇ ಕುಳಿತುಕೊಂಡು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲಸವನ್ನು ಮಾಡುವ ಸೌಕರ್ಯವೂ ಇದೆ. ಇನ್ನು ಚಹಾ ಹಾಗೂ ಭೋಜನ ವ್ಯವಸ್ಥೆ ಏರ್ಪಡಿಸಲಾಗುತ್ತದೆ. ಜೆಪಿನಗರ 3ಎಂ ಕಾರ್ ಕೇರ್ ಫ್ರಾಂಚೈಸಿ ಮಾಲಿಕ ಅಶೋಕ್ ಉಪಾಧ್ಯ ಅವರ ಪ್ರಕಾರ, ಇಲ್ಲಿ ಭೇಟಿ ಕೊಡುತ್ತಿರುವ ಕಾರು ಪ್ರೇಮಿಗಳಿಗೆ ಕಾರು ಡಿಟೈಲಿಂಗ್ ಹೇಗೆ ಮಾಡಲಾಗುತ್ತದೆ ಎಂಬುದನ್ನು ಕಣ್ಣಾರೆ ನೋಡುವ ಅವಕಾಶವಿರುತ್ತದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಅಂದ ಹಾಗೆ ಬೆಂಗಳೂರಿನಲ್ಲಿ ಒಟ್ಟು 8 ಹಾಗೂ ದೇಶದ್ಯಾಂತ 35 ತ್ರಿಎಂ ಕಾರ್ ಕೇರ್ ಸೆಂಟರ್‌ಗಳಿವೆ. ಬೆಂಗಳೂರಿನಲ್ಲಿ ಜೆಪಿ ನಗರ, ಡಾಲರ್ಸ್ ಕಾಲನಿ, ಯುಬಿ ಸಿಟಿ, ಮಾರಥಹಳ್ಳಿ, ಇಂದಿರಾನಗರ, ಬಸವನಗುಡಿ ಹಾಗೂ ಬಸವೇಶ್ವರ ನಗರಗಳಲ್ಲಿ ತ್ರಿಎಂ ಕಾರ್ ಕೇರ್ ಸೆಂಟರ್ ಸ್ಥಿತಗೊಂಡಿದೆ. ಅಲ್ಲದೆ ನಿಕಟ ಭವಿಷ್ಯದಲ್ಲಿ ಕೋರಮಂಗಲ ಜೊತೆಗೆ ಮಂಗಳೂರು ಹಾಗೂ ಮೈಸೂರಿನಲ್ಲಿ ತನ್ನ ಶಾಖೆ ತೆರೆಯುವ ಇರಾದೆ ಹೊಂದಿದೆ. ಬೆಂಗಳೂರು ಹೊರತಾಗಿ, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ, ಅಹಮಾದಾಬಾದ್, ಗುರ್ಗಾಂವ್ ಹಾಗೂ ಪುಣೆ ನಗರಗಳಲ್ಲೂ ತನ್ನ ಸಾನಿಧ್ಯ ವ್ಯಕ್ತಪಡಿಸಿದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಪ್ರಮುಖವಾಗಿಯೂ ಎಕ್ಸ್‌ಟೀರಿಯರ್, ಇಂಟಿರಿಯರ್ ಡಿಟೈಲಿಂಗ್ ಜೊತೆಗೆ, ತುಕ್ಕು ವಿರೋಧಿ ಟ್ರೀಟ್ಮೆಂಟ್, ಪೈಂಟ್ ಸಂರಕ್ಷಣಾ ಫಿಲ್ಮ್, ಜರ್ಮ್ ಕ್ಲಿನಿಂಗ್ (ರೋಗಾಣು), ಕಾರ್ ಮ್ಯಾಟ್, ವಿಂಡೋ ಫಿಲ್ಮ್ ಹಾಗೂ ಎಸಿ ಡಕ್ಟ್ ಕ್ಲಿನಿಂಗ್ ಮಾಡಿಕೊಡಲಾಗುತ್ತದೆ. ಕಾರು ಡಿಟೈಲಿಂಗ್ ಹೆಸರನ್ನು ಇದೇ ಮೊದಲ ಬಾರಿಗೆ ಕೇಳುವವರಿಗಾಗಿ ನಾವಿದನ್ನು ಹೇಳಬಯಸುತ್ತಿದ್ದು, ಆಂತರಿಕ ಹಾಗೂ ಬಾಹ್ಯ ಭಾಗಗಳನ್ನು ಸ್ವಚ್ಛಗೊಳಿಸುವ ಮೂಲಕ ನಿಮ್ಮ ಕಾರನ್ನು ಸಂಪೂರ್ಣವಾಗಿಯೂ ಮರು ಸ್ಥಾಪನೆ ಮಾಡಬಹುದಾಗಿದೆ. ಇದು ಸಾಮಾನ್ಯ ವಾಶ್‌ಗಿಂತಲೂ ತುಂಬಾ ಮಿಗಿಲಾದ ಹಾಗೂ ಸಮಗ್ರವಾದ ಡಿಟೈಲಿಂಗ್ ಸರ್ವೀಸ್ ಆಗಿದ್ದು, ಯಾವುದೇ ತರಹದ ಸಾಂಪ್ರದಾಯಿಕ ಎಂಜಿನ್ ಒಯಿಲ್ ಅಥವಾ ಗ್ರೀಸ್ ಬಳಸಲಾಗುತ್ತಿಲ್ಲ. ಹಾಗೆಯೇ ಮೆಕ್ಯಾನಿಕ್ ಭಾಗಗಳಿಗೆ ಇದರಿಂದ ಯಾವುದೇ ಕೇಡು ಸಂಭವಿಸುವುದಿಲ್ಲ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಎಲೆಕ್ಟ್ರಾನಿಕ್ ಸಿಟಿ ಸ್ಥಿತಗೊಂಡಿರುವ ಅಧ್ಯಯನ ಸೆಂಟರ್‌ನಿಂದ ವಿಶೇಷ ತರಬೇತಿ ಪಡೆದ ಕೆಲಸಗಾರರು ಇದನ್ನು ನಿರ್ವಹಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಹೂಡಿಕೆ ಹೂಡಿರುವ 3ಎಂ ಕಾರ್ ಕೇರ್, ಅಮೆರಿಕ, ಸಿಂಗಾಪುರ ಹಾಗೂ ದುಬೈಗಳಂತಹ ಹೊರ ರಾಷ್ಟ್ರಗಳಿಂದ ನುರಿತ ತಜ್ಞರನ್ನು ಕರೆತಂದು ತರಬೇತಿ ನೀಡುತ್ತಾರೆ. ಇದಕ್ಕಾಗಿ ಸಂಸ್ಥೆಯು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇತರ ಸೆಂಟರ್‌ಗಿಂತಲೂ ವಿಭಿನ್ನವಾಗಿಸುತ್ತದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಪ್ರಮುಖವಾಗಿಯೂ ಮೂರು ವಿಧದ ಇಂಟಿರಿಯರ್ ಟ್ರೀಟ್‌ಮೆಂಟ್ ನೀಡಲಾಗುತ್ತದೆ. ಇವುಗಳಲ್ಲಿ ಜರ್ಮ್ ಕ್ಲೀನ್ ಹಾಗೂ ಜರ್ಮ್ ಕ್ಲೀನ್ ಪ್ಲಸ್ ಪ್ರಮುಖವಾದುದು. ಇದು ಕಾರಿನ ರೂಫ್, ಸೀಟು, ಸ್ಟೆಫನಿ, ಎಸಿ ಡಕ್ಟ್ ಸೇರಿಕೊಂಡಿರಲಿದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಇನ್ನು ಇಂಟಿರಿಯರ್‌ ಭಾಗಗಳಿಗೆ ಟ್ರೈಜಾಟ್ (trizact) ಎಂಬ ಟ್ರೀಟ್‌ಮೆಂಟ್ ಮಾಡಿಕೊಡಲಾಗುತ್ತದೆ. ಇದು ತ್ರಿಎಂ ಕಾರ್ ಕೇರ್ ಸೆಂಟರ್‌ಗಳಲ್ಲಿ ಮಾತ್ರ ಲಭ್ಯವಿದೆ ಎಂಬುದು ಮಹತ್ವವೆನಿಸುತ್ತದೆ. ಈ ಒಂಬತ್ತು ವಿಧಧ ಪ್ರಕ್ರಿಯೆಯಲ್ಲಿ ಸ್ಯಾಂಡಿಂಗ್ ಮೆಷಿನ್, ಹೈ ಪ್ರೆಷರ್ ಏರ್ ಮುಂತಾದವುಗಳನ್ನು ಬಳಸಲಾಗುತ್ತಿದ್ದು 4ರಿಂದ 6 ತಾಸುಗಳಷ್ಟು ಸಮಯ ತಗುಲಲಿದೆ. ಅಲ್ಲದೆ ನೀವು ಬಯಸುವುದಕ್ಕಿಂತಲೂ ಉತ್ತಮ ಫಿನಿಶಿಂಗ್ ನಿಮಗೆ ಸಿಗಲಿದೆ ಎಂಬುದು ಗ್ಯಾರಂಟಿ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ತ್ರಿಎಂ ಕಾರ್ ಕೇರ್ ಸೆಂಟರ್‌ನಲ್ಲಿ ಮಾತ್ರ ಬಳಸಲಾಗುತ್ತಿರುವ ಪೈಂಟ್ ಸೀಲೆಂಟ್ ಅಡ್ವಾನ್ಸ್ ಉಜ್ಜುವ ಪ್ರಕ್ರಿಯೆ ಹಾಗೂ ಸಿಂಥೇಟಿಕ್ ಪೊಲಿಮರ್ ವ್ಯಾಕ್ಸ್ ಸಾಮಾನ್ಯ ವ್ಯಾಕ್ಸ್‌ಗಿಂತಲೂ ಮೂರು ಪಟ್ಟು ಹೆಚ್ಚು ಬಾಳ್ವಿಕೆ ಬರಲಿದೆ. ಅದೇ ರೀತಿ ಹೆಲಿಕಾಪ್ಟರ್‌ಗಳಲ್ಲಿದ್ದ ಪೈಂಟ್ ಪ್ರೊಟೆಕ್ಷನ್ ಫಿಲ್ಮ್ ಸಿದ್ಧಾಂತವನ್ನು ಆಟೋಮೊಬೈಲ್ ಜಗತ್ತಿಗೂ ಆಮದು ಮಾಡಿಕೊಳ್ಳಲಾಗಿದ್ದು, ಕಾರಿನ ಸಂಪೂರ್ಣ ದೇಹವನ್ನು ಸಂರಕ್ಷಿಸಲಿದೆ. ಇದು ಸಂಪೂರ್ಣವಾಗಿಯೂ ಅಗೋಚರವಾಗಿರುವುದು ಮಗದೊಂದು ವೈಶಿಷ್ಟ್ಯವಾಗಿದೆ. ಹಾಗೆಯೇ ಗ್ರಾಹಕರ ಬಯಕೆಯಂತೆಯೇ ಪೂರ್ಣವಾಗಿಯೂ ಅಥವಾ ಭಾಗಶ:ವಾಗಿಯೂ ಬೊನೆಟ್, ಬಂಪರ್ ಕಾರ್ನರ್ ಹಾಗೂ ಗಾಜುಗಳಿಗೆ ಮಾತ್ರ ಲಗತ್ತಿಸಬಹುದಾಗಿದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಹಾಗೆಯೇ ತ್ರಿಎಂ ಕಾರ್ ಕೇರ್ ಸೆಂಟರ್‌ಗೆ ಗ್ರಾಹಕರಿಗಾಗಿ ವಿಶೇಷ ರೀತಿಯ ವಾರ್ಷಿಕ ಪ್ಯಾಕೇಜ್ ಸವಲತ್ತುಗಳನ್ನು ಕೊಡಲಾಗುತ್ತಿದೆ. ಇದು ಇಂಟಿರಿಯರ್, ಎಕ್ಸ್‌ಟೀರಿಯರ್ ಜೊತೆಗೆ ಟೋಟಲ್ ಪ್ಯಾಕೇಜ್ ಒಳಗೊಂಡಿದ್ದು, ಶೇಕಡಾ 22ರಷ್ಟು ಹಣಕಾಸು ಲಾಭವನ್ನು ಪಡೆಯಬಹುದಾಗಿದೆ. ಈ ಪೈಕಿ ಎಕ್ಸ್‌ಟೀರಿಯರ್‌ ಟ್ರೀಟ್‌ಮೆಂಟ್‌ನಲ್ಲಿ ಯುವಿ ಪ್ರೊಟೆಕ್ಟ್ ಒಳಗೊಂಡಿರುತ್ತದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ನಿಮ್ಮ ಕಾರಿನ ಬಣ್ಣ ಮಂಕಾಗಿದೆಯೇ? ನಿಮ್ಮಲ್ಲಿರುವ ಬಿಳಿ ಕಾರನ್ನು ಕೆಂಪು ಅಥವಾ ಕೆಂಪು ಕಾರನ್ನು ಬಿಳಿ ಅಥವಾ ಇನ್ಯಾವುದೇ ಬಣ್ಣಗಳಿಗೆ ಬದಲಾಯಿಸಲು ಬಯಸುವೀರಾ? ಇನ್ಯಾಕೆ ತಡ ಮಾಡುವೀರಾ? ಈಗಾಗಲೇ ನಿಮ್ಮ ಹತ್ತಿರದಲ್ಲಿರುವ ತ್ರಿಎಂ ಕಾರ್ ಕೇರ್ ಸೆಂಟರ್‌ಗೆ ಭೇಟಿ ಕೊಡಿರಿ. ಇಲ್ಲಿ ಮಾಡಲಾಗುತ್ತಿರುವ ಮ್ಯಾಟ್ ಫಿನಿಶ್ ನಿಮ್ಮ ಮನಗಿಷ್ಟವಾದ ಬಣ್ಣವನ್ನು ಒದಗಿಸಲಿದೆ. ಇದರಲ್ಲಿ ಗ್ಲಾಸ್ ಬ್ಲಿಡಿಂಗ್ ತಂತ್ರಜ್ಞಾನ ಆಳವಡಿಸಲಾಗಿದ್ದು, ಯಾವುದೇ ಆಕಾರ ಅಥವಾ ಗಾತ್ರ ಪಡೆದುಕೊಳ್ಳಲು ನೆರವಾಗುತ್ತದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಹಾಗೆಯೇ ಮೂರು ವರ್ಷಗಳ ಬಳಿಕ ಇದನ್ನು ಬದಲಾಯಿಸಲು ಸೂಚನೆ ನೀಡಲಾಗುತ್ತದೆ. ಇನ್ನು ಭಾಗಶ:ವಾಗಿ ಬೊನೆಟ್ ಹಾಗೂ ರೂಫ್‌ಗೆ ಮಾತ್ರ ಮ್ಯಾಟ್ ಫಿನಿಶ್ ಮಾಡಬಹುದಾಗಿದೆ. ಇಂತಹ ತಂತ್ರಜ್ಞಾನವನ್ನು ಯುವ ಗ್ರಾಹಕರು ಹೆಚ್ಚಾಗಿ ಇಷ್ಟಪಡುತ್ತಾರೆ. ಅಲ್ಲದೆ ಯಾವುದಾದರೂ ಭಾಗಗಳಿಗೆ ಕೇಡು ಸಂಭವಿಸಿದ್ದಲ್ಲಿ ಪ್ರತಿ ಬಾರಿಯೂ ರಿ ಪೈಂಟ್ ಮಾಡುವ ಅಗತ್ಯವಿರುವುದಿಲ್ಲ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಹಿಂದೆಲ್ಲ ಐಷಾರಾಮಿ ಕಾರುಗಳಿಗೆ ಮಾತ್ರ ಡಿಟೈಲಿಂಗ್ ಮಾಡುಲಾಗುತ್ತದೆ ಅಥವಾ ಹೆಚ್ಚು ಬಜೆಟ್ ದೃಷ್ಟಿಕೋನದಲ್ಲಿ ಸೂಕ್ತವಲ್ಲ ಎಂಬ ಮಿಥ್ಯಾ ಕಲ್ಪನೆಯಿತ್ತು. ಆದರೆ ಇದೀಗ ಮಾರುತಿ ಆಲ್ಟೊಗಳಂತಹ ಸಣ್ಣ ಕಾರುಗಳು ಕಾರು ಡಿಟೈಲಿಂಗ್ ಮಾಡುವುದರಿಂದ ಸಂಪೂರ್ಣ ಪ್ರಯೋಜನ ಪಡೆಯಬಹುದಾಗಿದ್ದು, ನಿಮ್ಮ ಕಾರನ್ನು ಸಂಪೂರ್ಣ ಹೊಸದಾಗಿ ಇರಿಸಬಹುದಾಗಿದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಇನ್ನು ಗುಣಮಟ್ಟದ ತಪಾಸಣೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ವಿದೇಶದಿಂದ ಆಗಮಿಸುವ ನುರಿತ ತಜ್ಞರು ನಿರ್ದಿಷ್ಟ ಅಂತರಾಳದಲ್ಲಿ 150ರಷ್ಟುಅಪ್ಲಿಕೇಷನ್ ಬಗ್ಗೆ ನಿಖರ ಮಾಹಿತಿ ನೀಡುತ್ತಿರುತ್ತಾರೆ. ಹಾಗೆಯೇ ಗ್ರಾಹಕ ವಿಮರ್ಶೆಗೂ ಅತಿ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗುತ್ತಿದ್ದು, 10 ಅಂಕಗಳಲ್ಲಿ ಎರಡು ಅಂಕ ಕಡಿಮೆಯಾದರೂ ಮಾಲಿಕರಿಂದ ಇದಕ್ಕಿರುವ ಕಾರಣ ತಿಳಿದು ಅದನ್ನು ಸರಿಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ. ಅಂದರೆ ಗ್ರಾಹಕ ಸಂತೃಪ್ತಿಯಲ್ಲಿ ಶೇಕಡಾ 100ರಷ್ಟು ಗಮನ ವಹಿಸಲಾಗುತ್ತದೆ.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಇದೇ ಸಂದರ್ಭದಲ್ಲಿ ನೊಮಡ್ ಮ್ಯಾಟ್ ಸಹ ಪರಿಚಯಿಸಲಾಗುತ್ತಿದ್ದು, ನಿಮ್ಮ ಕಾರಿನ ಕೆಳಸ್ತರವನ್ನು ಯಾವಾಗಲು ಶುಚಿಯಾಗಿಡಲು ಸಹಕಾರಿಯಾಗಲಿದೆ. ಇದು ಧೂಳಿನ ಕಣಗಳನ್ನು ಸೆಳೆದಿಟ್ಟುಕೊಳ್ಳಲಿದ್ದು, ಪದೇ ಪದೇ ಕ್ಲೀನ್ ಮಾಡುವ ಅಗತ್ಯವಿರುವುದಿಲ್ಲ. ಹಾಗೆಯೇ ತಿಂಗಳಿಗೆ ಒಂದು ಸಾರಿ ಹೊರತೆಗೆದು ಕ್ಲೀನ್ ಮಾಡಿದರಾಯಿತು.

3ಎಂ ಕಾರ್ ಕೇರ್; ನಿಮ್ಮ ಕಾರಿಗೆ ಮಗುವಿನಂತಹ ಆರೈಕೆ!

ಇನ್ನು ಡಿಟೈಲಿಂಗ್ ಅಂತಿಮ ಹಂತದಲ್ಲಿ ಕಾರು ತೊಳೆದ ಬಳಿಕ ಫೈವ್ ಪಾಯಿಂಟ್ ಚೆಕಪ್ ಪ್ರಕ್ರಿಯೆ ನಡೆಯಲಿದೆ. ಇದು ಎಂಜಿನ್ ಡ್ರೆಸ್ಸಿಂಗ್, ಟೈರ್ ಡ್ರೆಸ್ಸಿಂಗ್, ಬ್ಯಾಟರಿ ಡ್ರೆಸ್ಸಿಂಗ್, ವಿಂಡೋ ಚಾನೆಲ್ ಮುಂತಾದವುಗಳು ಸೇರಿಕೊಂಡಿರಲಿದೆ. ಕಾರಿನ ಬಾಹ್ಯ ಭಾಗಕ್ಕೆ ಹಚ್ಚಿಕೊಳ್ಳುವ ಸ್ವಾಭಾವಿಕ ಕರ್ನಾಬ ವ್ಯಾಕ್ಸ್ (Karnauba wax) ನೇರಳಾತೀತ ವಿಕಿರಣ, ಆಸಿಡ್ ಮಳೆ ಮುಂತಾದವುಗಳಿಂದ ರಕ್ಷಿಸುತ್ತದೆ. ಹಾಗೆಯೇ ಎಸಿಗೆ ಮೈಕ್ರೋಬಲ್ ಫೋಮ್ ಹಚ್ಚುವ ಮೂಲಕ ಹೆಚ್ಚು ಧೂಳಿನ ಕಣಗಳಿಂದ ಸಂಪೂರ್ಣ ಮುಕ್ತಿ ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ಕೊಡಿರಿ 3ಎಂ ಕಾರ್ ಕೇರ್

English summary
Meta description - 3M Car Care offers car detailing services in Bangalore, Chennai, Hyderabad, Pune, Mumbai, Cochin, Ahmedabad, Gurgaon and Delhi. Read our review of 3M Car Care detailing.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark