ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ವಾಹನಗಳನ್ನು ಖರೀದಿ ಮಾಡುವುದಷ್ಟೇ ಅಲ್ಲಾ ಅವುಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವುದು ತುಂಬಾ ಮುಖ್ಯ ವಿಚಾರ. ಯಾಕೆಂದ್ರೆ ಇತ್ತೀಚೆಗೆ ನಗರಪ್ರದೇಶಗಳಲ್ಲಿ ರಸ್ತೆ ಬದಿ ನಿಂತಿರುವ ವಾಹನಗಳಿಗೆ ಪುಂಡರು ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ರಾತ್ರಿ ರಾಜಧಾನಿ ದೆಹಲಿಯಲ್ಲೂ ಇಂತದ್ದೆ ಒಂದು ಕೃತ್ಯ ನಡೆದಿದೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಅವರೆಲ್ಲಾ ದೀಪಾವಳಿ ಸಂಭ್ರಮ ಮುಗಿಸಿ ನಿದ್ದೆಗೆ ಜಾರಿದ್ದರು. ಹಿಂದಿನ ದಿನದ ರಾತ್ರಿ ಪಟಾಕಿ ಹೊಡೆದ ಸಂಭ್ರಮಿಸಿದ್ದ ಅವರಿಗೆ ಬೆಳಗಿನ ಜಾವ ನಡೆದ ದುರಂತವೊಂದು ಎಲ್ಲರನ್ನು ಬೆಚ್ಚಿಬಿಳಿಸಿತ್ತು. ಕುಡುಕ ಮಹಾಶಯನೊಬ್ಬ ಮಾಡಿದ ಹೇಯ ಕ್ಯತ್ಯದಿಂದಾಗಿ ಬರೋಬ್ಬರಿ 18 ವಾಹನಗಳು ಬೆಂಕಿಗಾಹುತಿಯಾಗಿವೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಹೌದು, ದಕ್ಷಿಣ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ದೆಹಲಿಯ ಮಧನ್‍ಗಿರಿ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಹಚ್ಚಿದ್ದು, ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಕುಡಿದ ಅಮಲಿನಿದ್ದ ಪುಂಡ ಬೆಳಗಿನ ಜಾವ 3:05 ರ ಹೊತ್ತಿನಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಘಟನೆ ನಡೆದ ಕೂಡಲೇ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದ್ರೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಹುತೇಕ ವಾಹನಗಳು ಶೇ.80ರಷ್ಟು ಸುಟ್ಟುಹೊಗಿದ್ದವು.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಸಿಸಿಟಿವಿಯಲ್ಲಿ ಲಭ್ಯವಾಗಿರುವ ದೃಶ್ಯಗಳನ್ನು ಗಮನಿಸಿದಾಗ ಬೈಕಿನ ಪೆಟ್ರೋಲ್ ಪೈಪ್ ಕತ್ತರಿಸಿ ಬೆಂಕಿ ಹಚ್ಚುವ ಕೃತ್ಯದ ದೃಶ್ಯ ಸ್ಪಷ್ಟವಾಗಿ ಕಾಣಬಹುದಾಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಐದಾರು ವಾಹನಗಳಿಗೆ ಬೆಂಕಿಯಿಟ್ಟಿದ್ದಾನೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಬೆಂಕಿಯ ಕೆನ್ನಾಲಿಗೆಯು ಇತರೆ ವಾಹನಗಳಿಗೂ ಹೊತ್ತಿಕೊಂಡಿದ್ದು, ಒಂದಾದ ಬಳಿಕ ಒಂದರಂತೆ ಒಟ್ಟು 18 ವಾಹನಗಳಿಗೆ ಬೆಂಕಿ ತಗುಲಿದೆ. ಇದರಲ್ಲಿ 14 ಬೈಕ್‌ಗಳು ಮತ್ತು 4 ಕಾರುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದ್ದು, ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸದಿಂದಾಗಿ ಆಗಬಹುದಾದ ಮತ್ತಷ್ಟು ಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಹಳೇ ವೈಷಮ್ಯಕ್ಕೆ ಕೃತ್ಯ?

ಕೆಲವು ಮಾಹಿತಿ ಪ್ರಕಾರ, ವಾಹನಗಳಿಗೆ ಬೆಂಕಿ ಹಚ್ಚಿದ ಆರೋಪಿಗೂ ಘಟನೆ ನಡೆದ ಸ್ಥಳೀಯರೊಂದಿಗೆ ಕಿರಿಕ್ ಇತ್ತು ಎಂದು ಹೇಳಲಾಗಿದ್ದು, ಅವರ ಮೇಲಿನ ಕೋಪಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯು 3ರಿಂದ 4 ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚುವ ಉದ್ದೇಶವಿದ್ದರೂ ಬೆಂಕಿಯ ಕೆನ್ನಾಲಿಗೆಯಿಂದಾಗಿ ಅಮಾಯಕರ ವಾಹನಗಳು ಸಹ ಸುಟ್ಟುಹೊಗಿದ್ದು ಮಾತ್ರ ವಿಪರ್ಯಾಸ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಐಪಿಸಿ 435 ಮತ್ತು 427 ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಂಬೇಡ್ಕರ್ ನಗರ ಪೊಲೀಸರು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸುವುದಾಗಿ ದೆಹಲಿ ಪೊಲೀಸ್ ಉಪ ಆಯುಕ್ತ ವಿಜಯ್ ಕುಮಾರ್ ತಿಳಿಸಿದ್ದಾರೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

1 ಕೋಟಿಗೂ ಹೆಚ್ಚು ನಷ್ಟ..!

ಕುಡುಕ ಮಾಡಿದ ಕಿತಾಪತಿಯಿಂದಾಗಿ ಅಗ್ನಿಅವಘಡದಲ್ಲಿ ಎರಡು ಐಷಾರಾಮಿ ಕಾರುಗಳು ಸೇರಿದಂತೆ ಎರಡು ಮಧ್ಯಮ ಗಾತ್ರದ ಸೆಡಾನ್ ಕಾರುಗಳು ಮತ್ತು 14 ಬೈಕ್‌ಗಳ ಮೌಲ್ಯವನ್ನು 1 ಕೋಟಿಗೂ ಅಧಿಕ ಎನ್ನಲಾಗಿದ್ದು, ಇದರಲ್ಲಿ ಬಹುತೇಕ ವಾಹನಗಳಿಗೆ ವಿಮೆ ಇಲ್ಲದಿರುವುದು ಇದೀಗ ಪರಿಹಾರ ಪಡೆಯುವುದಕ್ಕೂ ಪರದಾಡುವಂತಾಗಿದೆ.

ಕುಡಿದ ಮತ್ತಿನಲ್ಲಿ ಬೈಕ್‌ಗಳಿಗೆ ಬೆಂಕಿಹಚ್ಚುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಇನ್ನು ದೆಹಲಿಯಲ್ಲಿಯಷ್ಟೇ ಅಲ್ಲದೇ ನಮ್ಮ ಬೆಂಗಳೂರಿನಲ್ಲೂ ಇಂತಹ ಅನೇಕ ಕೃತ್ಯಗಳು ಈಗಾಗಲೇ ನಡೆದುಹೋಗಿವೆ. ಹೀಗಾಗಿ ವಾಹನ ಮಾಲೀಕರು ಈ ಘಟನೆಗಳ ಎಚ್ಚರ ವಹಿಸಬೇಕಾದ ಅವಶ್ಯಕತೆಯಿದ್ದು, ವಾಹನಗಳನ್ನು ಎಲ್ಲೆಂದರಲ್ಲೆ ಪಾರ್ಕ್ ಮಾಡುವ ಮುನ್ನ ಇಂತಹ ನೀಚರ ಬಗ್ಗೆ ಗಮನಹರಿಸಿಬೇಕಾಗುತ್ತೆ.

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಜೊತೆಗೆ ವಾಹನಗಳ ನಿಲುಗಡೆಗಾಗಿ ನಿಮಗೆ ಅತಿ ಹೆಚ್ಚು ಸುರಕ್ಷಿತ ಎನ್ನುವ ಪ್ರದೇಶವನ್ನು ಆಯ್ಕೆ ಮಾಡಿ. ನಿಮಗೆ ಸೇಫ್ ಎಂದು ತೋಚುವ ಪ್ರದೇಶಗಳಲ್ಲಿ ಮಾತ್ರ ವಾಹನ ನಿಲುಗಡೆಗಾಗಿ ಅವಕಾಶ ಕೊಡಿ. ರಸ್ತೆ ಬದಿ, ಅಪರಿಚಿತ ಜಾಗ ಮುಂತಾದ ಕಡೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಅನುವು ಮಾಡಿಕೊಡದಿರಿ. ಇನ್ನು ಅನಿವಾರ್ಯವೆನಿಸಿದ್ದಲ್ಲಿ ಹೆಚ್ಚು ಜನ ಸಂಚಾರವಿರುವ ಪ್ರದೇಗಳಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಿ.

MOST READ: ಬಿಡುಗಡೆಗೆ ಸಿದ್ಧಗೊಂಡಿರುವ ಜಾವಾ ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.!

ಬರೋಬ್ಬರಿ 18 ವಾಹನಗಳಿಗೆ ಬೆಂಕಿ ಇಟ್ಟು ದೀಪಾವಳಿ ಆಚರಿಸಿದ ಕುಡುಕ ಮಹಾಶಯ..!

ಕೇವಲ ವಾಹನ ಬೆಂಕಿ ಹಚ್ಚುವ ಪ್ರಕರಣಗಳಷ್ಟೇ ಅಲ್ಲದೇ ವಾಹನಗಳ ಬೀಡಿಭಾಗಗಳನ್ನು ಮುರಿದು ಹಾಕುವುದು, ಕಾರಿನ ಗ್ಲ್ಯಾಸ್‌ಗಳ ಮೇಲೆ ಕಲ್ಲು ತೂರುವುದು ಇದೀಗ ಪುಂಡರ ಗುಂಪುಗಳಿಗ ಒಂದು ರೀತಿ ಪ್ಯಾಶನ್ ಆಗಿದ್ದು, ಯಾವುದೇ ಕಾರಣಕ್ಕೂ ಇಂತಹ ಘಟನೆಗಳಿಗೆ ನಿಮ್ಮ ವಾಹನಗಳು ತುತ್ತಾಗದಂತೆ ಸಾಧ್ಯವಾದಷ್ಟು ಎಚ್ಚರವಹಿಸಿ.

Source: TOI

Most Read Articles

Kannada
Read more on off beat crime
English summary
Drunk Man Sets 18 Vehicles On Fire In Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X