ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

Written By:

ಸಾಮಾನ್ಯವಾಗಿ ಶ್ರೀಮಂತ ಜನರು ತಮಗೆ ಬೇಕಾಗಿರುವದನ್ನು ತೆಗೆದುಕೊಳ್ಳುವ ಜಾಯಮಾನದವರಾಗಿರುತ್ತಾರೆ, ಕೆಲವರಂತೂ ವಾಹನಗಳ ಮೇಲೆ ಅತಿಯಾದ ವ್ಯಾಮೋಹ ಹೊಂದಿರುವವರಾಗಿರುತ್ತಾರೆ. ಶ್ರೀಮಂತರು ಐಷಾರಾಮಿ ಕಾರುಗಳನ್ನು, ಹಡಗುಗಳನ್ನು, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಐಷಾರಾಮಿ ಸ್ವಂತ ವಿಮಾನ ಹೊಂದುವುದನ್ನು ನೋಡಿದ್ದೇವೆ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಆದರೆ, ಲೂಧಿಯಾನದ 45 ವರ್ಷದ ರೈತ ಸಂಪೂರಣ್ ಸಿಂಗ್ ಕೆಲ ಸಮಯ ಅಮೃತ್ಸರ- ನವದೆಹಲಿ ನಡುವೆ ಸಂಚರಿಸುವ ಸ್ವರ್ಣ ಶತಾಬ್ದಿ ರೈಲಿನ ಮಾಲೀಕರಾಗಿದ್ದಾರೆ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಹೌದು, ಪ್ರತಿಯೊಬ್ಬರೂ ಅಶ್ಚರ್ಯಪಡುವಂತಹ ಘಟನೆಯೊಂದು ಪಂಜಾಬಿನ ಲೂಧಿಯಾನದಲ್ಲಿ ನೆಡೆದಿದೆ. ಈ ಘಟನೆ ಬಗ್ಗೆ ನೀವೂ ತಿಳ್ಕೊಳಿ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಘಟನೆ ವಿವರ

ಲೂಧಿಯಾನ-ಚಂಡೀಗಢ ರೈಲ್ವೆ ಹಳಿ ನಿರ್ಮಾಣಕ್ಕಾಗಿ 2007ರಲ್ಲಿ ಪಂಜಾಬ್ ನ ಉತ್ತರ ಭಾಗದ ರೈತರ ಜಮೀನುಗಳನ್ನು ಉತ್ತರ ರೈಲ್ವೆ ಸ್ವಾಧೀನಪಡಿಸಿಕೊಂಡಿತ್ತು.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಸ್ವಾಧೀನ ಪಡಿಸಿಕೊಂಡ ಜಮೀನಿನ ಪ್ರತಿ ಎಕರೆಗೆ ರೈಲ್ವೆ ಇಲಾಖೆ 25 ಲಕ್ಷ ರೂ. ನೀಡುವುದಾಗಿ ಭರವಸೆ ಕೊಟ್ಟಿತ್ತು. ಆದರೆ ಪರಿಹಾರ ನೀಡುವಲ್ಲಿ ರೈಲ್ವೆ ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ ಸಂಪೂರಣ್ ಸಿಂಗ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಈ ನಡುವೆ ಜಮೀನಿನ ಬೆಲೆ 50 ಲಕ್ಷ ಏರಿಕೆಯಾದ ಕಾರಣ, ಈ ಮೊತ್ತವನ್ನು ಸೇರಿ ರೈತನಿಗೆ ಕೊಡಲು ರೈಲ್ವೆ ಇಲಾಖೆಗೆ ಆದೇಶ ನೀಡಿತು. ಅದರಂತೆ ಸಂಪೂರಣ್ ಸಿಂಗ್‌ಗೆ ರೈಲ್ವೆ ಇಲಾಖೆ 1.47 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕಿತ್ತು.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಆದರೆ 2012 ರಲ್ಲಿ ರೈಲ್ವೆ ಇಲಾಖೆ ಕೇವಲ 42 ಲಕ್ಷ ರೂಪಾಯಿಗಳನ್ನು ನೀಡಿ ಕೈತೊಳೆದುಕೊಂಡಿತ್ತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತ ಈ ನಡೆಯನ್ನು ಪ್ರೆಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

2015ರಲ್ಲಿ ಮತ್ತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಸ್ಪಾಲ್ ವರ್ಮಾ, ಸಂಪೂರಣ್ ಸಿಂಗ್ ಅವರಿಗೆ ಬರಬೇಕಾಗಿದ್ದ 1.05 ಕೋಟಿ ಹಣದ ಬದಲಾಗಿ 12030 ಸಂಖ್ಯೆಯ ರೈಲನ್ನು ಸಂಪೂರಣ್ ಸಿಂಗ್ ವಶಕ್ಕೆ ನೀಡಿ ಆದೇಶಿಸಿತ್ತು.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಅಷ್ಟೇ ಅಲ್ಲದೆ ಲೂಧಿಯಾನ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಉಪಯೋಗಿಸುವಂತಹ ಕಚೇರಿ ವಶಪಡಿಸಿಕೊಂಡು, ಸಂಪೂರಣ್ ಸಿಂಗ್ ಅವರಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಸದ್ಯ 'ಸ್ವರ್ಣ ಶತಾಬ್ದಿ' ಹೆಸರಿನ ಈ ರೈಲು ಅಮೃತ್ಸರ- ನವದೆಹಲಿ ನಡುವಣ ಸಂಚರಿಸುತ್ತದ್ದು, ಈ ರೈಲಿನ ಮುಟ್ಟುಗೋಲಿಗೆ ನ್ಯಾಯಾಲಯ ಆದೇಶಿಸಿದೆ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಸ್ಟೇಷನ್ ಮಾಸ್ಟರ್ ಏನ್ ಹೇಳ್ತಾರೆ ?

ಸಂಪೂರಣ್ ಸಿಂಗ್ ಪರ ಚಾಟಿ ಬೀಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಟೇಷನ್ ಮಾಸ್ಟರ್, "ರೈಲನ್ನು ರೈತನಿಗೆ ನೀಡಿ ಆದೇಶ ಹೊರಡಿಸಿರಬಹುದು, ಆದರೆ ಸರಿ ಸುಮಾರು 300 ಮೀಟರ್‌ ಉದ್ದದ ರೈಲನ್ನು ತೆಗೆದುಕೊಂಡು ಏನು ಮಾಡ್ತಾರೆ? ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವೇ" ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಆದೇಶ ಬಂದಿದೆ, ಮುಂದೆ..?

ರೈಲ್ವೆ ಇಲಾಖೆ ಇಂದ ಅನ್ಯಾಯವಾಗಿದ್ದರೂ ಸಹ ಪ್ರಯಾಣಿಕರ ಹಿತದೃಷ್ಠಿಯಿಂದ ರೈಲನ್ನು ಪ್ರಯಾಣಕ್ಕೆ ನೀಡುವುದಾಗಿ ರೈತ ಸಂಪೂರಣ್ ಸಿಂಗ್ ಹೇಳಿಕೆ ನೀಡಿ ದೊಡ್ಡತನ ಮೆರೆದಿದ್ದಾರೆ.

ಅಬ್ಬಾ!! ಈ ರೈತ ಮತ್ತು ರೈಲಿನ ಕತೆ ಓದಿ... ಕಿಕ್ ಕೊಡುತ್ತೆ

ಈ ಘಟನೆಯಿಂದಾಗಿ ಹೆಚ್ಚು ಅವಮಾನಿತವಾಗಿರುವ ರೈಲ್ವೆ ಇಲಾಖೆ, ರೈತನಿಗೆ ಸೇರಬೇಕಾಗಿರುವ ಹಣದ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.

Read more on ರೈಲು train
English summary
[Read in kannada]A Ludhiana farmer's with India railway, battle for proper compensation for land seized to build a Ludhiana-Chandigarh railway line reached an unexpected conclusion this week when a court awarded him a train.
Please Wait while comments are loading...

Latest Photos