ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

By Nagaraja

ಪನಾಮ ಕಾಲುವೆ ಜಗತ್ತಿನಲ್ಲಿ ಇದುವರೆಗೆ ಕೈಗೊಂಡಿರುವ ಅತಿ ದೊಡ್ಡ ಮತ್ತು ಅತ್ಯಂತ ಕ್ಲಿಷ್ಟಕರ ಎಂಜಿನಿಯರಿಂಗ್ ಯೋಜನೆಗಳಲ್ಲಿ ಒಂದಾಗಿದೆ. ಅಂತರಾಷ್ಟ್ರೀಯ ಕಡಲಿನ ವ್ಯಾಪಾರದ ಪ್ರಮುಖ ನೆಲೆಯಾಗಿರುವ ಪನಾಮ ಕಾಲುವೆಯು ಪನಾಮದಲ್ಲಿರುವ ಒಂದು 77 ಕೀ.ಮೀ. ಉದ್ದದ ಹಡಗು ಕಾಲುವೆಯಾಗಿದ್ದು, ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರವನ್ನು ಬಂಧಿಸುತ್ತದೆ.

ಅಮೆರಿಕನ್ ಸಿವಿಲ್ ಎಂಜಿನಿಯರಿಂಗ್ ಸಂಘದಿಂದ ಪ್ರಪಂಚದ ಏಳು ಆಧುನಿಕ ಅದ್ಭುತಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪನಾಮ ಕಾಲುವೆಯಲ್ಲಿ ಮೂರನೇ ಹಡಗು ವ್ಯಾಪಾರ ಕಾಲುವೆ ತೆರೆದುಕೊಂಡಿದೆ. ಇದು ಜಗತ್ತಿನ ಎಂಜಿನಿಯರಿಂಗ್ ತಂತ್ರಜ್ಞಾನಗಳಲ್ಲಿ ಭಾರಿ ಅದ್ಭುತವನ್ನೇ ಸೃಷ್ಟಿ ಮಾಡಿದೆ.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

1881ನೇ ಇಸವಿಯಲ್ಲೇ ಪನಾಮ ಕಾಲುವೆ ನಿರ್ಮಿಸಲು ಫ್ರಾನ್ಸ್ ಮುಂದಾಗಿತ್ತು. ಆಧರೆ ಮಲೇರಿಯಾ, ಹಳದಿ ಜ್ವರದಂತಹ ಕಾಯಿಲೆ ಭೂಕುಸಿತದಿಂದಾಗಿ 21,900 ಕಾರ್ಮಿಕರು ಸಾವನ್ನಪ್ಪಿದ್ದರಿಂದ ತನ್ನ ಯೋಜನೆಯಿಂದ ಹಿಂಜರಿತ್ತು.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ನಂತರ 1904ರಲ್ಲಿ ಯೋಜನೆಯನ್ನು ಎತ್ತಿಕೊಂಡ ಸಂಯುಕ್ತ ಅಮೆರಿಕ 1914 ಆಗಸ್ಟ್ 15ರಂದು ಹಡಗು ಕಾಲುವೆ ಸಂಚಾರವನ್ನು ತೆರೆಯುವಲ್ಲಿ ಯಶಸ್ವಿಯಾಗಿತ್ತು.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ಎರಡು ಮಹಾ ಸಾಗರಗಳ (ಅಟ್ಲಾಂಟಿಕ್ ಮತ್ತು ಫೆಸಿಫಿಕ್) ನಡುವಣ ನಿರ್ಮಿಸಿರುವ ಕಾಲುವೆಯು ಹಡಗು ಸಂಚಾರದ ಮೇಲೆ ಭಾರಿ ಪರಿಣಾಮವನ್ನುಂಟು ಮಾಡಿದೆ. ಇದು ದಕ್ಷಿಣದ ತುತ್ತ ತುದಿಯ ಕೇಪ್ ಹಾರ್ನ್ ಮೂಲಕದ ಅತಿ ಉದ್ದವಾದ ಮತ್ತು ತ್ರಾಸದಾಯಕ ಮಾರ್ಗಕ್ಕೆ ಪರ್ಯಾಯವನ್ನು ಒದಗಿಸುತ್ತದೆ.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ಪನಾಮ ಕಾಲುವೆಯ ನಿರ್ಮಾಣದ ವೇಳೆ ಕೊಲಂಬಿಯಾ, ಫ್ರಾನ್ಸ್ ತನ್ನ ನಿಯಂತ್ರಣ ಪರಿಧಿಯಲ್ಲಿ ಇಟ್ಟುಕೊಂಡಿದದ್ದರೆ ಬಳಿಕ 1977ರ ವರೆಗೆ ನಿಯಂತ್ರಣವನ್ನು ಅಮೆರಿಕ ತೆಗೆದುಕೊಂಡಿತ್ತು.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ಟೋರಿಜೋಸ್-ಕಾರ್ಟರ್ ಒಪ್ಪಂದದಂತೆ ಅಮೆರಿಕ ತನ್ನ ನಿಯಂತ್ರಣವನ್ನು ಪನಾಮಗೆ ವಹಿಸಿಕೊಟ್ಟಿತ್ತು. ಇದರಂತೆ 1979ರಿಂದ 1999ರ ವರೆಗೆ ಈ ಕಾಲುವೆಯು ಜಂಟಿ ಅಮೆರಿಕ-ಪನಾಮದ ನಿರ್ವಹಣೆಯಲ್ಲಿತ್ತು.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

1999ರಲ್ಲಿ ಈ ಜಲಮಾರ್ಗದ ನಿಯಂತ್ರಣವನ್ನು ಪನಾಮ ಸರ್ಕಾರ ತನ್ನ ಅಧೀನತೆಗೆ ತೆಗೆದುಕೊಂಡಿತ್ತಲ್ಲದೆ ತದಾ ಬಳಿಕ ಪನಾಮ ಕಾಲುವೆ ಪ್ರಾಧಿಕಾರವು ನಿರ್ವಹಣೆಯನ್ನು ವಹಿಸಿಕೊಂಡಿದೆ.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

1904ರಲ್ಲಿ 1,000ದಷ್ಟಿದ್ದ ಹಡುಗಗಳ ವಾರ್ಷಿಕ ದಟ್ಟಣೆಯು 2008ರ ವೇಳೆಯಾಗುವಾಗ 14,702 ಹಡಗುಗಳಿಗೆ ಏರಿಕೆಯಾಗಿತ್ತು. 2012ರಲ್ಲಿ ಈ ಕಾಲುವೆಯಾದ್ಯಂತ 8,15,000 ಹಡಗುಗಳು ಸಾಗಿ ಹೋಗಿವೆ.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

5.4 ಬಿಲಿಯನ್ ಅಮೆರಿಕನ್ ಡಾಲರ್ ಯೋಜನೆಯ ಮೂರನೇ ಹಂತದ ಪನಾಮ ಕಾಲುವೆ ನಿರ್ಮಾಣವು 2007ರಲ್ಲಿ ಆರಂಭವಾಗಿತ್ತು. 40,000ದಷ್ಟು ಕಾರ್ಮಿಕರು ಹೊಸ ಜಲಮಾರ್ಗವನ್ನು ಅಗೆಯುವ ಕಾರ್ಯದಲ್ಲಿ ತೊಡಗಿದ್ದರು.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ಹೊಸ ವಿಸ್ತರಿತ ಕಾಲುವೆ ಯೋಜನೆಯೊಂದಿಗೆ ಪನಾಮ ಜಲಮಾರ್ಗದ ಸಾಮರ್ಥ್ಯವು ದ್ವಿಗುಣವಾಗಲಿದೆ. ಇದರಿಂದ ದೊಡ್ಡದಾದ ಹಡಗುಗಳನ್ನು ರವಾನಿಸಲು ಸಾಧ್ಯವಾಗಲಿದೆ.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ನೂತನ ಕಾಲುವೆ ಮುಖಾಂತರ 14,000 ಕಂಟೈನರ್ ಗಳನ್ನು ಒಳಗೊಂಡಿರುವ ಹಡುಗುಗಳನ್ನು ರವಾನಿಸಬಹುದಾಗಿದೆ. ಇದು ನಿಯೋ-ಪನಾಮ್ಯಾಕ್ಸ್ ಶಿಪ್ಸ್ ಎಂದು ಗುರುತಿಸಿಕೊಳ್ಳಲಿದೆ.

ಆಧುನಿಕ ಎಂಜಿನಿಯರಿಂಗ್ ಜಗತನ್ನು ಸ್ತಬ್ಧಗೊಳಿಸಿದ 'ಪನಾಮ ಕಾಲುವೆ'

ಒಟ್ಟಿನಲ್ಲಿ ಪನಾಮ ತೆರೆದುಕೊಂಡಿರುವ ನೂತನ ಜಲಮಾರ್ಗವು ಜಾಗತಿಕ ರಾಷ್ಟ್ರಗಳ ಹಡಗು ವ್ಯಾಪಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

Most Read Articles

Kannada
English summary
Fascinating facts about the Panama Canal
Story first published: Wednesday, June 29, 2016, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X