ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಪೈಲೆಟ್‌ ಆಗಬೇಕೆಂಬ ಮಹಾದಾಸೆ ಬಹುತೇಕರಲ್ಲಿ ಇದ್ದೇ ಇರುತ್ತೆ. ಆದ್ರೆ ಅಷ್ಟು ಸುಲಭದ ಮಾತಲ್ಲ. ನಾವು ಬಸ್‌ ಚಾಲಕನ ಪಕ್ಕ ಕುಳಿತು ಚಾಲಕನಾಗಬೇಕೆಂಬ ಕನಸು ಕಂಡರೆ ಅದು ಸಾಧ್ಯವಾಗಬಹುದಾದರೂ, ಪೈಲೆಟ್‌ ಆಗುವುದು ಸುಲಭದ ಪ್ರಯತ್ನವಲ್ಲ. ಅದಕ್ಕೆ ಪಡೆಯಬೇಕಾದ ಶಿಕ್ಷಣ, ತರಬೇತಿ ಇತರೆ ಉದ್ಯೋಗಗಳಿಂತ ಭಿನ್ನವಾಗಿದ್ದರೂ ಸಹ ಕೆಲವು ಮಾಹಾನುಭಾವರು ಮಾತ್ರ ಮೆಟ್ರಿಕ್ ಪಾಸ್ ಆಗದ್ದಿದ್ದರೂ ಸಹ ಇಂದು ಅಂತಾರಾಷ್ಟ್ರೀಯ ಪೈಲೆಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ವಿಮಾನ ಚಾಲನೆ ಮಾಡುವುದು ಅಂದ್ರೆ ತಮಾಷೆಯ ಮಾತಲ್ಲ. ಅದಕ್ಕಾಗಿ ಉನ್ನತ ಮಟ್ಟದ ಶಿಕ್ಷಣ ಮತ್ತು ಹತ್ತಾರು ರೀತಿ ತರಬೇತಿಗಳನ್ನು ಪಡೆಯಬೇಕಾಗುತ್ತೆ. ಆದ್ರೆ ಇಲ್ಲಿ ಕೆಲವರು ಮೆಟ್ರಿಕ್ ಕೂಡಾ ಪಾಸ್ ಆಗದಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ವಿಮಾನಗಳ ಮುಖ್ಯ ಪೈಲೆಟ್ ‌ಕಾರ್ಯನಿರ್ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಹೌದು, ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲೆಟ್‌ಗಳ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಪಿಐಎ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಪೈಲೆಟ್‌ಗಳು ಉದ್ಯೋಗಕ್ಕೆ ತಕ್ಕಂತೆ ಸರಿಯಾದ ಶಿಕ್ಷಣ ಪೂರೈಸಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಪೈಲೆಟ್‌ಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸುಪ್ರೀಂಕೋರ್ಟ್ ಪಿಐಐ(ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್) ಸಂಸ್ಥೆಗೆ ಛೀಮಾರಿ ಹಾಕಿದೆ.

ಸದ್ಯ ನಕಲಿ ಶಿಕ್ಷಣ ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿರುವ 52 ಪೈಲೆಟ್‌ಗಳನ್ನು ಅಮಾನತು ಮಾಡಿರುವ ಪಿಐಎ ಸಂಸ್ಥೆಯು, ಮುಂದಿನ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚನೆ ಮಾಡಿದೆ.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಬಸ್ ಚಾಲನೆ ಮಾಡುವುದಕ್ಕೂ ಅರ್ಹರಲ್ಲ..!

ನಕಲಿ ದಾಖಲೆಗಳನ್ನು ನೀಡಿ ಪೈಲೆಟ್ ಉದ್ಯೋಗ ಪಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪಾಕ್ ಸುಪ್ರೀಂಕೋರ್ಟ್, ಸಾಮಾನ್ಯ ಬಸ್ ಚಾಲನೆಗೂ ಸಹ ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಅದು ಹೇಗೆ ಪೈಲೆಟ್‌ಗಳನ್ನಾಗಿ ನೇಮಕ ಮಾಡಿದ್ದಿರಿ ಎಂದು ಪಿಐಎ ಸಂಸ್ಥೆಗ ಚಾಟಿ ಬೀಸಿದೆ.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿರುವ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಪೈಲೆಟ್ ನೇಮಕಾತಿಯಲ್ಲಿ ಆಗಿರುವ ಲೋಪವನ್ನು ಸದ್ಯದಲ್ಲೇ ಸರಿಪಡಿಸುವುದಾಗಿ ತಪ್ಪೊಪ್ಪಿಗೆ ನೀಡಿದೆ.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಪೈಲೆಟ್‌ಗಳ ಶಿಕ್ಷಣ ಕುರಿತಂತೆ ಈ ಹಿಂದೆಯೂ ಕೂಡಾ ವರದಿ ಮಾಡಿದ್ದ ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ 'ಡಾನ್' ಈ ಕುರಿತು ಸರ್ಕಾರದ ಗಮನಸೆಳೆದಿತ್ತು. ಆದ್ರೆ ಈ ಬಗ್ಗೆ ಯಾವುದೇ ತನಿಖೆ ನಡೆಸದ ಪಿಐಎ ಸಂಸ್ಥೆಯು ಡಾನ್ ವರದಿಯನ್ನು ತಳ್ಳಿಹಾಕಿತ್ತು.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಯಾವಾಗ ಸುಪ್ರೀಂಕೋರ್ಟ್‌ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಯಿತೊ ಪಿಐಎ ಸಂಸ್ಥೆಯ ಹುಳುಕು ಬಟಾಬಯಲಾಗಿದೆ. ಬಸ್ ಓಡಿಸಲು ಸಹ ಅರ್ಹರಲ್ಲದ ವ್ಯಕ್ತಿಗಳಿಗೆ ಪೈಲೆಟ್ ಹುದ್ದೆ ನೀಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಅಂತೂ ಇಂತೂ ನಕಲಿ ದಾಖಲೆಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡ 50ಕ್ಕೂ ಹೆಚ್ಚು ಮಹಾನುಭಾವರನ್ನು ಮನೆಗೆ ಕಳುಹಿಸಿರುವ ಪಿಐಎ ಸಂಸ್ಥೆಯು ಉದ್ಯೋಗಕ್ಕೆ ತಕ್ಕಂತೆ ಸರಿಯಾದ ಶಿಕ್ಷಣ ಮತ್ತು ತರಬೇತಿ ಪಡೆಯದ ಮತ್ತಷ್ಟು ಹುಳುಕುಗಳನ್ನು ಸದ್ಯದಲ್ಲೇ ಮನೆಗೆ ಕಳುಹಿಸಲು ಸಿದ್ದತೆ ನಡೆಸಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಮೆಟ್ರಿಕ್ ಪಾಸ್ ಆಗದ್ದಿದ್ದರೂ ಇಲ್ಲಿದ್ದಾರೆ ಐವರು ಇಂಟರ್‌ನ್ಯಾಷನಲ್ ಪೈಲೆಟ್‌ಗಳು..!

ಒಟ್ಟಿನಲ್ಲಿ ಉನ್ನತ ಮಟ್ಟದ ಶಿಕ್ಷಣ ಮತ್ತು ತರಬೇತಿ ಹೊಂದಿದ್ದರೂ ಪೈಲೇಟ್ ಹುದ್ದೆಗಾಗಿ ಕಷ್ಟಪಡುವ ಪರಿಸ್ಥಿತಿಯಲ್ಲಿ ಮೆಟ್ರಿಕ್ ಪಾಸ್ ಆಗದ್ದಿದ್ದರೂ ಪೈಲೆಟ್ ಹುದ್ದೆ ಪಡೆದಿಕೊಂಡಿರುವ ಇವರುಗಳ ದುಸ್ಸಾಹಕ್ಕೆ ಏನ್ ಹೇಳಬೇಕೋ ಗೊತ್ತಾಗುತ್ತಿಲ್ಲ.

Most Read Articles

Kannada
English summary
Five PIA Pilots Are Not Even Matric Pass, Court Says They Can't Even Drive Bus. Read in Kannada.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more