ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

Written By:

ಸರ್ವಕಾಲಿಕ ಶ್ರೇಷ್ಠ ಬಾಕ್ಸರ್ ಸೋಲರಿಯದ ಸರದಾರ ಫ್ಲಾಯ್ಡ್ ಮೇವೆದರ್ ಮಗದೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಮಾಜಿ ಚಾಂಪಿಯನ್ ಸುದ್ದಿಯಾಗಿರುವುದು ಬಾಕ್ಸಿಂಗ್ ರಿಂಗ್ ನಲ್ಲಲ್ಲ. ಬದಲಾಗಿ 2.5 ಮಿಲಿಯನ್ ಡಾಲರ್ (ಸರಿ ಸುಮಾರು 17 ಕೋಟಿ ರುಪಾಯಿ) ಬೆಲೆ ಬಾಳುವ ದುಬಾರಿ ಕಾರೊಂದನ್ನು ಖರೀದಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಾಕ್ಸಿಂಗ್ ಮೇಲೆ ಎಷ್ಟೊಂದು ಪ್ರೀತಿ ತೋರುತ್ತಾರೋ ಅಷ್ಟೇ ಸಲುಗೆಯನ್ನು ದುಬಾರಿ ವಾಹನಗಳ ಖರೀದಿಯಲ್ಲೂ ತೋರಿರುವ ಮೇವೆದರ್ ತಮ್ಮ ಐಷಾರಾಮಿ ವಾಹನಗಳ ಗ್ಯಾರೇಜ್ ಗೆ ಮಗದೊಂದು 'ಕೋಡ್57' ಎಂಬ ಅತಿ ವಿರಳ ಸೂಪರ್ ಕಾರನ್ನು ಸೇರ್ಪಡೆಗೊಳಿಸಿದ್ದಾರೆ.

To Follow DriveSpark On Facebook, Click The Like Button
ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಕೆಂಪು ವರ್ಣದಿಂದ ಕಂಗೊಳಿಸುವ ಕೋಡ್ 57, ಸೀಸರ್ ಡೋರ್ ವಿನ್ಯಾಸವನ್ನು ಪಡೆದಿದೆ. ಹೆಸರಾಂತ ಸೂಪರ್ ಕಾರು ವಿನ್ಯಾಸಗಾರ ಕೆನ್ ಓಕುಯಾಮಾ ಎಂಬವರು ಇದಕ್ಕೆ ವಿನ್ಯಾಸವನ್ನು ಬರೆದಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಜಗತ್ತಿನ ಐಕಾನಿಕ್ ಡಿಸೈನ್ ಸಂಸ್ಥೆ ಪಿನಿನ್ ಫರಿನಾ ಮಾಜಿ ಉದ್ಯಮಿ ಆಗಿರುವ ಓಕುಯಾಮಾ ಫೆರಾರಿ ಕಾರುಗಳ ವಿನ್ಯಾಸದಲ್ಲಿ ದೊಡ್ಡ ಕೊಡುಗೆಯನ್ನೇ ಸಲ್ಲಿಸಿದ್ದರು.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಅಷ್ಟೇ ಯಾಕೆ ಫೆರಾರಿ 599 ಜಿಟಿಬಿ ಚಾಸೀ ತಳಹದಿಯಿಂದಲೇ ಮೇವೆದರ್ ಗಾಗಿ ಕೋಡ್57 ನಿರ್ಮಿಸಲಾಗಿದೆ ಎಂಬುದು ತಿಳಿದು ಬಂದಿದೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಕಾರಿನಡಿಯಲ್ಲಿರುವ ಶಕ್ತಿಶಾಲಿ 6.0 ಲೀಟರ್ ವಿ12 ಎಂಜಿನ್ 607 ಎನ್ ಎಂ ತಿರುಗುಬಲದಲ್ಲಿ ಬರೋಬ್ಬರಿ 611 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಎಲೆಕ್ಟ್ರೊ ಹೈಡ್ರಾಲಿಕ್ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಇನ್ನು ಮೇವೆದರ್ ಬಯಕೆಗಳಿಗೆ ಅನುಸಾರವಾಗಿ ಸಸ್ಪೆನ್ಷನ್ ಮತ್ತು ಎಂಜಿನನ್ನು ವಿಶೇಷವಾಗಿ ಟ್ಯೂನ್ ಮಾಡಬಹುದಾಗಿದೆ ಎಂದು ವಿನ್ಯಾಸಗಾರ ಓಕುಯಾಮಾ ಅಭಿಪ್ರಾಯಪಡುತ್ತಾರೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಈ ಬಗ್ಗೆ ವಿವರಿಸಿರುವ ಫ್ಲಾಯ್ಡ್ ಮೇವೆದರ್ ಸೂಪರ್ ಕಾರ್ ಡೀಲರ್ ವ್ಯಕ್ತಿ ಫ್ಲಾಯ್ಡ್ ಓಕೆಕೆ, ಜಗತ್ತಿನ ಅತಿ ವಿರಳವಾದ ಸೂಪರ್ ಕಾರುಗಳಲ್ಲಿ ಒಂದಾಗಿರುವ ಕೋಡ್57 ಕಾರಿನ ಯೋಜನೆಗಾಗಿ ಕಳೆದ ಆರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಕೋಡ್57 ಕೇವಲ ಐದು ಯುನಿಟ್ ಗಳಷ್ಟೇ ನಿರ್ಮಾಣವಾಗಿದೆ. ಇದೀಗ ಉತ್ತರ ಹಾಗೂ ದಕ್ಷಿಣ ಅಮೆರಿಕದಲ್ಲಿ ಇದನ್ನು ಪ್ರತಿನಿಧಿಸುವ ಏಕ ಮಾತ್ರ ತಾರೆಯೆಂಬ ಗೌರವಕ್ಕೆ ಮೇವೆದರ್ ಪಾತ್ರವಾಗಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಅಂದ ಹಾಗೆ ಫ್ಲಾಯ್ಡ್ ಮೇವೆದರ್ ಬುಗಾಟಿ ವೆರೊನ್, ಫೆರಾರಿ 458 ಸ್ಪೈಡರ್, ಫೆರಾರಿ 599 ಜಿಟಿಬಿ, ಪೋರ್ಷ್ 911 ಟರ್ಬೊ ಎಸ್, ಲಂಬೋರ್ಗಿನಿ ಅವೆಂಟಡೊರ್, ಗಲ್ಪ್ ಸ್ಟ್ರೀಮ್ ವಿ, ರೋಲ್ಸ್ ರಾಯ್ಸ್ ಘೋಸ್ಟ್, ಬೆಂಟ್ಲಿ ಮುಲ್ಸಾನ್, ಮರ್ಸಿಡಿಸ್ ಬೆಂಝ್ ಸೇರಿದಂತೆ ಅನೇಕ ಶ್ರೇಣಿಯ ಸೂಪರ್ ಕಾರುಗಳ ಒಡೆಯರಾಗಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರು ಖರೀದಿಸಿದ ಫ್ಲಾಯ್ಡ್ ಮೇವೆದರ್

ಇನ್ನು ದೂರ ಪ್ರದೇಶಗಳಿಗೆ ಪ್ರಯಾಣಿಸಲು ತಮ್ಮದೇ ಆದ ಖಾಸಗಿ ಜೆಟ್ ವಿಮಾನವನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಕೋಟಿ ಗಟ್ಟಲೆ ರುಪಾಯಿಗಳಷ್ಟು ಬೆಲೆ ಬಾಳುವ ಐಷಾರಾಮಿ ವಾಹನಗಳ ಬಹು ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ.

English summary
Floyd Mayweather In The News Again, This Time For Buying Kode 57 Supercar
Story first published: Monday, August 22, 2016, 13:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark