ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

Written By:

ಇನ್ಮುಂದೆ ನೀವು ಗೂಗಲ್ ಮ್ಯಾಪನ್ನು ಕನ್ನಡದಲ್ಲೇ ಬಳಸಬಹುದಾದ ಸೌಕರ್ಯವನ್ನು ಗೂಗಲ್ ಇಂಡಿಯಾ ಮಾಡಿಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ಗೂಗಲ್ ಮ್ಯಾಪ್ ಕನ್ನಡದಲ್ಲಿ ಇರಲಿದ್ದು, ಗೂಗಲ್ ಮ್ಯಾಪ್ ನೋಡಿಕೊಂಡು ಸಂಚರಿಸುವ ಕನ್ನಡಿಗರಿಗೆ ಈ ವಿಚಾರ ಖುಷಿ ನೀಡಲಿದೆ.

ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

ಗೂಗಲ್ ಮ್ಯಾಪ್‌ನಲ್ಲಿ ಕನ್ನಡವನ್ನು ಜಾರಿಗೊಳಿಸುವ ಪ್ರಕಿಯೆಯನ್ನು ಗೂಗಲ್ ಸಂಸ್ಥೆ ವರ್ಷದ ಹಿಂದೆ ಪ್ರಾರಂಭಿಸಿತ್ತು. ಆದ್ರೆ ಮ್ಯಾಪ್‌ನಲ್ಲಿ ಮಾತ್ರ ಇದು ಬಂದಿರಲಿಲ್ಲ. ಆದರೆ, ನವೆಂಬರ್ ತಿಂಗಳಿನಲ್ಲಿ ಗೂಗಲ್ ಸಂಸ್ಥೆಯ ಈ ಕ್ರಮವನ್ನು ಕನ್ನಡಿಗರು ಕೊಂಡಾಡಿದ್ದಾರೆ.

ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

ಗೂಗಲ್ ಮ್ಯಾಪ್‌ನಲ್ಲಿ ಕನ್ನಡದಲ್ಲಿ ಹೆಸರುಗಳು ಕಾಣುತ್ತಿವೆ. ಆದರೆ ಕೆಲವು ಕಡೆ ಊರಿನ ಹೆಸರುಗಳು ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಕಟವಾಗಿದ್ದು, ಕನ್ನಡದಲ್ಲಿ ಕೊಡೊಕ್ಕಿಂತ ಕೊಡದೇ ಇರೊದೇ ಒಳ್ಳೆಯದು ಅಂದುಕೊಳ್ಳದೇ, ತಪ್ಪಾಗಿರುವ ಕಡೆ ಸರಿಪಡಿಸಲು ಗೂಗಲ್‌ಗೆ ಸಲಹೆ/ದೂರು ನೀಡುವುದು ಉತ್ತಮವಾದ ಮಾರ್ಗವಾಗಿದೆ.

ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

ಇಷ್ಟು ದಿನ ಗೂಗಲ್ ನ ತಮಿಳು ನಾಡು ನಕ್ಷೆಯಲ್ಲಿ ತಮಿಳು ಭಾಷೆಯಲ್ಲಿಯೇ ಊರುಗಳ ಹೆಸರು ಕಾಣುತ್ತಿತ್ತು, ಆಂಧ್ರ ಪ್ರದೇಶದ ನಕ್ಷೆಯ ಮೇಲೆ ಕ್ಲಿಕ್ಕಿಸಿದರೆ ತೆಲುಗು ಅಕ್ಷರಗಳೂ ರಾರಾಜಿಸುತ್ತಿದ್ದವು. ಆದರೆ ಅಲ್ಲೂ ಎಂದಿನಂತೆ ಕನ್ನಡ ಮೂಲೆಗುಂಪಾಗಿತ್ತು.

Recommended Video - Watch Now!
[Kannada] Bajaj Pulsar NS200 ABS Launched In India - DriveSpark
ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

'ಗೂಗಲ್ ನಕ್ಷೆಯಲ್ಲಿ ಕನ್ನಡ' ಈ ಬಾರಿಯ ರಾಜ್ಯೋತ್ಸವಕ್ಕೆ ಭರ್ಜರಿ ಉಡುಗೊರೆಯೇ ಸರಿ. ಕರ್ನಾಟಕದಲ್ಲಿ ಕನ್ನಡೀಕರಣದ ಯುಗಾರಂಭಕ್ಕೆ ಇದೊಂದು ಪುಟ್ಟ, ದಿಟ್ಟ ಹೆಜ್ಜೆ ಎಂದುಕೊಳ್ಳೋಣವೇ? ಗೂಗಲ್ ನಕ್ಷೆಯಲ್ಲಿ ಕನ್ನಡ ಕಂಡು ಹಿಗ್ಗಿದವರು, ಟ್ವೀಟ್ ಮತ್ತು ಫೇಸ್ಬುಕ್ ಸ್ಟೇಟಸ್ ನಲ್ಲಿ ಈ ಬಗ್ಗೆ ಪ್ರಕಟಿಸುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

ಕನ್ನಡ ಭಾಷೆಯ ಬಳಕೆ ಹೇಗೆ ?

1 ಈಮೇಲ್ ಅಕೌಂಟ್ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿ

2 ಸೆಟ್ಟಿಂಗ್ಸ್‌ನಲ್ಲಿ ಸಿಗುವ ಭಾಷೆಯ ಬಳಕೆಯಲ್ಲಿ ಕನ್ನಡ ಬಳಕೆಯ ಭಾಷೆಯಾಗಿ ಆಯ್ಕೆಮಾಡಿಕೊಳ್ಳಿ

ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

3 ಕನ್ನಡವನ್ನು ನಿಮ್ಮ ಈಮೇಲ್ ಬಳಕೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ನಂತ್ರ, ನಿಮ್ಮ ಮುಂದಿನ ಎಲ್ಲಾ ಅಕೌಂಟ್ ಸೆಟ್ಟಿಂಗ್ಸ್ ಕನ್ನಡದಲ್ಲಿಯೇ ಲಭ್ಯವಾಗುತ್ತದೆ

4 ತದನಂತ್ರ ನೀವು ಗೂಗಲ್ ಮ್ಯಾಪ್ ಒಪನ್ ಮಾಡಿದರೇ, ನಮ್ಮ ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿಯೇ ಗೂಗಲ್ ಮ್ಯಾಪ್ ನಲ್ಲಿ ನಿಮಗೆ ಸ್ಥಳಗಳು, ಅಂಗಡಿಗಳು, ನಿಮಗೆ ಗೋಚರಿಸುತ್ತವೆ.

ಗೂಗಲ್ ಮ್ಯಾಪ್‌ನಲ್ಲಿ ರಸ್ತೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಪಡೆಯಿರಿ

5 ಕನ್ನಡದಲ್ಲಿ ಗೂಗಲ್ ಮ್ಯಾಪ್ ಮೇಲು ಭಾಗದಲ್ಲಿ ತೋರಿಸುವ ಸೆರ್ಚ್ ಸ್ಥಳದಲ್ಲಿ ಟೈಪ್ ಮಾಡಿದರೇ, ನಿಮಗೆ ಬೇಕಾದ ರಸ್ತೆ ಸ್ಥಳವನ್ನು ಕನ್ನಡದಲ್ಲಿ ನೋಡಬಹುದಾಗಿದೆ.

Read more on google ಗೂಗಲ್
English summary
On Friday morning, two days after Karnataka Rajyotsava, citizens were pleasantly surprised to see that the names of all places on the map were written in Kannada, just below the English script.
Story first published: Saturday, November 4, 2017, 17:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark