ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಅಮೋಲ್ ಯಾದವ್ ಎಂಬ ಹೆಸರಿನ ಈ ವ್ಯಕ್ತಿ ಈ ಹಿಂದೆ ತಮ್ಮ ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನವನ್ನು ನಿರ್ಮಿಸಿದ್ದಲ್ಲೇ ಇದೀಗ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಬೃಹತ್ ಯೋಜನೆಗಾಗಿ ಬರೋಬ್ಬರಿ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.

By Praveen

ಮುಂಬೈನ ಈ ವ್ಯಕ್ತಿಯ ಈ ಸಾಧನೆ ಖಂಡಿತ ನಿಮಗೆ ಅಚ್ಚರಿ ತರಿಸುತ್ತದೆ. ಹೌದು, ಅಮೋಲ್ ಯಾದವ್ ಎಂಬ ಹೆಸರಿನ ಈ ವ್ಯಕ್ತಿ ಈ ಹಿಂದೆ ತಮ್ಮ ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನವನ್ನು ನಿರ್ಮಿಸಿದ್ದಲ್ಲೇ ಇದೀಗ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಬೃಹತ್ ಯೋಜನೆಗಾಗಿ ಬರೋಬ್ಬರಿ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಉತ್ತರ ಮುಂಬೈನ ಕಾಂಡಿವಲಿ ನಿವಾಸಿಯಾಗಿರುವ ಮಾಜಿ ಪೈಲಟ್ ಅಮೋಲ್ ಯಾದವ್ ಆರು ವರ್ಷಗಳ ಹಿಂದೆ ತಮ್ಮ ಮನೆಯ ತಾರಸಿಯಲ್ಲಿ ಆರು ಸೀಟರ್​ನ ವಿಮಾನವೊಂದನ್ನು ನಿರ್ಮಾಣ ಮಾಡಿದ್ದಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದ್ದರು.

Recommended Video

New Maruti Swift Launch: Price; Mileage; Specifications; Features; Changes
ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಮತ್ತೊಂದು ವಿಚಾರವೆಂದರೆ, ಈ ವಿಶೇಷ ರೀತಿಯ ವಾಹನವನ್ನು ವಿಟಿ-ಎನ್ಎಂಡಿ(ವಿಕ್ಟರ್ ಟ್ಯಾಂಗೊ ನರೇಂದ್ರ ಮೋದಿ ದೇವೇಂದ್ರ) ಎಂದು ಹೆಸರಿಸುವ ಮೂಲಕ ತಮ್ಮ ಕನಸಿನ ಯೋಜನೆಗೆ ಮತ್ತೊಂದು ಅಯಾಮ ನೀಡಿದ್ದರು.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಅದೇ ಜನಪ್ರಿಯತೆಯಲ್ಲಿದ್ದ ಅಮೋಲ್ ಯಾದವ್‌ಗೆ ಇದೀಗ ಬೃಹತ್ ಯೋಜನೆಯೊಂದು ಹುಡುಕಿಕೊಂಡು ಬಂದಿದ್ದು, 19 ಸೀಟರ್​ನ ಒಟ್ಟಾರೆ 1300 ವಿಮಾನಗಳನ್ನು ಸಿದ್ಧಪಡಿಸಿ ಕೊಡುವಂತೆ ಮಹಾರಾಷ್ಟ್ರ ಸರ್ಕಾರ ಅಮೋಲ್ ಯಾದವ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಲಘು ವಿಮಾನ ತಯಾರಿಕೆಯಲ್ಲಿ ಜನಪ್ರಿಯತೆ ಗಳಿಸಿರುವ ಅಮೋಲ್ ಯಾದವ್ ಮಾಲೀಕತ್ವದ ಥ್ರಸ್ಟ್ ಏರ್​ಕ್ರಾಫ್ಟ್ ಕಂಪನಿಯೊಂದಿಗೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಪಾಲ್​ಘರ್ ಜಿಲ್ಲೆಯಲ್ಲಿ 157 ಭೂಮಿ ಕೂಡಾ ನೀಡಲಾಗಿದೆ.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಹೀಗಾಗಿ ಮುಂದಿನ 3 ವರ್ಷಗಳ ಅವಧಿಯಲ್ಲಿ 19 ಸೀಟರ್ ಸಾಮರ್ಥ್ಯದ 600 ಲಘು ವಿಮಾನಗಳನ್ನು ಸಿದ್ದಪಡಿಸಬೇಕಿರುವ ಥ್ರಸ್ಟ್ ಏರ್‌ಕ್ರಾಫ್ಟ್ ಸಂಸ್ಥೆಯು, ದೇಶಿಯವಾಗಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಲಘು ವಿಮಾನಗಳನ್ನು ಅಭಿವೃದ್ದಿ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

10 ಸಾವಿರ ಉದ್ಯೋಗ ಸೃಷ್ಠಿ

ಹೌದು, 35 ಸಾವಿರ ಕೋಟಿ ಮೌಲ್ಯದ ಈ ಒಪ್ಪಂದದಿಂದ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ವಿವಿಧ ಹಂತದಲ್ಲಿ 10 ಸಾವಿರ ಉದ್ಯೋಗ ಅವಕಾಶಗಳು ಒದಗಿಸಲಾಗುತ್ತಿದೆ.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಇನ್ನು ಅಮೋಲ್ ಯಾದವ್ ಈ ಹಿಂದೆ ನಿರ್ಮಿಸಿದ್ದ 6 ಆಸನಗಳ ಲಘು ವಿಮಾನವು ಗಂಟೆಗೆ ಸುಮಾರು 342 ಕಿ.ಮೀ ವೇಗದಲ್ಲಿ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಇದು 2,000 ಕಿ.ಮೀ ವ್ಯಾಪ್ತಿಯಲ್ಲಿ 13000 ಕಿಲೋಮೀಟರು ಎತ್ತರದಲ್ಲಿ ಹಾರಾಟ ನಡೆಸಬಲ್ಲದು.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಇದಕ್ಕಾಗಿ ಸತತ ಆರು ವರ್ಷಗಳ ಸಮಯವನ್ನು ತೆಗೆದುಕೊಂಡಿದ್ದ ಯಾದವ್ ಅವರು ಈ ವಿಮಾನವನ್ನು ನಿರ್ಮಿಸಲು ಕೇವಲ 4 ಕೋಟಿ ಹಣ ಖರ್ಚು ಮಾಡಿದ್ದರು. ಆದ್ರೆ ಇದು ಬೇರೆ ವಿಮಾನ ತಯಾರಿಕಾ ಸಂಸ್ಥೆಗಳಿಗೆ ಹೊಲಿಕೆ ಮಾಡಿದ್ರೆ ಅರ್ಧಕ್ಕಿಂತ ಕಡಿಮೆ ಖರ್ಚು ಎನ್ನಬಹುದು.

ಅಮೋಲ್ ಯಾದವ್ ಜೊತೆ 35 ಸಾವಿರ ಕೋಟಿ ಒಪ್ಪಂದ ಮಾಡಿಕೊಂಡ ಮಹಾರಾಷ್ಟ್ರ ಸರ್ಕಾರ

ಈ ಮೂಲಕ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಲಘು ವಿಮಾನಗಳನ್ನು ತಯಾರಿಸಬಹುದು ಎಂದು ತೊರಿಸಿಕೊಟ್ಟಿದ್ದ ಅಮೋಲ್ ಯಾದವ್‌ ಪ್ರಯತ್ನಕ್ಕೆ ಇದೀಗ ಮನ್ನಣೆ ಸಿಕ್ಕಿದ್ದು, 35 ಸಾವಿರ ಕೋಟಿ ಒಪ್ಪಂದ ಸಿಕ್ಕಿರುವುದು ಅವರ ಶ್ರಮದ ಪ್ರತಿಫಲವಾಗಿದೆ.

Trending On DriveSpark Kannada:

ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

Most Read Articles

Kannada
Read more on plane off beat
English summary
Pilot Builds Aircraft On His Terrace; Signs Rs 35,000 Crore MoU With The Maharashtra Government.
Story first published: Wednesday, February 21, 2018, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X