ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

Written By:

ಭೂಮಿ ಆಕಾಶಗಳಿರುವವರೆಗೆ ಚಿರಸ್ಥಾಯಿಯಾಗಿರುವ ಧ್ರವ ತಾರೆ ಈಗ ನೇಪಾಳಿಯರ ಪಾಲಿಗೆ ಅಕ್ಷರಶ: ಮೃತ್ಯುಕೂಪದಿಂದ ರಕ್ಷಿಸಿದ ಚಿರಂಜೀವಿಯಾಗಿ ಹೊರಹೊಮ್ಮಿದೆ. ನೇಪಾಳದಲ್ಲಿ ಇತ್ತೀಚೆಗಷ್ಟೇ ನಡೆದ ಪ್ರಬಲ ಭೂಕಂಪದಲ್ಲಿ ಸಾವಿರಾರು ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

ಆದರೆ ತಕ್ಷಣವೇ ಸಹಾಯಹಸ್ತ ಚಾಚಿದ ಭಾರತೀಯ ಸರಕಾರದ ಸ್ನೇಹ ದೂತಕವಾಗಿ ನೇಪಾಳಕ್ಕೆ ಹಾರಾಟ ಬೆಳೆಸಿದ ಧ್ರುವ್ ಹೆಲಿಕಾಪ್ಟರ್ ಜಗತ್ತಿನ ಅತ್ಯುನ್ನತ್ತ ಪರ್ವತ ಶಿಖರ ಎವರೆಸ್ಟ್ ಸೇರಿದಂತೆ ಅವಘಡದಲ್ಲಿ ಸಿಲುಕಿರುವ ಅನೇಕ ಮಂದಿಯ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯಿಂದ ನಿರ್ಮಾಣವಾಗಿರುವ ಧ್ರುವ್ ಹೆಲಿಕಾಪ್ಟರ್ 1992ನೇ ಇಸವಿಯಲ್ಲಿ ತನ್ನ ಮೊದಲ ಹಾರಾಟ ನಡೆಸಿತ್ತು. ಜರ್ಮನಿಯ ವ್ಯೋಮಸೇನೆ ತಯಾರಕ ಎಬಿಬಿ (Messerschmitt-Bölkow-Blohm) ನೆರವಿನಿಂದ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಮೂಲತ: ಭಾರತೀಯ ಸೇನೆ ಜೊತೆ ಜೊತೆಗೆ ನಾಗರಿಕ ಅಗತ್ಯಗಳಿಗಾಗಿ ಎಚ್ ಎಎಲ್ ಧ್ರುವ್ ಹೆಲಿಕಾಪ್ಟರ್ ನಿರ್ಮಿಸಲಾಗಿತ್ತು. ಇದು 2002ನೇ ಇಸವಿಯಲ್ಲಿ ಸೇವೆಗೆ ಲಭ್ಯವಾಗಿತ್ತು.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ನೇಪಾಳ ಜೊತೆಗೆ ಇಸ್ರೇಲ್ ರಾಷ್ಟ್ರಕ್ಕೂ ರಫ್ತು ಮಾಡಲಾಗಿದ್ದ ಧ್ರುವ್ ಹೆಲಿಕಾಪ್ಟರ್ ಗಾಗಿ ಇನ್ನಿತರ ಹಲವು ದೇಶಗಳಿಂದ ನಾಗರಿಕ ಹಾಗೂ ವಾಣಿಜ್ಯ ಬಳಕೆಗಾಗಿ ಆರ್ಡರ್ ಗಳು ಬಂದಿದ್ದವು.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ದುರಂತ ಪೀಡಿತ ಪ್ರದೇಶಗಳಿಗೆ ವೈದ್ಯಕೀಯ ನೆರವು ಒದಗಿಸುವುದು, ಶೀಘ್ರ ಕಾರ್ಯಾಚರಣೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವುದು ಧ್ರುವ್ ಹೆಲಿಕಾಪ್ಟರ್ ವಿಶಿಷ್ಟತೆಯಾಗಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಅತಿ ಎತ್ತರದ ವಾಯು ಮಂಡಲದಲ್ಲಿ ಕಾರ್ಯಾಚರಣೆ ನಡೆಸುವ ಶಕ್ತಿಯಿಂದಾಗಿಯೇ ಇದಕ್ಕೆ ಧ್ರುವ್ ಎಂಬ ಹೆಸರಿಡಲಾಗಿದೆ. ಇದು ಭೂ ತಲದಿಂದ 5,753 (18,875 ಅಡಿ) ಎತ್ತರದಲ್ಲಿ ಸ್ಥಿತಗೊಂಡಿರುವ ಹಿಮ ಪರ್ವತದಿಂದ ಆವೃತ್ತವಾದ ಕಾಶ್ಮೀರದ ಸಿಯಾಚೆನ್ ಗ್ಲೇಸಿಯರ್ ನಿಂದಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುತ್ತದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಮಿಲಿಟರಿ, ನಾಗರಿಕ ಹೊರತಾಗಿ ಸಾರಿಗೆ, ರಕ್ಷಣೆ, ಕಡಲಾಚೆಯ ಕಾರ್ಯಚಾರಣೆ, ಗಾಳಿ ಅಂಬುಲೆನ್ಸ್ ಹಾಗೂ ಇನ್ನಿತರ ಪ್ರಮುಖ ಕಾರ್ಯಾಚರಣೆಗಳಲ್ಲಿ ಧ್ರುವ್ ನಿರತವಾಗಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಕೆಳಗಡೆಯೂ ಕೆಲಸ ನಿರ್ವಹಿಸಿರುವ ಧ್ರುವ್ ಹೆಲಿಕಾಪ್ಟರ್, ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯ ಪರಿಸ್ಥಿತಿಯಲ್ಲೂ ತನ್ನ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

2004 ಸುನಾಮಿ, 2011 ಸಿಕ್ಕಿಂ ಭೂಕಂಪ, 2010 ಲೇಹ್ ಪ್ರಳಯ, 2013 ಉತ್ತರ ಭಾರತ ಪ್ರಳಯ (ಉತ್ತರಾಖಂಡ), 2014 ಜಮ್ಮು ಮತ್ತು ಕಾಶ್ಮೀರ ಈಗ ನೇಪಾಳ ಪ್ರಬಲ ಭೂಕಂಪದಲ್ಲೂ ಅಕ್ಷರಶ: ಧ್ರುವ ತಾರೆಯಂತೆ ಶೋಭಿಸಿರುವ ಧ್ರುವ್ ಹೆಲಿಕಾಪ್ಟರ್ ತನ್ನ ಸೇವೆಯನ್ನು ಸಲ್ಲಿಸಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಭಾರತೀಯ ಸೇನೆ, ವಾಯು ಸೇನೆ ಜೊತೆಗೆ ನೌಕಾದಳ, ಕರಾವಳಿ ಕಾವಲು ಪಡೆ, ಗಡಿ ಭದ್ರತಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಧ್ರುವ್ ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಳ್ಳುತ್ತಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಗಂಟೆಗೆ 295 ಕೀ.ಮೀ.ಗಿಂತಲೂ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಧ್ರುವ್ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಹಿಮಾಲಯದ ಅತ್ಯಂತ ಎತ್ತರದ ಪರ್ವತ ಶಿಖರದಲ್ಲಿ ಟ್ರಕ್ಕಿಂಗ್ ಗೆ ತೆರಳಿದ 50ಕ್ಕೂ ಹೆಚ್ಚು ಸಾಹಸಿ ಯಾತ್ರಿಕರನ್ನು ಧ್ರುವ್ ಹೆಲಿಕಾಪ್ಟರ್ ಈಗಾಗಲೇ ರಕ್ಷಿಸಿದ್ದು, ಈಗಲೂ ನಿರಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಸಂಪೂರ್ಣವಾಗಿ ದೇಶೀಯ ವಿನ್ಯಾಸಿತ ಧ್ರುವ್ ಹೆಲಿಕಾಪ್ಟರ್ ಅನ್ನು ಮುಂದುವರಿದ ಹಗುರ ಹೆಲಿಕಾಪ್ಟರ್ (Advanced Light Helicopter) ತಂತ್ರಗಾರಿಕೆಯಲ್ಲಿ ರಚಿಸಲಾಗಿದ್ದು, ಟ್ವಿನ್ ಎಂಜಿನ್, ಬಹು ಕ್ರಿಯಾತ್ಮಕತೆ ಹಾಗೂ ಬಹು ಮಿಷನ್ ಗಳ ಗುರಿಯನ್ನು ಹೊಂದಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

5.5 ಟನ್ ಭಾರ ವಿಭಾಗದಲ್ಲಿ ಗುರುತಿಸಿಕೊಂಡಿರುವ ಧ್ರುವ್ ಹೆಲಿಕಾಪ್ಟರ್, ಎಂಕೆ I, ಎಂಕೆ II, ಎಂಕೆ III ಮತ್ತು ಎಂಕೆ IV(Mk I, MK II, MK III & Mk IV) ವೆರಿಯಂಟ್ ಗಳನ್ನು ಹೊಂದಿದೆ.

ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

15.9 ಮೀಟರ್ ಉದ್ದ, 13.2 ಮೀಟರ್ ಅಗಲ ಹಾಗೂ 4.98 ಮೀಟರ್ ಎತ್ತರವನ್ನು ಹೊಂದಿರುವ ಧ್ರುವ್ ಹೆಲಿಕಾಪ್ಟರ್ 640 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಪಾತ್ರ

ಪಾತ್ರ

  • ಮಿಲಿಟರಿ, ನಾಗರಿಕ
  • ವಿಐಪಿ ಪಯಣ,
  • ತುರ್ತು ಪರಿಹಾರ ಕಾರ್ಯಾಚರಣೆ,
  • ತುರ್ತು ಸೇನಾ ನೆಲೆ ಸ್ಥಾಪನೆ,
  • ಶೋಧನೆ,
  • ತರಬೇತಿ
ಮೃತ್ಯುಕೂಪದಿಂದ ನೇಪಾಳಿಯರನ್ನು ರಕ್ಷಿಸಿದ 'ಧ್ರುವ' ತಾರೆ

ಈಗ ಧ್ರುವ್ ಹೆಲಿಕಾಪ್ಟರ್ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

Read more on ವಿಮಾನ plane
English summary
HAL's Dhruv helicopter has played an important role in rescue missions in quake-hit Nepal.
Story first published: Saturday, May 2, 2015, 12:05 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more