ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

By Nagaraja

ಆಪ್ತಮಿತ್ರರಾಗಿರುವ ಸಿದ್ದಾರ್ಥ್ ಹಾಗೂ ಜೇಮ್ಸ್ ಕಾಲೇಜು ದಿನಗಳ ಬಳಿಕ ಪರಸ್ಪರ ಭೇಟಿಯಾಗಿರಲೇ ಇಲ್ಲ. ಆದರೆ 30ರ ಅಸುಪಾಸಿನ ಇವರಿಬ್ಬರು ಸದಾ ಸಂಪರ್ಕದಲ್ಲಿರುತ್ತಿದ್ದರು. ಹಾಗಿರುವಾಗ ತಮ್ಮ ಭೇಟಿಗೊಂದು ದಿನಾಂಕ ನಿಗದಿ ಮಾಡಿಯೇ ಬಿಟ್ಟರು.

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಉದ್ಯೋಗದ ಬಗ್ಗೆ ಮಾತನಾಡುವುದಾದರೆ ಸಿದ್ಧಾರ್ಥ್ ಸ್ವತಂತ್ರ ಮಾರ್ಕೆಟಿಂಗ್ ಸಲಹೆಗಾರನಾಗಿದ್ದರೆ ಜೇಮ್ಸ್ ಆಸ್ಟ್ರೇಲಿಯಾದಲ್ಲಿ ದಕ್ಷಿಣ ಭಾರತ ಉಪಹಾರ ಸೌಲಭ್ಯವಿರುವ ಹೋಟೆಲ್‌ವೊಂದನ್ನು ನೋಡಿಕೊಳ್ಳುತ್ತಿದ್ದಾರೆ. ಈ ಪೈಕಿ ಜೇಮ್ಸ್‌ಗೆ ವಾಹನಗಳ ಬಗ್ಗೆ ಅತೀವ ಕ್ರೇಜ್ ಹೊಂದಿದ್ದಾರೆ. ಅಲ್ಲದೆ ಸ್ಥಳೀಯವಾಗಿ ಏರ್ಪಡಿಸಲಾಗಿರುವ ರೇಸ್‌ಗಳಲ್ಲಿ ಭಾಗವಹಿಸಿದ ಅನುಭವ ಇದೆ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಇದೀಗ ಬಹಳ ವರ್ಷಗಳ ಭೇಟಿಯಾಗಿರುವ ಇವರಿಬ್ಬರು ಬೆಂಗಳೂರಿನಿಂದ ಪಾಂಡಿಚೇರಿಗೆ ಸಣ್ಣದಾದ ಹಾಲಿಡೇ ಪ್ರವಾಸ ಹಮ್ಮಿಕೊಂಡಿದ್ದರು.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದ ಸಿದ್ಧಾರ್ಥ್ ಸರ್ವೀಸ್ ರೋಡ್‌ನಿಂದ ನಿಧಾನವಾಗಿ ಹೈವೇಯತ್ತ ಮುನ್ನುಗ್ಗಿದ್ದರು. ಇದನ್ನು ಕಂಡ ಜೇಮ್ಸ್, ವೇಗವರ್ಧಿಸಲು ಸೂಚನೆ ನೀಡಿದರು.

ಏಕೆ?

ಹೆದ್ದಾರಿಯಲ್ಲಿ ಸರಾಸರಿ ವೇಗ ಕಾಯ್ದುಕೊಂಡರೆ ನೀವು ಹೆಚ್ಚು ಸುರಕ್ಷಿತವಾಗಿರಬಹುದು. ನಿಧಾನವಾಗಿ ಹೈವೇಗೆ ಎಂಟ್ರಿ ಕೊಡುವುದು ಅಪಾಯಕಾರಿ. ಯಾಕೆಂದರೆ ನಿಮ್ಮ ಹಿಂದುಗಡೆಯಿರುವ ವಾಹನಗಳು ಮುತ್ತಿಕ್ಕುವ ಸಾಧ್ಯತೆಯಿದೆ. ಹಾಗೆಯೇ ಅನಗತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿಸಬಹುದು.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಇದನ್ನರಿತ ಸಿದ್ಧಾರ್ಥ್, 'ಇದು ಇಂಡಿಯಾ ಕನೋ, ಇಲ್ಲಿ ವಿಭಿನ್ನವಾಗಿ ವಾಹನ ಚಲಾಯಿಸಬೇಕು. ನಿನದನ್ನು ಮರೆತು ಬಿಟ್ಟಿದೆಯಾ'? ಎಂದು ಮರು ಪ್ರಶ್ನೆ ಹಾಕಿದರು.

'ನನಗದು ಗೊತ್ತು. ಆದರೆ ಸುರಕ್ಷಿತ ಚಾಲನೆಗೆ ಆದ್ಯತೆ ಕೊಡುವುದರಿಂದ ಯಾವುದೇ ನಷ್ಟವಿಲ್ಲ ತಾನೇ'? ಎಂದು ಜೇಮ್ಸ್ ತಿಳಿಸಿದರು. ಹೌದು ಹೆದ್ದಾರಿಯಲ್ಲೂ ಸುರಕ್ಷಿತ ಚಾಲನೆಗೆ ಹೆಚ್ಚು ಒತ್ತು ಕೊಡಿರಿ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಅವರೀಗ ಬೆಂಗಳೂರಿನಿಂದ 70 ಕೀ.ಮೀ. ದೂರದ ಹೊರವಲಯಕ್ಕೆ ತಲುಪಿದ್ದರು. ಗಾಡಿಯನ್ನು ನೇರವಾಗಿ ಬದಿಗೆ ಸರಿಸಿದ ಸಿದ್ಧಾರ್ಥ್ ಕಾಫಿ ಹಾಗೂ ಸಿಗರೇಟ್ ಸೇದತೊಡಗಿದರು.

ಇನ್ನೊಂದೆಡೆ ಜೇಮ್ಸ್ ಸೀಟು ಹಾಗೂ ಮಿರರ್ ಸ್ಥಾನವನ್ನು ಸರಿಪಡಿಸಿದರು. ಹಾಗೆಯೇ ಹಿಂದಿನ ನೋಟಕ್ಕೆ ಅಡ್ಡಿಯಾಗುತ್ತಿರುವ ಬ್ಯಾಗನ್ನು ಸ್ಥಳಾಂತರಿಸಿದರು. ಈ ಬಾರಿ ಜೇಮ್ಸ್ ಸ್ಟೀರಿಂಗ್ ಹಿಡಿದರು. ಅಲ್ಲದೆ ಗಂಟೆಗೆ 80 ಕೀ.ಮೀ. ವೇಗದಲ್ಲಿ ಯಾವುದೇ ತೊಂದರೆಯಿಲ್ಲದೇ ಲೇನ್ ಪಾಲಿಸಿ ಮುಂದಕ್ಕೆ ಸಾಗಿದರು. ಈ ಸಂದರ್ಭದಲ್ಲಿ ಎಡ ಬದಿಯಲ್ಲಿ ಟ್ರಕ್‌ವೊಂದು ಎದುರಾಯಿತು.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಟ್ರಕ್ ಹಾಗೂ ಬಸ್ ಬರುವಾಗ ನಿಮ್ಮ ಎಡಬದಿಯ ಲೈಟ್ ಫ್ಲ್ಯಾಶ್ ಮಾಡುತ್ತೀರಾ? ಜೇಮ್ಸ್ ವಿಚಾರಿಸಿದರು. ಇದಕ್ಕೆ ಪ್ರತಿಯಾಗಿ ಸಿದ್ಧಾರ್ಥ್ ಇಲ್ಲ ಎಂದರು.

ಹೀಗೆ ಮಾಡುವುದರಿಂದ ನಿಮ್ಮ ವಾಹನ ಸಮೀಪಿಸುವುದನ್ನು ಚಾಲಕ ಮನಗಾನುವರು. ಯಾಕೆಂದರೆ ಟ್ರಕ್ ಅಥವಾ ಬಸ್ ಕ್ಯಾಬಿನ್ ಒಳಗಡೆ ಹೆಚ್ಚು ಶಬ್ದವಿರುವುದರಿಂದ ಕೆಲವೊಮ್ಮೆ ನಿಮ್ಮ ಹಾರ್ನ್ ಆಲಿಸಲು ಚಾಲಕರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಹೆದ್ದಾರಿಯಲ್ಲಿ ಹೆಡ್‌ಲೈಟ್ ಫ್ಲ್ಯಾಶ್ ಮಾಡುವುದು ಉತ್ತಮ ಅಭ್ಯಾಸವಾಗಿದೆ. ನೆನಪಿರಲಿ ಮುಂದಿನ ವಾಹನದ ರಿಯರ್ ವ್ಯೂ ಕಾಣಿಸಿದಾಗ ಮಾತ್ರ ಹೀಗೆ ಮಾಡುವುದು ಒಳಿತು. ಇಲ್ಲದಿದ್ದಲ್ಲಿ ನಿಮ್ಮ ಸಾನಿಧ್ಯ ಅರಿಯುವುದು ಕಷ್ಟ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಇದು ನಿಜಕ್ಕೂ ಅರ್ಥಪೂರ್ಣವಾಗಿದೆ. ಹಾಗಿರಬೇಕೆಂದರೆ ಅವರಿಬ್ಬರಿಗೆ ಕಾರಿನ ಕೆಳಸ್ತರ ಏನೋ ತಟ್ಟಿದ ಶಬ್ದ ಕೇಳಿಸಿತ್ತು. ಗಂಟೆಗೆ 80ರ ಕೀ.ಮೀ. ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಆವಾಗಲೇ ಸ್ಪೀಡ್‌ಬ್ರೇಕರ್‌ಗೆ ಬಡಿದಿತ್ತು. ಆದರೆ ಯಾವುದೇ ಅಪಾಯವಿಲ್ಲ. ತಪ್ಪನ್ನು ಅರಿತ ಜೇಮ್ಸ್ ಕ್ಷಮಿಸು, ನಾನದನ್ನು ಆರಂಭದಲ್ಲೇ ಗ್ರಹಿಸಬೇಕಾಗಿತ್ತು. ಹಾಗಾಗಿ ಸ್ಪೀಡ್ ಬ್ರೇಕರ್ ಎದುರಾದ್ದಲ್ಲಿ ವಾಹನ ನಿಧಾನ ಮಾಡಲು ಮರೆಯದಿರಿ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಅವರಿಬ್ಬರು ಮತ್ತೆ ಚಾಲನೆ ಆರಂಭಿಸಿದರು. ಪ್ರತಿ ವಾಹನವನ್ನು ಓವರ್‌ಟೇಕ್ ಮಾಡಿದ ಬಳಿಕ ಜೇಮ್ಸ್ ಗೇರ್ ಕಡಿಮೆ ಮಾಡುತ್ತಿರುವುದನ್ನು ಸಿದ್ಧಾರ್ಥ್ ಗಮನಿಸಿದರು. ಇದು ಅಗತ್ಯವೇ? ಕಾರಿನ ಮೈಲೇಜ್ ಕಡಿಮೆಯಾಗುವುದಲ್ಲವೇ?

ಹೆದ್ದಾರಿಗಳಲ್ಲಿ ಹೇಗಿದ್ದರೂ ನೀವು ಉತ್ತಮ ಇಂಧನ ಕ್ಷಮತೆ ಪಡೆದುಕೊಳ್ಳಬಹುದು. ಹಾಗಾಗಿ ಮೊದಲು ಸುರಕ್ಷತೆ ಆದ್ಯತೆ ಕೊಡಿ. ಹೀಗೆ ಮಾಡುವುದರಿಂದ ತ್ವರಿತ ಹಾಗೂ ನಿರ್ಣಾಯಾತ್ಮಕ ಓವರ್‌ಟೇಕಿಂಗ್ ತೆಗೆದುಕೊಳ್ಳಬಹುದಾಗಿದೆ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಸದ್ಯ ಜೇಮ್ಸ್ ಸುಗಮ ಚಾಲಕ ಎಂಬುದನ್ನು ಸಿದ್ಧಾರ್ಥ್ ಮನವರಿಕೆ ಮಾಡಿಕೊಂಡರು. ಅತಿ ವೇಗದ ಹೊರತಾಗಿಯೂ ಲೇನ್ ಬದಲಾಯಿಸುವಾಗ ಸೂಚನೆ ನೀಡುತ್ತಿದ್ದರು. ಅಲ್ಲದೆ ಸಡನ್ ಬ್ರೇಕ್‌ನ ಗೋಜಿಗೆ ಹೋಗುತ್ತಿರಲಿಲ್ಲ. ಹಾಗೆಯೇ ಐದು ಕಾರುಗಳ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರು. ಇದು ಜೇಮ್ಸ್ ನಿಖರ ಚಾಲನೆಯನ್ನು ಗುರುತಿಸುವಂತಿತ್ತು.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಸದ್ಯ ಚೆಂಗಮ್ ಹೊರವಲಯ ತಲುಪಿದಾಗ ಜೋರಾಗಿ ಹಸಿವಿನ ಅನುಭವವಾಗಿ ಬಿರಿಯಾನಿ ತಿನ್ನುವ ಆಸೆ ಮೂಡಿತು. ಜೇಮ್ಸ್ ಗಾಡಿ ನಿಧಾನಗೊಳಿಸಿ ಹಜಾರ್ಡ್ ಲೈಟ್ ಆನ್ ಮಾಡಿ ಕಾರ್ ಪಾರ್ಕ್ ಮಾಡಿದರು.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಮುಂದಿನ ಎರಡು ಗಂಟೆಗಳಷ್ಟು ಪಯಣ ತುಂಬಾ ಇಕ್ಕಟ್ಟಿನ ಇಕ್ಕಟ್ಟಿನಿಂದ ಕೂಡಿದ್ದಾಗಿತ್ತು. ವಿಪರೀತ ವಾಹನ ದಟ್ಟಣೆಯಿಂದಾಗಿ ಓವರ್‌ಟೇಕಿಂಗ್ ಮಾಡುವುದು ಕಷ್ಟದ ವಿಚಾರವಾಗಿತ್ತು. ಹಾಗಿದ್ದರೂ ಜೇಮ್ಸ್ ತಮ್ಮ ಇಚ್ಛಾಶಕ್ತಿ ನಷ್ಟವಾಗದೆ ಶಾಂತಚಿತ್ತ ಹಾಗೂ ಸಂಯೋಜನೆಯಿಂದ ಸಂಗೀತ ಆಲಿಸುತ್ತಾ ನಿಧಾನ ಗತಿಯನ್ನು ಪಾಲಿಸಿದರು. ಅಲ್ಲದೆ ಯಾವುದೇ ಹಾರ್ನ್ ಗೋಜಿಗೆ ಹೋಗಲಿಲ್ಲ.

ನಮಗೆ ವೇಗವಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬಳಿಕ ಸುಮ್ ಸುಮ್ನೇ ಹಾರ್ನ್ ಹೊಡೆಯುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಕೆಲವೊಂದು ಬಾರಿ ಹೈವೇಗಳಲ್ಲೂ ವಾಹನ ದಟ್ಟಣೆ ಸಂಭವಿಸುವ ಸಾಧ್ಯತೆಯಿದೆ ಎಂಬುದನ್ನು ಮನಗಾಣಬೇಕಾಗಿದೆ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಆವಾಗಲೇ ಸಂಜೆಯ ವೇಳೆಯಾಗಿತ್ತು. ಸೂರ್ಯ ನಿಧಾನವಾಗಿ ಸ್ಲೀಪಿಂಗ್ ಮೋಡ್‌ನತ್ತ ಬದಲಾಗುತ್ತಿದ್ದರು. ಪಾಂಡಿಚೇರಿಗಂತೂ ಇನ್ನು ಒಂದು ತಾಸಿನ ದೂರವಿದೆ. ಜೇಮ್ಸ್ ಆವಾಗಲೇ ಪಾರ್ಕಿಂಗ್ ಲೈಟ್ ಆನ್ ಮಾಡಿಬಿಟ್ಟರು. ಗೋಚರ ಕಡಿಮೆಯಿರುವುದರಿಂದ ಮುಸ್ಸಂಜೆಯಲ್ಲಿ ಚಾಲನೆ ಮಾಡುವುದು ತುಂಬಾ ಸವಾಲಿನ ವಿಷಯ. ನಮ್ಮ ದೇಶದಲ್ಲಿ ಬಹುತೇಕ ಎಲ್ಲ ಚಾಲಕರು ಲೈಟ್ ಆನ್ ಮಾಡಲು ಸಂಪೂರ್ಣ ಕತ್ತಲು ಆವರಿಸಲು ಕಾಯುತ್ತಾರೆ. ಆದರೆ ಇದು ತಪ್ಪಾದ ಪ್ರವೃತ್ತಿಯಾಗಿದ್ದು, ನಿಮ್ಮ ಸಾನಿಧ್ಯವನ್ನು ಇತರರು ಗುರುತಿಸಬೇಕಾಗಿದೆ.

ರಾತ್ರಿ ವೇಳೆ ಪಯಣವನ್ನು ತಪ್ಪಿಸುವುದು ಇಬ್ಬರ ಇರಾದೆಯಾಗಿತ್ತಾದರೂ ಅವರಿಗೀಗ ಬೇರೆ ಮಾರ್ಗವೇ ಇಲ್ಲ. ಆದರೆ ಪಾಂಡಿಚೇರಿ ಇನ್ನು ಕೆಲವೇ ಕೀ.ಮೀ.ಗಳಷ್ಟೇ ದೂರವಿರುವುದು ಅವರ ಸಂತಸಕ್ಕೆ ಕಾರಣವಾಗಿತ್ತು. ಯಾಕೆಂದರೆ ಇಬ್ಬರು ತುಂಬಾನೇ ಆಯಾಸಗೊಂಡಿದ್ದರು.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ

ಕೊನೆಗೂ ಸುರಕ್ಷಿತ ಚಾಲನೆಯಿಂದಾಗಿ ಸಿದ್ಧಾರ್ಥ್ ಹಾಗೂ ಜೇಮ್ಸ್ ಪಾಂಡಿಚೇರಿ ತಲುಪಿದರು. ನೇರವಾಗಿ ಬಾರ್‌ಗೆ ತೆರಳಿದ ಅವರು ಟೇಬಲ್‌ನಲ್ಲಿ ಕುಳಿತುಕೊಂಡು ಒಂದು ಸಿಪ್ ಬೀರ್ ಹಾಕತೊಡಗಿದರು. ಈ ವೇಳೆ ಸಿದ್ಧಾರ್ಥ್, ಜೇಮ್ಸ್ ಚಾಲನಾ ಕೌಶಲ್ಯವನ್ನು ಪ್ರಶಂಸಿಸಿದರಲ್ಲದೆ ಸುರಕ್ಷತೆಗೆ ನೀಡುವ ಆದ್ಯತೆಯನ್ನು ಇನ್ನು ಮುಂದೆ ತಾವು ಪಾಲಿಸುವುದಾಗಿ ಮಾತು ಕೊಟ್ಟರು.

ರೇಸ್ ಟ್ರ್ಯಾಕ್‌ನಲ್ಲಿ ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಚಾಲನೆ ಮಾಡುವುದಕ್ಕೆ ಅಜ ಗಜಾಂತರ ವ್ಯತ್ಯಾಸವಿದೆ. ಸಾರ್ವಜನಿಕ ರಸ್ತೆ ಅಥವಾ ಹೆದ್ದಾರಿಗಳಲ್ಲಿ ಅಸಾಮಾನ್ಯ ವೇಗದಲ್ಲಿ ಚಲಿಸಿದರೆ ಹೆಚ್ಚು ಅಪಾಯಕಾರಿ. ಈ ಎಲ್ಲ ವಿಚಾರಗಳನ್ನು ಸಿದ್ಧಾರ್ಥ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಜೇಮ್ಸ್ ಯಶಸ್ವಿಯಾಗಿದ್ದರು.

Most Read Articles

Kannada
English summary
Highway Driving Tips - Sid And James Take A Road Trip
Story first published: Wednesday, June 11, 2014, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X