Just In
- 5 min ago
ಇದೇ ತಿಂಗಳ 13ರಂದು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಪುನಾರಂಭಿಸಲಿದೆ ಬಜಾಜ್
- 35 min ago
ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ
- 2 hrs ago
ಚೀನಾ ಕಂಪನಿಗಳಿಗೆ ಪೈಪೋಟಿ ನೀಡಲಿದೆ ಕರ್ನಾಟಕದಲ್ಲಿ ಸ್ಥಾಪನೆಯಾದ ಈ ಇವಿ ಬ್ಯಾಟರಿ ನಿರ್ಮಾಣ ಕಂಪನಿ
- 2 hrs ago
ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್ಲೈನ್ ಕಾರು
Don't Miss!
- News
ಮಂಗಳೂರಿನಲ್ಲಿ ರಾತ್ರಿ ಕರ್ಫ್ಯೂ: ರಸ್ತೆಗೆ ಬಂದ್ರೆ ವಾಹನ ಜಪ್ತಿ; ಪೊಲೀಸ್ ಆಯುಕ್ತ
- Finance
ಅಲಿಬಾಬಾ ಕಂಪನಿಗೆ ಶಾಕ್ ನೀಡಿದ ಚೀನಾ ಸರ್ಕಾರ: 20,000 ಕೋಟಿ ರೂಪಾಯಿ ದಂಡ
- Movies
ಶ್ರೇಯಸ್-ನಂದ ಕಿಶೋರ್ ಚಿತ್ರಕ್ಕೆ ರೀಷ್ಮಾ ನಾನಯ್ಯ ನಾಯಕಿ
- Sports
ಇದು ಗುರು ಮತ್ತು ಚೇಲನ ಕಾದಾಟ ಎಂದ ರವಿ ಶಾಸ್ತ್ರಿ
- Education
KSET 2021 Postponed: ನಾಳೆ ನಡೆಯಬೇಕಿದ್ದ ಕೆಸೆಟ್ ಪರೀಕ್ಷೆ ಮುಂದೂಡಿಕೆ
- Lifestyle
ಬೇಸಿಗೆಯಲ್ಲಿ ಕೂದಲು ಉದುರಲು ಕಾರಣಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕನ್ನಡಿಗ ಸಿಎಸ್ ಸಂತೋಷ್ ಈಗ ಹೇಗಿದ್ದಾರೆ?
ವಿಶ್ವದ ಅಪಾಯಕಾರಿ ಮೋಟಾರ್‌ಸ್ಪೋರ್ಟ್ಸ್‌ಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯ 2021ರ ಆವೃತ್ತಿಯನ್ನು ಕಳೆದ ಜನವರಿಯಲ್ಲಿ ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿತ್ತು. 43ನೇ ಡಕಾರ್ ರ್‍ಯಾಲಿಯಲ್ಲಿ ಭಾರತದಿಂದ ಹೀರೋ ಮೋಟೊಸ್ಪೋರ್ಟ್ ಪ್ರತಿನಿಧಿಸಿದ್ದ ಕನ್ನಡಿಗ ಸಿಎಸ್ ಸಂತೋಷ್ ಅವರು ಸ್ಪರ್ಧೆಯ ವೇಳೆ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು.

ತೀವ್ರವಾಗಿ ಗಾಯಗೊಂಡರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದ ಸಿಎಸ್ ಸಂತೋಷ್ ಅವರು ಸುಮಾರು ಎರಡೂವರೆ ತಿಂಗಳ ಆರೈಕೆ ನಂತರ ಇದೀಗ ಆರೋಗ್ಯದಲ್ಲಿ ತುಸು ಸುಧಾರಣೆ ಕಂಡುಕೊಂಡಿದ್ದಾರೆ. 2021ರ ಡಕಾರ್ ರ‍್ಯಾಲಿಯ 4ನೇ ಸುತ್ತಿನ ರೈಡಿಂಗ್ ವೇಳೆ ಮರಳುಗಾಡಿನಲ್ಲಿ ಕಲ್ಲುಬಂಡೆಯೊಂದಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದ್ದ ಸಿಎಸ್ ಸಂತೋಷ್ ಅವರು ಪ್ರಜ್ಞಾಹೀನರಾಗಿ ಬಿದ್ದಿದ್ದರು. ತಕ್ಷಣವೇ ಘಟನಾ ಸ್ಥಳದಿಂದಲೇ ಏರ್‌ಲಿಫ್ಟ್ ಮಾಡಿದ್ದ ಆಯೋಜಕ ತಂಡವು ರಿಯಾದ್ ನಗರದಲ್ಲಿನ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.

ಕೋಮಾ ಸ್ಥಿತಿಯಲ್ಲಿದ್ದ ಸಿಎಸ್ ಸಂತೋಷ್ ಅವರ ತಲೆಗೆ ಮತ್ತು ಬಲಭುಜಕ್ಕೆ ತೀವ್ರ ಪೆಟ್ಟುಬಿದ್ದಿದ್ದರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಸುಮಾರು 15 ದಿನಗಳ ಕಾಲ ಸಿಸಿಯು(ಕ್ರಿಟಿಕಲ್ ಕೇರ್ ಯುನಿಟ್)ನಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಬೆಂಗಳೂರಿಗೆ ವಿಶೇಷ ಏರ್ ಆ್ಯಂಬುಲೆನ್ಸ್ ಮೂಲಕ ಕರೆತಂದು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಸುಮಾರು ಎರಡೂವರೆ ತಿಂಗಳ ಕಾಲ ಕುಟುಂಬಸ್ಥರ ಆರೈಕೆಯೊಂದಿಗೆ ಚೇತರಿಸಿಕೊಂಡಿರುವ ಸಿಎಸ್ ಸಂತೋಷ್ ಅವರಿಗೆ ತಲೆಗೆ ತೀವ್ರ ಬಿದ್ದಿರುವ ಪರಿಣಾಮ ತುಸು ನೆನಪಿನ ಶಕ್ತಿ ಕುಂದಿದೆ ಎನ್ನಲಾಗಿದೆ.

ಅಪಘಾತವಾದ ಸುಮಾರು 15 ದಿನಗಳ ಕಾಲ ಯಾರನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಸಿಎಸ್ ಸಂತೋಷ್ ಅವರು ಹಲವಾರು ವೈದ್ಯಕೀಯ ಪ್ರಯತ್ನಗಳ ನಂತರ ಮೊದಲ ಬಾರಿಗೆ ಅವರ ತಾಯಿಯನ್ನು ಗುರುತಿಸಿದ್ದರು. ಘಟನೆ ಕುರಿತಂತೆ ಈಗಲೂ ಅಚ್ಚರಿ ವ್ಯಕ್ತಪಡಿಸುವ ಸಿಎಸ್ ಸಂತೋಷ್ ಅವರು ರ‍್ಯಾಲಿಯಲ್ಲಿ ಭಾಗವಹಿಸಿದ ಹಿಂದಿನ ದಿನದ ವರೆಗಿನ ಘಟನೆಗಳನ್ನು ಮಾತ್ರ ನೆನಪಿಸಿಕೊಳ್ಳುತ್ತಿದ್ದಾರೆ.

ಆದರೆ ಅಪಘಾತದ ನಂತರ ನಡೆದ ವಿದ್ಯಮಾನಗಳ ಬಗೆಗೆ ಅಚ್ಚರಿ ವ್ಯಕ್ತಪಡಿಸುತ್ತಿರುವ ಸಿಎಸ್ ಸಂತೋಷ್ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಸಿಎಸ್ ಸಂತೋಷ್ ತಂದೆ ಶಿವಶಂಕರ್ ಮತ್ತು ತಾಯಿ ಚಂದ್ರಕಲಾ ಅವರು ತಮ್ಮ ಮಗನ ಆರೋಗ್ಯ ಚೇತರಿಕೆ ಕುರಿತು ಇಎಸ್‌ಪಿನ್ ಕ್ರಿಡಾ ಸುದ್ದಿವಾಹಿನಿಯೊಂದಿಗೆ ಹಲವಾರು ಅಚ್ಚರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಮಗನ ಆರೋಗ್ಯ ಚೇತರಿಕೆ ಬಗೆಗೆ ಗಮನಹರಿಸಿರುವ ಸಿಎಸ್ ಸಂತೋಷ್ ಪೋಷಕರು ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಕುಂದಿರುವ ನೆನಪಿನ ಶಕ್ತಿಯು ಸರಿಹೋಗಲು ಇನ್ನು ಕೆಲವು ತಿಂಗಳ ಕಾಲ ಅವಶ್ಯವಿದೆ ಎಂದಿದ್ದಾರೆ.

ಇನ್ನು ಡಕಾರ್ ರ‍್ಯಾಲಿಯಲ್ಲಿ ಸಿಎಸ್ ಸಂತೋಷ್ ಅವರು ಉತ್ತಮ ಪ್ರದರ್ಶನ ನೀಡಬಹುದೆಂಬ ನೀರಿಕ್ಷೆಯಲ್ಲಿದ್ದ ಅಭಿಮಾನಿಗಳಲ್ಲಿ ಅನಿರೀಕ್ಷಿತ ಘಟನೆಯು ಆಘಾತ ಉಂಟು ಮಾಡಿತ್ತು. ನೆಚ್ಚಿನ ರೈಡರ್ ಕೌಶಲ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಲಕ್ಷಾಂತರ ಅಭಿಮಾನಿಗಳು ಸಿಎಸ್ ಸಂತೋಷ್ ಆರೋಗ್ಯ ಚೇತರಿಕೆಗೆ ಶುಭ ಹಾರೈಸಿದ್ದರು.

ಜನವರಿ 3ರಿಂದ 15ರ ತನಕ ಆಯೋಜಿಸಲಾಗಿದ್ದ 2021ರ ಡಕಾರ್ ರ‍್ಯಾಲಿಯು ಒಟ್ಟು 12 ಹಂತಗಳಲ್ಲಿ 7,646 ಕಿ.ಮೀ ರೈಡಿಂಗ್ ಅಂತರವನ್ನು ಒಳಗೊಂಡಿದ್ದು, ರ‍್ಯಾಲಿಯ ಮೊದಲ ಮೂರು ಹಂತಗಳಲ್ಲಿ ಅತ್ಯುತ್ತನ ಪ್ರದರ್ಶನ ತೋರಿದ್ದ ಸಿಎಸ್ ಸಂತೋಷ್ ಅವರು ನಾಲ್ಕನೇ ಹಂತವು ಆರಂಭವಾದ ಕೆಲವೇ ಗಂಟೆಗಳಲ್ಲಿ ಅಪಘಾತಕ್ಕೀಡಾಗಿದ್ದರು.

ಸತತ ಐದು ವರ್ಷಗಳಿಂದ ಹೀರೋ ಮೋಟೋಸ್ಪೋರ್ಟ್ ತಂಡವನ್ನು ಪ್ರತಿನಿಧಿಸುತ್ತಿರುವ ಸಿಎಸ್ ಸಂತೋಷ್ ಕಳೆದ ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಈ ವರ್ಷದ ರ‍್ಯಾಲಿಯಲ್ಲಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದರು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಕಳೆದ ಆವೃತ್ತಿಗಳಲ್ಲಿ ಹಿನ್ನಡೆಗಳನ್ನು ಅರಿತಿದ್ದ ಸಿಎಸ್ ಸಂತೋಷ್ ಅವರು 43ನೇ ಆವೃತ್ತಿಯ ಪ್ರಶಸ್ತಿ ಗೆಲ್ಲುವ ಮಹತ್ವಾಂಕ್ಷಿಯೊಂದಿಗೆ ಕಳೆದ ವರ್ಷದ ಯುರೋಪ್‌ನಲ್ಲಿ ಸುಮಾರು ಆರು ತಿಂಗಳು ಕಾಲ ಕಠಿಣ ತಾಲೀಮು ನಡೆಸಿದ್ದರು.

ಆದರೆ ರ‍್ಯಾಲಿ ಆರಂಭದಲ್ಲಿ ನಡೆದ ಘಟನೆಯು ಹೀರೋ ಮೋಟಾರ್‌ಸ್ಪೋರ್ಟ್ ತಂಡಕ್ಕೆ ಭಾರೀ ಹಿನ್ನಡೆ ಉಂಟುಮಾಡಿತು. ಆದರೂ ತಂಡದ ಹಿರಿಯ ಸ್ಪರ್ಧಿಯ ಅನುಪಸ್ಥಿತಿಯಲ್ಲೂ ಹೀರೋ ಮೋಟಾರ್‌ಸ್ಪೋರ್ಟ್ ತಂಡದ ಇನ್ನುಳಿದ ಇಬ್ಬರು ರೈಡರ್‌ಗಳು ಟಾಪ್ 20ರಲ್ಲಿ ಮಿಂಚಿದರು.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

2021ರ ಡಕಾರ್ ರ‍್ಯಾಲಿಯಲ್ಲಿ ರೇಸ್ ಎಡಿಷನ್‌ನಲ್ಲಿರುವ 108 ವಿವಿಧ ಮಾದರಿಯ ಬೈಕ್ ಮಾದರಿಗಳು, 21 ಕ್ವಾಡ್ರಿಸೈಕಲ್, 124 ರೇಸ್ ಕಾರುಗಳು ಮತ್ತು 42 ರೇಸ್ ಟ್ರಕ್‌ಗಳು ಭಾಗಿಯಾಗಿದ್ದವು. ಒಟ್ಟು 7,646 ಕಿ.ಮೀ ಅಂತರದಲ್ಲಿ 4,767 ಕಿ.ಮೀ ಪ್ರಯಾಣವು ವಿಶೇಷ ವಿಭಾಗವಾಗಿತ್ತು. ರೈಡಿಂಗ್ ಮಾರ್ಗವು ಸಂಪೂರ್ಣವಾಗಿ ಮರಳು ಮತ್ತು ಕಲ್ಲು ಮಿಶ್ರಿತ ಮಣ್ಣಿನ ಮಾರ್ಗಗಳನ್ನು ಒಳಗೊಂಡಿರುತ್ತದೆ.

ವಿಶೇಷ ಮಾರ್ಗದಲ್ಲಿ ಕಠಿಣ ಸವಾಲುಗಳನ್ನು ಎದುರಿಸುವ ರೈಡರ್‌ಗಳಲ್ಲಿ ಅತಿಯಾದ ಮರಳು ಮಿಶ್ರಿತ ಧೂಳು ಭಾರೀ ಸವಾಲು ಒಡ್ಡುತ್ತದೆ. ಹೀಗಾಗಿ ಹಲವಾರು ಸವಾಲುಗಳನ್ನು ನುಗ್ಗಿ ಬರುವುದೇ ಡಕಾರ್ ರ‍್ಯಾಲಿಯ ವಿಶೇಷವಾಗಿದ್ದು, ಇಂತಹ ಕಠಿಣ ಸ್ಪರ್ಧೆಯಲ್ಲಿ ಸಿಎಸ್ ಸಂತೋಷ್ ಮಿಂಚಿರುವುದೇ ಕನ್ನಡಿಗರ ಹೆಮ್ಮೆ ಎನ್ನಬಹುದು. ಸದ್ಯ ಚೇತರಿಕೆ ಹಾದಿಯಲ್ಲಿರುವ ಸಿಎಸ್ ಸಂತೋಷ್ ಅವರು ಶೀಘ್ರದಲ್ಲೇ ಪೂರ್ತಿಯಾಗಿ ಗುಣಮುಖರಾಗಲಿ ಎಂದು ಹಾರೈಸೋಣ.