ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿರಲಿದೆ ಗೊತ್ತಾ?

Written By:

ವಾಣಿಜ್ಯ ಉದ್ದೇಶಗಳಿಂದಾಗಿ ಬೆಂಗಳೂರು- ಚೆನ್ನೈ ನಡುವೆ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಮತ್ತು ಚೆನ್ನೈ ನಡುವೆ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಹೊಸ ಮಾರ್ಗವು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯಗಳನ್ನು ಹೊಂದಿರಲಿದೆ.

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಸುಮಾರು 400 ಕಿ.ಮೀ ದೂರದ ಯೋಜನೆ ಇದಾಗಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬರೋಬ್ಬರಿ 2,700 ಹೆಕ್ಟರ್ ಖಾಸಗಿ ಭೂಮಿಯನ್ನು ಖರೀದಿಸಿದ್ದು, ಮಹತ್ವದ ಯೋಜನೆಗೆ ಅಡಿಗಲ್ಲು ಹಾಕಿದೆ.

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಹೀಗಾಗಿ ಬೆಂಗಳೂರು ಮತ್ತು ಚೆನ್ನೈ ನಡುವಿನ ಹೊಸ ರಸ್ತೆ ಮಾರ್ಗವು ಮುಂದಿನ 3 ವರ್ಷಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದ್ದು, ಬೃಹತ್ ಯೋಜನೆ ಬಗ್ಗೆ ಕೆಲ ಮಹತ್ವದ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಆರು ಪಥದ ರಸ್ತೆ

ಬೆಂಗಳೂರು-ಚೆನ್ನೈ ನಡುವಿನ ಕಾರಿಡಾರ್‌ ರಸ್ತೆ ಆರು ಫಥ ರಸ್ತೆಯಾಗಿದ್ದು, ಗಂಟೆಗೆ 120 ಕಿ.ಮೀ ವೇಗದ ಮಿತಿಯಲ್ಲಿ ಯೋಜನೆ ರೂಪಿಸಲಾಗಿದೆ. ಇದರಲ್ಲಿ 80 ಬೃಹತ್‌ ಸೇತುವೆಗಳು, 103 ಕಿರು ಸೇತುವೆಗಳು ನಿರ್ಮಾಣವಾಗಲಿವೆ.

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆ, ಸೀಮಾಂದ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ವೆಲ್ಲೂರು, ಕಾಂಚಿಪುರಂ, ತಿರುವಲ್ಲೂರು ಜಿಲ್ಲೆಗಳಲ್ಲಿ ಎಕ್ಸ್‌ಪ್ರೆಸ್‌ ವೇ ಹಾದುಹೋಗಲಿದ್ದು, ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ಆರಂಭವಾಗಿ ತಮಿಳುನಾಡಿನ ಚೆನ್ನೈ ಸಮೀಪದ ಪೆರಂಬೂರು ಬಳಿ ಅಂತ್ಯವಾಗಲಿದೆ.

Recommended Video - Watch Now!
Horrifying Footage Of A Cargo Truck Going In Reverse, Without A Driver - DriveSpark
ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಇಡೀ ಎಕ್ಸ್‌ಪ್ರೆಸ್‌ ವೇ ವಿಶ್ವದರ್ಜೆಯ ಸೌಕರ್ಯಗಳನ್ನು ಹೊಂದಲಿದ್ದು, ಬೃಹತ್ ಯೋಜನೆಗಾಗಿ ಅಂದಾಜು 8 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಿಂದಾಗಿ ಹೊಸ ಮಾರ್ಗವು ಸಂಪೂರ್ಣ ಟೋಲ್‌ ಸಂಗ್ರಹದ ರಸ್ತೆಯಾಗಿರಲಿದೆ.

ತಪ್ಪದೇ ಓದಿ-ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಇದರೊಂದಿಗೆ ಹೊಸ ಎಕ್ಸ್‌ಪ್ರೆಸ್‌ವೇನ ಅಕ್ಕಪಕ್ಕದಲ್ಲಿ ಔದ್ಯೋಗಿಕ ಕಾರಿಡಾರ್‌ ಕೂಡಾ ನಿರ್ಮಾಣವಾಗಲಿದ್ದು, ವಾಣಿಜ್ಯ ಚಟುವಟಿಕೆಗಳಿಗೆ ಪೂರಕವಾಗಿ ರಸ್ತೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ಇತರೆ ಹೆದ್ದಾರಿಗಳಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಜೊತೆಗೆ ಹೊಸ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಪ್ರಯಾಣದ ಅವಧಿ ಕಡಿತಗೊಳಿಸುವ ಜತೆಗೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಲಿದ್ದು, ವಿಶ್ವದರ್ಜೆಯ ರಸ್ತೆಗಳು ಇಂಧನ ಉಳಿತಾಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Important Things To Know About Chennai- Bangalore Expressway.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark