ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

Written By:

ದೇಶವು ಅಭಿವೃದ್ಧಿಗೊಳ್ಳುತ್ತಿದ್ದಂತೆ ಮಿಲಿಟರಿ ಪಡೆಯು ಆಧುನಿಕರಣಗೊಳ್ಳುತ್ತಿದ್ದು, ಅತ್ಯಾಧುನಿಕ ಯುದ್ಧ ಸಾಮಗ್ರಿ ಖರೀದಿ ಜೋರಾಗಿದೆ. ಜೊತೆಗೆ ಮುಂದುವರೆದ ರಾಷ್ಟ್ರಗಳಿಂತ ಭಾರತ ಒಂದು ಹೆಜ್ಜೆ ಮುಂದಿಟ್ಟಿದ್ದು, ಅತಿ ಹೆಚ್ಚು ವೆಚ್ಚ ಮಾಡುವ ದೇಶಗಳ ಪಟ್ಟಿಯಲ್ಲಿ ಟಾಪ್ 5ನೇ ಸ್ಥಾನ ಪಡೆದಿದೆ.

To Follow DriveSpark On Facebook, Click The Like Button
ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಸಂಶೋಧನಾ ವರದಿಯಲ್ಲಿ ಏನಿದೆ?

ಮಿಲಿಟರಿಗಾಗಿ ಅತಿಹೆಚ್ಚು ವೆಚ್ಚ ಮಾಡುವ ರಾಷ್ಟ್ರಗಳ ಬಗ್ಗೆ ಯೂರೋಪಿನ ಹೆಸರಾಂತ ಶಾಂತಿ ಸಂಶೋಧನಾ ಸಂಸ್ಥೆ ಸ್ಪಾಕ್ ಹೋಂ ಅಧ್ಯಯನ ಮಾಡಿದ್ದು, ಮಹತ್ವದ ವರದಿಯೊಂದನ್ನು ಪ್ರಕಟಗೊಳಿಸಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

5ನೇ ಸ್ಥಾನದಲ್ಲಿ ಭಾರತ

ಮಿಲಿಟರಿ ಪಡೆಗಳಿಗಾಗಿ ಅತಿಹೆಚ್ಚು ವೆಚ್ಚ ಮಾಡುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಐದನೇ ಸ್ಥಾನ ಪಡೆದುಕೊಂಡಿದ್ದು, ಕಳೆದ ವರ್ಷ ರೂ. 3.54 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

4ನೇ ಸ್ಥಾನದಲ್ಲಿ ಸೌದಿ ಅರೇಬಿಯಾ

ಸೇನಾಪಡೆಗಳಿಗಾಗಿ ಅತಿಹೆಚ್ಚು ವೆಚ್ಚ ಮಾಡುವ ಪಟ್ಟಿಯಲ್ಲಿ ಸೌದಿ ಅರೇಬಿಯಾ 4ನೇ ಸ್ಥಾನ ಪಡೆದುಕೊಂಡಿದ್ದು, 2016ನೇ ಸಾಲಿನಲ್ಲಿ ಮಿಲಿಟರಿ ಅಗತ್ಯಗಳಿಗಾಗಿ ರೂ. 4.05 ಲಕ್ಷ ಕೋಟಿ ವ್ಯಯ ಮಾಡಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

3ನೇ ಸ್ಥಾನದಲ್ಲಿ ರಷ್ಯಾ

ರಷ್ಯಾ ಅಮೆರಿಕ ವಿರುದ್ಧದ ಶೀತಲ ಸಮರದ ಬಳಿಕ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿದರೂ ರಷ್ಯಾ ತನ್ನ ಆಂತರಿಕ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದೆ ಎಂಬುದು ಇಲ್ಲಿ ಕಂಡುಬರುತ್ತಿದೆ. ಕಳೆದ ವರ್ಷ ರಷ್ಯಾ ರೂ.4.4ಲಕ್ಷ ಕೋಟಿ ಮಿಲಿಟರಿಗಾಗಿ ವ್ಯಯ ಮಾಡಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

2ನೇ ಸ್ಥಾನದಲ್ಲಿ ಚೀನಾ

ಚೀನಾ 21ನೇ ಶತಮಾನದಲ್ಲಿ ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಸೈನ್ಯ ಬಲದಲ್ಲಿ ತಾನ್ಯಾಕೆ ಮುಂದಿದೆ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ. ವರದಿಗಳ ಪ್ರಕಾರ ಚೀನಾ ರೂ.15.78 ಲಕ್ಷ ಕೋಟಿ ಮೊತ್ತವನ್ನು ಮಿಲಿಟರಿಗಾಗಿ ವ್ಯಯ ಮಾಡಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

1ನೇ ಸ್ಧಾನದಲ್ಲಿ ಅಮೆರಿಕ

ಅಮೆರಿಕ ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಈಗಲೂ ಅಗ್ರಸ್ಥಾನದಲ್ಲಿದ್ದು, 2016ನೇ ಸಾಲಿನಲ್ಲಿ ಒಟ್ಟು ರೂ.39.37 ಲಕ್ಷ ಕೋಟಿಯಷ್ಟು ಮಿಲಿಟರಿಗಾಗಿ ವ್ಯಯ ಮಾಡಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಸ್ಥಾನ ಕಳೆದುಕೊಂಡ ಪಾಕ್

ಮಿಲಿಟರಿಗಾಗಿ ಅತಿ ಹೆಚ್ಚು ವೆಚ್ಚ ಮಾಡುವ 15 ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಕಳೆದುಕೊಂಡಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ

ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ವದೇಶಿ ನಿರ್ವಿುತ 67 ಸಾವಿರ ಕೋಟಿ ರೂಪಾಯಿ ವೆಚ್ಚದ ಭದ್ರತಾ ಸಾಮಗ್ರಿಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಆ ಮೂಲಕ ಭಾರತದಲ್ಲಿಯೇ ಯುದ್ಧ ಸಲಕರಣೆಗಳನ್ನು ನಿರ್ಮಾಣ ಮಾಡಲು ಒತ್ತು ನೀಡಿದೆ. 83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್ಗಳು, 464 ಟಿ-90 ಯುದ್ಧ ಟ್ಯಾಂಕರ್‌ಗಳನ್ನು ಖರೀದಿಸಲಾಗುತ್ತಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಇದಲ್ಲದೇ 598 ಡ್ರೋನ್‌ಗಳನ್ನೂ ಖರೀದಿಸಲಾಗುತ್ತಿದ್ದು, ಹಿಂದುಸ್ತಾನ್ ಏರೋನಾಟಿಕಲ್ ಈಗಾಗಲೇ 40 ಯುದ್ಧವಿಮಾನಗಳನ್ನು ತಯಾರಿಸುತ್ತಿದ್ದು, ಇದರ ವೆಚ್ಚ 50 ಸಾವಿರ ಕೋಟಿ ರೂ.ಗಳನ್ನು ಸರ್ಕಾರವೇ ಭರಿಸಲಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಪ್ರಸ್ತುತ ಎಚ್ಎಎಲ್ ವಾರ್ಷಿಕ ಎಂಟು ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಅದನ್ನು 16ಕ್ಕೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಹೆಚ್ಚಿದ ಜಾಗತಿಕ ಮಿಲಿಟರಿ ಖರ್ಚು

2016ನೇ ಲೆಕ್ಕಾಚಾರದ ಪ್ರಕಾರ ಜಾಗತಿಕ ಮಿಲಿಟರಿ ಖರ್ಚು ಬರೋಬ್ಬರಿ 1.9 ಟ್ರಿಲಿಯನ್ ಅಮೆರಿಕನ್ ಡಾಲರನ್ನು ಮೀರಿದೆ. ಪ್ರತಿಯೊಂದು ದೇಶಗಳು ತಮ್ಮ ತಮ್ಮ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದರಲ್ಲಿ ಮಗ್ನವಾಗಿರುವುದು ಮಿಲಿಟರಿ ವೆಚ್ಚದಲ್ಲಿ ಭಾರಿ ಏರುಗತಿ ಸಾಧಿಸಲು ಕಾರಣವಾಗಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ವಿಶ್ವ ರಾಷ್ಟ್ರಗಳು ಮಿಲಿಟರಿ ಅಗತ್ಯಗಳಿಗಾಗಿ ಭಾರಿ ಮೊತ್ತವನ್ನು ವ್ಯಯ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರಿ ವರ್ಧನೆ ಕಂಡುಬರುತ್ತಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಈ ಸಂಬಂಧ ವಿಶ್ವದೆಲ್ಲ ರಾಷ್ಟ್ರಗಳ ಶಸ್ತ್ರಾಸ್ತ್ರ ವೆಚ್ಚಯನ್ನು ಅಧ್ಯಯನ ಮಾಡುತ್ತಿರುವ ಸ್ಟಾಕ್ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ತಾಜಾ ವರದಿಯನ್ನು

ಬಿಡುಗಡೆ ಮಾಡಿದೆ.

ಮಿಲಿಟರಿ ವೆಚ್ಚದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಮೀರಿಸಿದ ಭಾರತ..!!

ಈ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಕಂಡುಬಂದಿದ್ದು, ಚೀನಾ ಎರಡನೇ ಸ್ಥಾನದಲ್ಲಿದೆ.

ಇಂತಹ ಸಂದರ್ಭದಲ್ಲಿ ಭಾರತ 5ನೇ ಸ್ಥಾನದಲ್ಲಿದ್ದು, ಶತ್ರು ರಾಷ್ಟ್ರಗಳಿಗೆ ಭಾರತದ ನಡೆಗೆ ನಡುಕು ಹುಟ್ಟಿಸಿದೆ.

Read more on ಭಾರತ india
English summary
India become the 5th Largest Military spender in World.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark