ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

Written By:

ಇತ್ತೀಚೆಗಷ್ಟೇ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ದಾಳಿಯಿಂದಾಗಿ ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ತನ್ಮೂಲಕ ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಿರುವ ಕಪಟ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನೇ ನೀಡಿದೆ. ಭಾರತೀಯ ವಾಯುಸೇನೆಯು ಯಾವ ಕ್ಷಣ ಬೇಕಾದರೂ ಪಾಕಿಸ್ತಾನದ ಅಂಚಿ ಅಂಚಿಗೂ ದಾಳಿ ನಡೆಸುವಷ್ಟು ಸಮರ್ಥವಾಗಿದ್ದು, ದಿನದ 24 ಗಂಟೆಯೂ ಬಹಳಷ್ಟು ಎಚ್ಚರಕೆಯಿಂದ ದೇಶದ ವಾಯು ವಲಯಕ್ಕೆ ರಕ್ಷಣೆಯನ್ನು ಒದಿಸುತ್ತಿದೆ. ಸದ್ಯ ಲೇಖನದಲ್ಲಿ ಕ್ಷಣ ಮಾತ್ರದಲ್ಲಿ ಪಾಕಿಸ್ತಾನ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳ ಬಗ್ಗೆ ಚರ್ಚಿಸಲಿದ್ದೇವೆ.

 10. ಇಲ್ಯೂಷಿನ್ ಐ1-78

10. ಇಲ್ಯೂಷಿನ್ ಐ1-78

ಸೋವಿಯತ್ ರಷ್ಯಾ ನಿರ್ಮಿತ ನಾಲ್ಕು ಎಂಜಿನ್ ಗಳ ಇಲ್ಯೂಷಿನ್ ಐ1-78 ಭಾರತವನ್ನು 2003ನೇ ಸಾಲಿನಲ್ಲಿ ತಲುಪಿತ್ತು. ಅದೇ ಸಾಲಿನ ಭಾರತೀಯ ವಾಯುಸೇನೆ ದಿನಾಚರಣೆಯಂದು ಇಲ್ಯೂಷಿನ್ ಐ1-78 ಭಾರತ ವಾಯುಪಡೆಯನ್ನು ಅಧಿಕೃತವಾಗಿ ಸೇರ್ಪಡೆಗೊಂಡಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಭಾರತೀಯ ವಾಯುಪಡೆಯಿಂದ ಮಿಡ್ ಏರ್ ರಿಫ್ಯೂಲ್ಲಿಂಗ್ ಸಿಸ್ಟಂ ಅಥವಾ ಮಾರ್ಸ್ ಎಂದು ಗುರುತಿಸಲ್ಪಟ್ಟಿರುವ ಇಲ್ಯೂಷಿನ್ ಐ1-78, ಏರಿಯಲ್ ರಿಫ್ಯೂಲ್ಲಿಂಗ್ ಟ್ಯಾಂಕರ್ ತಳಹದಿಯ ಯುದ್ಧ ವಿಮಾನವಾಗಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಇದು ಗರಿಷ್ಠ 850 ಕೀ.ಮೀ. ವೇಗದಲ್ಲಿ 7,300 ಕೀ.ಮೀ. ವ್ಯಾಪ್ತಿಯ ವರೆಗೂ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವೆನಿಸಿಕೊಂಡಿದೆ.

09. ಲಾಕ್ ಹೀಡ್ ಮಾರ್ಟಿನ್ ಸಿ-130ಜೆ ಸೂಪರ್ ಹೆರ್ಕ್ಯೂಲೆಸ್

09. ಲಾಕ್ ಹೀಡ್ ಮಾರ್ಟಿನ್ ಸಿ-130ಜೆ ಸೂಪರ್ ಹೆರ್ಕ್ಯೂಲೆಸ್

ಲಾಕ್ ಹೀಡ್ ಮಾರ್ಟಿನ್ ಸಿ-130ಜೆ ಸೂಪರ್ ಹೆರ್ಕ್ಯೂಲೆಸ್ ಒಂದು ಟರ್ಬೊಪ್ರಾಪ್ ಮಿಲಿಟರಿ ಟ್ರಾನ್ಸ್ ಪೋರ್ಟ್ ಯುದ್ಧ ವಿಮಾನವಾಗಿದೆ. 2013ರಲ್ಲಿ ಅಮೆರಿಕ ತಳಹದಿಯ ಲಾಕ್ ಹೀಡ್ ನಿಂದ ನಿರ್ಮಿತ ಎಂಟರಷ್ಟು ಸಿ 130ಜೆ-30 ವಿಮಾನಗಳನ್ನು ಆರ್ಡ್ ಮಾಡಲಾಗಿತ್ತು. ಈ ಪೈಕಿ ಐದರಷ್ಟು ಸೇವೆಯಲ್ಲಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ರೋಲ್ಸ್ ರಾಯ್ಸ್ ನ ಅತ್ಯಂತ ಶಕ್ತಿಶಾಲಿ ಎಇ 2100 ಡಿ3 ಟರ್ಬೊಪ್ರಾಪ್ ಎಂಜಿನ್ ಜೊತೆಗೆ ಡೌಟಿ ಆರ್391 6 ಬ್ಲೇಟ್ ಕಾಂಪೊಸಿಟ್ ಪ್ರೊಪೆಲ್ಲರ್ ನಿಂದ ನಿರ್ಮಿತ ಲಾಕ್ ಹೀಡ್ ವಿಮಾನವು ಗಂಟೆಯಲ್ಲಿ 671 ಕೀ.ಮೀ. ವೇಗದಲ್ಲಿ ಸಾಗಬಲ್ಲದು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ನಾಲ್ಕು ಪ್ರಾಟ್ ಆಂಡ್ ವಿಟ್ನಿ ಎಫ್117-ಪಿಡಬ್ಲ್ಯು-100 ಟರ್ಬೊ ಫ್ಯಾನ್ ನಿಂದ ನಿಯಂತ್ರಿತ ಲಾಕ್ ಹೀಡ್ ವಿಮಾನವನ್ನು ವಿಶೇಷ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆಯು 2008ರಲ್ಲಿ ಮೊದಲ ಬಾರಿಗೆ ಖರೀದಿ ಮಾಡಿಕೊಂಡಿತ್ತು.

08. ಎಚ್ ಎಎಲ್ ತೇಜಸ್

08. ಎಚ್ ಎಎಲ್ ತೇಜಸ್

ಸಿಂಗಲ್ ಸೀಟು ಬಹು ಪಾತ್ರಧಾರಿ ತೇಜಸ್ ಹಗುರ ಭಾರದ ಯುದ್ಧ ವಿಮಾನವನ್ನು ಭಾರತೀಯ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಏರೋನಾಟಿಕಲ್ ಅಭಿವೃದ್ಧಿ ಪ್ರಾಧಿಕಾರವು (ಎಡಿಎ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಭಾರತೀಯ ವಾಯುಪಡೆ ಜೊತೆಗೆ ಭಾರತೀಯ ನೌಕದಳದ ಸೇವೆ ನಿರ್ವಹಿಸುತ್ತಿರುವ ಎಚ್ ಎ ಎಲ್ ತೇಜಸ್ ನಲ್ಲಿ ಜನರಲ್ ಎಲೆಕ್ಟ್ರಿಕ್ ಎಫ್404-ಜಿಇ-ಎಫ್2ಜೆ3 ಟರ್ಬೊಫ್ಯಾನ್ ಎಂಜಿನ್ ಗಳನ್ನು ಲಗತ್ತಿಸಲಾಗಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಎಚ್ ಎಎಲ್ ತೇಜಸ್ ಶಬ್ದ ವೇಗ ಮ್ಯಾಕ್ 1.8 ರಲ್ಲಿ ಅಂದರೆ ಗಂಟೆಗೆ 2205 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 15,200 ಮೀಟರ್ ಎತ್ತರದ ವಾಯು ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ನಡೆಸಲಿದೆ.

07. ಬೋಯಿಂಗ್ ಸಿ-17 ಗ್ಲೋಬ್ ಮಾಸ್ಟರ್ III

07. ಬೋಯಿಂಗ್ ಸಿ-17 ಗ್ಲೋಬ್ ಮಾಸ್ಟರ್ III

ಅಮೆರಿಕ ವಾಯುಪಡೆ ಅಭಿವೃದ್ಧಿ ಮಾಡಿರುವ ಬೋಯಿಂಗ್ ಸಿ-17 ಗ್ಲೋಬ್ ಮಾಸ್ಟರ್ III, ಮಿಲಿಟರಿ ಸಾರಿಗೆ ವಿಮಾನವಾಗಿದೆ. ಇದು ಲಾಕ್ ಹೀಡ್ ಸಿ 141 ಸ್ಟಾರ್ ಲಿಫ್ಟರ್ ವಿಮಾನಗಳ ಸ್ಥಾನವನ್ನು ತುಂಬಿಕೊಂಡಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

2009ರಲ್ಲಿ ಅಮಿತ ಭಾರದ ಸಾಗಣಿಕೆಗಾಗಿ ಭಾರತೀಯ ವಾಯುಸೇನೆಯು ಬೋಯಿಂಗ್ ಸಿ17 ಬ್ಲೋಬ್ ಮಾಸ್ಟರ್ III ಆಯ್ಕೆ ಮಾಡಿಕೊಂಡಿತ್ತು. ಇದರಂತೆ 2010ರಲ್ಲಿ 10ರಷ್ಟು ಯುನಿಟ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ವಿಶೇಷ ವಾಯುಪಡೆಗಳನ್ನು ನಿಯೋಜಿಸಲು ಹಾಗೂ ಯೋಜನ್ಮಾತಕ ಏರ್ ಲಿಫ್ಟ್ ಕಾರ್ಯಾಚರಣೆಗಳಲ್ಲಿ ಬೋಯಿಂಗ್ ಸಿ17 ನಿಸ್ಸೀಮವೆನಿಸಿಕೊಂಡಿದೆ. ಇದನ್ನು ಹಿಮಾಲಯದಿಂದ ಹಿಡಿದು ದಕ್ಷಿಣ ಇಂಡಿಯಾದಲ್ಲೂ ನಿಯುಕ್ತಿಗೊಳಿಸಬಹುದಾಗಿದೆ.

06. ಸೆಪ್ ಕ್ಯಾಟ್ ಜಾಗ್ವಾರ್ (SEPECAT Jaguar)

06. ಸೆಪ್ ಕ್ಯಾಟ್ ಜಾಗ್ವಾರ್ (SEPECAT Jaguar)

ಫ್ರಾನ್ಸ್ ಮತ್ತು ಬ್ರಿಟನ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸೆಪ್ ಕ್ಯಾಟ್ ಜಾಗ್ವಾರ್ ಯುದ್ಧ ವಿಮಾನದ ಸೇವೆಯನ್ನು ಫ್ರಾನ್ಸ್‌ನ ವಾಯುಪಡೆ ಹಾಗೂ ಬ್ರಿಟನ್ ನ ರಾಯಲ್ ಏರ್ ಫೋರ್ಸ್ ಜೊತೆಗೆ ಭಾರತೀಯ ವಾಯುಪಡೆಯು ಬಳಸುತ್ತಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

1968ರಲ್ಲಿ ನಿರಾಕರಿಸಿದರೂ ಬಳಿಕ 1978ರಲ್ಲಿ ಯುರೋಪ್ ನಲ್ಲಿ ನಿರ್ಮಿತ 40ರಷ್ಟು ಜಾಗ್ವಾರ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತರಿಸಲಾಗಿತ್ತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇದಕ್ಕೆ 'ನ್ಯಾಯಾಂಗದ ಕತ್ತಿ' ಎಂಬ (Sword of Justice) ನಾಮಕರಣ ಮಾಡಿಕೊಂಡಿತ್ತು.

05. ಮಿಕೋಯನ್ ಮಿಗ್ 27

05. ಮಿಕೋಯನ್ ಮಿಗ್ 27

ಮೂಲತ: ಸೋವಿಯತ್ ಒಕ್ಕೂಟ ನಿರ್ಮಿತ ಮಿಕೋಯನ್ ಮಿಗ್ 27 ಯುದ್ಧ ವಿಮಾನವನ್ನು ನಿರ್ಮಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪರವಾನಗಿ ಗಿಟ್ಟಿಸಿಕೊಂಡಿತ್ತು. ಇದು ಬಳಿಕ ದೇಶದಲ್ಲಿ 'ಬಹದ್ದೂರ್' ಎಂದೆನಿಸಿಕೊಂಡಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಮಿಕೋಯನ್ ಗುರ್ವೆಚ್ ಮಿಗ್ 23 ಯುದ್ಧ ವಿಮಾನದ ತಳಹದಿಯಲ್ಲಿ ನಿರ್ಮಾಣವಾಗಿರುವ ಮಿಕೋಯನ್ ಮಿಗ್ 27, ಗಾಳಿಯಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯವನ್ನು ಪಡೆದಿದೆ. ರಷ್ಯಾದ ಮಿಗ್ 27 ಸೇವೆಯಿಂದ ನಿವೃತ್ತಿ ಪಡೆದರೂ ಭಾರತದಲ್ಲಿ ಈಗಲೂ ಸೇವೆಯಲ್ಲಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಕಾರ್ಗಿಲ್ ಯುದ್ಧ ಸೇರಿದಂತೆ ಭಾರತೀಯ ವಾಯುಪಡೆಯ 12ರಷ್ಟು ಮಿಗ್ 27 ಯುದ್ಧ ವಿಮಾನಗಳು ನಾಪತ್ತೆಯಾಗಿದೆ. ಇದು 8,000 ಮೀಟರ್ ಎತ್ತರದ ವಾಯು ವಲಯದಲ್ಲಿ ಗಂಟೆಗೆ 1885 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

04. ದಸ್ಸಾಲ್ಟ್ ಮಿರಾಜ್ 2000

04. ದಸ್ಸಾಲ್ಟ್ ಮಿರಾಜ್ 2000

ಫ್ರಾನ್ಸ್ ನಿರ್ಮಿತ ದಸ್ಸಾನ್ ಮಿರಾಜ್ 2000 ನಾಲ್ಕನೇ ತಲೆಮಾರಿನ ಬಹುಪಾತ್ರಧಾರಿ ಯುದ್ಧ ವಿಮಾನವಾಗಿದೆ. ಇದು ಗಂಟೆಗೆ 2336 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

1980ರ ದಶಕದಲ್ಲಿ ಭಾರತೀಯ ವಾಯುಸೇನೆಯು 49ರಷ್ಟು ಮಿರಾಜ್ 2000 ಹಗುರ ಭಾರದ ಯುದ್ಧ ವಿಮಾನಗಳನ್ನು ಖರೀದಿಸಿತ್ತು. 2004ರಲ್ಲಿ ಮತ್ತಷ್ಟು 10 ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಪರಿಷ್ಕೃತ ಆರ್ ಡಿಎಂ 7 ರಾಡಾರ್ ಗಳಿಂದ ಕೂಡಿದ ಮಿರಾಜ್ 2000 ವಿಮಾನಕ್ಕೆ ಭಾರತೀಯ ವಾಯು ಸೇನೆಯು 'ವಜ್ರ' ಎಂಬುದಾಗಿ ಹೆಸರಿಸಿತ್ತು. ಕಾರ್ಗಿಲ್ ಯುದ್ಧ ಕಾಲಘಟ್ಟದಲ್ಲಿ ಹಿಮಾಲಯದ ಎತ್ತರದ ವಾಯು ಪ್ರದೇಶದಲ್ಲಿ ವಜ್ರ ವಿಮಾನವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.

03. ಮಿಕೋಯನ್ ಮಿಗ್ 29

03. ಮಿಕೋಯನ್ ಮಿಗ್ 29

ಸೋಯಿಯತ್ ಒಕ್ಕೂಟ ನಿರ್ಮಿತ ಟ್ವಿನ್ ಎಂಜಿನ್ ಜೆಟ್ ಯುದ್ಧ ವಿಮಾನವಾಗಿರುವ ಮಿಕೋಯನ್ ಮಿಗ್ 29, ಅಮೆರಿಕದ ಮೆಕ್ ಡೋನೆಲ್ ಡಗ್ಲಾಸ್ ಎಫ್-15 ಈಗಲ್ ಯುದ್ಧ ವಿಮಾನದ ವಿರುದ್ಧವಾಗಿ ಅಭಿವೃದ್ಧಿಪಡಿಸಲಾಗಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಭಾರತ ಮಿಗ್ 29 ಖರೀದಿಸಿದ ಮೊದಲ ಜಾಗತಿಕ ಗ್ರಾಹಕ ಎಂದೆನಿಸಿಕೊಂಡಿದೆ. 1980ರಲ್ಲೇ ಭಾರತೀಯ ವಾಯುಸೇನೆಯು 50 ಮಿಗ್ 29 ಯುದ್ಧ ವಿಮಾನಗಳನ್ನು ಖರೀದಿಸಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

1999ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಯುದ್ಧ ವಿಮಾನ ಇದಾಗಿದ್ದು, ಲೇಸರ್ ಗೈಡಡ್ ಬಾಂಬ್ ದಾಳಿಯಿಂದ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿತ್ತು. ಇದು ಗಂಟೆಗೆ ಗರಿಷ್ಠ 2400 ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಪಡೆದಿದೆ.

 02. ಮಿಕೋಯನ್ ಗುರೆವಿಚ್ ಮಿಗ್ 21

02. ಮಿಕೋಯನ್ ಗುರೆವಿಚ್ ಮಿಗ್ 21

ಇದು ಭಾರತದ ಮಿತ್ರ ರಾಷ್ಟ್ರವಾದ ರಷ್ಯಾ ಹಿಂದಿನಿಂದಲೂ ಮಿಲಿಟರಿ ಬಲ ಹಂಚಿಕೊಂಡಿರುವುದಕ್ಕೆ ಮಗದೊಂದು ಪುರಾವೆಯಾಗಿದೆ. ಮಿಕೋಯನ್ ಗುರೆವಿಚ್ ಮಿಗ್ 21 ಸೂಪರ್ ಸೋನಿಕ್ ಜೆಟ್ ಯುದ್ಧ ವಿಮಾನವಾಗಿದ್ದು, ಸೋಯಿಯತ್ ಒಕ್ಕೂಟದ ಮಿಕೋಯನ್ ಗುರೆವಿಚ್ ಡಿಸೈನ್ ಬ್ಯೂರೋ ಅಭಿವೃದ್ಧಿಪಡಿಸಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ರಷ್ಯಾ, ಚೀನಾ ಬಳಿಕ ಮಿಗ್ 21 ಯುದ್ಧ ವಿಮಾನ ಕಾರ್ಯಾಚರಣೆ ಮಾಡುತ್ತಿರುವ ಮೂರನೇ ಅತಿ ದೊಡ್ಡ ರಾಷ್ಟ್ರ ಭಾರತವಾಗಿದೆ. ಭಾರತದೊಂದಿಗೆ ತಂತ್ರಗಾರಿಕೆ ಹಂಚಿಕೆ ಹಾಗೂ ಸ್ಥಳೀಯವಾಗಿ ಜೋಡಣೆ ಕಾರ್ಯಕ್ಕೆ ರಷ್ಯಾ ನೆರವಾಗಿತ್ತು. 1964ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ಮೊದಲ ಸೂಪರ್ ಸೋನಿಕ್ ಫೈಟರ್ ಜೆಟ್ ಎಂದೆನಿಸಿಕೊಂಡಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

1963ರ ಬಳಿಕ 1200ರಷ್ಟು ಮಿಗ್ ಫೈಟರ್ ಜೆಟ್ ಗಳನ್ನು ಭಾರತ ಸೇವೆಗೆ ಬಳಸಿದೆ. ಆದರೂ 1970ರ ಬಳಿಕ ನಡೆದ ವಿವಿಧ ಅಪಘಾತಗಳಲ್ಲಾಗಿ 170ರಷ್ಟು ಭಾರತೀಯ ಪೈಲಟ್ ಗಳು ಮತ್ತು 40ರಷ್ಟು ನಾಗರಿಕರು ತಮ್ಮ ಜೀವವನ್ನು ತೆರುವಂತಾಗಿದೆ. ಇದು ಗಂಟೆಗೆ 2175 ಕೀ.ಮೀ. ಸಾಗಬಲ್ಲದ್ದು.

01. ಸುಖೋಯ್ ಸು-30 ಎಂಕೆಐ

01. ಸುಖೋಯ್ ಸು-30 ಎಂಕೆಐ

ಎಲ್ಲ ವಾತಾವರಣ ಪರಿಸ್ಥಿತಿಯಲ್ಲೂ ದೀರ್ಘ ದೂರದ ವರೆಗೂ ಕಾರ್ಯಾಚರಣೆ ನಡೆಸಬಲ್ಲ ಟ್ವಿನ್ ಜೆಟ್ ಬಹು ಪಾತ್ರಧಾರಿ ಯುದ್ಧ ವಿಮಾನವಾಗಿದೆ. ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದ ಇದನ್ನು ಭಾರತೀಯ ವಾಯುಪಡೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸುತ್ತಿದೆ.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

2000ನೇ ಇಸವಿಯಲ್ಲಿ ಸುಖೋಯ್ 30 ಫೈಟರ್ ಜೆಟ್ ನಿರ್ಮಾಣಕ್ಕಾಗಿ ಭಾರತ ಒಪ್ಪಂದ ಮಾಡಿಕೊಂಡಿತ್ತು. ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡಲಾದ ಸುಖೋಯ್ 30 ಎಂಕೆಐ ವೆರಿಯಂಟ್ 2004ರಲ್ಲಿ ಸೇವೆಗೆ ಲಭ್ಯವಾಗಿತ್ತು.

ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

ಅತ್ಯಾಧುನಿಕ ಯುದ್ಧ ತಂತ್ರಗಳೊಂದಿಗೆ ಭಾರತೀಯ ವಾಯುಸೇನೆಯನ್ನು ಬಲಿಷ್ಠವಾಗಿಸಿರುವ ಸುಖೋಯ್ 30 ಎಂಕೆಐ ಯುದ್ಧ ವಿಮಾನಗಳು ಗಂಟೆಗೆ 2100 ಕೀ.ಮೀ. ವೇಗದಲ್ಲೂ 3000 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

English summary
Top 10 Indian Air Force Aircraft In 2016 — Ready To Take Up Any Challenge
Story first published: Monday, October 10, 2016, 14:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark