Just In
- 36 min ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 1 hr ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 2 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
- 3 hrs ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
Don't Miss!
- Movies
ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ಟೀಸರ್ಗೆ ಮುಹೂರ್ತ ಫಿಕ್ಸ್
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಕೆಲವು ವಾರಗಳ ಹಿಂದೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಸೂರ್ಯಕುಮಾರ್ ಯಾದವ್ ಹೆಚ್ಚು ಕಸ್ಟಮೈಸ್ ಮಾಡಿದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400ಡಿ ಅನ್ನು ಖರೀದಿಸಿದರೆ, ಮತ್ತೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹೊಚ್ಚ ಹೊಸ ಮರ್ಸಿಡಿಸ್-ಎಎಂಜಿ ಜಿ 63 ಅನ್ನು ಖರೀದಿಸಿದರು. ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಹೊಚ್ಚಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400ಡಿ ಕಾರನ್ನು ಖರೀದಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಪೋಲಾರ್ ವೈಟ್-ಬಣ್ಣದ ಜಿಎಲ್ಎಸ್ 400ಡಿ ಬಣ್ಣವನ್ನು ಹೊಂದಿದ್ದು, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಖರೀದಿಸಿದ ಎಸ್‍ಯುವಿ ಸೆಲೆನೈಟ್ ಗ್ರೇ ಬಣ್ಣವನ್ನು ಹೊಂದಿದೆ. ರೋಹಿತ್ ಖರೀದಿಸಿದ ಹೊಸ ಜಿಎಲ್ಎಸ್ 400ಡಿ ಎಸ್‍ಯುವಿಯನ್ನು ವೀಡಿಯೋವನ್ನು YouTube ನಲ್ಲಿ CS 12 Vlogs ಅಪ್‌ಲೋಡ್ ಮಾಡಿದೆ.

ಈ ವೀಡಿಯೊದಲ್ಲಿ ಇತರ ವ್ಯಕ್ತಿ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400ಡಿ ಎಸ್‍ಯುವಿಯನ್ನು ಡ್ರೈವ್ ಮಾಡುತ್ತಿದ್ದಾರೆ. ಆದರೆ ಎಸ್‍ಯುವಿಯ ನೋಂದಣಿ ವಿವರಗಳಿಂದ ಈ ಎಸ್‍ಯುವಿಯನ್ನು ರೋಹಿತ್ ರೋಹಿತ್ ಶರ್ಮಾ ಖರೀದಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ರೋಹಿತ್ ಖರೀದಿಸಿದ ಹೊಸ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 400ಡಿ ಎಸ್‍ಯುವಿ ಯಾವುದೇ ಕಸ್ಟಮೈಸ್ ಅನ್ನು ಹೊಂದಿಲ್ಲ. ರೋಹಿತ್ ಶರ್ಮಾ ಅವರು ಖರೀದಿಸಿದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಜಿಎಲ್ಎಸ್ ಎಂಬುದು ಮರ್ಸಿಡಿಸ್ ಬೆಂಝ್ ಪ್ರಮುಖ ಎಸ್‍ಯುವಿಯಗಿದೆ.

ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಹೊಂದಿಕೆಯಾಗಿದೆ. ಈ ಎಂಜಿನ್ 367 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 3.0 ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 330 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನುಉ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್ ಲೈಟ್, ಕ್ರೋಮ್ ಅಡ್ಡಲಾಗಿರುವ ಸ್ಲ್ಯಾಟ್‌ಗಳೊಂದಿಗೆ ಫ್ರಂಟ್ ಗ್ರಿಲ್ ಮತ್ತು ಮಧ್ಯದಲ್ಲಿ ಮರ್ಸಿಡಿಸ್ ಬೆಂಝ್ ಲೋಗೊವನ್ನು ನೀಡಿದೆ.

ಇನ್ನು ಈ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, 21 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್‌ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಲವಾರು ಸೂಕ್ಷ್ಮ ನವೀಕರಣಗಳನ್ನು ಒಳಗೊಂಡಿದೆ.

ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬ್ರ್ಯಾಂಡ್‌ನ ಎಂಬಿಎಕ್ಸ್ ತಂತ್ರಜ್ಞಾನ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್‌ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 5 ಹಂತದ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಈ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲ ಹೊಂದಿದೆ.

ಮರ್ಸಿಡಿಸ್ ಜಿಎಲ್ಎಸ್ ಕಾರು 60 ಎಂಎಂನಷ್ಟು ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿ ಐಷಾರಾಮಿ ಆರು ಸೀಟುಗಳ ಕ್ಯಾಬಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

ಮರ್ಸಿಡಿಸ್ ಜಿಎಲ್ಎಸ್ ಕಾರು ಜೊತೆಗೆ, ರೋಹಿತ್ ಶರ್ಮಾ ಇತರ ಕೆಲವು ಉನ್ನತ-ಮಟ್ಟದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ, ಇವುಗಳ ಪಟ್ಟಿಯಲ್ಲಿ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್, ಬಿಎಂಡಬ್ಲ್ಯು ಎಂ5, ಬಿಎಂಡಬ್ಲ್ಯು ಎಕ್ಸ್3 ಮತ್ತು ಟೊಯೋಟಾ ಫಾರ್ಚೂನರ್ ಸೇರಿವೆ.

ರೋಹಿತ್ ಅನೇಕ ಬಾರಿ ಲ್ಯಾಂಬೋರ್ಗಿನಿ ಉರುಸ್ ಎಸ್‍ಯುವಿಯನ್ನು ಸ್ವತಃ ಓಡಿಸುತ್ತಿರುವುದು ಕಂಡುಬಂದಿದೆ. ಅವರ ಮೊದಲ ಕಾರು ಸ್ಕೋಡಾ ಲಾರಾ ಆಗಿತ್ತು, ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ ಖರೀದಿಸಿದರು.