ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

Written By:

ಭಾರತದ ಮೊದಲ ಹೈಪರ್‌ಲೂಪ್ ಟ್ರಾನ್ಸಿಟ್ ಸಿಸ್ಟಮ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪರಿಚಯಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದ್ದು, ಸುಸಜ್ಜಿತ ರಾಜಧಾನಿಯಾಗಿ ಅಮರಾವತಿಯನ್ನು ಮಾಡಲು ಸರ್ಕಾರ ಮುಂದಾಗಿದೆ.

To Follow DriveSpark On Facebook, Click The Like Button
ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಆಂಧ್ರ ಪ್ರದೇಶದ ರಾಜಧಾನಿಯಾದ ಅಮರಾವತಿ ಮತ್ತು ವಿಜಯವಾಡದ ನಡುವೆ ಹೈಪರ್‌ಲೂಪ್ ಲೈನ್ ನಿರ್ಮಿಸಲು ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್(ಎಚ್‌ಟಿಟಿ)ಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಎಪಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಈ ಮಾಹಿತಿ ಅಕ್ಷರಶಃ ಸತ್ಯವಾಗಿದ್ದು, ಸರ್ಕಾರ ಮತ್ತು ಎಚ್‌ಟಿಟಿ ಸಂಸ್ಥೆಯು ಖಾಸಗಿ ಹೂಡಿಕೆದಾರರಿಂದ ಹಣ ಸಂಗ್ರಹಿಸುವ ಮೂಲಕ ಅಮರಾವತಿ ಮತ್ತು ವಿಜಯವಾಡದ ವಿಲೀನ ಪ್ರಕ್ರಿಯೆಗೆ ಸಹಿ ಹಾಕಿದೆ.

ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಈ ಯೋಜನೆಯಿಂದಾಗಿ ಬಹಳಷ್ಟು ಜನಕ್ಕೆ ಪ್ರಯಾಣದಲ್ಲಿ ಹೆಚ್ಚು ಅನುಕೂಲವಾಗಲಿದೆ. ಇದಲ್ಲದೆ, ದೇಶದಲ್ಲಿ 2,500ಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಅಕ್ಟೋಬರ್ 1ರಿಂದ ಪ್ರಾಯೋಗಿಕ ಅಧ್ಯಯನವನ್ನು ಆರಂಭಸಲು ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್ ನಿರ್ಧರಿಸಿದ್ದು, ಆರು ತಿಂಗಳ ಪ್ರಾಯೋಗಿಕ ಅಧ್ಯಯನ ನೆಡೆಸಿದ ನಂತರ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂಬ ವಿಚಾರ ತಿಳಿದು ಬಂದಿದೆ.

ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಈ ಹೈಪರ್‌ಲೂಪ್ ರೈಲುಗಳು ಸದ್ಯ ಇರುವಂತಹ ಅತಿ ಹೆಚ್ಚು ವೇಗದ ರೈಲುಗಳಿಗಿಂತ ಎರಡು ಅಥವಾ ಮೂರು ಪಟ್ಟು ವೇಗವಾಗಿ ಚಲಿಸಲಿದೆ ಹಾಗು ಭಾರತದಲ್ಲಿ, ಹೈಪರ್‌ಲೂಪ್ ಕೆಲವು ಮಾರ್ಗಗಳಲ್ಲಿ ಗಂಟೆಗೆ 1,100 ಕಿಲೋಮೀಟರ್ ವೇಗವನ್ನು ತಲುಪುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಎರಡು ನಗರಗಳ ನಡುವಿನ ಅತ್ಯುತ್ತಮ ಮಾರ್ಗವನ್ನು ಕಂಡು ಹಿಡಿಯಲು ಮತ್ತು ನಗರದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಕಂಪನಿಯು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಭಾರತದ ಮೊಟ್ಟ ಮೊದಲ ಹೈಪರ್‌ಲೂಪ್ ರೈಲು ಯೋಜನೆಗೆ ಸಹಿ ಹಾಕಿದ ಆಂಧ್ರ ಸರ್ಕಾರ !!

ಅಂತಿಮವಾಗಿ ಭಾರತಕ್ಕೆ ಹೈಪರ್‌ಲೂಪ್ ತಂತ್ರಜ್ಞಾನ ಕಾಲಿಡುತ್ತಿದ್ದು,ಈ ಹಿಂದೆ, ಆಧುನಿಕ ಸಾರಿಗೆ ತಂತ್ರಜ್ಞಾನದ ಬಗ್ಗೆ ಬಹಳಷ್ಟು ಊಹಾಪೋಹಗಳಿಗೆ ಉತ್ತರ ನೀಡಲಿದೆ ಎನ್ನಬಹುದು. ಆಂಧ್ರಪ್ರದೇಶ ಸರ್ಕಾರವು ದೇಶದ ಸಾರಿಗೆ ಭವಿಷ್ಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಖುಷಿಯ ವಿಚಾರವಾಗಿದೆ.

English summary
The Government of Andhra Pradesh is planning to bring the Hyperloop to India. Yes, you read it right, Elon Musk's radical concept is coming to India.
Story first published: Thursday, September 7, 2017, 13:57 [IST]
Please Wait while comments are loading...

Latest Photos