ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್‌ಎಸ್ ಚೆನ್ನೈ ನೈಜ ತಾಕತ್ತನ್ನು ಬಲ್ಲಿರಾ..?

ಭಾರತೀಯ ನಾವಿಕಪಡೆಗೆನಿ ರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಯುದ್ಧ ನೌಕೆ ಸೇರ್ಪಡೆಗೊಂಡಿದೆ.

By Nagaraja

ಸ್ವದೇಶಿ ವಿನ್ಯಾಸದ ಕೋಲ್ಕತ್ತಾ ಶ್ರೇಣಿಗೆ ಸೇರಿದ ಅತಿ ನೂತನ ಯುದ್ಧ ನೌಕೆ ಐಎನ್ ಎಸ್ ಚೆನ್ನೈ ಸೋಮವಾರಂದು ನೌಕಾಪಡೆಗೆ ಸೇರ್ಪಡೆಗೊಂಡಿದೆ. ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಕ್ಷಿಪಣಿ ಸಾಮರ್ಥ್ಯದ ಐಎನ್ ಎಸ್ ಚೆನ್ನೈ ಯುದ್ಧ ನೌಕೆಯನ್ನು ಔಪಚಾರಿಕವಾಗಿ ಭಾರತೀಯ ನೌಕಾಪಡೆಗೆ ನಿಯೋಜಿಸಿದರು. ಈ ವೇಳೆಯಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಉಪಸ್ಥಿತರಿದ್ದರು.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಐಎನ್ಎಸ್ ಚೆನ್ನೈ ಸೇರ್ಪಡೆಯೊಂದಿಗೆ ಭಾರತೀಯ ನಾವಿಕಪಡೆಗೆ ಆನೆ ಬಲ ಬಂದಂತಾಗಿದ್ದು, ನಿರ್ದೇಶಿತ ಕ್ಷಿಪಣಿ ವಿನಾಶಕದೊಂದಿಗೆ ಮತ್ತಷ್ಟು ವಿಧ್ವಂಸಕ ಸ್ವರೂಪವನ್ನು ಪಡೆದಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಭಾರತದಲ್ಲಿ ಇದುವರೆಗೆ ನಿರ್ಮಿಸಲಾಗಿರುವ ಅತಿ ಕ್ಷಿಪಣಿ ವಿನಾಶಕ ಗಳಲ್ಲಿ ಇದು ದೊಡ್ಡದಾಗಿದ್ದು, 164 ಮೀಟರ್ ಉದ್ದ ಮತ್ತು 7400 ಟನ್ ಸಾಮರ್ಥ್ಯವನ್ನು ಪಡೆದಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಪ್ರಾಜೆಕ್ಟ್ 15ಎ ಕೋಡ್ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಮೂರನೇ ಹಾಗೂ ಕೊನೆಯ ಯುದ್ಧ ನೌಕೆ ಇದಾಗಿದೆ. ಇದಕ್ಕೆ ತಮಿಳುನಾಡಿನ ರಾಜಧಾನಿ ಚೆನ್ನೈ ನಗರದ ಹೆಸರನ್ನಿಡಲಾಗಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಮುಂಬೈನ ಮಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಸಂಸ್ಥೆಯು ಐಎನ್ ಎಸ್ ಚೆನ್ನೈ ಯುದ್ಧ ನೌಕೆಯನ್ನು ನಿರ್ಮಿಸಲಾಗಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಹಡಗಿನಲ್ಲಿರುವ ಶಸ್ತ್ರಾಸ್ತ್ರ ಮತ್ತು ಸೆನ್ಸಾರ್ ಗಳನ್ನು ರಷ್ಯಾದಿಂದ ಆಮದು ಮಾಡಲಾಗಿದೆ. ಇದರಲ್ಲಿ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿರೋಧಿ ಶಸ್ತ್ರಾಸ್ತ್ರ ಮತ್ತು ಸಂವೇದಕಗಳನ್ನು ಒಳಗೊಂಡಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಐಎನ್ ಎಸ್ ಚೆನ್ನೈ ಯುದ್ಧ ನೌಕೆಯು, ಭೂಮಿಯಿಂದ ಭೂಮಿಗೆ ದಾಳಿಯನ್ನಿಡುವ ಬ್ರಹ್ಮೋಸ್ ಮಿಸೈಲ್ ಮತ್ತು ಬರಾಕ್ 8 ದೀರ್ಘ ದೂರದ ಭೂಮಿಯಿಂದ ಗಗನಕ್ಕೆ ದಾಳಿಯನ್ನಿಡುವ ಕ್ಷಿಪಣಿಗಳನ್ನು ಒಳಗೊಂಡಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಸ್ವದೇಶವಾಗಿ ಅಭಿವೃದ್ಧಿಪಡಿಸಿದ ಜಲಾಂತರ್ಗಾಮಿ ನಿಗ್ರಹ ಹಾಗೂ ಸೆನ್ಸಾರ್ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಸಾಗರದಾಳದ ದಾಳಿಯನ್ನು ಸಮರ್ಥವಾಗಿ ಎದುರಿಸಲಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಕವಚ್ ಮತ್ತು ಮರೀಚ್ ಎಂಬ ರಕ್ಷಣಾ ವ್ಯವಸ್ಥೆಗಳಿಂದ ಕೂಡಿರುವ ಐಎನ್ ಎಸ್ ಚೆನ್ನೈ, ಜಲಾಂತರ್ಗಾಮಿ ನೌಕಾ ಸ್ಪೋಟಕಗಳನ್ನು ತಡೆಯಲಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಐಎನ್ ಎಸ್ ಚೆನ್ನೈ ಯುದ್ಧ ನೌಕೆಯು ಸರಾಸರಿ ಗಂಟೆಗೆ 55 ಕೀ.ಮೀ. ವೇಗದಲ್ಲಿ ಚಲಿಸಲಾಗಿದೆ. ಅಲ್ಲದೆ ಎರಡು ಬಹು ಪಾತ್ರಧಾರಿ ಹೆಲಿಕಾಪ್ಟರ್ ಗಳು ಕಾರ್ಯಾಚರಣೆ ನಡೆಸಲಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಹಡಗು ದತ್ತಾಂಶ ಜಾಲ, ಯುದ್ಧ ನಿರ್ವಹಣಾ ವ್ಯವಸ್ಥೆ, ಆಟೋಮ್ಯಾಟಿಕ್ ಪವರ್ ಮ್ಯಾನೇಜ್ಮೆಂಟ್ ಸಿಸ್ಟಂ ಮತ್ತು ಸಹಾಯ ನಿಯಂತ್ರಣ ವ್ಯವಸ್ಥೆಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಪಶ್ಚಿಮ ನಾವಿಕ ಕಮಾಂಡ್ ನ ಕಮಾಂಡಿಂಗ್ ಇನ್ ಚೀಫ್ ಫ್ಲ್ಯಾಗ್ ಆಫೀಸರ್ ಅವರ ಆಡಳಿತಾತ್ಮಕ ಹಾಗೂ ಕಾರ್ಯಚರಣೆಗೆ ನಿಯಂತ್ರಣಕ್ಕೆ ಐಎನ್ ಎಸ್ ಚೆನ್ನೈ ಒಳಪಟ್ಟಿರುತ್ತದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ತದಾ ಬಳಿಕ ಹೆಚ್ಚುವರಿ ಸಾಗರಿಕ ಪ್ರಯೋಗಗಳ ಬಳಿಕ ಮುಂಬೈನ ವೆಸ್ಟರ್ನ್ ನಾವಿಕ ಪಡೆಗೆ ಸೇರ್ಪಡೆಗೊಳಿಸಲಾಗುವುದು.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಸ್ವದೇಶಿ ನಿರ್ಮಿತ ಐಎನ್ ಎಸ್ ಚೆನ್ನೈ ಯುದ್ಧ ನೌಕೆಯು ಶಸ್ತ್ರಾಸ್ತ್ರ, ಸೆನ್ಸಾರ್, ರಹಸ್ಯ ವೈಶಿಷ್ಟ್ಯ, ಸುಧಾರಿತ ದಾಳಿ ಮಾಹಿತಿ ವ್ಯವಸ್ಥೆ, ಸಮಗ್ರ ಸಹಾಯಕ ನಿಯಂತ್ರಣ ವ್ಯವಸ್ಥೆ, ವಿಶ್ವದರ್ಜೆಯ ಲಿವಿಂಗ್ ಜಾಗ, ಅತ್ಯಾಧುನಿಕಾ ವಿದ್ಯುತ್ ಸಂವಹನ ಮತ್ತು ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಹಡಗಿನಲ್ಲಿರುವ ನಾವಿಕ ಸೇನಾ ಪಡೆಗೆ ಎಕೆ-630 ರಾಪಿಡ್ ಫೈರ್ ಗನ್ ಮತ್ತು ಎಂಆರ್ ಗನ್ ಗಳನ್ನು ಒದಗಿಸಲಿದ್ದು, ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ.

ಭಾರತೀಯ ನಾವಿಕಪಡೆಗೆ ಭೀಮ ಬಲ; ಕ್ಷಿಪಣಿ ನಾಶಕ ಐಎನ್‌ಎಸ್ ಚೆನ್ನೈ ಸೇರ್ಪಡೆ

ಒಟ್ಟಿನಲ್ಲಿ ಅತಿ ದೊಡ್ಡ ಐಎನ್ ಎಸ್ ಚೆನ್ನೈ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆ ಮತ್ತಷ್ಟು ಬಲಿಷ್ಠವೆನಿಸಿಕೊಂಡಿದೆ.

Most Read Articles

Kannada
English summary
Interesting Facts About Indian Navy's Guided Missile Destroyer INS Chennai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X