ಅಪಘಾತದಲ್ಲಿ ಕವಾಸಕಿ ನಿಂಜಾ H2 ಪೀಸ್ ಪೀಸ್; ಇನ್ನೂ ಸವಾರನ ಸ್ಥಿತಿ..!!

Written By:

ಬೈಕ್‌ನಲ್ಲಿ ಸ್ಟಂಟ್ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲವಾದ್ರೆ ಬೈಕ್ ಸವಾರನ ಪ್ರಾಣ ಹೋಗುವುದಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ಮಧ್ಯೆ ಮೊನ್ನೆಯಷ್ಟೇ ತಮಿಳುನಾಡಿನ ತಾನೆಜಾ ಏರೋಸ್ಪೇಸ್ ಬಳಿ ನಡೆದ ಅಪಘಾತ ಎಂತವರಿಗೂ ಶಾಕ್ ತರಿಸದೇ ಇರಲಾರದು.

ತಮಿಳುನಾಡಿನ ತನೆಜಾ ಏರೋಸ್ಪೇಸ್ ಬಳಿ ನಡೆದ ಬೈಕ್ ಅಪಘಾತವೇನು ಸಣ್ಣದಲ್ಲ. ಏಕೆಂದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕವಾಸಕಿ ನಿಂಜಾ, ರೇಸ್‌ಗೆ ಹೇಳಿ ಮಾಡಿಸಿ ಅದ್ಭುತ ಬೈಕ್. ಆದ್ರೆ ಮುನ್ನೆಚ್ಚೆರಿಕೆ ವಹಿಸದೇ ಸ್ಟಂಟ್ ಮಾಡಲು ಹೋಗಿದ್ದ ಯುವಕ, 300ಕಿಮಿ ವೇಗದಲ್ಲಿ ಬೈಕ್ ಓಡಿಸಿ ಗೋಡೆಗೆ ಡಿಕ್ಕಿಹೊಡೆದಿದ್ದಾನೆ.

ಒಂದು ಕ್ಷಣ ಬೈಕ್ ಅಪಘಾತವಾದ ಸ್ಥಳ ನೋಡಿದ್ರೆ ಸಾಕು ಅಪಘಾತದ ಭೀಕರತೆಯನ್ನು ನೆನೆದುಕೊಳ್ಳಲು ಕಷ್ಟವಾಗುತ್ತೆ. ಆದ್ರೆ ಅದೃಷ್ಟವಶಾತ್ ಬೈಕ್ ಸವಾರ ಉಳಿದಿದ್ದೆ ಹೆಚ್ಚು. ಸದ್ಯ ಗಂಭೀರ ಗಾಯಗೊಂಡಿರುವ ಬೈಕ್ ಸವಾರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಮುಂಜಾಗ್ರತೆ ಇಲ್ಲದೇ ಸ್ಟಂಟ್ ಸೇಫ್ ಅಲ್ಲಾ ಅಂತ ಮತ್ತೊಮ್ಮೆ ಸಾಬೀತಾಗಿದೆ.

ಇನ್ನೂ ಅಪಘಾತ ಹಿಂದಿನ ಸತ್ಯಾಂಶ ಬೆನ್ನತ್ತಿದಾಗ ಮತ್ತೊಂದು ಅಂಶ ಬಯಲಾಗಿದೆ. ಅಪಘಾತದಲ್ಲಿ ಸಿಲುಕಿಕೊಂಡ ಸವಾರ ಬೈಕ್‌ನ ಮಾಲೀಕನಲ್ಲ. ಬದಲಾಗಿ ಬೈಕ್ ಕ್ರೇಜ್‌ಗಾಗಿ ಬೇರೋಬ್ಬರಿಂದ ಪಡೆದಿದ್ದನಂತೆ. ಈ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆ ಬೈಕ್ ಮಾಲೀಕ ಯಾವುದೇ ವಿಮೆ ಪಡೆಯಲು ಅಸಾಧ್ಯ ಎನ್ನಲಾಗುತ್ತಿದೆ.

ಸೂಪರ್ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿರುವ ಕವಾಸಕಿ ನಿಂಜಾ H2 ದೇಶದ ಅತ್ಯಂತ ದುಬಾರಿ ಬೈಕ್‌ಗಳಲ್ಲಿ ಒಂದು. ಇದರ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ಬರೋಬ್ಬರಿ 37 ಲಕ್ಷ ರೂಪಾಯಿ. 998cc ಸೂಪರ್‌ಚಾರ್ಜ್ಡ್ ಎಂಜಿನ್ ಹೊಂದಿರುವ ನಿಂಜಾ H2, 197 ಬಿಎಚ್‌ಪಿ ಉತ್ವಾದಿಸುತ್ತದೆ. ಹೀಗಾಗಿಯೇ ಬೈಕ್ ಸವಾರಿಗೆ ಕ್ರೇಜ್ ಕೊಡುವ ಈ ಬೈಕ್‌ನ್ನು ಪರಿಣಿತರೇ ಸವಾರಿ ಮಾಡುವುದೇ ಒಳಿತು.

ಆದರೆ ಅದೇನೇ ಇರಲಿ ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆ ಅಲ್ಲಿನ ಜನತೆಗೆ ಶಾಕ್ ಕೊಟ್ಟಿದ್ದು ಸುಳ್ಳಲ್ಲ. ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕಿರುವ ಯುವಜನತೆ, ಸ್ಪೋರ್ಟ್ಸ್ ಬೈಕ್ ಸವಾರಿಗೂ ಮುನ್ನ ಮುಂಜಾಗ್ರತಾ ಕ್ರಮ ವಹಿಸುವುದನ್ನು ಮರೆಯಬಾರದು.

ಸೂಪರ್ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿರುವ ಕವಾಸಕಿ ನಿಂಜಾ H2 ಕಾರ್ಬನ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
A recent Kawasaki Ninja H2 crash at Taneja Aerospace, Hosur has made headlines. Here’s what really happened.
Story first published: Thursday, February 16, 2017, 17:30 [IST]
Please Wait while comments are loading...

Latest Photos