ದೈಹಿಕ ಅಸಮರ್ಥರಿಗಾಗಿ ವೀಲ್ ಚೇರ್ ಎಲೆಕ್ಟ್ರಿಕ್ ಕಾರು

Posted By:

ಇತ್ತೀಚೆಗಿನ ಲೇಖನವೊಂದರಲ್ಲಿ ದೈಹಿಕ ಅಸಮರ್ಥರಿಗಾಗಿ ಕಸ್ಟಮೈಸ್ಡ್ ಕಾರು ತಯಾರಿಸಿಕೊಡುವ ಉದಯ್ ಕುಮಾರ್ ಬಗ್ಗೆ ಮಾಹಿತಿ ಕೊಟ್ಟಿದ್ದೆವು. (ಮಾಹಿತಿಗಾಗಿ ಇಲ್ಲಿ ಕ್ಕಿಕ್ಕಿಸಿ- ದೈಹಿಕ ಅಸಮರ್ಥರ ಕನಸು ನನಸಾಗಿಸಿದ ಉದಯ್) ಇದೀಗ ದೈಹಿಕ ಅಸಮರ್ಥರಿಗಾಗಿ ತಯಾರಿಸಲಾಗಿರುವ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಪ್ರಮುಖವಾಗಿಯೂ ಕಾಲುಗಳ ಬಲವನ್ನು ಕಳಕೊಂಡ ವೀಲ್ ಚೇರ್ ಬಳಸುವವರಿಗಾಗಿ ಈ ಕಾರನ್ನು ತಯಾರಿಸಲಾಗಿದೆ. ಅಂದರೆ ಈ ಕಾರಿನೊಳಗೆ ಸೀಟ್ ಇರುವುದಿಲ್ಲ. ಬದಲಾಗಿ ವೀಲ್ ಚೇರ್ ಸಮೇತವಾಗಿ ದೈಹಿಕ ಅಸಮರ್ಥ ವ್ಯಕ್ತಿ ಕುಳಿತುಕೊಂಡು ಚಾಲನೆ ಮಾಡಬಹುದಾಗಿದೆ. ಈ ಮೂಲಕ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಇನ್ನೊಬ್ಬರನ್ನು ಆಶ್ರಯಿಸಬೇಕೆಂದಿಲ್ಲ.

ಸಾಮಾನ್ಯ ಕಾರುಗಳಿಗೆ ಇರುವಂತೆಯೇ ಈ ಎಲೆಕ್ಟ್ರಿಕ್ ವೀಲ್ ಚೇರ್ ಕಾರಿಗೆ ಸೈಡ್ ಡೋರ್ ಇರುವುದಿಲ್ಲ. ಬದಲಾಗಿ ಫೈಬರ್ ಗ್ಲಾಸ್‌ನಿಂದ ಕೂಡಿದ ಹಿಂಬದಿಯ ಬಾಗಿಲು ತೆರೆದರಾಯಿತು, ವೀಲ್ ಚೇರ್ ಸಮೇತ ಅಂತಹ ವ್ಯಕ್ತಿಗೆ ಕಾರಿನ ಒಳಗೆ ಪ್ರವೇಶಿಸಬಹುದಾಗಿದೆ.

ದೈಹಿಕ ಅಸಮರ್ಥರಿಗಾಗಿ ನಿರ್ಮಿಸಿರುವ ಈ ಕಾರು ನಿಜಕ್ಕೂ ಉತ್ತಮ ಸಾಧನೆಯಾಗಿದೆ. ಇದರೊಂದಿಗೆ ಕಾರು ಡ್ರೈವಿಂಗ್ ಕನಸು ಕಾಣುತ್ತಿರುವ ಅನೇಕ ಮಂದಿ ಅಂಗವಿಕಲರು ಇದರ ನೆರವು ಪಡೆಯಬಹುದಾಗಿದೆ. ಕೆಳಗೆ ಕೊಡಲಾಗಿರುವ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸೋಣ.

To Follow DriveSpark On Facebook, Click The Like Button
ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಪ್ರಸ್ತುತ ವೀಲ್ ಚೇರ್ ಎಲೆಕ್ಟ್ರಿಕ್ ಕಾರಿನ ಹೆಸರು ಕೆಂಗಾರು ಎಂದಾಗಿದೆ. ಫೈಬರ್ ಗ್ಲಾಸ್‌ನಿಂದ ನಿರ್ಮಿಸಲಾದ ಹಗುರವಾದ ಏಕ ಮಾತ್ರ ಡೋರ್ ಇದಕ್ಕೆ ಆಳವಡಿಸಲಾಗಿದೆ. ಡೋರ್ ಹಿಂದುಗಡೆ ಇರುವುದರಿಂದ ಸುಲಭವಾಗಿ ಒಳಗೆ ಹಾಗೂ ಹೊರಗೆ ಹೋಗಬಹುದಾಗಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಪ್ರಮುಖವಾಗಿಯೂ ವೀಲ್ ಚೇರ್ ಅಂಗವಿಕಲರಿಗಾಗಿ ಈ ಎಲೆಕ್ಟ್ರಿಕ್ ಕಾರು ತಯಾರಿಸಲಾಗಿದೆ. ಬ್ಯಾಟರಿಗಳಿಂದ ನಿಯಂತ್ರಿಸಲ್ಪಡುವ ಈ ವೀಲ್ ಚೇರ್ ಕಾರು ಪ್ರತಿ ಗಂಟೆಗೆ ಗರಿಷ್ಠ 45 ಕೀ. ಮೀ. ವೇಗತೆಯಲ್ಲಿ ಚಲಿಸಲಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಸಾಮಾನ್ಯ ಕಾರುಗಳಿಗೆ ಇರುವಂತೆಯೇ ಸ್ಟೀರಿಂಗ್ ವೀಲ್ ಇದರಲ್ಲಿ ಇರುವುದಿಲ್ಲ. ಬದಲಾಗಿ ಮೋಟಾರ್‌ಸೈಕಲ್ ಮಾದರಿಯ ಹ್ಯಾಂಡಲ್ ಆಳವಡಿಸಲಾಗಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಹಂಗೇರಿ ಕಂಪನಿಯಾದ ಕೆಂಗಾರು ಸರ್ವಿಸಸ್ ಈ ವೀಲ್ ಚೇರ್ ಕಾರನ್ನು ಅಭಿವೃದ್ಧಿಪಡಿಸದೆ. ಆ ಬಳಿಕ ಇದರ ಉತ್ಪಾದನೆಯನ್ನು ಅಮೆರಿಕ ಹಾಗೂ ಬ್ರಿಟನ್ ದೇಶಗಳು ಕೂಡಾ ಆರಂಭಿಸಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಇನ್ನು ದರದ ಬಗ್ಗೆ ಮಾತನಾಡಿದರೆ ಕೆಂಗಾರು ದರ ಅಮೆರಿಕದಲ್ಲಿ ಸರಿ ಸುಮಾರು 25 ಸಾವಿರ ಡಾಲರ್ ಆಗಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಕಾರಿನ ರಿಯರ್ ಡೋರ್ ರಿಮೋಟ್ ಕಂಟ್ರೋಲರ್‌ನಿಂದ ನಿಯಂತ್ರಿಸಲ್ಪಡಲಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಕಾರು ಉತ್ತಮ ರೋಡ್ ಕಂಡೀಷನ್ ಹೊಂದಿದೆ. ಚಿಕ್ಕ ಡೈಮೆನ್ಷನ್ ಇದಕ್ಕೆ ನೆರವು ಮಾಡಲಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಇದರ ಫೈಬರ್ ಗ್ಲಾಸ್ ಹಗುರವಾಗಿದ್ದರೂ ಹೆಚ್ಚು ಸದೃಢವಾಗಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಬ್ರಿಟನ್‌ನಲ್ಲಿ ಪ್ರಸ್ತುತ ವೀಲ್ ಚೇರ್ ಕಾರು 'ಸ್ಕೂಟರ್' ವಿಭಾಗದಲ್ಲಿ ಪರಿಗಣಿಸಲ್ಪಡುತ್ತದೆ. ಅದರೆ ನೀವು ಕಾರು ಡ್ರೈವಿಂಗ್ ಲೈಸನ್ಸ್ ಹೊಂದಿರುವ ಅಗತ್ಯವಿರುವುದಿಲ್ಲ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಆಕರ್ಷಕ ಇಂಟಿರಿಯರ್ ವ್ಯೂ

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಖಂಡಿತವಾಗಿಯೂ ಇದು ದೈಹಿಕ ಅಸಮರ್ಥರ ನೆರವಿಗೆ ಬರಲಿದೆ.

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ಕಂಟ್ರೋಲ್ ಹ್ಯಾಂಡಲ್‌ನ ನಿಕಟ ನೋಟ

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಕೆಂಗಾರು ವೀಲ್ ಚೇರ್ ಎಲೆಕ್ಟ್ರಿಕ್ ಕಾರು

ಪರಿಸರ ಸ್ನೇಹಿ ವೆಹಿಕಲ್ ಆಗಿರುವುದರಿಂದ ನಿಜಕ್ಕೂ ಸರಕಾರವು ಇಂತಹ ವಾಹನಗಳನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

English summary
Here is a vehicle that will provide disabled people an opportunity to drive. An electric vehicle, named as the Kengaru has been designed specifically to suit the needs of of people using wheel chairs.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark