6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ನಮ್ಮ ದೇಶದಲ್ಲಿ ಕಾರು ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಕಂಪನಿಗಳು ಕಾರುಗಳಲ್ಲಿ ಹಲವಾರು ಫೀಚರ್‌ಗಳನ್ನು ನೀಡುತ್ತಿವೆ. ಇದರಿಂದ ಕಾರು ಕಳ್ಳತನವಾಗುವುದನ್ನು ತಡೆಗಟ್ಟಬಹುದು ಎಂದು ಹೇಳಲಾಗಿದ್ದರೂ, ಕಾರುಗಳ್ಳರು ಹೊಸ ಹೊಸ ಟೆಕ್ನಾಲಜಿಗಳ ಮೂಲಕ ಕದಿಯುತ್ತಿದ್ದಾರೆ.

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ಇತ್ತೀಚೆಗೆ, ಅರುಣಾಚಲ ಪ್ರದೇಶದ ಇಟಾನಗರ ಪೊಲೀಸರು 26 ಕದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ 22 ಟೊಯೋಟಾ ಫಾರ್ಚೂನರ್, 2 ಹ್ಯುಂಡೈ ಕ್ರೆಟಾ,2 ಮಾರುತಿ ಬ್ರೆಝಾ ಕಾರುಗಳು ಸೇರಿವೆ. ಹೀಗೆ ವಶಪಡಿಸಿಕೊಂಡ ಕಾರುಗಳಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್‌ರವರಿಗೆ ಸೇರಿದ ಟೊಯೊಟಾ ಫಾರ್ಚೂನರ್‌ ಸಹ ಸೇರಿದೆ.

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ಲಾಲೂ ಪ್ರಸಾದ್ ಯಾದವ್‌ರವರಿಗೆ ಸೇರಿದ ಈ ಟೊಯೊಟಾ ಫಾರ್ಚೂನರ್ ಕಾರ್ ಅನ್ನು 6 ವರ್ಷಗಳ ಹಿಂದೆ ಕಳವು ಮಾಡಲಾಗಿತ್ತು. ಈ ಟೊಯೊಟಾ ಫಾರ್ಚೂನರ್ ಕಾರ್ ಅನ್ನುಲಾಲೂ ಯಾದವ್‌ರವರ ಮನೆ ಬಳಿಯಿಂದ ಕಳುವು ಮಾಡಲಾಗಿತ್ತು. ಈ ಸಂಬಂಧ ಹರಿಯಾಣದ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ದೆಹಲಿ, ಹರಿಯಾಣ, ಗುಜರಾತ್, ಪಂಜಾಬ್‌ ರಾಜ್ಯಗಳಲ್ಲಿ ಹೆಚ್ಚಿನ ವಾಹನಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೈಕಿ 5 ವಾಹನಗಳ ಮಾಹಿತಿಯನ್ನು ಇನ್ನೂ ಕಂಡುಹಿಡಿಯಬೇಕಿದೆ.

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ಈ ಕಾರುಗಳವು ಪ್ರಕರಣದಲ್ಲಿ ಪನ್ಸಾಗ್ ತಮಾಗ್ ಹಾಗೂ ವಿಕ್ಕಿ ಗುರುಂಗ್ ಎಂಬುವವರನ್ನು ಬಂಧಿಸಲಾಗಿತ್ತು. ಸದ್ಯಕ್ಕೆ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಪೊಲೀಸರ ತನಿಖೆಯ ವೇಳೆಯಲ್ಲಿ ಆರೋಪಿಗಳು ಹಲವು ವಾಹನಗಳನ್ನು ಕಳವು ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ. ಕದ್ದ ಕಾರುಗಳಲ್ಲಿ ಲಾಲೂ ಪ್ರಸಾದ್ ಯಾದವ್‌ರವರ ಕಾರು ಕೂಡ ಪತ್ತೆಯಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ವಶಕ್ಕೆ ಪಡೆದ ವಾಹನಗಳು ನಕಲಿ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದವು. ಇವುಗಳಲ್ಲಿ 5 ವಾಹನಗಳು ಒಂದೇ ಚಾಸಿಸ್ ನಂಬರ್ ಹೊಂದಿದ್ದವು. ವಶಕ್ಕೆ ಪಡೆಯಲಾದ ಈ ಎಲ್ಲಾ ವಾಹನಗಳ ಬೆಲೆ ಸುಮಾರು ರೂ.9.34 ಕೋಟಿಗಳಾಗುತ್ತದೆ. ಕಾರುಗಳ್ಳರು ಕಾರುಗಳಿಗೆ ಯಾವುದೇ ಹಾನಿಯನ್ನುಂಟು ಮಾಡಿರಲಿಲ್ಲ. ಎಲ್ಲ ಕಾರುಗಳೂ ಉತ್ತಮ ಸ್ಥಿತಿಯಲ್ಲಿವೆ.

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ಸಾಮಾನ್ಯವಾಗಿ ಕಾರುಗಳನ್ನು ಕದ್ದ ನಂತರ ಅವುಗಳ ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಇದರಿಂದ ಯಾರೂ ಅವುಗಳನ್ನು ಪತ್ತೆಹಚ್ಚಲಾಗುವುದಿಲ್ಲ. ಕಾರು ಕಳ್ಳತನವಾಗುವುದನ್ನು ತಡೆಯಲು ವಾಹನ ತಯಾರಕ ಕಂಪನಿಗಳು ಹಲವಾರು ಫೀಚರ್‌ಗಳನ್ನು ನೀಡುತ್ತಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

6 ವರ್ಷಗಳ ನಂತರ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಕಾರು

ಕಾರುಗಳಲ್ಲಿ ಕಾಣದಂತೆ ಜಿಪಿಎಸ್ ಅನ್ನು ಅಳವಡಿಸಲಾಗಿರುತ್ತದೆ. ಇವುಗಳನ್ನು ಎಲ್ಲಿ ಅಳವಡಿಸಲಾಗಿದೆ ಎಂಬುದನ್ನು ಕಳ್ಳರಿಗೆ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಕಾರಿನಲ್ಲಿ ಜಿಪಿಎಸ್ ಅಳವಡಿಸುವುದರಿಂದ ಅವುಗಳಿರುವ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

Most Read Articles

Kannada
English summary
Lalu Prasad Yadav stolen Toyota Fortuner recovered after 6 years. Read in Kannada.
Story first published: Friday, June 12, 2020, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X