ಲಿಯಾನಾರ್ಡೊ ಡಿಕಾಪ್ರಿಯೊ - ನಟನೆಗಿಂತಲೂ ಮಿಗಿಲಾಗಿ ಓರ್ವ ಬದ್ಧ ಪರಿಸರವಾದಿ

By Nagaraja

22 ವರ್ಷಗಳ ಚಲನಚಿತ್ರ ಜೀವನದ ಬಳಿಕ ಕೊನೆಗೂ ಅತ್ಯುತ್ತಮ ನಟನೆಗಾಗಿ ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಗೆದ್ದಿರುವ ಅಮೆರಿಕದ ಹೆಸರಾಂತ ನಟ ಲಿಯಾನಾರ್ಡೊ ಡಿಕಾಪ್ರಿಯೊ ಪರಿಸರದ ಬಗ್ಗೆ ವಹಿಸುತ್ತಿರುವ ಕಾಳಜಿ ಅಷ್ಟಿಷ್ಟಲ್ಲ.

ತಾರೆಯರು ಬಣ್ಣ ಹಚ್ಚುವ ಈ ಲೋಕದಲ್ಲಿ ಡಿಕಾಪ್ರಿಯೊ, ನಿಜ ಜೀವನದಲ್ಲೂ 'ಸ್ಟಾರ್' ಪದವಿ ಆಲಂಕರಿಸಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ಸ್ವೀಕರಿಸುವ ವೇಳೆಯಲ್ಲೂ ಜಾಗತಿಕ ತಾಪಮಾನ ಮಟ್ಟ ಏರಿಕೆಯ ಬಗ್ಗೆ ಡಿಕಾಪ್ರಿಯೊ ನಡೆಸಿರುವ ಪರಿಣಾಮಕಾರಿ ಭಾಷಣವು ಇಡೀ ಸಮಾಜವನ್ನೇ ಎಚ್ಚೆತ್ತುಕೊಳ್ಳುವಂತೆ ಪ್ರೇರಣೆ ನೀಡಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಜಾಗತಿಕ ಮಟ್ಟದಲ್ಲಿ ಹಲವಾರು ಪರಿಸರ ಸಂಘಟನೆಗಳಿಂದ ಮೆಚ್ಚುಗೆಗೆ ಪಾತ್ರವಾಗಿರುವ ಡಿ ಕಾಪ್ರಿಯೊ ಪ್ರಮುಖವಾಗಿಯೂ ತಮ್ಮ ಸಂಚಾರಕ್ಕಾಗಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳ ಬಳಕೆಯನ್ನು ಮಾಡುತ್ತಾರೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಟೈಟಾನಿಕ್ ಚಿತ್ರದ ಮುಖಾಂತರ ಕೀರ್ತಿಗೆ ಪಾತ್ರವಾಗಿರುವ ಡಿಕಾಪ್ರಿಯೊ ಬಳಿ ಟೆಸ್ಲಾ ರೋಡ್ ಸ್ಟರ್, ಟೊಯೊಟಾ ಪ್ರಯಸ್, ಫಿಸ್ಕೆರ್ ಪ್ಲಗ್ ಇನ್ ಹೈಬ್ರಿಡ್ ಮತ್ತು ಬಿಎಂಡಬ್ಲ್ಯು ಎಚ್7 ಕಾರುಗಳಿವೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಅಷ್ಟೇ ಯಾಕೆ ತಮ್ಮ ಮನೆಗೂ ಸೋಲರ್ ಪ್ಯಾನೆಲ್ ಗಳನ್ನು ಲಗತ್ತಿಸುವ ಮೂಲಕ ಲಿಯಾನಾರ್ಡೊ ಡಿಕಾಪ್ರಿಯೊ ಎಲ್ಲರಿಗೂ ಮಾದರಿಯಾಗಿದ್ದಾರೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಈ ಪೈಕಿ ಬಿಎಂಡಬ್ಲ್ಯು ಹೈಡ್ರೋಜನ್ 7 ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ನಿರ್ಮಾಣ ಮಾಡಲಾಗುತ್ತಿದೆ. ಇದು 6 ಲೀಟರ್ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಆಧುನಿಕ ಹೋಂಡಾ, ಜನರಲ್ ಮೋಟಾರ್ಸ್ ಇತ್ಯಾದಿ ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನದ ಬದಲಾಗಿ ಬಿಎಂಡಬ್ಲ್ಯು ಹೈಡ್ರೋಜನ್ 7 ಕಾರಿನಲ್ಲಿ ಆಂತರಿಕ ದಹನಕಾರಿ ಎಂಜಿನ್ ಮುಖಾಂತರ ಹೈಡ್ರೋಜನ್ ದಹನ ಮಾಡಲಾಗುತ್ತದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಹೈಡ್ರೋಜನ್ 7 ವಿಶ್ವದ ಮೊದಲ ನಿರ್ಮಾಣ ಸಿದ್ಧ ಹೈಡ್ರೋಜನ್ ಕಾರು ಎಂದು ಬಿಎಂಡಬ್ಲ್ಯು ಅಭಿಪ್ರಾಯಪಟ್ಟಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಟೆಸ್ಲಾ ರೋಡ್ ಸ್ಟರ್, ಅಮೆರಿಕದ ಜನಪ್ರಿಯ ಟೆಸ್ಲಾ ಮೋಟಾರ್ಸ್ ನಿರ್ಮಿಸುತ್ತಿರುವ ಬ್ಯಾಟರಿ ಎಲೆಕ್ಟ್ರಿಕ್ ಕ್ರೀಡಾ ಕಾರಾಗಿದೆ. ಇದು ಕೂಡಾ ಹಾಲಿವುಡ್ ನಟನ ಮೆಚ್ಚುಗೆಗೆ ಪಾತ್ರವಾಗಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಜಾಗತಿಕ ಮಟ್ಟದಲ್ಲಿ 30 ರಾಷ್ಟ್ರಗಳಿಗೆ ಪಸರಿಸಿರುವ ಟೆಸ್ಲಾ ಆಧುನಿಕ ಜಗತ್ತಿನ ಅತ್ಯಂತ ಯಶಸ್ವಿ ವಿದ್ಯುತ್ ಚಾಲಿತ ಕಾರು ಸಂಸ್ಥೆಗಳಲ್ಲಿ ಒಂದಾಗಿದೆ. ಇದರಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಬಳಕೆ ಮಾಡಲಾಗಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ ಟೆಸ್ಲಾ ರೋಡ್ ಸ್ಟರ್ 393 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಟೊಯೊಟಾ ಪ್ರಯಸ್ ಸಂಪೂರ್ಣ ಹೈಬ್ರಿಡ್ ಎಲೆಕ್ಟ್ರಿಕ್ ಮಧ್ಯಮ ಗಾತ್ರದ ಹ್ಯಾಚ್ ಬ್ಯಾಕ್ ಕಾರಾಗಿದೆ. ಇದು ಕೂಡಾ ಹೆಚ್ಚು ಪರಿಸರ ಸ್ನೇಹಿಯಾಗಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಅಮೆರಿಕ ಪರಿಸರ ಸಂರಕ್ಷಣಾ ಏಜೆನ್ಸಿ, ಕ್ಯಾಲಿಫೋರ್ನಿಯಾ ಏರ್ ರಿಸರ್ಚ್ ಬೋರ್ಡ್ ನಿಂದ ಅತ್ಯಂತ ಸ್ವಚ್ಛವಾದ ಕಾರೆಂಬ ಗೌರವಕ್ಕೂ ಇದು ಪಾತ್ರವಾಗಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ತವರೂರಾದ ಜಪಾನ್ ಹಾಗೂ ಅಮೆರಿಕದಲ್ಲಿ ಅತಿ ಹೆಚ್ಚು ಮಾರಾಟವನ್ನು ಹೊಂದಿರುವ ಟೊಯೊಟಾ ಪ್ರಯಸ್, ಜಾಗತಿಕವಾಗಿ 90ಕ್ಕೂ ಹೆಚ್ಚು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದ ಫೋಕ್ಸ್ ವ್ಯಾಗನ್ ಮಹಾ ಮಾಲಿನ್ಯ ಪ್ರಕರಣದ ವಿರುದ್ಧವೂ ಧ್ವನಿಯೆತ್ತಿರುವ ಲಿಯಾನಾರ್ಡೊ ಡಿಕಾಪ್ರಿಯೊ, ಈ ಬಗ್ಗೆ ಸಿನೆಮಾ ನಿರ್ಮಿಸುವುದಾಗಿಯೂ ತಿಳಿಸಿದ್ದರು.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಓರ್ವ ಬದ್ಧ ಪರಿಸರವಾದಿಯಾಗಿರುವ ಡಿಕಾಪ್ರಿಯೊ ಪರಿಸರೀಯ ಸಮೂಹಗಳಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಬಾಡಿಗೆಗೆ ಪಡೆದ ಖಾಸಗಿ ಜೆಟ್ ವಿಮಾನಗಳ ಬದಲು ವಾಣಿಜ್ಯ ವಿಮಾನಗಳಲ್ಲಿ ಪಯಣಿಸಲು ಆದ್ಯತೆ ಕೊಟ್ಟಿರುತ್ತಾರೆ.

ಲಿಯಾನಾರ್ಡೊ ಡಿಕಾಪ್ರಿಯೊ - ಓರ್ವ ಬದ್ಧ ಪರಿಸರವಾದಿ

ಜಾಗತಿಕ ತಾಪಮಾನ ಏರಿಕೆಯನ್ನು ಪರಿಸರಕ್ಕೆ ಎದುರಾಗುತ್ತಿರುವ ಮೊದಲ ಸವಾಲು ಎಂದಿರುವ ಡಿಕಾಪ್ರಿಯೊ ಹಲವಾರು ಪರಿಹಾರ ಕಾರ್ಯಗಳಿಗಾಗಿ ದೇಣಿಗೆಯನ್ನು ನೀಡಿದ್ದಾರೆ.

Most Read Articles

Kannada
English summary
Leonardo DiCaprio Car Collection
Story first published: Tuesday, March 1, 2016, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X