ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

By Nagaraja

ಲೈಫ್ ಲೈನ್ ಎಕ್ಸ್‌ಪ್ರೆಸ್ ಅಥವಾ ಜೀವನ್ ರೇಖಾ ಎಕ್ಸ್ ಪ್ರೆಸ್ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲಾಗಿದ್ದು, ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ಒದಗಿಸುತ್ತಿದೆ. ಇಂಪಾಕ್ಟ್ ಇಂಡಿಯಾ ಫೌಂಡೇಶನ್ ಅಡಿಯಲ್ಲಿ ಭಾರತೀಯ ರೈಲ್ವೆ ಮತ್ತು ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ಲೈಫ್ ಲೈನ್ ಎಕ್ಸ್ ಪ್ರೆಸ್ ಕಾರ್ಯಾಚರಿಸುತ್ತಿದೆ.

ಇದಕ್ಕೆ ಅಂತರಾಷ್ಟ್ರೀಯ ಸಹಾಯಾರ್ಥ ಸಂಸ್ಥೆ ಇಂಪಾಕ್ಟ್ ಯುಕೆ ಧನ ಸಹಾಯ ಒದಗಿಸುತ್ತಿದೆ. 1991 ಜುಲೈ 16ರಂದು ಆರಂಭವಾಗಿರುವ ಲೈಫ್ ಲೈನ್ ಎಕ್ಸ್ ಪ್ರೆಸ್ ಆಗಲೇ ಗ್ರಾಮೀಣ ಪ್ರದೇಶದಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಮಂದಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಿದೆ.

ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

ತಲುಪಲು ಸಾಧ್ಯವಾಗದ ಅಥವಾ ವೈದ್ಯಕೀಯ ಸೇವೆ ಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕರಿಗೆ ಮತ್ತು ಮಕ್ಕಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ನೆರವು ನೀಡುವುದು ಪ್ರಮುಖ ಧ್ಯೇಯವಾಗಿದೆ.

ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

ಭಾರತೀಯ ರೈಲ್ವೆ ಜಾಲವು 85,000ಕ್ಕೂ ಹೆಚ್ಚು ಕೀ.ಮೀ. ಉದ್ದಕ್ಕೂ ಹರಡಿದ್ದು, ಇದರ ಸಂಪೂರ್ಣ ಸದುಪಯೋಗವನ್ನು ಲೈಫ್ ಲೈನ್ ಎಕ್ಸ್ ಪ್ರೆಸ್ ಪಡೆಯಲಿದೆ.

ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

ತಾತ್ಕಾಲಿಕ ವೈದ್ಯಕೀಯ ಮೂಲ ಸೌಕರ್ಯ ಮತ್ತು ಸೇವೆಯಲ್ಲಿ ಸುಧಾರಣೆ ತರುವುದು ಸಹ ಲೈಫ್ ಲೈನ್ ಎಕ್ಸ್ ಪ್ರೆಸ್ ಯೋಜನೆಯ ಭಾಗವಾಗಿದೆ.

ಸೇವೆಗಳು

ಸೇವೆಗಳು

  • ಆರ್ಥೋಪೆಡಿಕ್ (ಅಸ್ಥಿಚಿಕಿತ್ಸೆ) ಶಸ್ತ್ರಚಿಕಿತ್ಸೆ. ಉದಾ:- ಪೊಲಿಯೊ ಇತ್ಯಾದಿ ರೋಗಗಳು,
  • ಭಾಗಶಃ ಕುರುಡು ರೋಗಿಗಳಿಗೆ ಪವರ್ ಗ್ಲಾಸ್ ವಿತರಣೆ,
  • ಭಾಗಶ: ಕಿವುಡರಿಗೆ ನೆರವು,
  • ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ,
  • ಅಪಸ್ಮಾರ,
  • ಆಪ್ತ ಸಮಾಲೋಚನೆ ಮತ್ತು ಉಲ್ಲೇಖಿತ ಸೇವೆಗಳು
  • ಸೇವೆಗಳು

    ಸೇವೆಗಳು

    • ಸ್ಥಳೀಯ ಆರೋಗ್ಯ ಅಧಿಕಾರಿಗಳ ಸಂಪರ್ಕ ಮತ್ತು ಅನುಸರಣಾ ಸೇವೆಗಳು,
    • ಸೋಂಕು ತಟ್ಟದಂತೆ ಮುಂಜಾಗ್ರತೆ,
    • ನ್ಯೂಟ್ರಿಷನಲ್ ಮೌಲ್ಯಮಾಪನ ಮತ್ತು ಸೇವೆಗಳು,
    • ನಿರ್ಲಕ್ಷ್ಯ ವಹಿಸಿದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು,
    • ವೈದ್ಯಕೀಯ ಮತ್ತು ಸಂಯುಕ್ತ ಆರೋಗ್ಯ ವೃತ್ತಿಪರರಿಂದ ತರಬೇತಿ.
    • ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      ಲೈಫ್ ಲೈನ್ ರೈಲು ಪ್ರಮುಖವಾಗಿಯೂ ಸಾಕಷ್ಟು ಆರೋಗ್ಯ ಸೌಲಭ್ಯಗಳನ್ನು ಹೊಂದಿರದ ದೇಶದ ಮೂಲೆ ಮೂಲೆಗಳ ಗ್ರಾಮೀಣ ಪ್ರದೇಶಗಳಿಗೆ ತೆರಳಿ ವೈದ್ಯಕೀಯ ನೆರವನ್ನು ನೀಡುತ್ತದೆ. ಪ್ರಕೃತಿ ವಿಕೋಪ ಬಾಧಿತ ಪ್ರದೇಶಗಳಿಗೂ ಇದರ ಸೇವೆ ಲಭ್ಯವಾಗಲಿದೆ.

      ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      ಪ್ರತಿ ಸ್ಥಳದಲ್ಲೂ 21ರಿಂದ 25 ದಿನಗಳ ವರೆಗೆ ತಂಗಲಿರುವ ಲೈಫ್ ಲೈನ್ ಎಕ್ಸ್ ಪ್ರೆಸ್ ಅಗತ್ಯ ಬಿದ್ದಲ್ಲಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದೆ.

      ಸೌಕರ್ಯಗಳು

      ಸೌಕರ್ಯಗಳು

      ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಸಿ ಕೋಚ್ ಗಳನ್ನು ಲೈಫ್ ಲೈನ್ ಎಕ್ಸ್ ಪ್ರೆಸ್ ನಲ್ಲಿ ಜೋಡಣೆ ಮಾಡಲಾಗಿದೆ. ಅಲ್ಲದೆ ಎರಡು ಶಸ್ತ್ರಚಿಕಿತ್ಸಾ ಆಪರೇಷನ್ ಥಿಯೇಟರ್ ಗಳಿರಲಿದೆ.

      ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      ರೋಗಿಗಳಿಗಾಗಿ ಎರಡು ಚೇತರಿಕಾ ಕೊಠಡಿಗಳು ಇದರಲ್ಲಿದೆ. ಆನ್ ಬೋರ್ಡ್ ಪವರ್ ಜನರೇಟರ್, ಅಡುಣೆ ಕೋಣೆ, ವೈದ್ಯಕೀಯ ಸರಬುರಾಜು ಸಂಗ್ರಹ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ವಸತಿ ಸೇವೆಯು ಇರಲಿದೆ.

      ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      ಸ್ಥಳೀಯ ವೈದ್ಯರಿಗೆ ಶಸ್ತ್ರಚಿಕಿತ್ಸೆಯ ತರಬೇತಿಯನ್ನು ನೀಡುವ ಸಲುವಾಗಿ ನೇರ ಪ್ರಸಾರಕ್ಕಾಗಿ ಟಿವಿ ಕ್ಯಾಮೆರಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

      ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      ಇವೆಲ್ಲದರ ಹೊರತಾಗಿ ಕಣ್ಣುಗಳ ಪರೀಕ್ಷಾ ಕೊಠಡಿ, ದಂತ ಘಟಕ, ಲ್ಯಾಬೋರೇಟರಿ, ಎಕ್ಸ್ ರೇ ಘಟಕ ಮತ್ತು ದೊಡ್ಡದಾದ ಎಲ್ ಇಡಿ ಪರದೆಯಿರಲಿದೆ. ಸಾರ್ವಜನಿಕರಿಗೆ ಸಂಭೋಧನೆ ಮಾಡುವ ವ್ಯವಸ್ಥೆಯು ಇದರಲ್ಲಿರುತ್ತದೆ.

      ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      ವೈದ್ಯಕೀಯ ಸಿಬ್ಬಂದಿಗಳಿಗಾಗಿ ಕೊಠಡಿಗಳ ಹೊರತಾಗಿ, ಅಡುಣೆ ಕೋಣೆ, ನೀರು ಶುದ್ಧೀಕರಣ, ಗ್ಯಾಸ್ ಸ್ಟೋವ್, ಎಲೆಕ್ಟ್ರಿಕ್ ಓವೆನ್ ಮತ್ತು ಫ್ರಿಡ್ಜ್ ವ್ಯವಸ್ಥೆಯಿರುತ್ತದೆ.

      ಲೈಫ್ ಲೈನ್ ಎಕ್ಸ್‌ಪ್ರೆಸ್; ಭಾರತದ ಹೆಮ್ಮೆಯ ವಿಶ್ವದ ಮೊದಲ ಸಂಚಾರಿ ಆಸ್ಪತ್ರೆ ರೈಲು

      25 ವರ್ಷಗಳಿಂದ ನಿರಂತರ ಸೇವೆಯಲ್ಲಿರುವ ಲೈಫ್ ಲೈನ್ ಎಕ್ಸ್ ಪ್ರೆಸ್ ಇದೇ ರೀತಿ ತನ್ನ ಸೇವೆಯನ್ನು ಮುಂದುವರಿಸಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
English summary
Made In India, By Indians – World's First Hospital Train
Story first published: Monday, April 25, 2016, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X