ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

By Manoj B.k

ಕದ್ದ ವಾಹನಗಳನ್ನು ಅಂತರ್‌ರಾಜ್ಯಗಳಿಗೆ ಸಾಗಿಸುವ ಖರೀದಿಮರ ತಂಡಗಳು ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸಿ ಮರುಮಾರಾಟ ಮಾಡುವುದು ಒಂದಡೆಯಾದಲ್ಲಿ ಹೊಸ ಕಾರುಗಳ ನೋಂದಣಿಯಲ್ಲಿ ಗೋಲ್ಮಾಲ್ ಮಾಡಿ ಸಾರಿಗೆ ಇಲಾಖೆಗೆಯೇ ಮೋಸ ಮಾಡಿ ಓಡಾಡುವ ಖದೀಮರ ಸಂಖ್ಯೆಗೂ ಕಡಿಮೆ ಇಲ್ಲ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಹೌದು, ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರುಗಳು ಓಡಾಡುತ್ತಿರುವ ಹಲವಾರು ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದಿದೆ. ಒಂದೇ ಮಾದರಿಯ ಕಾರುಗಳಲ್ಲಿ ನಕಲಿ ನೋಂದಣಿ ಸಂಖ್ಯೆಯನ್ನು ಬಳಕೆ ಮಾಡುತ್ತಿರುವುದು ಕಂಡುಬರುತ್ತಿದ್ದು, ನಕಲಿ ನಂಬರ್ ಕಾರು ಮಾಲೀಕರು ಈಗಾಗಲೇ ಭಾರೀ ಪ್ರಮಾಣದ ದಂಡತೆತ್ತಿದ್ದಾರೆ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಜಮ್ಮುವಿನ ಸೈನಿಕ್ ಸೆಕ್ಟರ್‌ನಲ್ಲೂ ಜೆಕೆ 01, ಟಿ 7347 ನೋಂದಣಿ ಸಂಖ್ಯೆಯಲ್ಲಿ ಎರಡು ಕಾರುಗಳು ಓಡಾಡುತ್ತಿರುವುದು ಕಂಡುಬಂದಿದ್ದು, ಸ್ಥಳೀಯ ನೀಡಿದ ಮಾಹಿತಿ ಮೇರೆಗೆ ಪೊಲೀಸರು ನಕಲಿ ನಂಬರ್ ಹೊಂದಿದ್ದ ಕಾರು ಮಾಲೀಕನನ್ನು ಲಾಕ್ ಮಾಡಿಕೊಂಡಿದ್ದಾರೆ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಅಸಲಿ ಕಾರು ಮಾಲೀಕನು ತನ್ನ ಮಹೀಂದ್ರಾ ಎಕ್ಸ್‌ಯುವಿ500 ಎಸ್‌ಯುವಿ ಕಾರಿಗೆ ಹಾಕಿದ್ದ ನೋಂದಣಿ ಸಂಖ್ಯೆಯನ್ನು ಕದ್ದ ಖದೀಮನು ಅದೇ ಬಣ್ಣ ಅದೇ ಬ್ರಾಂಡ್ ಕಾರಿಗೆ ಹಾಕಿಕೊಂಡಿದ್ದು, ಸುಮಾರು 2 ವರ್ಷಗಳ ನಂತರ ನಕಲಿ ನಂಬರ್ ಪ್ಲೇಟ್ ಕಾರು ಪತ್ತೆಯಾಗಿದೆ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಅಸಲಿ ಮತ್ತು ನಕಲಿ ಕಾರುಗಳು ಒಂದೇ ಜಿಲ್ಲೆಯಲ್ಲಿ ಓಡಾಡುತ್ತಿದ್ದರೂ ಸಹ ಯಾರಿಗೂ ಗೊತ್ತಾಗದ ಹಾಗಿದ್ದ ನಕಲಿ ಕಾರು ಮಾಲೀಕನು ಸ್ಥಳೀಯರ ಮಾಹಿತಿ ಮೇರೆಗೆ ಸಿಕ್ಕಿಬಿದ್ದಿದ್ದು, ನಕಲಿ ಮಾಲೀಕನು ಮಾಡುತ್ತಿದ್ದ ರಸ್ತೆ ಉಲ್ಲಂಘನೆ ಪ್ರಕರಣಗಳಿಗೆ ಅಸಲಿ ಕಾರು ಮಾಲೀಕನು ಅದೆಷ್ಟೋ ಬಾರಿ ದಂಡ ತೆತ್ತಿರುವುದು ವಿಚಾರಣೆಯ ವೇಳೆ ಬಯಲಾಗಿದೆ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ನಕಲಿ ಕಾರು ಮಾಲೀಕನು ಪ್ರತಿ ಬಾರಿಯೂ ರಸ್ತೆ ಉಲ್ಲಂಘನೆ ಮಾಡಿದಾಗಲೂ ಅಸಲಿ ಕಾರು ಮಾಲೀಕನಿಗೆ ನೋಟಿಸ್ ಹೋಗುತ್ತಿದ್ದಾಗ ಇದ್ಯಾವುದು ಗೊತ್ತಿಲ್ಲದ ಕಾರು ಮಾಲೀಕನು ದಂಡ ಪಾವತಿಸುತ್ತಲೇ ಇದ್ದ. ಆದ್ರೆ ದಿನಗಳೆದಂತೆ ಹಿಂದೆ ಬಂದಿದ್ದ ನೋಟಿಸ್ ಒಂದು ಅಸಲಿ ಕಾರು ಮಾಲೀಕನಿಗೆ ಶಾಕ್ ಕೊಟ್ಟಿತ್ತು.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ತಾನು ಮಾಡದೆ ಇರುವ ತಪ್ಪಿಗೆ ದಂಡ ವಿಧಿಸಿದ್ದರ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಅಸಲಿ ಕಾರು ಮಾಲೀಕನು ತನ್ನ ಕಾರು ನಂಬರ್ ಮೇಲೆ ಮತ್ತೊಂದು ವಾಹನ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸಲಿ ಕಾರು ಮಾಲೀಕನು ವ್ಯಕ್ತಪಡಿಸಿದ ಅನುಮಾನದ ಮೇಲೆ ತನಿಖೆ ಶರುಮಾಡಿದ್ದಲ್ಲದೇ ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಕಲೆಹಾಕಿದ್ದರು. ಈ ಹಿಂದೆ ನಿಯಮ ಉಲ್ಲಂಘನೆಯಾಗಿರುವ ಪ್ರದೇಶಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಕೆಲವು ಸ್ಥಳೀಯರು ಇಂತದೊಂದು ಕಾರು ಇರುವ ಬಗ್ಗೆ ಮಾಹಿತಿ ನೀಡಿದ್ದರು.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಆದರೂ ಸಹ ನಕಲಿ ಕಾರು ಪತ್ತೆಯಾಗದೆ ಮತ್ತೆ ಮತ್ತೆ ಸಾರಿಗೆ ನಿಮಯ ಉಲ್ಲಂಘನೆಯ ನೋಟಿಸ್‌ಗಳು ಅಸಲಿ ಮಾಲೀಕನಿಗೆ ಬರುತ್ತಲೇ ಇದ್ದವು. ಆಗ ಮತ್ತೆ ಠಾಣೆಗೆ ತೆರಳಿದ ಅಸಲಿ ಕಾರು ಮಾಲೀಕನು ತನಗೆ ಬರುತ್ತಿರುವ ನೋಟಿಸ್‌ಗಳ ಬಗ್ಗೆ ಅಳಲು ತೊಡಿಕೊಂಡಿದ್ದ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಈ ಬಾರಿ ನಕಲಿ ಕಾರು ಮಾಲೀಕನನ್ನು ಪತ್ತೆ ಹಚ್ಚಲೇಬೇಕೆಂಬ ಉದ್ದೇಶದಿಂದ ಪಕ್ಕಾ ಪ್ಲ್ಯಾನ್ ಮಾಡಿಯೇ ಫೀಲ್ಡ್‌ಗೆ ಇಳಿದಿದ್ದ ಪೊಲೀಸರು ನಕಲಿ ಕಾರು ಓಡಾಡುವ ಪ್ರದೇಶಗಳಲ್ಲಿ ಸ್ಥಳೀಯರ ಮಾಹಿತಿಯನ್ನು ಆಧರಿಸಿ ಕೊನೆಗೂ ನಕಲಿ ನಂಬರ್ ಪ್ಲೇಟ್ ಇರುವ ಕಾರು ಮಾಲೀಕನನ್ನು ಲಾಕ್ ಮಾಡಿದ್ದಾರೆ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ, ಅಸಲಿ ಕಾರು ಮಾದರಿಯಲ್ಲೇ ಇರುವ ನಕಲಿ ನಂಬರ್ ಕಾರು ಚಾರ್ಸಿ ನಂಬರ್ ಹೊರತುಪಡಿಸಿ ಬ್ರಾಂಡ್, ಬಣ್ಣ, ಎಂಜಿನ್ ಮತ್ತು ವೆರಿಯೆಂಟ್ ಸೇರಿದಂತೆ ಎಲ್ಲಾ ಮಾಹಿತಿಯು ಒಂದೇ ಆಗಿದ್ದು, ನೋಂದಣಿ ಮಾಡಿಸಲು ಖರ್ಚಾಗುವ ಹಣ ಉಳಿಸಲು ಹೋಗಿ ದಂಡ ತೆತ್ತೆದ್ದಾನೆ.

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಹೀಗಾಗಿಯೇ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ನಿಯಮವು ಇಂತಹ ಪ್ರಕರಣಗಳನ್ನು ತಡೆಗಟ್ಟು ಸಾಕಷ್ಟು ಸಹಕಾರಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೊಸ ನಿಯಮವನ್ನು ಕಡ್ಡಾಯಗೊಳಿಸಿರುವ ಅತ್ಯುತ್ತಮವಾದ ಕ್ರಮ ಅಂದ್ರೆ ತಪ್ಪಾಗುವುದಿಲ್ಲ.

Most Read Articles

Kannada
English summary
Mahindra XUV500s Seized For Having Same Number Plate. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X