2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಮಾರುತಿ ಆಲ್ಟೋ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ ಮತ್ತು ಇದು ಕಳೆದ ಎರಡು ದಶಕಗಳಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ. ಆಲ್ಟೋ ಭಾರತೀಯ ಪ್ರಯಾಣಿಕ ವಾಹನ ಮಾರುಕಟ್ಟೆಗೆ ಅತ್ಯುತ್ತಮ ಎಂಟ್ರಿ ಲೆವೆಲ್ ಕಾರ್ ಆಗಿದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಸೆಕೆಂಡ್ ಹ್ಯಾಂಡ್ ಮಾರುತಿ ಆಲ್ಟೋ ಕಾರುಗಳು ಕೂಡ ಉತ್ತಮ ಬೇಡಿಕೆಯನ್ನು ಹೊಂದಿದೆ. ಹಲವಾರು ಆಲ್ಟೋ ಕಾರನ್ನು ಮಾಡಿಫೈಗೊಳಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಹಲವು ಮಾಡಿಪೈ ಮಾರುತಿ ಆಲ್ಟೋ ಕಾರುಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ರೀತಿ ವಿಭಿನ್ನವಾಗಿ ಮಾಡಿಫೈಗೊಂಡ ಆಲ್ಟೋ ಕಾರಿನ ವೀಡಿಯೊ ವೈರಲ್ ಆಗಿದೆ. ವಿಕಾಸ್ ಚೌಧರಿ ವ್ಲಾಗ್ ನಿಂದ ಮಾರುತಿ ಆಲ್ಟೋ 800 ಮಾದರಿಯನ್ನು 2-ಡೋರ್ ಕೂಪೆ ಕ್ರಾಸ್ಒವರ್ ಆಗಿ ಮಾಡಿಫೈಗೊಳಿಸಿದ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಈ ವೀಡಿಯೊದಲ್ಲಿ ಮಾರ್ಪಾಡಿನ ಪ್ರಕ್ರಿಯೆಯನ್ನು ವಿವರಿಸುತ್ತದೆ ಮತ್ತು ಈ ಕಸ್ಟಮೈಸ್ ಮಾಡಲಾದ ಮಾದರಿಯ ಪ್ರತಿಯೊಂದು ಮಹತ್ವದ ವಿವರವನ್ನು ಬಹಿರಂಗಪಡಿಸುತ್ತದೆ. ಕಾರನ್ನು ಎರಡು ಡೋರಿನ ಕೂಪೆ ಕ್ರಾಸ್ಒವರ್ ಆಗಿ ಮಾರ್ಪಡಿಸಲಾಗಿದೆ. ಹೊರಾಂಗಣ ಮತ್ತು ಒಳಾಂಗಣ ಎರಡರಲ್ಲೂ ಪ್ರಮುಖ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಮಾಡಿಫೈಗೊಂಡ ಮಾರುತಿ ಆಲ್ಟೋ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಒಂದು ಜೋಡಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಕಸ್ಟಮ್ ನಿರ್ಮಿತ ಹೌಸಿಂಗ್ ಒಳಗೆ ಇರಿಸಲಾಗುತ್ತದೆ ಮತ್ತು ಅದರ ಮೇಲೆ ಎಲ್ಇಡಿ DRL ಸ್ಟ್ರೈಪ್ ಅನ್ನು ಪಡೆಯುತ್ತದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಇದು ಕಟ್-ಔಟ್ ವಿಭಾಗದೊಂದಿಗೆ ಫ್ಲಾಟ್ ಬಾನೆಟ್ ಮತ್ತು ಅದರ ದೈತ್ಯಾಕಾರದ ನೋಟವನ್ನು ಎತ್ತಿಹಿಡಿಯುವ ಬೃಹತ್ ರೇಡಿಯೇಟರ್ ಗ್ರಿಲ್ ಅನ್ನು ಪಡೆಯುತ್ತದೆ. ನಿರೀಕ್ಷೆಯಂತೆ, ಇದು ದಪ್ಪನಾದ ಮುಂಭಾಗದ ಬಂಪರ್ ಅನ್ನು ಪಡೆಯುತ್ತದೆ, ಇದು ಕಾರಿಗೆ ಬುಚ್ ಮತ್ತು ಮಸ್ಕಲರ್ ಶೈಲಿಯನ್ನು ನೀಡುತ್ತದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಕಾರಿನ ಸೈಡ್ ಪ್ರೊಫೈಲ್ ನಲ್ಲಿ, ಬೃಹತ್ ಬ್ಲ್ಯಾಕ್-ಔಟ್ ವ್ಹೀಲ್ ಆರ್ಚಾರ್, ವಿಶಾಲವಾದ ಟ್ರ್ಯಾಕ್‌ಗಳೊಂದಿಗೆ ದಪ್ಪನಾದ ಆಫ್-ರೋಡಿಂಗ್ ಟೈರ್‌ಗಳಿಂದ ಚೆನ್ನಾಗಿ ಕಾಣುತ್ತದೆ. ಇದು ಹೈ ಎಂಡ್ ಸ್ಪೋರ್ಟ್ಸ್ ಕ್ಕಾರುಗಳನ್ನು ಅನುಕರಿಸುವ ಸಿಸರ್ ಡೋರುಗಳನ್ನು ಸಹ ಪಡೆಯುತ್ತದೆ. ಕಾರನ್ನು ನೀಲಿ ಮತ್ತು ಕಪ್ಪು ಛಾಯೆಗಳೊಂದಿಗೆ ಉತ್ತಮವಾದ ಡ್ಯುಯಲ್-ಟೋನ್ ಥೀಮ್‌ನಲ್ಲಿದೆ. ಇದು ಕಾರಿಗೆ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಕ್ಯಾಬಿನ್ ಒಳಗೆ, ಆಫ್ಟರ್ ಮಾರ್ಕೆಟ್ ವರ್ಕ್‌ಶಾಪ್ ಲೆದರ್ ಅಪ್ಹೋಲ್ಸ್ಟರಿಯಲ್ಲಿ ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್‌ನೊಂದಿಗೆ ಆಲ್-ಬ್ಲ್ಯಾಕ್ ಥೀಮ್ ಅನ್ನು ಬಳಸಿದೆ. ಡ್ಯಾಶ್‌ಬೋರ್ಡ್‌ನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸೆ ಪ್ಲೇ ರೇಸಿಂಗ್-ಪ್ರೇರಿತ ಸ್ಲೀಕ್ ಸ್ಟೀರಿಂಗ್ ವೀಲ್ ಮತ್ತು ರೂಫ್, ಸೀಟುಗಳು ಮತ್ತು ಫ್ಲೋರ್ ಮ್ಯಾಟ್‌ಗಳಿಗೆ ಡೈಮಂಡ್-ಕಟ್ ಅಪ್ಹೋಲ್ಸ್ಟರಿ ಸೇರಿದಂತೆ ಕ್ಯಾಬಿನ್‌ನೊಳಗೆ ಟನ್ ಆಫ್ಟರ್‌ಮಾರ್ಕೆಟ್ ಯುನಿಟ್ ಗಳನ್ನು ಬಳಸಲಾಗಿದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಕಾರಿನ ಮೆಕ್ಯಾನಿಕಲ್ ವಿಭಾಗಕ್ಕೆ ಯಾವುದೇ ಬದಲಾವಣೆಗಳನ್ನು ಉಲ್ಲೇಖಿಸಲಾಗಿಲ್ಲ. ಆಲ್ಟೋ 0.8-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 47 ಬಿಹೆಚ್‍ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಇನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಹಲವು ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಕಂಪನಿಯು ಹೊಸ ತಲೆಮಾರಿನ ಆಲ್ಟೊ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಅನ್ನು ಸಹ ಪರೀಕ್ಷಿಸುತ್ತಿದೆ. ಹೊಸ ಮಾರುತಿ ಆಲ್ಟೋ ಎಲ್ಲಾ-ಹೊಸ ವಿನ್ಯಾಸ ಮತ್ತು ಯಾಂತ್ರಿಕ ಬದಲಾವಣೆಗಳೊಂದಿಗೆ ನವೀಕರಿಸಿದ ಒಳಾಂಗಣದೊಂದಿಗೆ ಬರಲಿದೆ.ನ್ಯೂ ಜನರೇಷನ್ ಆಲ್ಟೋ ಹ್ಯಾಚ್‌ಬ್ಯಾಕ್ ಹಗುರವಾದ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಅದು ಎಸ್-ಪ್ರೆಸ್ಸೊ, ಹೊಸ ಸೆಲೆರಿಯೊ ಮತ್ತು ವ್ಯಾಗನ್‌ಆರ್ ಅನ್ನು ಆಧಾರವಾಗಿಸಲಿದೆ. ಸುಧಾರಿತ ಸುರಕ್ಷತೆಗಾಗಿ ಉತ್ತಮ ಗುಣಮಟ್ಟದ ಸ್ಟೀಲ್‌ನೊಂದಿಗೆ ಪ್ಲಾಟ್‌ಫಾರ್ಮ್ ಅನ್ನು ಮಾರ್ಪಡಿಸಲಾಗುತ್ತದೆ.

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ಈ ಹೊಸ ಮಾರುತಿ ಆಲ್ಟೋ ಗಾತ್ರದಲ್ಲಿ ಸ್ವಲ್ಪ ದೊಡ್ದದಿರುತ್ತದೆ, ಏಕೆಂದರೆ ಇದು ಹೊರಹೋಗುವ ಮಾದರಿಗಿಂತ ಉದ್ದ, ಅಗಲ ಮತ್ತು ಎತ್ತರವಾಗಿ ಕಾಣುತ್ತದೆ. ಹೊಸ ಮಾದರಿಯು ಇತ್ತೀಚಿನ ಸೆಲೆರಿಯೊದೊಂದಿಗೆ ಕೆಲವು ವಿನ್ಯಾಸ ಹೋಲಿಕೆಗಳೊಂದಿಗೆ ಟಾಲ್ ಬಾಯ್ ಹ್ಯಾಚ್‌ಬ್ಯಾಕ್‌ನಂತೆ ಕಾಣುತ್ತದೆ. ಹೊಸ ಆಲ್ಟೋದ ಮುಂಭಾಗದ ಫಾಸಿಕ ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾಗುವುದು, ದೊಡ್ಡ ಗ್ರಿಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ. ಹೊಸ ಮಾದರಿಯು ಸ್ಕಪಲಟಡ್ ಬಾನೆಟ್ ಅನ್ನು ಹೊಂದಿರುತ್ತದೆ,

2-ಡೋರ್ ಕೂಪೆ ಕ್ರಾಸ್ಒವರ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಆಲ್ಟೋ 800 ಕಾರು

ನ್ಯೂ ಜನರೇಷನ್ ಮಾರುತಿ ಆಲ್ಟೋ ಅದರ ಪರೀಕ್ಷಾ ಹಂತದಲ್ಲಿದೆ ಮತ್ತು ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಬಳಿಕ ಬಿಡುಗಡೆಯಾಗಬಹುದು ಎಂದು ನಿರೀಕ್ಷೆಯಿದೆ. ವರದಿಗಳ ಪ್ರಕಾರ ಹೊಸ ಮಾರುತಿ ಆಲ್ಟೋ ಕಾರನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ,

Most Read Articles

Kannada
English summary
Maruti suzuki alto 800 modified into coupe crossover design details
Story first published: Wednesday, March 30, 2022, 16:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X