ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ದೇಶಾದ್ಯಂತ ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೂ ವಾಹನ ಚಾಲನೆ ವೇಳೆ ಕೆಲವರು ಮುಂಜಾಗ್ರತೆ ವಹಿಸುವುದೇ ಇಲ್ಲಾ. ಪರಿಣಾಮ ಸಣ್ಣಪುಟ್ಟ ತಪ್ಪುಗಳೇ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಅತಿಯಾದ ವೇಗ ಜೀವಕ್ಕೆ ಅಪಾಯಕ್ಕೆ ಆಹ್ವಾನ ಅಂತಾ ಗೊತ್ತಿದ್ರು ಜನಕ್ಕೆ ಮಾತ್ರ ಸ್ಪೀಡ್​ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರು ತಮ್ಮ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೂ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನ ಚಾಲನೆ ಮಾಡ್ತಾರೆ. ಅದರ ಪರಿಣಾಮವೇ ಸಾವು-ನೋವು ತಪ್ಪಿದ್ದಲ್ಲ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಇದಕ್ಕೆ ಉದಾಹರಣೆ ಅಂದ್ರೆ, ವ್ಯಾಗನ್ ಆರ್ ಕಾರೊಂದು ರಸ್ತೆ ಬದಿಯಲ್ಲಿ ಆಡವಾಡುತ್ತಿದ್ದ ಬಾಲಕನ ಮೇಲೆ ಹರಿದಿದ್ದು, ಪವಾಡಸದೃಶವಾಗಿ ಬದುಕಿ ಬಂದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಇತ್ತೀಚೆಗೆ ಹೆಚ್ಚುತ್ತಿರುವ ವಾಹನ ಸಂಖ್ಯೆಯಿಂದಾಗಿ ಪಾರ್ಕ್ ಮಾಡಲು ಸಹ ಜಾಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ವ್ಯಾಗನ್ ಆರ್ ಕಾರು ಹರಿದಿರುವ ಘಟನೆ ನಡೆದಿದೆ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಮುಂಬೈನ ಜನದಟ್ಟಣೆಯ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದ್ದು, ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ ಬಾಲಕನ ಮೇಲೆ ವ್ಯಾಗನ್ ಆರ್ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯು ಏಕಾಏಕಿ ಕಾರು ಹರಿಸಿದ್ದಾಳೆ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಆದ್ರೆ ಬಾಲಕ ಮಾತ್ರ ಮೈ ಮೇಲೆ ಕಾರು ಹರಿದರೂ ತನಗೆ ಏನೂ ಆಗಿಯೇ ಇಲ್ಲ ಎನ್ನುವಂತೆ ಎದ್ದು ಬಂದಿದ್ದು, ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿವೆ. ಇಷ್ಟೆಲ್ಲಾ ಆದ್ರು ಆ ಕಾರು ಚಾಲಕಿ ಮಾತ್ರ ಕಾರು ನಿಲ್ಲಿಸದೆ ಹೋಗಿರುವುದು ವಿಡಿಯೋದಲ್ಲಿ ಸ್ಪಷ್ಟ ಕಾಣಿಸುತ್ತದೆ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ನೆಲಕ್ಕೆ ಬಿದ್ದಿದ್ದ ಬಾಲಕನ ಬಗ್ಗೆ ಕಾರು ಚಾಲಕಿಯ ಗಮನಕ್ಕೆ ಬಂದಿತೋ ಇಲ್ಲವೋ ಎನ್ನುವ ಗೊಂದಲಗಳಿದ್ದು, ನೋಡ ನೋಡುತ್ತಿದ್ದಂತೆ ಬಾಲಕನ ಕಾಲಿನ ಮೇಲೆ ಕಾರು ಹತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಮಹಿಳೆಯ ನಿರ್ಲಕ್ಷ್ಯ.!

ಜನದಟ್ಟಣೆ ಮಧ್ಯೆಯು ಮಹಿಳಾ ಚಾಲಕಿ ಆಟವಾಡುತ್ತಿರುವ ಮಕ್ಕಳನ್ನು ಲೆಕ್ಕಿಸದೇ ವೇಗವಾಗಿ ಕಾರು ಚಾಲನೆ ಮಾಡುವ ಭರದಲ್ಲಿ ಈ ಎಡವಟ್ಟು ಮಾಡಿದ್ದು, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವುದೇ ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

MOST READ: ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಪೋಷಕರೇ ಎಚ್ಚರ.!

ಜನದಟ್ಟಣೆಯ ರಸ್ತೆ ಬದಿಗಳಲ್ಲಿ ಮಕ್ಕಳು ಆಟವಾಡುವುದು ಕಾಮನ್. ಹೀಗಿರುವಾಗ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸದೇ ಇದ್ರೆ ಅನಾಹುತಗಳಿಗೆ ಕಾರಣವಾಗಬಹುದು. ಇದರ ಜೊತೆಗೆ ವಾಹನ ಸವಾರರು ಸಹ ಜನದಟ್ಟಣೆ ಇರುವ ಕಡೆಗಳಲ್ಲಿ ನಿರ್ಲಕ್ಷ್ಯದಿಂದ ಚಾಲನೆ ಮಾಡುವ ಪ್ರವೃತ್ತಿ ಬಿಟ್ಟು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ ಚಾಲನೆ ಮಾಡುವುದು ಒಳಿತು.

ಬಾಲಕನ ಮೇಲೆ ವ್ಯಾಗನ್ ಆರ್ ಕಾರು ಹರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ದೂರು ದಾಖಲಾಗಿರುವ ಬಗ್ಗೆ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಪೋಷಕರೇ ಇತ್ತ ಗಮನಹರಿಸಿ- ಮಕ್ಕಳ ಮೇಲೆ ನಿಗಾ ಇಲ್ಲವಾದ್ರೆ ಹೀಗೆಲ್ಲಾ ಆಗಬಹುದು..!

ಓವರ್ ಸ್ಪೀಡ್‌ಗೂ ಮುನ್ನ ಹುಷಾರ್

ದೇಶಾದ್ಯಂತ ದಿನಂಪ್ರತಿ ನೂರಾರು ಅಪಘಾತ ಪ್ರಕರಣಗಳು ದಾಖಲಾಗುತ್ತಿದ್ದು, ಅಪಘಾತಗಳ ಸಂಖ್ಯೆ ತಡೆಯಲು ದೇಶಾದ್ಯಂತ ಕೇಂದ್ರ ಸಾರಿಗೆ ಇಲಾಖೆ ವಿವಿಧ ಮಾದರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಓವರ್ ಸ್ಪೀಡ್ ವಾಹನ ಚಾಲಕರಿಗೆ ಕೊಕ್ಕೆ ಹಾಕಲು ಹಾಕಿರುವ ಹೊಸ ಸೌಲಭ್ಯವೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಾಹನ ಸವಾರರೇ ಎಚ್ಚರ

ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ಜನಸಂಖ್ಯೆಯನ್ನೇ ಮಿರಿಸುವ ಮಟ್ಟಕ್ಕೆ ಹೊಗುತ್ತಿದೆ. ಇದರಿಂದಾಗಿ ಟ್ರಾಫಿಕ್ ನಿಯಂತ್ರಣ ಪೊಲೀಸರಿಗೆ ಹೊಸ ಸವಾಲಾಗುತ್ತಿದ್ದು, ಮಿತಿಮಿರುತ್ತಿರುವ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಹೊಸ ಹೊಸ ತಂತ್ರಜ್ಞಾನಗಳನ್ನು ಪ್ರಯೋಗಿಸುತ್ತಿದ್ದಾರೆ. ಇವುಗಳಲ್ಲಿ ಸ್ಪೀಡ್ ಡ್ರೈವಿಂಗ್ ಮಟ್ಟಹಾಕಲು ಮಾಡಿರುವ ಹೊಸ ಪ್ರಯೋಗವೊಂದು ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ವಾಹನ ಸವಾರರೇ ಎಚ್ಚರ

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಓವರ್ ಸ್ಪೀಡಿಂಗ್ ಮಾಡುವವರ ಪತ್ತೆಗೆ ಈ ಗ್ಯಾಡ್ಜೆಟ್ ಸಹಕಾರಿಯಾಗಿದ್ದು, ಓವರ್ ಸ್ಪೀಡಿಂಗ್ ಮಾಡಿದ ವಾಹನವನ್ನು ಪತ್ತೆ ಹಚ್ಚುವುದಲ್ಲದೇ ವಾಹನ ಮಾಲೀಕನಿಗೆ ನೋಟಿಸ್ ಕಳುಹಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ವಾಹನ ಸವಾರರೇ ಎಚ್ಚರ

ಓವರ್ ಸ್ಪೀಡಿಂಗ್ ಕಾರಣದಿಂದಾಗಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ, ಬೆಂಗಳೂರು ಸಂಚಾರಿ ಪೋಲಿಸ್ ರಾಡಾರ್ ಸ್ಪೀಡ್ ಸೈನ್ಬೋರ್ಡ್‍‍ಗಳನ್ನು (ಆರ್‌ಎಸ್ಎಸ್) ಹಾಕುತ್ತಿದ್ದು, ಇದು ಎದುರಿಗೆ ಬರುತ್ತಿರುವ ವಾಹನಗಳ ವೇಗವನ್ನು ಕೆಲವೇ ಸೆಕೆಂಡುಗಳಲ್ಲಿ ಅಳಿದು ಪ್ರದರ್ಶನ ಮಾಡುತ್ತೆ.

ವಾಹನ ಸವಾರರೇ ಎಚ್ಚರ

ಜೊತೆಗೆ ಟ್ರಾಫಿಕ್ ಪೊಲೀಸರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನಿಸುವ ಈ ತಂತ್ರಜ್ಞಾನವು ವೇಗದ ಮಿತಿ ಉಲ್ಲಂಘಿಸಿ ಚಲಿಸುತ್ತಿರುವ ವಾಹನಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತೆ. ಇದರ ಸಹಾಯದಿಂದ ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಪತ್ತೆ ಹಚ್ಚುವ ಪೊಲೀಸರು ವಾಹನ ಮಾಲೀಕರಿಗೆ ಇ-ಚಲನ್ ಮೂಲಕ ದಂಡ ವಿಧಿಸುತ್ತಾರೆ.

ವಾಹನ ಸವಾರರೇ ಎಚ್ಚರ

ಮೊದಲ ಕಂತಿನಂತೆ, ಹೆಬ್ಬಾಳ-ಯಲಹಂಕ ಫ್ಲೈ-ಓವರ್ ವಿಸ್ತರಣೆಯ ಎರಡೂ ಕಡೆಗಳಲ್ಲಿ ಆರ್‍ಎಸ್ಎಸ್ ಸೌಲಭ್ಯವನ್ನು ಅನ್ನು ಅಳವಡಿಸಲಾಗಿದ್ದು, ಈ ಫ್ಲೈ-ಓವರ್ ವಿಸ್ತರಣೆಯ ಗರಿಷ್ಠ ಅನುಮತಿಸುವ ವೇಗ ಕಾರುಗಳಿಗೆ ಗಂಟೆಗೆ 80 ಕಿ.ಮೀ. ಆಗಿದ್ದು, ಬೈಕ್‌ಗಳಿಗೆ ಗಂಟೆಗೆ ಗರಿಷ್ಠ 60 ಕಿ.ಮಿ ವೇಗ ಮೀತಿಗೊಳಿಸಲಾಗಿದೆ.

ವಾಹನ ಸವಾರರೇ ಎಚ್ಚರ

ಇಷ್ಟಾದ್ರು ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳನ್ನು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿರುವ ಬಗ್ಗೆ ದೂರುಗಳಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕಾಗಿ ಪೊಲೀಸರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.

ವಾಹನ ಸವಾರರೇ ಎಚ್ಚರ

ಹೀಗಾಗಿಯೇ ಬೆಂಗಳೂರಿನ ಪ್ರಮುಖ ರಸ್ತೆಗಳಾದ ಭದ್ರಪ್ಪಾ ಲೇಔಟ್, ತುಮಕೂರು ರಸ್ತೆ, ನೈಸ್ ರೋಡ್, ಓಲ್ಡ್ ಏರ್‍‍ಫೋರ್ಟ್ ರಸ್ತೆ ಮತ್ತು ಇನ್ನಿತರೆ 50 ಜಂಕ್ಷನ್‍‍ಗಳಲ್ಲಿ ಈ ಸೌಲಭ್ಯವನ್ನು ಅಳವಡಿಕೆಗೆ ಮುಂದಾಗಿರುವ ಟ್ರಾಫಿಕ್ ಪೊಲೀಸರು, ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ಮಟ್ಟಹಾಕಲು ಕ್ರಮ ಕೈಗೊಳ್ಳುತ್ತಿದ್ದಾರೆ.

Most Read Articles

Kannada
Read more on off beat accident
English summary
Miraculous Escape — Kid Walks Away After Maruti Suzuki WagonR Runs Over Him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more