ಆಮೆ ಮತ್ತು ಮೊಲ ರೇಸ್: ಮುಂದುವರಿದ ಭಾಗ ವೀಕ್ಷಿಸಿ!

By Nagaraja

ಒಂದು ದಿನ ಮೊಲವೊಂದು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿತ್ತು. ಆಗ ಎದುರಿಗೆ ಸಿಕ್ಕ ಆಮೆ, "ನಮಸ್ಕಾರ ಸ್ನೇಹಿತ" ಎಂದಿತು. ಇದರಿಂದ ಕುಪಿತಗೊಂಡ ಮೊಲ "ನಾನ್ಯಾಕೆ ನಿನ್ನ ಸ್ನೇಹಿತನಾಗಬೇಕು? ನಿನ್ನಂಥ ಕುರುಪಿಯನ್ನು ಸ್ನೇಹಿತನೆಂದು ಹೇಳಿಕೊಳ್ಳುವುದು ನನಗೆ ಅವಮಾನದ ಸಂಗತಿ. ನಿನ್ನ ಕೆಟ್ಟ ಮುಖ, ಕಾಲುಗಳನ್ನು ಚಿಪ್ಪಿನೊಳಗೆ ಮುಚ್ಚಿಟ್ಟುಕೊಳ್ಳಬಾರದೇ?" ಎಂದು ಗೇಲಿ ಮಾಡಿತು.

ಇದರಿಂದ ದು:ಖತಪ್ತನಾದ ಆಮೆ, "ಮೊಲನಿಗೆ ದೇವರು ಪಾಠ ಕಲಿಸಿಯೇ ಕಲಿಸ್ತಾನೆ. ಒಂದಲ್ಲ ಒಂದು ದಿನ ನಿನ್ನನ್ನು ಸೋಲಿಸಿಯೇ ಸೋಲಿಸ್ತೀನಿ" ಎಂದಿತು. ಇದನ್ನು ಕೇಳಿ ಮೊಲ ಬಿಕ್ಕಿ ಬಿಕ್ಕಿ ನಕ್ಕಾಗ ನಿದ್ದೆ ಮಾಡುತ್ತಿದ್ದ ಕಾಡಿನ ರಾಜ ಸಿಂಹ ತಟ್ಟನೆ ಎಚ್ಚರಿಕೆಗೊಂಡು ವಿಷಯ ಏನೆಂದು ಕೇಳಿತು. ಬಳಿಕ ದಿಟ್ಟ ನಿರ್ಧಾರ ತೆಗೆದುಕೊಂಡ ಕಾಡಿನ ರಾಜ, ಆಮೆ ಹಾಗೂ ಮೊಲದ ಮಧ್ಯೆ ಓಟದ ಸ್ಪರ್ಧೆಯನ್ನು ಇಟ್ಟಿತ್ತು. ಅಲ್ಲದೆ ವಿಜೇತರಿಗೆ ಬಹುಮಾನ ನೀಡುವುದಾಗಿ ಘೋಷಿಸಿತ್ತು.

Mercedes Benz amg gt s

ಈ ಆಮೆ-ಮೊಲದ ನೀತಿ ಪಾಠವನ್ನು ಖಂಡಿತವಾಗಿಯೂ ನೀವು ನಿಮ್ಮ ಅಜ್ಜಿ ಅಥವಾ ಅಜ್ಜನಿಂದ ಕೇಳಿರುವೀರಿ. ಪ್ರಸ್ತುತ ಕಥೆಯನ್ನು ಈಗ ಮತ್ತೆ ಇಲ್ಲಿ ಉಲ್ಲೇಖಿಸಲು ಕಾರಣವೊಂದಿದೆ. ಏಕೆಂದರೆ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮತ್ತದೇ ಆಮೆ-ಮೊಲದ ಓಟದ ಕಥೆಯನ್ನು ಆಧಾರವಾಗಿಟ್ಟುಕೊಂಡು ಆಕರ್ಷಕ ವೀಡಿಯೋವನ್ನು ರಚಿಸಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿರುವ ಸಂಸ್ಥೆಯ ಅತ್ಯಂತ ಶಕ್ತಿಶಾಲಿ ಎಎಂಜಿ ಜಿಟಿ ಎಸ್ ಮಾದರಿಗೆ ಭರ್ಜರಿ ಪ್ರಚಾರ ಹಮ್ಮಿಕೊಳ್ಳುವ ಪ್ರಯತ್ನ ಮಾಡಿದೆ.

ಇಲ್ಲಿ ಹಳೆಯ ನೀತಿ ಕಥೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಇದರಂತೆ ಆರಂಭದಲ್ಲಿ ತನ್ನ ಸ್ನೇಹಿತರ ಜೊತೆಗೆ 'ಗ್ರೂಫಿ' ತೆಗೆದುಕೊಳ್ಳುವ ಮೊಲ ವಾಯುವೇಗದಲ್ಲಿ ಓಡುವುದು ದೃಶ್ಯವಾಗುತ್ತದೆ. ಬಳಿಕ ಅರ್ಧದಾರಿ ತಲುಪಿದಾಗ ತನ್ನ ಸ್ನೇಹಿತರ ಜೊತೆಗೆ ಕಾರ್ಡ್ಸ್ ಆಡಲು ಆರಂಭಿಸುತ್ತದೆ. ಈ ವೇಳೆಯಲ್ಲಿ ನಿಧಾನವಾಗಿ ಚಲಿಸುವ ಆಮೆಗೆ ಬೆಂಝ್ ಕಾರೊಂದರ ದರ್ಶನವಾಗುತ್ತದೆ. ಅಷ್ಟಕ್ಕೂ ಕ್ಲೈಮಾಕ್ಸ್‌ನಲ್ಲಿ ಏನಾಯ್ತು? ಅವಮಾನದಿಂದ ತಲೆ ತಗ್ಗಿಸಿದ ಪ್ರಾಣಿ ಯಾವುದು? ಇವೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಕೆಳಗಿನ ವೀಡಿಯೋ ವೀಕ್ಷಿಸಿ...

<iframe width="600" height="450" src="https://www.youtube.com/embed/LQvdIGeUUvo?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
The tortoise then spots the Mercedes factory and decides to take a diversion. The rest? Well, the tortoise does win the race but how? Watch the video below.&#13;
Story first published: Friday, January 30, 2015, 11:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X