ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧ ಮಾಡಲ್ಪಟ್ಟ ಕ್ರೀಡಾಪಟು ಯಾರು?

By Nagaraja

ಅಂತರ್ಜಾಲ ದೈತ್ಯ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧ ಮಾಡಲ್ಪಟ್ಟ ಕ್ರೀಡಾಪಟು ಯಾರು ಗೊತ್ತೇ? ಅವರೇ, ಏಳು ಬಾರಿಯ ಎಫ್1 ಚಾಂಪಿಯನ್ ಮಾಜಿ ಜೀವಂತ ದಂತಕಥೆ ಮೈಕೆಲ್ ಶುಮೇಕರ್.

ಸ್ಕೀಯಿಂಗ್ ದುರಂತದ ಬಳಿಕ ಸಾವಿನಿಂದ ವಿರೋಚಿತವಾಗಿ ಗೆದ್ದು ಬಂದಿರುವ ಶುಮೇಕರ್ ಈಗಲೂ ಚಿಕಿತ್ಸೆಯಲ್ಲಿದ್ದಾರೆ. ಅಧ್ಯಯನದ ಪ್ರಕಾರ ಆತಂಕಕ್ಕೀಡಾದ ಅಭಿಮಾನಿಗಳು ಗೂಗಲ್‌ನಲ್ಲಿ ತಾಜಾ ಮಾಹಿತಿಗಾಗಿ ಎರಡು ಟ್ರಿಲಿಯನ್‌ಗಿಂತಲೂ ಹೆಚ್ಚು ಬಾರಿ ಶುಮೇಕರ್ ಹೆಸರು ಟೈಪ್ ಮಾಡಿ ಶೋಧನೆ ಮಾಡಿದ್ದಾರೆ.

ಒಂದು ಟ್ರಿಲಿಯನ್ = 1,000,000,000,000

Michael Schumacher

ಅಷ್ಟೇ ಯಾಕೆ ಇದು ಎಷ್ಟರ ಮಟ್ಟಿಗೆ ಕಳವಳ ಸೃಷ್ಟಿ ಮಾಡಿತ್ತೆಂದರೆ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಜನಪ್ರಿಯ ಸುದ್ದಿಗಳಲ್ಲಿ ಶುಮೇಕರ್ ದುರಂತ ಹಾಗೂ ಚಿಕಿತ್ಸೆ ಸುದ್ದಿ ಒಂಬತ್ತನೇ ಸ್ಥಾನ ಪಡೆದಿದೆ.

ಈ ನಡುವೆ ಬಂದ ವರದಿಯೊಂದರ ಪುನಶ್ಚೇತನದಲ್ಲಿರು ಶುಮೇಕರ್ ವೈಯಕ್ತಿಕ ಫ್ಯಾಶನ್ ಪ್ರಾಯೋಜಕತ್ವವನ್ನು ನೇವಿಬೂಟ್ ಹಾಗೂ ಜೆಟ್ ಸೆಟ್ ರದ್ದುಗೊಳಿಸಿದೆ. ಈ ಹಿಂದೆ 45ರ ಜರ್ಮನಿಯ ರೇಸರ್‌ನೊಂದಿಗೆ ವಾರ್ಷಿಕ 5 ಮಿಲಿಯನ್‌ಗೆ ಸಹಿ ಹಾಕಲಾಗಿತ್ತು.

Most Read Articles

Kannada
English summary
The internet giant Google, has announced that Michael Schumacher was the most searched sportsman on Google in 2014.
Story first published: Saturday, December 20, 2014, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X