ತನಿಖಾ ತಂಡಕ್ಕೆ ಶುಮೇಕರ್ ಅಪಘಾತ ವೀಡಿಯೋ ಲಭ್ಯ

Written By:

ಇತ್ತೀಚೆಗಷ್ಟೇ ಫ್ರಾನ್ಸ್‌ನಲ್ಲಿ ಸ್ಕೀಯಿಂಗ್ ವೇಳೆ ನಡೆದ ಅಪಘಾತದಲ್ಲಿ ವಿಶ್ವ ಪ್ರಖ್ಯಾತ ಮಾಜಿ ರೇಸರ್ ಹಾಗೂ ಏಳು ಬಾರಿಯ ವಿಶ್ವಚಾಂಪಿಯನ್ ಮೈಕಲ್ ಶುಮೇಕರ್ ಗಂಭೀರ ಗಾಯಗೊಂಡಿದ್ದರು. ಪ್ರಸ್ತುತ ಕೋಮಾ ಸ್ಥಿತಿಯಲ್ಲಿರುವ ಶುಮೇಕರ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಹಾಗಿರುವಾಗ ಕುಟುಂಬದ ಖಾಸಗಿತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶುಮೇಕರ್ ಅಪಘಾತ ವೀಡಿಯೋವನ್ನು ಇನ್ನು ಗೌಪ್ಯವಿಡಲಾಗಿದೆ. ವರದಿಯ ಪ್ರಕಾರ 35ರ ಹರೆಯದ ವ್ಯಕ್ತಿಯೊಬ್ಬರಲ್ಲಿ ಶುಮೇಕರ್ ಅಪಘಾತ ಸನ್ನಿವೇಶದ ವೀಡಿಯೋವಿದೆ. ಅದನ್ನವರು ಮೆರಿಬಲ್ ಸ್ಕಿ ರಿಸಾರ್ಟ್‌ನಲ್ಲಿ ಶುಮೇಕರ್ ಮತ್ತು ಆತನ ಪುತ್ರ ಸ್ಕೀಯಿಂಗ್ ನಡೆಸುತ್ತಿದ್ದ ವೇಳೆ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಚಿತ್ರಿಕರಿಸಿದ್ದರು.

To Follow DriveSpark On Facebook, Click The Like Button
Michael Schumacher

ಪ್ರಸ್ತುತ ವೀಡಿಯೋವನ್ನೀಗ ತನಿಖಾ ತಂಡ ಬಯಸುತ್ತಿದೆ. ಇದರಿಂದ ಅಪಘಾತಕ್ಕೀರುವ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ಸಾಧ್ಯ. ಅಷ್ಟೇ ಸ್ವತ: ಶುಮೇಕರ್ ಅವರೇ ತಮ್ಮ ಹೆಲ್ಮೆಟ್‌ನಲ್ಲಿ ಆರೋಹಿತವಾದ ಕ್ಯಾಮೆರಾ ಬಳಸಿದ್ದರು. ಇದರಲ್ಲೂ ಸ್ಪಷ್ಟ ಮಾಹಿತಿ ದಾಖಲಾಗುವ ಸಾಧ್ಯತೆಯಿದೆ.

2013 ಡಿಸೆಂಬರ್ 29ರಂದು ಸ್ಕೀಯಿಂಗ್ ನಡೆಸುತ್ತಿದ್ದ ವೇಳೆ ನಡೆದ ದುರ್ಘಟನೆಯಲ್ಲಿ ಫಾರ್ಮುಲಾ ಒನ್ ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಚಾಲಕರಲ್ಲಿ ಒಬ್ಬರಾಗಿರುವ ಶುಮೇಕರ್, ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದರು.

English summary
Details surrounding Michael Schumacher's accident and his condition have not been open to the public to respect his family's privacy. It is for the same reason that a video shot by another skier that captured the former F1 champion's skiing accident has not been made public. However, investigators and prosecutors are reportedly seeking a copy of the video.
Story first published: Tuesday, January 7, 2014, 12:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark