ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಕಪ್ಪು ಸಮುದ್ರದಾಳದಲ್ಲಿ 40ಕ್ಕೂ ಹೆಚ್ಚು ಹಡಗುಗಳ ಅವಶೇಷಗಳನ್ನು ನಿಗೂಢ ರೀತಿಯಲ್ಲಿ ಪತ್ತೆ ಹಚ್ಚಲಾಗಿದೆ.

By Nagaraja

ಆಗ್ನೇಯ ಯುರೋಪ್, ಪಶ್ಚಿಮ ಏಷ್ಯಾ ಮಧ್ಯೆ ಇರುವ ಕಪ್ಪು ಸಾಗರ ಅಥವಾ ಸಮುದ್ರವು ಬಲ್ಗೇರಿಯಾ, ಜಾರ್ಜಿಯಾ, ರೋಮನಿಯಾ, ರಷ್ಯಾ, ಟರ್ಕಿ ಮತ್ತು ಉಕ್ರೇನ್ ದೇಶಗಳನ್ನು ಸುತ್ತುವರಿಯಲ್ಪಟ್ಟಿದೆ. ಇದು ಅಂತಿಮವಾಗಿ ಮೆಡಿಟರೇನಿಯನ್ ಮೂಲಕ ಅಟ್ಲಾಂಟಿಕ್ ಮಹಾಸಾಗರದೊಂದಿಗೂ ಮತ್ತು ಏಜಿಯನ್ ಹಾಗೂ ಅನೇಕ ಜಲಸಂಧಿಗಳನ್ನು ಸಂಪರ್ಕಿಸುತ್ತದೆ. ನೌಕಾಯಾನದ ವೇಳೆ ಬುಡಕಟ್ಟು ಜನಾಗಂದ ನೋವಿನ ಪ್ರತೀಕವಾಗಿ ಮತ್ತು ಸಮುದ್ರ ಬಣ್ಣವೂ ಕಪ್ಪಾಗಿರುವುದು ಇದಕ್ಕೆ ಕಪ್ಪು ಸಮುದ್ರವೆಂದು ಕರೆಯಲು ಕಾರಣವಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಪ್ರಾಚೀನ ಕಾಲದಿಂದಲೂ ಹೀಗೆ ಹತ್ತು ಹಲವಾರು ಚಿತ್ರ-ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ಕಪ್ಪು ಸಾಗರದಾಳದಲ್ಲಿ 'ಸತ್ತ ವಲಯ'ವೆಂದು ಕರೆಯಲ್ಪಡುವ ಪ್ರದೇಶದಲ್ಲಿ ಹಳೆಯ ಹಡಗುಗಳ ಬೃಹತ್ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಪುರಾತತ್ವ ತಜ್ಞರ ಪ್ರಕಾರ ಕಪ್ಪು ಸಮುದ್ರದಾಳದಲ್ಲಿ ಸಂಪೂರ್ಣವಾಗಿ ಕಗ್ಗತ್ತಲು ಆವರಿಸಿದ್ದು, ಬೆಳಕು ಹಾಗೂ ಆಮ್ಲಜನಕ ಲಭ್ಯವಿರುವುದಿಲ್ಲ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಸಾಗರಾಳದಲ್ಲಿ ವಿಜ್ಞಾನಿಗಳ ನಿರಂತರ ಅಧ್ಯಯನ ಜಾರಿಯಲ್ಲಿದ್ದು, ಈ ನಡುವೆ ಓಟ್ಟೋಮಾನ್ ಹಾಗೂ ಬೈಜಾಂಟೈನ್ ಕಾಲಘಟ್ಟದ 40ರಷ್ಟು ಹಳೆಯ ಹಡಗುಗಳನ್ನು ಪತ್ತೆ ಹಚ್ಚಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಕಪ್ಪು ಸಮುದ್ರದ ಸತ್ತ ವಲಯದಲ್ಲಿ ಹಡಗುಗಳ ಮಹಾ ಸ್ಮಶಾನವನ್ನೇ ಕಂಡು ಹಿಡಿಯಲಾಗಿದೆ. ಆಮ್ಲಜನಕದ ಕೊರತೆಯಿಂದಾಗಿ ಸಮಸ್ಯೆ ತಟ್ಟಿರಬಹುದೆಂದು ಅಂದಾಜಿಸಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ವಿಶೇಷ ಕಾರ್ಯಾಚರಣೆಗೆ ನಿಯೋಜಿಸಲಾಗುವ ಆಫ್-ಶೋರ್ ಹಡಗುಗಳನ್ನು ಬಳಸಿಕೊಂಡು ಸಮುದ್ರ ಮಟ್ಟಕ್ಕಿಂತ 1800 ಅಡಿ ಆಳದಲ್ಲಿರುವ ಹಡಗುಗಳ ಅವಶೇಷಗಳನ್ನು ಕಂಡುಹಿಡಿಯಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಹಡಗುಗಳನ್ನು ಪತ್ತೆ ಹಚ್ಚಲು ಜಗತ್ತಿನಲ್ಲಿ ಲಭ್ಯವಿರುವ ಅತ್ಯಾಧುನಿಕ ನೀರೊಳಗಿನ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಸೌಂಥಪ್ಟನ್ ವಿಶ್ವ ವಿದ್ಯಾಲಯದ ಸಮುದ್ರ ಪುರಾತತ್ವ ಶಾಸ್ತ್ರ ಕೇಂದ್ರದ ಕಡಲ ಪುರಾತತ್ವ ಯೋಜನಡಿಯಲ್ಲಿ (Black Sea MAP) ಕಪ್ಪು ಸಮುದ್ರದಲ್ಲಿ ಶೋಧನೆ ಆರಂಭಿಸಿತ್ತು.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಸಮುದ್ರದಾಳದಲ್ಲಿರುವ ಪ್ರಾಚೀನ ಹಡಗುಗಳನ್ನು ಪತ್ತೆ ಹಚ್ಚಿ ಅವುಗಳು ಯಾವ ಶತಮಾನಕ್ಕೆ ಸೇರಿದ ಅವಶೇಷ ಎಂಬುದನ್ನು ನಿಖರವಾಗಿ ಗುರುತಿಸಿ ಇತಿಹಾಸ ಪೂರ್ವ ಘಟನೆಗಳನ್ನು ಪುನರ್ ನಿರ್ಮಾಣ ಮಾಡಲಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಸಾಗರಾಳದಲ್ಲಿ ವಿಶೇಷ ಪತ್ತೆ ಕಾರ್ಯಾಚರಣೆಗೆ ನಿಯೋಜಿಸಲಾಗುವ 'ಸ್ಟ್ರಿಲ್ ಎಕ್ಸ್ ಪ್ಲೋರರ್' ಎಂಬ ಅತ್ಯಾಧುನಿಕ ಹಡಗನ್ನು ಬಳಕೆ ಮಾಡಲಾಗಿತ್ತು. ಇನ್ನು ದೂರನಿಯಂತ್ರಿಕ ಚಾಲಿತ ಹಡಗುಗಳ ನೆರವನ್ನು ಪಡೆಯಲಾಗಿತ್ತು.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ತ್ರಿಡಿ ಫೋಟೋಗ್ರಾಫಿ, ಹೈ ಡೆಫಿನೇಷನ್ ಕ್ಯಾಮೆರಾ ಜೊತೆಗೆ ಲೇಸರ್ ಸ್ಕಾನರ್ ಹಾಗೂ ಬೆಳಕಿನ ತಂತ್ರಜ್ಞಾನಗಳನ್ನು ಹಡಗು ಸ್ಮಶಾನ ಪತ್ತೆಗಾಗಿ ಬಳಕೆ ಮಾಡಲಾಗಿತ್ತು.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಇವೆಲ್ಲವೂ ಇತಿಹಾಸ ತಜ್ಞರಿಗೆ ಕಪ್ಪು ಸಮುದ್ರದ ಚರಿತ್ರೆಯ ಬಗ್ಗೆ ಗಾಢವಾಗಿ ಅಧ್ಯಯನ ಹಾಗೂ ಸಂಶೋಧನೆ ಮಾಡಲು ನೆರವಾಗಲಿದೆ. ಇದರಿಂದ ಪ್ರಾಚೀನ ಗ್ರೀಕ್, ರೋಮ್ ನಲ್ಲಿ ನಡೆದ ವಸಾಹತು ಮತ್ತು ವಾಣಿಜ್ಯ ಚಟುವಟಿಕೆಗಳ ನಿಖರ ಮಾಹಿತಿಗಳು ಲಭ್ಯವಾಗಲಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

1453ರಲ್ಲಿ ಕಪ್ಪು ಸಮುದ್ರದಲ್ಲಿ ವಿಶೇಷ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿತ್ತು. 400 ವರ್ಷಗಳ ಬಳಿಕ 1856ರಲ್ಲಿ ಎಲ್ಲ ರಾಷ್ಟ್ರಗಳ ವ್ಯಾಪಾರಕ್ಕೆ ಪುನರಾರಂಭಿಸಲಾಗಿತ್ತು.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಈಗ ಲಭಿಸಿರುವ ಪುರಾವೆಗಳು ಸಂಪೂರ್ಣ ಹೆಚ್ಚುವರಿ ಆಗಿರಲಿದೆ. ಪ್ರಸ್ತುತ ಯೋಜನೆಯಡಿಯಲ್ಲಿ ಇದುವರೆಗೆ 1250 ಕೀ.ಮೀ. ದೂರವನ್ನು ಆಕ್ರಮಿಸಿಕೊಳ್ಳಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಕಪ್ಪು ಸಮುದ್ರದ ಹೊರಹರಿವು ತಂಪಾಗಿದ್ದು ಕಡಿಮೆ ಲವಣಾಂಶವನ್ನು ಹೊಂದಿದೆ. ಆದ್ದರಿಂದ ಮೆಡಿಟರೇನಿಯನ್ ಸಮುದ್ರದ ಹೆಚ್ಚು ಲವಣ ಮತ್ತು ಬೆಚ್ಚಿಗಿನ ಒಳಹರಿವು ನೀರಿನ ಮೇಲ್ಮೈನ ಕೆಳಭಾಗಗಳಲ್ಲಿ ಪ್ರಮುಖವಾದ ಆಮ್ಲಜನಕ ರಹಿತ ಪದರನ್ನು ಉಂಟು ಮಾಡುತ್ತದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಕಪ್ಪು ಸಮುದ್ರವು ಪ್ರಪಂಚದ ಅಥಿ ದೊಡ್ಡ ಮಿರೊಮಿಕ್ಟಿಕ್ ಬೋಗುಣಿಯಾಗಿದ್ದು, ಈ ಪ್ರದೇಶದಲ್ಲಿ ಆಳವಾದ ನೀರು ವಾತಾವರಣದ ಆಮ್ಲಜನಕವನ್ನು ಪಡೆಯುವ ನೀರಿನ ಮೇಲ್ಪದರಗಳೊಂದಿಗೆ ಬೆರೆಯುವುದಿಲ್ಲ. ಈ ಕಾರಣದಿಂದಾಗಿ ಶೇಕಡಾ 90ಕ್ಕಿಂತಲೂ ಹೆಚ್ಚು ಪ್ರಮಾಣದ ನೀರು ಆಮ್ಲಜನಕ ರಹಿತ ನೀರಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಕಪ್ಪು ಸಾಗರದಲ್ಲಿ ಪುರಾತನ ಪಾಳು ಬಿದ್ದ ಹಡಗುಗಳು ಸುರಕ್ಷಿತವಾಗಿ ಸಂರಕ್ಷಿಸಲ್ಪಡುತ್ತಿವೆ ಎಂಬುದಕ್ಕೆ ಈಗಿನ ಅನ್ವೇಷಣೆ ತಾಜಾ ಉದಾಹರಣೆಯಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ನೀರಿನ ತಳ ಭಾಗದಲ್ಲಿ ವಸ್ತು ಶೋಧನೆ ಶಾಸ್ತ್ರಕ್ಕೆ ಅನುಕೂಲಕರವಾದ ಇತಿಹಾಸ ಪೂರ್ವದ ಶೋಧನೆಗಳು ನಡೆಯುತ್ತಿದೆ. ಆಮ್ಲಜನಕ ರಹಿತ ನೀರಿನ ಸಂರಕ್ಷಣಾತ್ಮಕ ಗುಣಗಳು ಕಡಲು ಶೋಧಕ ತಜ್ಞರ ಗಮನವನ್ನು ಸೆಳೆದಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

20,000 ವರ್ಷಗಳ ಹಿಂದೆ ಹಿಮಯುಗದ ಬಳಿಕ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿತ್ತು. ಈಗ ನಿರಂತರ ಸಂಶೋಧನೆಯ ಬಳಿಕ ಇಲ್ಲಿಂದ ನಿಗೂಢ ರೀತಿಯಲ್ಲಿ 40ಕ್ಕೂ ಹೆಚ್ಚು ಗುರುತಿಸಲಾಗದ ಹಡುಗಗಳ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ.

ವಿಶ್ವವನ್ನೇ ನಡುಗಿಸಿದ ಸತ್ಯ; ಕಪ್ಪು ಸಾಗರದ ಸತ್ತ ವಲಯದಲ್ಲಿ ನಿಗೂಢ ರೀತಿಯ ಹಡಗುಗಳ ಅವಶೇಷಗಳು ಪತ್ತೆ!

ಒಟ್ಟಿನಲ್ಲಿ ಸಾಗರದಾಳದಲ್ಲೂ ನಿರಂತರ ಅಧ್ಯಯನ ಹಾಗೂ ಸಂಶೋಧನೆ ಜಾರಿಯಲ್ಲಿದ್ದು, ಇತಿಹಾಸ ಪೂರ್ವ ಘಟನೆಗಳನ್ನು ನಿಖರವಾಗಿ ತಿಳಿದು ಬರಲು ಸಾಧ್ಯವಾಗಲಿದೆ.

Most Read Articles

Kannada
English summary
More Than 40 Ancient Shipwrecks Found At The Bottom Of The Black Sea
Story first published: Wednesday, October 26, 2016, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X