ಒಂದು ಲೀಟರ್ ನೀರಿಗೆ 300 ಮೈಲಿ ದೂರ ಕ್ರಮಿಸುತ್ತೆ ಈ ಬೈಕ್ !!

Written By:

ಬ್ರೆಜಿಲ್ ದೇಶದ ಪ್ರಜೆಯಾದ ರಿಕಾರ್ಡೊ ಅಜೆವೆಡೊ ತನ್ನ 1993 ಹೋಂಡಾ ಏನ್ಎಕ್ಸ್ 200 ಬೈಕಿನಲ್ಲಿ ಪೆಟ್ರೋಲ್ ಗೆ ಪರ್ಯಾಯವಾಗಿ ನೀರನ್ನು ಬಳಸಿ ಓಡಿಸುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.

ಈ ಬೈಕಿನ ವಿಶೇಷತೆ ಏನು ಗೊತ್ತೇ ? ಕೇವಲ ಒಂದೇ ಒಂದು ಲೀಟರ್ ನೀರಿಗೆ ಹೆಚ್ಚು ಕಡಿಮೆ 300 ಮೈಲಿಗಳಷ್ಟು ದೂರ ಕ್ರಮಿಸುವಷ್ಟು ಕ್ಷಮತೆ ಹೊಂದಿದೆ. ಈ ಬಗ್ಗೆ ವರದಿ ಮಾಡಿರುವ ಯುರೋ ನ್ಯೂಸ್, ಅದ್ಭುತ ಸಾಹನೆ ಹಾಡಿಹೊಗಳಿದೆ. ಇನ್ನು ರಿಕಾರ್ಡೋ ಅಜೆವೆಡೋ ಸಾಧನೆಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪೆಟ್ರೋಲಿನಿಂದ ಹೊರ ಬರುವ ಹೊಗೆ ಈ ಬೈಕಿನಿಂದ ಆಗದು, ಇದೇ ಕಾರಣಕ್ಕೆ ಈ ಮೋಟಾರ್ ಸೈಕಲ್ ವಾಯುಮಾಲಿನ್ಯ ತಡೆಗಟ್ಟುವುದರಲ್ಲಿ ಕೂಡ ಮುಖ್ಯ ಪಾತ್ರ ವಹಿಸುತ್ತದೆ.

ಅಜೆವೆಡೊ ತಾವು ಆವಿಷ್ಕಾರ ಮಾಡಿರುವ ಅತ್ಯದ್ಭುತ ಬೈಕಿನ ವಿಶೇಷತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಬೈಕ್ ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪ್ರಾತ್ಯಕ್ಷಿತೆ ಮಾಡಿ ತೋರಿಸಿದ ಅಜೆವೆಡೊ ಬೈಕಿನ ಬಗ್ಗೆ ಸವಿವರಣೆ ನೀಡಿದ್ದಾರೆ. ಈ ಬೈಕಿನ ಮತ್ತೊಂದು ವಿಶೇಷತೆ ಎಂದರೆ ಈ ಬೈಕ್ ಕುಡಿಯುವ ನೀರಿನಲ್ಲಿ ಮಾತ್ರವಲ್ಲದೆ ಕೊಳೆಯುಕ್ತ ನೀರಿನಲ್ಲಿಯೂ ಕೂಡ ಯಾವುದೇ ತೊಂದರೆ ಇಲ್ಲದೆ ಕ್ರಮಿಸಬಲ್ಲದಂತೆ.

ಈ ಬಗ್ಗೆ ತಮ್ಮ ಅನುಭವ ಹೇಳಿಕೊಂಡಿರುವ ಅವೆಜೊಡೊ, " ಹತ್ತಿರದಲ್ಲೇ ಇದ್ದ ನದಿಯಿಂದ ಕಲುಷಿತ ನೀರು ಸಂಗ್ರಹಿಸಿ ಈ ಬೈಕ್ ಇಂಧನವಾಗಿ ಬಳಸಿದೆ, ಜೊತೆಗೆ ಕುಡಿಯುವ ನೀರಿನ ಬದಲು ಕಲುಷಿತ ನೀರನ್ನು ಇಂಧನವಾಗಿ ಬಳಸಿದಾಗ ಕೂಡ ಕುಡಿಯುವ ನೀರಿನಷ್ಟೇ ಕಾರ್ಯಕ್ಷಮತೆ ನೀಡಿದಾದ ನನಗೆ ತುಂಬಾ ಆಶ್ಚರ್ಯವಾಯ್ತು" ಎಂದಿದ್ದಾರೆ.

ಈ ಬೈಕ್ ಕಾರಿನ ಬ್ಯಾಟರಿ ಹೊಂದಿದ್ದು, ಬ್ಯಾಟರಿಯ ಎಲೆಕ್ಟ್ರೋಲಿಸಿಸ್ ಸಹಾಯದಿಂದ ನೀರಿನಲ್ಲಿರುವ ಹೈಡ್ರೋಜನ್ ವಿಭಾಗಿಸುವ ಪ್ರಕ್ರಿಯೆ ನಡೆ

ಈ ಸಾಹಸಮಯ ಪಯಣದಲ್ಲಿ ಅಜೆವೆಡೊ ಅವರಿಗೆ ಅತಿ ಹೆಚ್ಚು ಉಪಯೋಗವಾಗಿದ್ದು ನೀರಿನೊಳಗಿದ್ದ ಜಲಜನಕ ಎಂದರೆ ಅತಿಶಯೋಕ್ತಿ ಅಲ್ಲ.

"ಬೈಕಿನಲ್ಲಿರುವ ಸಾಧನ ನೀರಿನಲ್ಲಿರುವ ಗಾಳಿಯನ್ನು ಮತ್ತು ಜಲಜನಕವನ್ನು(ಹೈಡ್ರೋಜನ್) ಬೇರ್ಪಡಿಸುವ ಒಂದು ತಂತ್ರವಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಸಿಗುವ ಮತ್ತು ನಮಗೆ ಬೇಕಾಗಿರುವ ಜಲಜನಕವನ್ನು ನಾನು ಬೈಕಿನ ಮೋಟಾರ್ ಎಂಜಿನ್ ಕಾರ್ಯನಿರ್ವಹಿಸಲು ಪರಿವರ್ತಿಸಿಕೊಂಡೆ" ಎಂಬುವುದು ಅಜೆವೆಡೊ ಅನುಭವ ಮಾತು.

ಗ್ಯಾಸೊಲಿನಿಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ಅಜೆವೆಡೊ, ಮುಂದೊಂದು ದಿನ ಪ್ರಪಂಚದಲ್ಲಿಯೇ ಪರ್ಯಾಯ ಇಂಧನವನ್ನಾಗಿ ಈ ನೀರು ಬಳಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ದೃಢ ವಿಶ್ವಾಸ ಹೊಂದಿದ್ದಾರೆ.

ಅದೇನೇ ಇರಲಿ ಪೆಟ್ರೋಲ್, ಡೀಸೆಲ್ ಇಂಧನದಿಂದಾಗುತ್ತಿರುವ ವಾಯುಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದಾದರು ಈ ರೀತಿಯ ಪರ್ಯಾಯ ಇಂಧನ ಕಂಡುಹಿಡಿಯುವ ಅಗತ್ಯವಿದೆ. ಹೀಗಾಗಿ ಅವೆಜೆಡೊ ಸಾಧನೆ ಖಂಡಿತವಾಗಿಯೂ ವಿಶ್ವಮಟ್ಟದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಕಾರಣವಾಗಲಿದೆ.

English summary
The T Power H20 motorbike was developed in Sao Paulo, Brazil by Ricardo Azevedo by transforming his 1993 Honda NX 200.
Story first published: Saturday, February 25, 2017, 12:57 [IST]
Please Wait while comments are loading...

Latest Photos