ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

Written By:

ದೆಹಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್‌ 777 ವಿಮಾನದಲ್ಲಿ ಇಲಿ ಕಾಣಿಸಿಕೊಂಡು ಪ್ರಯಾಣಿಕರು ಭೀತಿಗೆ ಒಳಗಾದ ಘಟನೆ ನಡೆದಿದೆ.

To Follow DriveSpark On Facebook, Click The Like Button
ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

ಏರ್‌ ಇಂಡಿಯಾ ವಿಮಾನವು ದೆಹಲಿಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನದ ಕ್ಯಾಬಿನ್‌ನಲ್ಲಿ ಇಲಿ ಓಡಾಡುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ವಿಮಾನವನ್ನು ಮತ್ತೆ ದೆಹಲಿ ನಿಲ್ದಾಣಕ್ಕೆ ಕೊಂಡೊಯ್ಯುವಂತೆ ಪೈಲಟ್‌ಗೆ ಸೂಚಿಸಿದರು.

ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

ಸ್ಯಾನ್‌ಫ್ರಾನ್ಸಿಸ್ಕೊಗೆ ಏರ್‌ ಇಂಡಿಯಾ ಕಂಪನಿಯು ನೇರ ವಿಮಾನ ಸೇವೆ ಒದಗಿಸುತ್ತಿದ್ದು, ಭಾನುವಾರ ದೆಹಲಿಯಿಂದ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಬೋಯಿಂಗ್‌ 777ನಲ್ಲಿ ಇಲಿ ಕಾಣಿಸಿಕೊಂಡಿದೆ. ಇದರಿಂದಾಗಿ 9 ಗಂಟೆ ತಡವಾಗಿ ವಿಮಾನ ಹೊರಟಿದೆ.

ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

ವಿಮಾನದಲ್ಲಿ ಇಲಿ ಕಾಣಿಸಿಕೊಂಡಿರುವುದು ದೃಢಪಟ್ಟಿಲ್ಲ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನವು ದೆಹಲಿಯ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದ್ದು, ಘಟನೆ ಬಗ್ಗೆ ಎಂಜಿನಿಯರ್‌ಗಳು ತನಿಖೆ ನಡೆಸುತ್ತಿದ್ದಾರೆ.

ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

ಬಹುತೇಕ ಭರ್ತಿಯಾಗಿದ್ದ ವಿಮಾನದ ಎಕಾನಮಿ ದರ್ಜೆಯಲ್ಲಿ 172 ಹಾಗೂ 34 ಬಿಸಿನೆಸ್‌ ಕ್ಲಾಸ್‌ ಪ್ರಯಾಣಿಕರು ಪ್ರಯಾಣ ನೆಡೆಸುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ.

ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

ವಿಮಾನದಲ್ಲಿ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಅತಿ ಮುಖ್ಯವಾಗಿದ್ದು, ಇಲಿ ತಂತಿ ತುಂಡರಿಸಿದ್ದರೆ ಪೈಲಟ್‌ಗಳಿಗೆ ವಿಮಾನ ನಿಯಂತ್ರಿಸುವುದು ಅಸಾಧ್ಯವಾಗಬಹುದು ಎಂಬ ಕಾರಣಕ್ಕೆ ಸತತ ಆರು ಗಂಟೆಗಳ ಕಾಲ ವಿಮಾನದ ಎಲ್ಲ ವಿದ್ಯುತ್‌ ಸಂಪರ್ಕ ಜಾಲ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಸಂಸ್ಥೆ ತಿಳಿಸಿದೆ.

ವಿಮಾನದಲ್ಲಿ ಇಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ !!

ಈ ಸಂಬಂಧ ಏರ್‌ ಇಂಡಿಯಾದ ನೂತನ ಅಧ್ಯಕ್ಷ ರಾಜಿವ್‌ ಬನ್ಸಾಲ್‌ ಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಸಾಮಾನ್ಯವಾಗಿ ಆಹಾರ ಸಾಗಿಸುವ ವ್ಯಾನ್‌ಗಳಲ್ಲಿ ಸೇರುವ ಇಲಿಗಳು, ಆ ಮೂಲಕ ವಿಮಾನ ಪ್ರವೇಶಿಸುತ್ತವೆ.

Read more on ವಿಮಾನ plane
English summary
Air India faces a massive bill to compensate passengers after a mouse was spotted on a Boeing 777 about to depart from Delhi to San Francisco.
Story first published: Monday, August 28, 2017, 19:27 [IST]
Please Wait while comments are loading...

Latest Photos