ಕೊನೆಗೂ ಕಾಯುವಿಕೆ ಅಂತ್ಯ; ಧೋನಿ ಹೊಸ ಬೈಕ್ ಊಹಿಸಬಲ್ಲಿರಾ?

Written By:

"ಕೊನೆಗೂ ಕಾಯುವಿಕೆ ಅಂತ್ಯ; ಆದರೂ ನಾನು ಅವಳನ್ನು ಮೊದಲ ಸವಾರಿಗೆ ಕರೆದುಕೊಂಡು ಹೋಗಲು ಇನ್ನೆರಡು ತಿಂಗಳು ಕಾಯಬೇಕಾಗುತ್ತದೆ. ಬೈಕ್ ಊಹಿಸಬಲ್ಲಿರಾ" ಇದು ಭಾರತೀಯ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟ್ವೀಟ್ ಮಾಡಿರುವ ಕೊನೆಯ ಸಂದೇಶ.

ಹಾಗಿದ್ದರೆ ಧೋನಿ ಖರೀದಿಸಿರುವ ಆ ಸೂಪರ್ ಬೈಕ್ ಚೆಲುವೆ ಯಾರು? ಇದರ ವಿಶಿಷ್ಟತೆಗಳೇನು? ಧೋನಿಗೆ ಈ ಸೂಪರ್ ಬೈಕ್ ನಲ್ಲಿ ಮೆಚ್ಚಿರುವ ಅಂಶಗಳೇನು? ಮೊದಲಾದ ಕುತೂಹಲದಾಯಕ ವಿಚಾರಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಕವಾಸಕಿ ನಿಂಜಾ ಎಚ್2 ಗೆ ಮನಸೋತ ಧೋನಿ

ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಅತಿ ದುಬಾರಿ ಬೈಕ್ ಗಳಲ್ಲಿ 'ಕವಾಸಕಿ ನಿಂಜಾ ಎಚ್2' ಒಂದಾಗಿದೆ. 29 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಬೆಲೆ) ದುಬಾರಿಯ ಈ ಹೈಪರ್ ಬೈಕ್ ಅನ್ನು ಧೋನಿ ತಮ್ಮದಾಗಿಸಿಕೊಂಡಿದ್ದಾರೆ.

ಕವಾಸಕಿ ನಿಂಜಾ ಎಚ್2 ಗೆ ಮನಸೋತ ಧೋನಿ

ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ ಹಾಗೂ ಪುಣೆಯ ಎಕ್ಸ್ ಕ್ಲೂಸಿವ್ ಡೀಲರ್ ಶಿಪ್ ಗಳಲ್ಲಿ ಮಾತ್ರ ಲಭ್ಯವಿರುವ ಈ ಸೂಪರ್ ಬೈಕ್ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಂಖಾತರ ದೇಶವನ್ನು ತಲುಪುತ್ತಿದೆ.

ವಿಶಿಷ್ಟತೆ

ವಿಶಿಷ್ಟತೆ

ಕವಾಸಕಿ ನಿಂಜಾ ಎಚ್2 ಹೈಪರ್ ಬೈಕ್ ಮುಂದುಗಡೆ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ. ಇದು ಎರಡು ಪೈಲಟ್ ಲ್ಯಾಂಪ್ ಗಳ ನಡುವೆ ಸಿಂಗಲ್ ಎಲ್ ಇಡಿ ಹೆಡ್ ಲೈಟ್ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೇ ಟರ್ನ್ ಇಂಡಿಕೇಟರ್ ಗಳು ಎರಡು ಮಿರರ್ ಗಳಲ್ಲಿ ಕಂಡುಬರಲಿದೆ. ಇನ್ನು ಗಾಳಿಯನ್ನು ಒಳಕ್ಕೆ ತೆಗೆದುಕೊಳ್ಳುವ ವಿನ್ಯಾಸ ತಂತ್ರ ಅನುಸರಿಸಿರುವುದರಿಂದ ಚಲಿಸುವ ವೇಳೆ ನಿರ್ವಹಣೆಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಕವಾಸಕಿ ನಿಂಜಾ ಎಚ್2 ಗೆ ಮನಸೋತ ಧೋನಿ

ಇನ್ನು ಬದಿಯಿಂದಲೂ ಇದೇ ತಂತ್ರವನ್ನು ಕವಾಸಕಿ ಅನುಸರಿಸಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ಜೊತೆಗೆ ಏರೋಡೈನಾಮಿಕ್ ಫೇರಿಂಗ್ ವ್ಯವಸ್ಥೆಯನ್ನು ನೀವು ಕಾಣಬಹುದಾಗಿದೆ. ಹಿಂದುಗಡೆಯಿಂದಲೂ ಬೈಕ್ ಪ್ರೇಮಿಗೆ ಪರಿಪೂರ್ಣ ನೋಟವನ್ನು ಒದಗಿಸುವ ಕವಾಸಕಿ, ಬೃಹತ್ತಾದ ಡ್ಯುಯಲ್ ಎಕ್ಸಾಸ್ಟ್ ಕೊಳವೆಗಳನ್ನು ಪಡೆದುಕೊಂಡಿದೆ.

ಕವಾಸಕಿ ನಿಂಜಾ ಎಚ್2 ಗೆ ಮನಸೋತ ಧೋನಿ

ಅಂದ ಹಾಗೆ ಕವಾಸಕಿ ನಿಂಜಾ ಎಚ್2 ಹೈಪರ್ ಮೋಟಾರ್ ಸೈಕಲ್ 998 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಸೂಪರ್ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 197 ಅಶ್ವಶಕ್ತಿ (113.5 ತಿರುಗುಬಲ) ಉತ್ಪಾದಿಸಲಿದೆ. ಇದರಲ್ಲಿರುವ ರಾಮ್ ಏರ್ ಸಿಸ್ಟಂನಿಂದ 210 ಅಶ್ವಶಕ್ತಿ ವರೆಗೂ ಹೆಚ್ಚು ಶಕ್ತಿ ಉತ್ಪಾದಿಸಬಹುದಾಗಿದೆ.

ಕವಾಸಕಿ ನಿಂಜಾ ಎಚ್2 ಗೆ ಮನಸೋತ ಧೋನಿ

ಇನ್ನು ಟ್ರಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಟೀರಿಂಗ್ ಡ್ಯಾಪರಿಂಗ್ ಹಾಗೂ ಕೆಐಬಿಎಸ್ ಎಬಿಎಸ್ ವ್ಯವಸ್ಥೆಗಳು ನೂತನ ಕವಾಸಕಿ ಬೈಕ್ ನಲ್ಲಿರಲಿದೆ. ಇವೆಲ್ಲವೂ ಮೊದಲೇ ಬೈಕ್ ಪ್ರೇಮಿಯಾಗಿರುವ ಧೋನಿ ಮನ ಸೆಳೆಯಲು ಕಾರಣವಾಗಿದೆ.

ಕವಾಸಕಿ ನಿಂಜಾ ಎಚ್2 ಗೆ ಮನಸೋತ ಧೋನಿ

ಏತನ್ಮಧ್ಯೆ ಕ್ರಿಕೆಟ್ ಗೆ ಬಿಡುವು ಮಾಡಿಕೊಂಡಿದ್ದ ಧೋನಿ ತವರೂರಾದ ರಾಂಚಿಯಲ್ಲಿ ಬಿಎಸ್ ಎ ವಿಂಟೇಜ್ ಬೈಕ್ ನಲ್ಲಿ ಸವಾರಿ ಮಾಡುವ ಮೂಲಕ ಗಮನ ಗಿಟ್ಟಿಸಿಕೊಂಡಿದ್ದರು.

English summary
Indian Cricket team Captain MS Dhoni Gets new Super Bike
Story first published: Wednesday, April 8, 2015, 14:20 [IST]
Please Wait while comments are loading...

Latest Photos