ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?
ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ ಸಂಚಾರವು 2023 ರ ಹೊತ್ತಿಗೆ ಕಾರ್ಯಾರಂಭ ನಡೆಸಲಿದ್ದು, ಆಧುನಿಕ ತಂತ್ರಜ್ಞಾನದ ಬುಲೆಟ್ ಟ್ರೈನ್ ಗಳು ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಲಿವೆ.
ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ ಸಂಚಾರವು 2023 ರ ಹೊತ್ತಿಗೆ ಕಾರ್ಯಾರಂಭ ನಡೆಸಲಿದ್ದು, ಆಧುನಿಕ ತಂತ್ರಜ್ಞಾನದ ಬುಲೆಟ್ ಟ್ರೈನ್ ಗಳು ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಲಿವೆ. ಈ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಭರವಸೆ ಹುಟ್ಟುಹಾಕಿರುವ ಬುಲೆಟ್ ಟ್ರೈನ್ ಯೋಜನೆಯು ಭಾರತಕ್ಕೆ ಆನೆಬಲಬಂದಂತಾಗಿದೆ.

ಸುಮಾರು 1.1 ಲಕ್ಷ ಕೋಟಿ ಮೌಲ್ಯದ ಈ ಬುಲೆಟ್ ಟ್ರೈನ್ ಯೋಜನೆಯು ಭಾರತೀಯ ರೈಲ್ವೆ ಮತ್ತು ಜಪನೀಸ್ ಪರ್ಮ್ ಶಿಂಕನ್ಸೆನ್ ಟೆಕ್ನಾಲಜಿಯ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, 2023ರ ವೇಳೆಗೆ ಬುಲೆಟ್ ಟ್ರೈನ್ ಕಾರ್ಯಾರಂಭವಾಗಲಿದೆ. ಹೀಗಾಗಿ ಹೊಸ ಸಾರಿಗೆ ವ್ಯವಸ್ಥೆಯು ದೇಶದ ಜನತೆಯಲ್ಲಿ ಕುತೂಹಲ ಹುಟ್ಟುಹಾಕಿದ್ದು, ಇದೀಗ ಬುಲೆಟ್ ಟ್ರೈನ್‌ಗಳ ಪ್ರಯಾಣ ದರಗಳ ಕುರಿತು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.

ಮೂಲಗಳ ಪ್ರಕಾರ ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸುವ ಬುಲೆಟ್ ಟ್ರೈನ್ ಪ್ರಯಾಣ ದರವು 250 ರೂ. ದಿಂದ 3 ಸಾವಿರ ರೂಪಾಯಿಗಳ ನಡುವೆ ಇರಲಿವೆ ಎನ್ನಲಾಗಿದೆ.

ಈ ಬಗ್ಗೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಅವರು ಮಾತನಾಡಿದ್ದು, ಪ್ರಯಾಣ ದರ 250ರಿಂದ 3 ಸಾವಿರ ರೂಪಾಯಿಗಳ ನಡುವೆ ಇರಲಿದೆ ಎಂದು ಹೇಳಿದ್ದಾರೆ.

2 ಗಂಟೆಗಳಲ್ಲಿ ಮುಂಬೈ!
ಹೌದು, ಬುಲೆಟ್ ಟ್ರೈನ್ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚಾರ ಮಾಡಲಿದ್ದು, ಎರಡೂ ನಗರಗಳ ಮಧ್ಯೆ ಕೇವಲ 2 ಗಂಟೆಗಳಲ್ಲಿ ಸಂಚರಿಸಬಹುದಾಗಿದೆ. ಮುಂಬೈ-ಅಹಮದಾಬಾದ್ ಮಾರ್ಗ ಮಧ್ಯೆ ಒಟ್ಟು 10 ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ.

ಒಟ್ಟು 508 ಕಿ.ಮೀ.ಉದ್ದದ ದಾರಿಯಲ್ಲಿ ಶೇ.92 ರಷ್ಟು ಎಲೆವೇಟೆಡ್ ಮಾರ್ಗವಾಗಿದ್ದು, ಶೆ.6 ರಷ್ಟು ಸುರಂಗ ಮತ್ತು ಉಳಿದ ಹಾದಿ ನೆಲದ ಮೇಲಿರಲಿದೆ. ಈ ಟ್ರೈನು ಮಹಾರಾಷ್ಟ್ರದ ಥಾಣೆ ಮೂಲಕ ಅತ್ಯಂತ ಉದ್ದದ ಸುರಂಗ( 21 ಕಿ.ಮೀ) ಮಾರ್ಗದ ಮೂಲಕ ಹಾದುಹೋಗಲಿದೆ. ಇವುಗಳಲ್ಲಿ 7 ಕಿ.ಮೀ ಸಮುದ್ರದೊಳಗಿನ ಮಾರ್ಗವೂ ಸೇರಿದೆ.

ಒಟ್ಟಿನಲ್ಲಿ ಬುಲೆಟ್ ರೈಲು ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇಷ್ಟು ದಿವಸ ಚೀನಾ, ಜಪಾನ್, ಯುರೋಪ್'ನ ಬುಲೆಟ್ ರೈಲುಗಳು, ಅವುಗಳ ವೇಗವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಭಾರತೀಯರು ಇನ್ನು 5 ವರ್ಷಗಳಲ್ಲಿ ಸ್ವದೇಶಿ ಬುಲೆಟ್ ರೈಲಿನಲ್ಲಿ ಸಂಚರಿಸಿ ಆನಂದಪಡಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ದುಬಾರಿ ಬೆಲೆ ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಕಾರು ಖರೀದಿಸಿದ ವಿರಾಟ್ ಕೊಹ್ಲಿ..
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..


Click it and Unblock the Notifications








