ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಪುಣೆ ಮುಂಬೈ ಮಧ್ಯೆ ಮಹತ್ತರ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನವು ನನಸಾಗಲಿದೆ.

By Nagaraja

ಜಗತ್ತಿನ ಐದನೇ ಮಾದರಿಯ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿಸಲಾಗುವ ಹೈಪರ್‌ಲೂಪ್ ತಂತ್ರಜ್ಞಾನವು ಭಾರತಕ್ಕೆ ಕಾಲಿಡುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂಬೈ ಮತ್ತು ಪುಣೆ ನಡುವೆ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆ ಕನಸು ನನಸಾಗಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಅಮೆರಿಕ ಮೂಲದ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟಷನ್ ಟೆಕ್ನಾಲಜಿ ಸಂಸ್ಥೆಯು ಭಾರತಕ್ಕೆ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಇರಾದೆಯನ್ನು ವ್ಯಕ್ತಪಡಿಸಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಈ ಸಂಬಂಧ ಭಾರತಕ್ಕೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುವ ಸ್ಥಾಪಕ ಬಿಬಾಬ್ ಗ್ಯಾಬ್ರಿಯಲ್ ಗ್ರೆಸ್ಟಾ, ಭಾರತದಲ್ಲಿ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವುದರ ಬಗ್ಗೆ ಅತೀವ ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

2013ನೇ ಇಸವಿಯಲ್ಲಿ ಟೆಸ್ಲಾ ಸ್ಥಾಪಕರಾಗಿರುವ ಎಲನ್ ಮಸ್ಕ್ ಮೊದಲ ಬಾರಿಗೆ ನಾವೀನ್ಯ ಹೈಪರ್ ಲೂಪ್ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದರು.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಸ್ಪೇಸ್ ಎಕ್ಸ್ (SpaceX) ಸ್ಥಾಪಕನೂ ಕೂಡಾ ಆಗಿರುವ ಎಲನ್ ಮಸ್ಕ್, ಅವರ ಹೈಪರ್ ಲೂಪ್ ಹೈ ಸ್ಪೀಡ್ ರೈಲು, ವಿಮಾನಗಿಂತಲೂ ವೇಗವಾಗಿ ಸಂಚರಿಸಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನವು ವಿಮಾನ, ರೈಲು, ಕಾರು ಹಾಗೂ ಬೋಟ್‌ಗಳ ಬಳಿಕದ ಭವಿಷ್ಯದ ಐದನೇ ಸಾರಿಗೆ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಸಾಮಾನ್ಯ ಹೈ ಸ್ಪೀಡ್ ರೈಲು ನಿರ್ಮಾಣಗಿಂತಲೂ 10 ಪಟ್ಟುಗಳಷ್ಟು ವೆಚ್ಚ ಕಡಿಮೆಯಾಗಲಿದೆ ಎಂಬುದು ಹೈಪರ್‌ಲೂಪ್‌ನ ವಿಶೇಷತೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಕಡಿಮೆ ಭಾರದ ಸ್ಟೀಲ್ ಟ್ಯೂಬ್‌ನಲ್ಲಿ ಲಗತ್ತಿಸಲಾಗಿರುವ ಪೊಡ್ಸ್ ಎನ್ನುವ ಕ್ಯಾಪ್ಸುಲ್ ಮುಖಾಂತರ ಈ ಹೈ ಸ್ಪೀಡ್ ರೈಲು ಸಂಚರಿಸಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಇದು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಹಾಗೂ ಕ್ಯಾಪ್ಸುಲ್‌ಗಳು ಪರಸ್ಪರ ಸಂಘರ್ಷಣೆಯಾಗದಂತೆ ನೋಡಿಕೊಳ್ಳಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಪ್ರತಿಯೊಂದು ಪೊಡ್ ನಡುವೆ 8 ಕೀ.ಮೀ. ಅಂತರವಿರಲಿದೆ. ಅಂದರೆ ಕೇವಲ 30 ಸೆಕೆಂಡುಗಳಷ್ಟೇ ವ್ಯತ್ಯಾಸವಿರಲಿದೆ. ಸೋಲರ್‌ನಿಂದ ನಿಯಂತ್ರಿಸಲ್ಪಡುವ ಹೈಪರ್‌ಲೂಪ್ ರೈಲು ಗಂಟೆಗೆ 1300 ಕೀ.ಮೀ ವೇಗದಲ್ಲಿ ಚಲಿಸಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಸದ್ಯ ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆಗೆ ಚರ್ಚೆ ನಡೆಸಲಾಗಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಹೈಪರ್ ಲೂಪ್ ಹಳಿ ನಿರ್ಮಾಣಕ್ಕೆ ಪ್ರತಿ ಕೀ.ಮೀ. ಗೆ 40 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಅಂದಾಜಿಸಲಾಗಿದೆ. ಪ್ರತಿಯೊಂದು ಪೊಡ್ 28ರಿಂದ 40 ಮಂದಿಯನ್ನು ಸಾಗಿಸಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಪ್ರತಿ 30 ಸೆಕೆಂಡುಗಳಿಗೆ ಒಂದೊಂದೆ ಕ್ಯಾಪ್ಸುಲ್ ನಿರ್ಗಮನವಾಗಲಿದ್ದು, ದಿನವೊಂದರಲ್ಲಿ 67,000 ಮಂದಿಯನ್ನು ಸಾಗಿಸಲಿದೆ.

ವಿಶ್ವದ 5ನೇ ಮಾದರಿಯ ಸಾರಿಗೆ ವ್ಯವಸ್ಥೆ 'ಹೈಪರ್‌ಲೂಪ್' ಭಾರತಕ್ಕೆ

ಹಾಗೊಂದು ವೇಳೆ ಹೈಪರ್ ಲೂಪ್ ವ್ಯವಸ್ಥೆಯು ನನಸಾದ್ದಲ್ಲಿ ಮುಂಬೈ ಮತ್ತು ಪುಣೆ ನಡುವಣ ಈಗಿರುವ ಮೂರು ತಾಸುಗಳ ಪ್ರಯಾಣವು ಕೇವಲ 25 ನಿಮಿಷಗಳಿಗೆ ಇಳಿಕೆಯಾಗಲಿದೆ.

Most Read Articles

Kannada
English summary
A Mumbai-Pune Hyperloop Project Could Soon Be Real
Story first published: Friday, December 9, 2016, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X