ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ!

Written By:

ಪ್ರಪಂಚದ ಅತಿ ಅಪಾಯದ ವಿಮಾನ ನಿಲ್ದಾಣ ಯಾವುದು ಗೊತ್ತೇ? ವಿಮಾನ ನಿಲ್ದಾಣದ ನೈಸರ್ಗಿಕತೆಯನ್ನು ಪರಿಗಣಿಸಿ ಅಂಕಿಅಂಶಗಳು ಏನೇ ವರದಿಯನ್ನು ಬಿತ್ತರಿಸಿದರೂ ಸಹ ಹಿಮಾಲಯ ಪರ್ವತದ ತುತ್ತ ತುದಿಯಲ್ಲಿರುವ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದೆನಿಸಿಕೊಂಡಿದೆ.

ಭೂತಾನ್ ನಲ್ಲಿರುವ ಚೊಕ್ಕದಾದ 'ಪಾರೊ ವಿಮಾನ' (Paro Airport) ನಿಲ್ದಾಣದಲ್ಲಿ ಇಲ್ಲಿಯ ವರೆಗೆ ಎಂಟು ಪೈಲಟ್ ಗಳು ಮಾತ್ರ ವಿಮಾನ ಇಳಿಸಲು ಸಫಲರಾಗಿದ್ದಾರೆ ಅಂದರೆ ನಂಬಲಾರ್ಹವೇ ? ಬನ್ನಿ ಪಾರೊ ವಿಮಾನ ನಿಲ್ದಾಣದ ರೋಚಕತೆಗಳನ್ನು ಓದೋಣ...

To Follow DriveSpark On Facebook, Click The Like Button
ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಸಮುದ್ರ ಮಟ್ಟಕ್ಕಿಂತಲೂ 1.5 ಮೈಲು ಮೇಲ್ಗಡೆಯಲ್ಲಿ ಸ್ಥಿತಗೊಂಡಿರುವ ಪಾರೊ ವಿಮಾನ ನಿಲ್ದಾಣವನ್ನು 18,000 ಅಡಿ ಎತ್ತರದ ಎರಡು ಬೃಹತ್ ಪರ್ವತಗಳು ಸುತ್ತುವರಿದುಕೊಂಡಿದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಜಗತ್ತಿನ ಅತಿ ಕಿರಿದಾದ ರನ್ವೇಗಳನ್ನು ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಇದೂ ಒಂದಾಗಿದ್ದು, 6500 ಅಡಿ ಉದ್ದವನ್ನು ಪಡೆದಿದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಕಣಿವೆಯಲ್ಲಿ ಬಲವಾಗಿ ಬೀಸುವ ಗಾಳಿ, ದಟ್ಟವಾದ ಮೋಡ, ಆಗಾಗೆ ಬದಲಾಗುತ್ತಿರುವ ವಾತಾವರಣ ಇವೆಲ್ಲವೂ ವಿಮಾನ ಲ್ಯಾಂಡಿಂಗ್ ಮಾಡುವಾಗ ಅತಿ ಹೆಚ್ಚು ಅಪಾಯವನ್ನು ಆಹ್ವಾನಿಸುತ್ತದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಇಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸುವುದೇ ದೊಡ್ಡ ಸವಾಲಿನ ವಿಷಯ ಎಂದು ಪೈಲಟ್ ಗಳು ಅಭಿಪ್ರಾಯಪಡುತ್ತಾರೆ. ಇಲ್ಲಿ ಟೇಕ್ ಮಾಡುವುದು ಸಹ ಅಷ್ಟೇ ಸವಾಲಿನ ವಿಷಯವಾಗಿದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಹಗಲು ಸಮಯದಲ್ಲಿ ಮಾತ್ರ ವಿಮಾನಕ್ಕೆ ಹಾರಾಡಲು ಅವಕಾಶವಿರುತ್ತದೆ. ಹತ್ತಿರದಲ್ಲಿ ಹರಿಯುತ್ತಿರುವ ಪಾರೊ ನದಿಯು ವಿಮಾನ ನಿಲ್ದಾಣದ ಸೌಂದರ್ಯವನ್ನು ವರ್ಣಿಸುತ್ತದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಬಲ್ಲ ಮೂಲಗಳ ಪ್ರಕಾರ ವರ್ಷಂಪ್ರತಿ 30,000ದಷ್ಟು ಪ್ರವಾಸಿಗರಿಗೆ ಪಾರೊ ವಿಮಾನ ನಿಲ್ದಾಣ ಸೇವೆಯೊದಗಿಸುತ್ತದೆ. ಅಲ್ಲದೆ ವಿಮಾನ ನಿಲ್ದಾಣದಲ್ಲಿ ಸುಧಾರಣೆ ತರುವ ಕೆಲಸ ಜಾರಿಯಲ್ಲಿದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಈ ವಿಮಾನ ನಿಲ್ದಾಣದ ಸೇವೆ ಬಳಕೆ ಮಾಡುತ್ತಿರುವ ಏಕೈಕ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಬುದ್ಧ ಏರ್ ಆಗಿದೆ. ಇಲ್ಲಿಗೆ ಬರುವ ಪ್ರತಿಯೊಂದು ವಿಮಾನಗಳು ನೆರೆಯ ರಾಷ್ಟ್ರದಲ್ಲಿ ಮೊದಲು ಇಳಿಯಬೇಕಾಗಿದೆ. ಅಲ್ಲಿಂದ ಬಳಿಕ ಸಂಪರ್ಕ ವಿಮಾನ ಸೇವೆಯನ್ನು ಕಲ್ಪಿಸಲಾಗುತ್ತದೆ.

ಕೇವಲ 8 ಪೈಲಟ್‌ಗಳು ಮಾತ್ರ ಈ ವಿಮಾನ ನಿಲ್ದಾಣದಲ್ಲಿ ಹಾರಲು ಸಫಲ

ಅಂದ ಹಾಗೆ 2011ರಲ್ಲಿ ಡ್ರಕ್ ಏರ್ ವಿಮಾನಕ್ಕೆ ಮಾತ್ರ ಇಲ್ಲಿ ವಿಮಾನ ಇಳಿಸಲು ಅನುಮತಿ ನೀಡಲಾಗಿತ್ತು.

Read more on ವಿಮಾನ plane
English summary
Only eight poilets are qualified to fly to this airport
Story first published: Tuesday, July 5, 2016, 9:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark