ಮಸ್ದಾರ್ ಪೇಟೆಯಲ್ಲಿ ಮೋದಿ 'ಗಿಮಿಕ್-ಚಮಕ್'

By Nagaraja

ಸರಿ ಸುಮಾರು ಮೂರು ದಶಕಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಅರಬ್ ಸಂಯುಕ್ತ ಒಕ್ಕೂಟಕ್ಕೆ (ಯುಎಇ) ಭೇಟಿ ಕೊಡುತ್ತಿರುವುದು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಭಾರಿ ಸಂಚಲನವನ್ನೇ ಮೂಡಿಸಿದೆ.

Also Read: ಮೋದಿಗೆ ಹೈ ಸೆಕ್ಯೂರಿಟಿ ವಲಯ

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಐತಿಹಾಸಿಕ ಯುಎಇ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಇದರಂತೆ ಎರಡನೇ ದಿನವಾದ ಸೋಮವಾರದಂದು (ಆಗಸ್ಟ್ 17, 2015) ಶೂನ್ಯ ಹೊಗೆ ಹೊರಚಿಮ್ಮುವ ಮಸ್ದಾರ್ (Masdar) ಸ್ಮಾರ್ಟ್ ಸಿಟಿಯಲ್ಲಿ ಸ್ವಯಂಚಾಲಿತ ಕಾರಿನಲ್ಲಿ ಸಂಚರಿಸುವ ಮೂಲಕ ಹೆಸರು ಮಾಡಿದ್ದಾರೆ.

ಸ್ವಯಂಚಾಲಿತ ಕಾರಿನಲ್ಲಿ ಸಂಚರಿಸಿದ ಮೋದಿ

ಸೆಲ್ಪ್ ಡ್ರೈವಿಂಗ್ ಅಥವಾ ಸ್ವಯಂಚಾಲಿತ ಕಾರಿನಲ್ಲಿ ಮೋದಿ ಅವರ ಪ್ರಾಯೋಗಿಕ ಸಂಚಾರವು ದಿನದ ಪ್ರಮುಖ ಹೈಲೈಟ್ ಆಗಿತ್ತು. ಪ್ರಸ್ತುತ ಕಾರು ಸಂಪೂರ್ಣವಾಗಿಯೂ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಟ್ಟಿದೆ.

ಸ್ವಯಂಚಾಲಿತ ಕಾರಿನಲ್ಲಿ ಸಂಚರಿಸಿದ ಮೋದಿ

ಸಾಫ್ಟ್‌ವೇರ್ ಮಾರ್ಗದರ್ಶಕದಿಂದ ಚಲಿಸುವ ಸ್ವಯಂಚಾಲಿತ ಕಾರಿಗೆ ಸೌರಶಕ್ತಿಯ ಮೂಲಕ ಶಕ್ತಿಯನ್ನು ಹೀರಿ ಲಿಥಿಯಂ ಬ್ಯಾಟರಿಗೆ ಚೈತನ್ಯ ತುಂಬಲಾಗುತ್ತದೆ. ಈ ವಿಶೇಷ ಕ್ಷಣವನ್ನು ಸ್ಮರಣೀಯವಾಗಿಸಲು ನೂರಾರು ಅನಿವಾಸಿ ಭಾರತೀಯರು ನಗರದ ಹೊರಗಡೆ ಸೇರಿಕೊಂಡಿದ್ದಷ್ಟೇ ಅಲ್ಲದೆ ಮೋದಿ ಪರ ಘೋಷಣೆಗಳನ್ನು ಕೂಗಿದರು.

ಸ್ವಯಂಚಾಲಿತ ಕಾರಿನಲ್ಲಿ ಸಂಚರಿಸಿದ ಮೋದಿ

ಮಸ್ದಾರ್ ನಗರಾಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ನಗರಗಳ ಅಂತರಗಳ ಬಗ್ಗೆ ಕೂಲಂಕುಷವಾಗಿ ಪರೀಕ್ಷೆ ನಡೆಸಿದ ಮೋದಿ ನಗರದ ಪ್ರಧಾನ ವಾಸ್ತುಶಿಲ್ಪಿಯನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಸ್ವಯಂಚಾಲಿತ ಕಾರಿನಲ್ಲಿ ಸಂಚರಿಸಿದ ಮೋದಿ

ನಿಮ್ಮ ಮಾಹಿತಿಗಾಗಿ, ಮಸ್ದಾರ್ ಜಗತ್ತಿನ 'ಝೀರೋ ಕಾರ್ಬನ್ ಕಾರು ಫ್ರಿ' ನಗರವಾಗಿದ್ದು (world's first zero-carbon, car-free city), ಭವಿಷ್ಯದಲ್ಲಿ ಇದೇ ಸಿದ್ಧಾಂತವನ್ನು ಭಾರತದ ನಗರಗಳಲ್ಲೂ ಆಳವಡಿಸುವ ಯೋಜನೆಯನ್ನು ಮೋದಿ ಹೊಂದಿದ್ದಾರೆ.

ಸ್ವಯಂಚಾಲಿತ ಕಾರಿನಲ್ಲಿ ಸಂಚರಿಸಿದ ಮೋದಿ

ಬಳಿಕ ಮಸ್ದಾರ್ ಭೇಟಿ ಪುಸಕ್ತದಲ್ಲಿ ಮೋದಿ, "ವಿಜ್ಞಾನವೇ ಬದುಕು" ಎಂದು ಉಲ್ಲೇಖಿಸಿದರು. ಇದೇ ವೇಳೆಯಲ್ಲಿ ಯುಎಇ ಖ್ಯಾತ ಉದ್ಯಮಿಗಳ ಜೊತೆಗೂ ಮೋದಿ ಸಂವಾದ ನಡೆಸಿದರು.

ಮತ್ತಷ್ಟು ಮೋದಿ ಸುದ್ದಿಗಳು

ಮೋದಿ ಬಿಎಂಡಬ್ಲ್ಯು vs ಒಬಾಮಾ ಬೀಸ್ಟ್

ಐಎನ್ ಎಸ್ ವಿಕ್ರಮಾದಿತ್ಯ ದೇಶಕ್ಕೆ ಅರ್ಪಿಸಿದ ಮೋದಿ

ಸ್ಕಾರ್ಪಿಯೊಗೆ ಕೈಕೊಟ್ಟ ಮೋದಿ


Most Read Articles

Kannada
English summary
PM Modi Rides Self-Driving Car in Masdar, World's First Zero-Carbon City
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X