Just In
- 10 hrs ago
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- 10 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಂಡು ಬಂದ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್
- 12 hrs ago
ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- 12 hrs ago
ಅಂಬಾನಿಗೆ ಭದ್ರತೆ ನೀಡುತ್ತಿರುವ ಕಾರುಗಳ ಬೆಲೆ ಎಷ್ಟು ಗೊತ್ತಾ?
Don't Miss!
- News
ಉಪ ಚುನಾವಣೆ; ಬೆಳಗಾವಿಯಲ್ಲಿ ಶೇ 74.72ರಷ್ಟು ಮತದಾನ
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಸಂಚಾರಿ ನಿಯಮ ಉಲ್ಲಂಘಿಸಿದ ಪೊಲೀಸರಿಗೆ ಬಿಸಿ ಮುಟ್ಟಿಸಿದ ಸಾರ್ವಜನಿಕರು
ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ದೊಡ್ಡ ದಂಡ ವಿಧಿಸಲಿದೆ, ನೂತನ ಕಾಯ್ದೆಯಡಿ ದಂಡದ ಬಿಸಿ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲದೆ ಪೊಲೀಸರಿಗೂ ತಟ್ಟಿದೆ. ನೂತನ ಸಂಚಾರಿ ನಿಯಮ ಉಲ್ಲಂಘಸಿದವರಿಗೆ ದೇಶಾದ್ಯಂತದ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸುತ್ತಿದ್ದಾರೆ.

ನೂತನ ಸಂಚಾರಿ ನಿಯಮವನ್ನು ಉಲ್ಲಂಘಿಸಿದವರಿಗೆ ಭಾರೀ ದೊಡ್ಡ ಮೊತ್ತದ ದಂಡವನ್ನು ವಿಧಿಸುತ್ತಿದ್ದರು. ಇದರಿಂದ ತಿಂಗಳಿಗೆ 10 ರಿಂದ 20,00 ಸಾವಿರ ಸಂಬಂಳಕ್ಕೆ ದುಡಿಯುವ ಜನರಿಗೆ ಆ ಒಂದು ಸಂಬಂಳದಿಂದಲೇ ಒಂದು ತಿಂಗಳು ಕುಟುಂಬವನ್ನು ನೋಡಿಕೊಳ್ಳಬೇಕು ಅಲ್ಲದೇ ಆ ಒಂದು ತಿಂಗಳ ಖರ್ಚನ್ನು ನೋಡಿಕೊಳ್ಳಬೇಕಾಗುತ್ತದೆ. ಇದರ ನಡುವೆ ದೊಡ್ದ ಮೊತ್ತದ ದಂಡ ವಿಧಿಸಿದರೆ ಆ ವೈಕ್ತಿ ಸಂಕಷ್ಟಕ್ಕೆ ಇಡಾಗುತ್ತಾನೆ. ದೊಡ್ಡ ಮೊತ್ತ ದಂಡ ವಿಧಿಸುವ ಪೊಲೀಸರ ಮೇಲೆ ಜನರಿಗೆ ಆಕ್ರೋಶಗೊಂಡಿದ್ದಾರೆ.

ಪೊಲೀಸರು ಸಂಚಾರಿ ನಿಯಮವನ್ನು ಉಲ್ಲಂಘಿಸಿದ ವಿಡಿಯೋವನ್ನು ಹಾಕಿ ಟ್ರೋಲ್ ಮಾಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಸೀಟ್ ಬೆಲ್ಟ್ ಧರಿಸಿದೆ ಸಂಚಾರ ಮಾಡುವ ಪೋಲಿಸರ ತಡೆದು ಆಕ್ರೋಶ ವ್ಯಕ್ತಪಡಿಸುವ ವಿಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೀಟ್ ಬೆಲ್ಟ್ ಧರಿಸಿದೆ ಸಂಚಾರಿ ನಿಯಮ ಉಲ್ಲಂಘಿಸಿದ ಪೊಲೀಸರನ್ನು ತಡೆದು ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಪೊಲೀಸರೇ ನಿಯಮ ಉಲ್ಲಂಘಸಿದರೇ ಹೇಗೆ ಎಂದು ಸಾರ್ವಾಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಜನರ ಪ್ರತಿಭಟನೆ ಮತ್ತು ಆಕ್ರೋಶ ಹೆಚ್ಚಾಗುವುದನ್ನು ಕಂಡು ಪೊಲೀಸರು ಆತುರದಿಂದ ಸೀಟ್ ಬೆಲ್ಟ್ ಧರಿಸುತ್ತಾರೆ. ಆದರೆ ಅಲ್ಲಿ ಪ್ರತಿಭಟೆನೆಗೆ ಸೇರಿದ್ದ ಹಲವರು ಟಾಟಾ ಸಫಾರಿ ಸ್ಟಾರ್ಮ್‍ನಲ್ಲಿ ಸೀಟ್ ಬೆಲ್ಟ್ ಧರಿಸದೇ ಇರುವ ವಿಡಿಯೋ ಮಾಡಿದ್ದರು.

ನಂತರ ಟ್ರಾಫಿಕ್ ಪೊಲೀಸರಿಗೆ ಸಾರ್ವಜನಿಕರು ಟಾಟಾ ಸಫಾರಿ ಸ್ಟಾರ್ಮ್‍ನಲ್ಲಿರುವ ಪೊಲೀಸರಿಗೆ ದಂಡದ ಚಲನ್ ನೀಡಲು ಒತ್ತಾಯಿಸುತ್ತಾರೆ. ಸಂಚಾರಿ ನಿಯಮದಂತೆ ಸೀಟ್ ಬೆಲ್ಟ್ ಧರಿಸಿದಿದ್ದಕ್ಕಾಗಿ ರೂ. 1,000 ದಂಡವನ್ನು ವಿಧಿಸುವಂತೆ ಟ್ರಾಫಿಕ್ ಪೊಲೀಸರನ್ನು ಒತ್ತಾಯಿಸುತ್ತಾರೆ.

ಜನರ ಆಕ್ರೋಶದಿಂದ ಟ್ರಾಫಿಕ್ ಪೊಲೀಸರು ಟಾಟಾ ಸಫಾರಿ ಸ್ಟಾರ್ಮ್ ಪೊಲೀಸರ ಕಾರನ್ನು ಬದಿಗೆ ಸರಿಸಲು ಹೇಳುತ್ತಾರೆ. ಆದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದರೂ ಅಥವಾ ಇಲ್ಲವೋ ಎಂಬುವುದು ತಿಳಿದುಬಂದಿಲ್ಲ. ಆದರೆ ಕನೂನು ಪ್ರತಿಯೊಬ್ಬರಿಗೂ ಒಂದೇ ಎಂಬುವುದು ತಿಳಿದು ಬರುತ್ತದೆ.

ನೂತನ ಸಂಚಾರಿ ನಿಯಮ ಜಾರಿಯಾಗುವ ಮೊದಲು ಸೀಟ್ ಬೆಲ್ಟ್ ಧರಿಸದಿರುವ ಅಪರಾಧಕ್ಕೆ ಕೇವಲ ರೂ. 100 ದಂಡ ವಿತ್ತು, ಹೊಸ ಸಂಚಾರಿ ನಿಯಮ ಜಾರಿಯಾದ ಮೇಲೆ ಆ ದಂಡಕ್ಕೆ 10 ಪಟ್ಟು ಹೆಚ್ಚಾಗಿ ರೂ. 1,000 ವಾಗಿದೆ. ಇದು ದೊಡ್ಡ ಮೊತ್ತವಾದರೂ ತಮ್ಮ ಸುರಕ್ಷತ ದೃಷ್ಟಿಯಿಂದ ಅಲ್ಲವಾದರೂ ದಂಡಕ್ಕೆ ಹೆದರಿ ಆದರೂ ಸೀಟು ಬೆಲ್ಟ್ ಅನ್ನು ಧರಿಸುತ್ತಾರೆ ಎಂಬುವುದು ಉದ್ದೇಶ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ನೂತನ ಸಂಚಾರಿ ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ಭಾರೀ ಪ್ರಮಾಣದ ದಂಡ ವಿಧಿಸುತ್ತಿರುವುದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಯಾವ ನಿಯಮ ಉಲ್ಲಂಘಿಸಿದ್ದಕ್ಕೆ ಜನಸಾಮಾನ್ಯರಿಗೆ ಇಷ್ಟೊಂದು ದಂಡ ವಿಧಿಸಲಾಗುತ್ತಿದೆಯೋ ಅದೇ ನಿಯಮಗಳನ್ನು ಸಂಚಾರಿ ಪೊಲೀಸರು ಉಲ್ಲಂಘಿಸಿದ್ದರೆ, ಆಗ ಪೊಲೀಸರಿಗೆ ಸಾಮಾನ್ಯ ದಂಡಕ್ಕಿಂತ ಎರಡು ಪಟ್ಟು ದಂಡ ವಿಧಿಸಲಾಗುವುದು. ಇತ್ತೀಚೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿಯೇ ಈ ಅಂಶವಿದೆ ಎಂದು ದೆಹಲಿ ಪೊಲೀಸ್ ಮುಖ್ಯಸ್ಥರೇ ಸುತ್ತೋಲೆ ಹೊರಡಿಸಿದ್ದಾರೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಟ್ರಾಫಿಕ್ ಪೊಲೀಸರು ಖಾಸಗಿ ಅಥವಾ ಸರ್ಕಾರಿ ವಾಹನ ಬಳಕೆ ಮಾಡುವಾಗಲೂ ನಿಯಮಗಳನ್ನು ಪಾಲಿಸಬೇಕು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸವಾರರಿಗೆ ವಿಧಿಸುವ ದಂಡದ ದುಪ್ಪಟ್ಟು ದಂಡ ವಿಧಿಸಲಾಗುವುದು. ಕಾನೂನು ಎಲ್ಲರಿಗೂ ಒಂದೇ ಆದರೇ ಟ್ರಾಫಿಕ್ ಪೊಲೀಸರಿಗೆ ಯಾಕೆ ದುಪಟ್ಟು ದಂಡ ವಿರುವುದು ಕನೂನು ಜಾರಿಗೊಳಿಸುವ ಜವಬ್ದಾರಿ ಮತ್ತು ಅದನ್ನು ಸರಿಯಾಗಿ ಪಾಲನೇಯಾಗುವುದನ್ನು ನೋಡಿಕೊಳ್ಳಬೇಕಾದವರೇ ನಿಯಮ ಉಲ್ಲಂಘಿಸಿದರೆ ಎಷ್ಟು ಸರಿ ಎಂಬುವುದಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುವುದು.